ಪಾರ್ವತಮ್ಮ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಸಿನಿಮಾಗೆ ಈ ನಟಿ ನಟಿಸಬೇಕೆಂದು ಬಯಸಿದ್ದರು, ಆದರೆ ಸಾಧ್ಯವಾಗಲಿಲ್ಲ. ಆ ಸಿನಿಮಾ ಯಾವುದು ಅಂತ ಗೊತ್ತಾ?

ಬೆಂಗಳೂರು: ಪಾರ್ವತಮ್ಮ ರಾಜ್‌ಕುಮಾರ್ ಚಂದನವನದ ಆಲದ ಮರ. ಪಾರ್ವತಮ್ಮ ರಾಜ್‌ಕುಮಾರ್ ಪರಿಚಯಿಸಿದ ಕಲಾವಿದರು ಇಂದು ಚಿತ್ರರಂಗವನ್ನೇ ಆಳುತ್ತಿದ್ದಾರೆ. ಸುಧಾರಾಣಿ, ಪ್ರೇಮಾ, ರಕ್ಷಿತಾ , ಅನು ಪ್ರಭಾಕರ್, ರಮ್ಯಾ ಸೇರಿದಂತೆ ಹಲವು ನಟಿಯರು ರಾಜ್‌ಕುಮಾರ್ ಕುಟುಂಬದ ಆಶೀರ್ವಾದದಿಂದ ಚಿತ್ರರಂಗಕ್ಕೆ ಬಂದವರು. ಈ ಬಗ್ಗೆ ಈ ನಟಿಯರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದ್ರೆ ಒಮ್ಮೆ ಮಗ ಶಿವರಾಜ್‌ಕುಮಾರ್ ನಟನೆಯ ಸಿನಿಮಾವೊಂದಕ್ಕೆ ಆ ನಟಿಯೇ ಬೇಕೆಂದು ಆಸೆಪಟ್ಟಿದ್ದರು. ಆದ್ರೆ ಡೇಟ್ ಸಿಗದ ಹಿನ್ನೆಲೆ ಆ ಚಿತ್ರಕ್ಕೆ ಮತ್ತೋರ್ವ ನಾಯಕಿ ಬಂದಿದ್ದರು. ಶಿವರಾಜ್‌ಕುಮಾರ್ ಸಿನಿ ಕೆರಿಯರ್‌ನಲ್ಲಿ ಇದನ್ನು ಅತ್ಯದ್ಭುತವಾದ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆಗೆ ನಟಿಯಾಗಿ ಪ್ರೇಮಾ ನಟಿಸಿದ್ದರು. 

1995ರಲ್ಲಿ ಬಿಡುಗಡೆಯಾದ ಓಂ ಸಿನಿಮಾಗೆ ಮೊದಲ ಆಯ್ಕೆ ಸುಧಾರಾಣಿಯಾಗಿದ್ದರು. ಆದ್ರೆ ಅಂದು ತಮಿಳು ಸೇರಿದಂತೆ ಸುಧಾರಾಣಿ ಹಲವು ಸಿನಿಮಾಗಳನ್ನು ಸುಧಾರಾಣಿ ಒಪ್ಪಿಕೊಂಡಿದ್ದರು. ಹಾಗಾಗಿ ಏನೇ ಮಾಡಿದರೂ ಸುಧಾರಾಣಿ ಅವರ ಡೇಟ್ ಸಿಗಲಿಲ್ಲ. ಓಂ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜೊತೆ ಸುಧಾರಾಣಿ ನಟಿಸಲಿ ಎಂದು ಪಾರ್ವತಮ್ಮ ರಾಜ್‌ಕುಮಾರ್ ಆಸೆಪಟ್ಟಿದ್ದರು. ಅಂತಿಮವಾಗಿ ಓಂಗೆ ಪ್ರೇಮಾ ಆಯ್ಕೆಯಾಗಿದ್ದರು. ಉಪೇಂದ್ರ ಬರೆದು ನಿರ್ದೇಶಿಸಿದ ಓಂ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು.

ಬೆಂಗಳೂರಿನ ಅಪರಾಧ ಭೂಗತ ಲೋಕದ ಕಥೆಯನ್ನು ಒಳಗೊಂಡಿದ್ದ ಸಿನಿಮಾದಲ್ಲಿ ರೌಡಿಶೀಟರ್‌ ನಟಿಸಿದ್ದರು. ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್, ಕೊರಂಗು ಕೃಷ್ಣ, ಶ್ರೀಶಾಂತಿ, ಜಿವಿ ಶಿವಾನಂದ್, ಸಾಧು ಕೋಕಿಲಾ ಮತ್ತು ಜೇಡರಳ್ಳಿ ಕೃಷ್ಣಪ್ಪ ಓಂ ಸಿನಿಮಾದಲ್ಲಿ ಸಹ ನಟರಾಗಿ ನಟಿಸಿದ್ದರು. ಪೂರ್ಣಿಮಾ ಎಂಟರ್‌ಪ್ರೈಸೆಸ್ ನಿರ್ಮಾಣದಲ್ಲಿ ಬಂದಿದ್ದ ಸಿನಿಮಾವನ್ನು ಶ್ರೀ ವಜ್ರೇಶ್ವರಿ ಕಂಬೈನ್ಸ್ ವಿತರಣೆ ಮಾಡಿತ್ತು. ಚಿತ್ರದ ಹಾಡುಗಳು ಮತ್ತು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುತ್ತವೆ. 

ಇದನ್ನೂ ಓದಿ: ಸೌಂದರ್ಯ ಜಯಮಾಲಾ ಮದ್ವೆಯಲ್ಲಿ ಸುಧಾರಾಣಿ ಮೇಲೆ ಮಾಳವಿಕಾ, ಶ್ರುತಿ ಕೋಪ: ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗೋಯ್ತು ಘಟನೆ!

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಸುಧಾರಾಣಿ, ತಮಗೆ ಓಂ ಸಿನಿಮಾ ಆಫರ್ ಬಂದಿರೋದನ್ನು ಹೇಳಿದ್ದರು. ಜನುಮದ ಜೋಡಿ ಸೇರಿದಂತೆ ಹಲವು ಸಿನಿಮಾಗಳು ಆಫರ್ ಬಂದಿದ್ದವು. ಎಲ್ಲವೂ ನಾನೇ ಮಾಡುತ್ತೇನೆ ಅನ್ನೋದು ತಪ್ಪು. ಹಾಗಾದಾಗ ಮಾತ್ರ ಎಲ್ಲಾ ಕಲಾವಿದರು ಬೆಳೆಯಲು ಸಾಧ್ಯವಾಗುತ್ತದೆ. ನನ್ನ ಸಿನಿ ಕೆರಿಯರ್‌ನಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿರೋದಕ್ಕೆ ತುಂಬಾ ಖುಷಿ ಇದೆ. ಒಂದೇ ರೀತಿಯ ಪಾತ್ರಗಳಿಗೆ ನಾನು ಅಂಟಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. 

ಶಿವರಾಜ್‌ಕುಮಾರ್ ಅವರ ಮೊದಲ ಚಿತ್ರಕ್ಕೆ ನಾಯಕಿಯಾಗಿ ಸುಧಾರಾಣಿ ಆಯ್ಕೆಯಾಗಿದ್ದರು. 19ನೇ ಜೂನ್ 1986ರಂದು ಬಿಡುಗಡೆಯಾದ ಆನಂದ್ ಸಿನಿಮಾದಲ್ಲಿ ತಾರಾ, ತೂಗುದೀಪ ಶ್ರೀನಿವಾಸ್, ಜಯಂತಿ, ಗುರುದತ್, ಉದಯ್ ಶಂಕರ್, ಬಾಲರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

ಇದನ್ನೂ ಓದಿ: ಸಿನಿಮಾದಿಂದ ಸೀರಿಯಲ್​ಗೆ ಬಂದ್ರೂ 45 ವರ್ಷದಿಂದ ಸುಧಾರಾಣಿ ಬೆನ್ನು ಬಿಡದ 'ಮಾವ': ವಿಡಿಯೋ ವೈರಲ್​