ಹಿಂದಿ ನಟಿ ಶಿಲ್ಪಾ ಶೆಟ್ಟಿ, ಇಂಡಿಯನ್‌ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಒಂದು ಟೀಮ್ ಯಜಮಾನ್ತಿ ಆಗಿರುವುದು ನಿಮಗೆ ಗೊತ್ತಿದೆ ಅಲ್ವಾ. ಅದು ರಾಜಸ್ಥಾನ್ ರಾಯಲ್ಸ್ ಟೀಮ್. ಇಂಥ ಶಿಲ್ಪಾ ಶೆಟ್ಟಿಗೆ ಒಂದು ನಂಬಿಕೆ. ಅದೇನೆಂದರೆ, ತಮ್ಮ ತಂಡದ ಪಂದ್ಯಾಟ ಇದ್ದಾಗ ಇವರು ಎಡಗೈಯಲ್ಲಿ ತಪ್ಪದೇ ಎರಡು ವಾಚ್‌ಗಳನ್ನು ಧರಿಸಿರುತ್ತಾರೆ. ಇವರು ತಪ್ಪದೇ ಪೆವಿಲಿಯನ್ ಬಳಿ ಕುಳಿತುಕೊಂಡು, ತಮ್ಮ ತಂಡದ ಎದುರು ಎದುರಾಳಿ ತಂಡ ಬ್ಯಾಟಿಂಗ್‌ ಮಾಡ್ತಾ ಇರುವಾಗ ಕಾಲುಗಳನ್ನು ಕತ್ತರಿ ಆಕಾರದಲ್ಲಿ ಕ್ರಾಸ್‌ ಹಾಕಿ ಕುಳಿತುಕೊಳ್ಳುತ್ತಾರೆ. ತಮ್ಮ ತಂಡ ಬ್ಯಾಟಿಂಗ್‌ ಮಾಡುವಾಗ ಸಹಜವಾಗಿ ಕುಳಿತುಕೊಳ್ಳುತ್ತಾರೆ.

ಇಂಥ ನಂಬಿಕೆಗಳು, ಅವುಗಳನ್ನು ನಂಬಿಕೆಗಳೆನ್ನಿ ಅಥವಾ ಮೂಢನಂಬಿಕೆಗಳೆನ್ನಿ- ಹಲವು ಬಾಲಿವುಡ್‌ ಸ್ಟಾರ್‌ಗಳಲ್ಲಿ ಇದೆ. ಸ್ಟಾರ್‌ಗಳಲ್ಲಿ ನಮಗಿಂತ ಹೆಚ್ಚೇ ಇದೆ ಅನ್ನಬಹುದು. ಇವರಲ್ಲಿ ಹರಳು ಕಲ್ಲುಗಳನ್ನು ನಂಭುವವರು, ಅದೃಷ್ಟದ ನಂಬರ್‌ಗಳನ್ನು ನಂಬುವವರು ಯಾವುದೋ ಬಾಬಾಜಿಯನ್ನು ನಂಬಿಕೊಂಡು ಅವರು ಹೇಳಿದಂತೆ ನಡೆಯುವವರು ತುಂಬಾ. ಉದಾಹರಣೆಗೆ ಶಾರುಕ್‌ ಖಾನ್‌ ಅವರನ್ನು ಗಮನಿಸಿ. ಅವರು ಪ್ರಯಾಣ ಮಾಡುವ ಕಾರಿನ ನಂಬರ್‌ ಪ್ಲೇಟ್‌ನಲ್ಲಿ ಮೂರು ೫ಗಳು ಇದ್ದೇ ಇರುತ್ತವೆ. ಟ್ರಿಪಲ್‌ ಫೈವ್‌ ಇಲ್ಲದ ಕಾರಿನಲ್ಲಿ ಅವರು ಹೋಗುವುದೇ ಇಲ್ಲ. ಚೆನ್ನೈ ಎಕ್ಸ್‌ಪ್ರೆಸ್‌ ಫಿಲಂನಲ್ಲಿ ಅವರು ರೈಡ್‌ ಮಾಡುತ್ತಾ ಕಾಣಿಸಿಕೊಂಡ ಬೈಕ್ ಕೂಡಾ ಟ್ರಿಪಲ್‌ ಫೈವ್‌ ನಂಬರ್‌ ಹೊಂದಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.

ಇದೇ ಬಗೆಯ ನಂಬರ್‌ ಪ್ರೀತಿ ಸಂಜಯ್‌ ದತ್‌ ಅವರಿಗೂ ಇದೆ. ಅವರಿಗೆ ನಂಬರ್‌ ೯ ಅಂದ್ರೆ ಅದೃಷ್ಟದ ನಂಬರ್‌ ಅಂತ ನಂಬಿಕೆ. ಅವರ ಕಾರಿನ ನಂಬರ್‌ ಯಾವಾಗ್ಲೂ ೪೫೪೫ ಆಗಿರುತ್ತೆ. ೪ ಮತ್ತು ೫ ಸೇರಿಸಿದಾಗ ೯ ಆಗುತ್ತದೆ ತಾನೆ. ಹಾಗೇ ೪೫೪೫- ಇದರಲ್ಲಿ ಎಲ್ಲವನ್ನೂ ಕೂಡಿಸಿದರೂ ೧೮ ಬಂದು, ಮತ್ತೆ ಅದನ್ನು ಕೂಡಿದಾಗಲೂ ೯ ಬರುತ್ತೆ. ಆದರೆ ಈ ನಂಬರ್‌ ನಂಬಿಕೆ ಅವರನ್ನು ಕ್ಯಾನ್ಸರ್‌ನಿಂದ ಕಾಪಾಡೋಕೆ ಆಗಲಿಲ್ಲ ಎಂಬುದು ಬೇರೆ ಮಾತು!
ಸಲ್ಮಾನ್‌ ಖಾನ್‌ಗೆ ಪಚ್ಚೆ ಹರಳು ಅಂದ್ರೆ ತುಂಬಾ ನಂಬಿಕೆ. ಪಚ್ಚೆ ಅಥವಾ ಮರಕತ ಹರಳನ್ನು ಹುದುಗಿಸಿದ ಬ್ರೇಸ್‌ಲೆಟ್‌ ಯಾವಾಗ್ಲೂ ಅವರ ಬಲಗೈಯಲ್ಲಿ ಧರಿಸಿರ್ತಾರೆ. ತಾನು ನಟಿಸುವ ಫಿಲಂಗಳಲ್ಲಿ ಸಾಧ್ಯವಾದರೆ ಆ ಬ್ರೇಸ್ಲೆಟ್‌ ಧರಿಸಿಯೇ ಕಾಣಿಸಿಕೊಳ್ಳುತ್ತಾರೆ. ಸಾಧ್ಯವಾಗದಿದ್ರೆ ಒಂದು ದೃಶ್ಯದಲ್ಲಾದ್ರೂ ಅದು ಇರಬೇಕು ಎಂಬುದು ಸಲ್ಲು ಭಾಯ್‌ ನಂಭಿಕೆ. ಅದನ್ನು ಅವರಿಗೆ ಕೊಟ್ಟದ್ದು ಅವರ ತಂದೆ ಸಲೀಂ ಖಾನ್‌. ಅದು ಅದೃಷ್ಟ ತಂದು ಕೊಡುತ್ತೆ ಅಂತ ನಂಬಿದ್ದಾರೆ. ಪಚ್ಚೆ ಮಣಿಗೆ ತನ್ನನ್ನು ಧರಿಸಿದವನನ್ನು ಕೂಲ್‌ ಕೂಲ್‌ ಮಾಡುವ ತಂಪಿನ ಸಾಮರ್ಥ್ಯ ಇದೆ. ಸಲ್ಮಾನ್‌ಗೆ ತುಸು ಹೆಚ್ಚೇ ಶಾರ್ಟ್ ಟೆಂಪರ್‌ ಇರೋದು ನಿಮಗೆ ಗೊತ್ತಿದೆಯಲ್ಲ .ಆದ್ದರಿಂಧ ಪಚ್ಚೆ ಕಲ್ಲು ಸಲ್ಮಾನ್‌ಗೆ ಸೂಕ್ತ ಅನ್ನಬಹುದು. 

ಫಸ್ಟ್ ಲೇಡಿ ಸೂಪರ್ ಸ್ಟಾರ್ ಜನ್ಮ ದಿನದ ನೆನಪು..! ಶ್ರೀದೇವಿ ಬಗ್ಗೆ ನೀವರಿಯದ ಸಂಗತಿಗಳಿವು 

ಬಿಪಾಶಾ ಬಸುವಿಗೆ ಒಂದು ವಿಚಿತ್ರ ನಂಬಿಕೆ ಇದೆ. ಈಕೆ ತನ್ನ ಕಾರಿನ ಮುಂದೆ ಒಂದು ನಿಂಬೆಹಣ್ಣು ಹಾಗೂ ಏಳು ಹಸಿಮೆಣಸಿನಕಾಯಿಯನ್ನು ಕಟ್ಟಿಕೊಳ್ಳುತ್ತಾಳೆ. ಪ್ರತಿ ಶನಿವಾರ ಹಳತನ್ನು ಬದಲಾಯಿಸಿ ಹೊಸತನ್ನು ಕಟ್ಟುತ್ತಾಳೆ. ಇದು ನಷ್ಟಲಕ್ಷ್ಮಿಯನ್ನು ದೂರ ಮಾಡುತ್ತೆ ಅಂತ ಆಕೆಯ ನಂಬಿಕೆ. ಕೇಡು ಉಂಟುಮಾಡುವ ಶಕ್ತಿಗಳನ್ನು ಅದು ದೂರವಿಡುತ್ತೆ ಅಂತಲೂ ನಂಬುತ್ತಾಳೆ. ಅಂದಹಾಗೆ ಸಾಕಷ್ಟು ಹಾರರ್‌ ಮೂವಿಗಳಲ್ಲಿ ನಟಿಸಿರುವ ಬಿಪಾಶಾ ದೆವ್ವ ಭೂತಗಳನ್ನು ನಂಬುತ್ತಾಳೆ ಕೂಡ. 

ಸಮಂತಾ ಅಕ್ಕಿನೇನಿ ಹೇಳಿದ ಹೆಲ್ತ್‌ ಟಿಪ್ಸ್‌ ಬಲು ಸುಲಭವಿದೆ ನೋಡಿ... 

ಶಕುಂತಲಾ ದೇವಿ ಮತ್ತು ಡರ್ಟಿ ಪಿಕ್ಚರ್‌ ಖ್ಯಾತಿಯ ವಿದ್ಯಾ ಬಾಲನ್‌ಗೆ ಕೆಂಫು ಸೀರೆಗಳೆಂದರೆ ಭಯಂಕರ ಪ್ರೀತಿ. ತಮ್ಮ ಫಿಲಂಗಳಲ್ಲಿ ಒಂದು ಸೀನ್‌ನಲ್ಲಾದರೂ ಕೆಂಫು ಸೀರೆಯನ್ನು ಉಟ್ಟೇ ಕಾಣಿಸಿಕೊಳ್ಳುತ್ತಾರೆ. ಗ್ರೀನ್‌ ಸೀರೆ ಅಂತ ಸ್ಕ್ರಿಪ್ಟ್‌ನಲ್ಲಿದ್ದರೆ ಕೆಂಫು ಸೀರೆ ಅಂತ ತಿದ್ದುತ್ತಾರೆ ಕೂಡ. ಹಾಗೇ ಈಕೆ ಕಣ್ಣುಗಳಿಗೆ ಹಚ್ಚಿಕೊಳ್ಳುವ ಕಾಜಲ್‌, ಪಾಕಿಸ್ತಾನಿಂದ ತರಿಸಿದ್ದು. ಹಶ್ಮಿ ಎಂಬ ಬ್ರಾಂಡ್‌ನದ್ದು. ಅದಲ್ಲದೇ ಬೇರೆ ಕಾಜಲ್‌ ಬ=ವಿದ್ಯಾ ಹಾಕಿಕೊಳ್ಳುವುದೇ ಇಲ್ಲ.

ನಟಿಯಾಗೋ ಮುನ್ನ ಈ ಕೆಲಸ ಮಾಡುತ್ತಿದ್ದ ಲಂಕಾ ಚೆಲುವೆ ಜಾಕ್ವೆಲಿನ್!