ಬೆಂಗಳೂರಿನಲ್ಲಿ ಜಯಮಾಲಾ ಪುತ್ರಿ ಸೌಂದರ್ಯ ಅವರ ವಿವಾಹ ಡಿಜಿಪಿ ರಾಮಚಂದ್ರ ರಾವ್ ಪುತ್ರ ರುಷಭ್ ಜೊತೆ ಅದ್ದೂರಿಯಾಗಿ ನೆರವೇರಿತು. ಸುದೀಪ್, ಯಶ್, ರಮೇಶ್, ಮಾಳವಿಕಾ ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು. ಮದುವೆಯಲ್ಲಿ ನಟಿಯರ ನೃತ್ಯದ ವಿಡಿಯೋಗಳು ವೈರಲ್ ಆಗಿವೆ.

ಮಾಜಿ ಸಚಿವೆ, ಹಿರಿಯ ನಟಿ ಜಯಮಾಲಾ ಅವರ ಪುತ್ರಿ, ನಟಿ ಸೌಂದರ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆದಿದೆ. ರುಷಭ್ ಎಂಬುವವರ ಸಂಗಾತಿಯಾಗಿದ್ದಾರೆ ಸೌಂದರ್ಯ. ಈ ವಿವಾಹ ಕಾರ್ಯಕ್ರಮದಲ್ಲಿ ಚಿತ್ರನಟರ ದಂಡೇ ನೆರೆದಿತ್ತು. ಸುದೀಪ್​, ರಮೇಶ್​ ಅರವಿಂದ್​, ಯಶ್-ರಾಧಿಕಾ ದಂಪತಿ, ಶೃತಿ, ಮಾಳವಿಕಾ, ಸುಧಾರಾಣಿ, ಗಣೇಶ್​ ಸೇರಿದಂತೆ ಹಲವು ಗಣ್ಯರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಆಗಮಿಸಿದ್ದರು. ನಟಿಯರೆಲ್ಲರೂ ಸಕತ್​ ಎಂಜಾಯ್​ ಕೂಡ ಮಾಡಿದ್ದಾರೆ. ಎಲ್ಲರೂ ಸೇರಿ ಥೈ ಥೈ ಥೈ ಬಂಗಾರಿ ಸೇರಿದಂತೆ ಕೆಲವು ಹಾಡುಗಳಿಗೆ ಡಾನ್ಸ್​ ಮಾಡಿರುವ ವಿಡಿಯೋ ಕೂಡ ಇದಾಗಿದೇ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಮದುವೆಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ವೈರಲ್​ ಆಗುತ್ತಿದ್ದು, ಇದರಲ್ಲಿ ಹೈಲೈಟ್​ ಆಗಿರುವುದು ನಟಿ ಮಾಳವಿಕಾ ಅವಿನಾಶ್ ಮತ್ತು ಶ್ರುತಿ​ ಅವರು ನಟಿ ಸುಧಾರಾಣಿ ಮೇಲೆ ಕೋಪ ಮಾಡಿಕೊಂಡಿರುವ ವಿಡಿಯೋ. ಸುಧಾರಾಣಿ ಅವರು ಹೊರಡಲು ರೆಡಿಯಾದಾಗ ಅವರನ್ನು ತಡೆದು ನಿಲ್ಲಿಸಿದ್ದಾರೆ ಮಾಳವಿಕಾ. ಆ ಸಮಯದಲ್ಲಿ ಅವರ ಮುಖದ ಮೇಲೆ ಕೋಪ ಇರುವುದನ್ನು ನೋಡಬಹುದು. ಇದು ಥಹರೇವಾರಿ ಕ್ಯಾಪ್ಷನ್​ ಜೊತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ನ್ಯೂಸ್​ ರೌಂಡ್​ ಎನ್ನುವ ಇನ್​ಸ್ಟಾಗ್ರಾಮ್​ ಖಾತೆಯಲ್ಲಿಯೂ ಇದು ಶೇರ್​ ಆಗಿದೆ.

ಮಗಳ ಮದುವೆಯಲ್ಲಿ ಥೈ ಥೈ ಥೈ ಬಂಗಾರಿ ಹಾಡಿಗೆ ನಟಿಯರ ಜೊತೆ ಸಕತ್​ ಸ್ಟೆಪ್​ ಹಾಕಿದ ಜಯಮಾಲಾ

ಅಷ್ಟಕ್ಕೂ, ಇದೇನು ದೊಡ್ಡ ವಿಷಯವಲ್ಲ. ಈ ವಿಡಿಯೋ ನೋಡಿದರೆ ಬಹುಶಃ ಸುಧಾರಾಣಿಯವರು ಯಾವುದೋ ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಹೊರಡಲು ರೆಡಿಯಾಗಿದ್ದರು. ಆ ಸಮಯದಲ್ಲಿ ಇನ್ನೂ ಸ್ವಲ್ಪ ಹೊತ್ತು ಇದ್ದು ಹೋಗಿ, ಏನಿಷ್ಟು ಅವಸರ ಎಂದು ಮಾಳವಿಕಾ ಅವರು ಕೇಳಿರಬಹುದು ಅಷ್ಟೇ. ಅದನ್ನು ಒಪ್ಪಿ ಸುಧಾರಾಣಿ ಕುಳಿತುಕೊಂಡಿದ್ದಾರೆ. ಪಕ್ಕದಲ್ಲಿಯೇ ಇರುವ ಶ್ರುತಿ ಕೂಡ ಇದ್ದು ಹೋಗಿ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ ಈ ವಿಡಿಯೋ ಮಾಳವಿಕಾ ಸುಧಾರಾಣಿ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂಬ ಶೀರ್ಷಿಕೆ ಅಡಿಯಲ್ಲಿ ವೈರಲ್​ ಆಗುತ್ತಿದೆ.

ಇನ್ನು ಮದುಮಗ ರುಷಬ್ ಕುರಿತು ಹೇಳುವುದಾದರೆ, ಇವರು ಪೊಲೀಸ್ ಮಹಾ ನಿರ್ದೇಶಕ ಕೆ.ರಾಮಚಂದ್ರ ರಾವ್ ಮತ್ತು ರೋಹಿಣಿ ಅವರ ಮಗನಾಗಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಜಯಮಾಲಾ ಪುತ್ರಿ ಐಶ್ವರ್ಯಾ ಕುರಿತು ಹೇಳುವುದಾದರೆ, 31 ವಯಸ್ಸಿನ ಐಶ್ವರ್ಯ ಅವರು ಕೆಲವು ಚಿತ್ರಗಳಲ್ಲಿ ನಟಿಸಿ, ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕನ್ನಡದ ಕೆಲವು ಮತ್ತು ತೆಲಗು ಚಿತ್ರದಲ್ಲಿಯೂ ನಟಿಸಿದ್ದಾರೆ. ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಓದಿರುವ ಸೌಂದರ್ಯ ʼಮಿಸ್ಟರ್‌ ಪ್ರೇಮಿಕುಡುʼ, ದುನಿಯಾ ವಿಜಯ್‌ ನಟನೆಯ ʼಸಿಂಹಾದ್ರಿʼ, ನಟ ಉಪೇಂದ್ರ ಅಭಿನಯದ ʼಗಾಡ್‌ ಫಾದರ್ʼ‌, ಶ್ರೀನಗರ ಕಿಟ್ಟಿ ಅಭಿನಯದ ʼಪಾರು ವೈಫ್‌ ಆಫ್‌ ದೇವದಾಸ್ʼ‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

View post on Instagram