Asianet Suvarna News Asianet Suvarna News

Raveena Tandon Sleepless Night: ತಮ್ಮನೊಂದಿಗೇ ಸಂಬಂಧ ಕಟ್ಟಿದ್ರು..! ರವೀನಾ ಟಂಡನ್ ಮಾತು

  • ರವೀನಾ ಟಂಡನ್ ನೋವಿನ ಮಾತುಗಳು
  • ತಮ್ಮನೊಂದಿಗೇ ಸಂಬಂಧ ಕಟ್ಟಿದ ಬಗ್ಗೆ ನಟಿಯ ನೋವಿನ ಮಾತುಗಳು
They linked me with my own brother I cried had sleepless nights reveals Raveena Tandon dpl
Author
Bangalore, First Published Jan 7, 2022, 12:52 PM IST
  • Facebook
  • Twitter
  • Whatsapp

ಬಾಲಿವುಡ್‌ನ ಪ್ರತಿಭಾನ್ವಿತ ನಟಿ ರವೀನಾ ಟಂಡನ್ ಈಗಿರುವ ಸ್ಥಾನಕ್ಕೆ ತಲುಪಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ತಮ್ಮ ವೃತ್ತಿ ಜೀವನದ ತುತ್ತ ತುದಿಯಲ್ಲಿದ್ದಾಗ ನಟಿ ಅನುಭವಿಸಿದ ನೋವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಕೆರಿಯರ್‌ನ ಪೀಕ್‌ನಲ್ಲಿದ್ದಾಗ ತಮ್ಮ ಕುರಿತು ಸುಳ್ಳು ಸುದ್ದಿಗಳು ಹೇಗೆ ಹರಿದಾಡಿದವು ಅದರಿಂದ ನಟಿ ಹೇಗೆ ಪ್ರಭಾವಿತರಾದರು ಎಂಬುದನ್ನು ಶೇರ್ ಮಾಡಿದ್ದಾರೆ. ಪ್ರತಿಭಾವಂತ ನಟಿ ರವೀನಾ ಟಂಡನ್ ಅವರು ಹಲವು ವರ್ಷಗಳ ಹಿಂದೆ ತನ್ನ ಗೇಮ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾಗ, ಅನೇಕ ಟ್ಯಾಬ್ಲಾಯ್ಡ್‌ಗಳು ಒಮ್ಮೆ ತನ್ನ ಸಹೋದರನೊಂದಿಗೆ ಸಂಬಂಧ ಹೊಂದಿರುವುದಾಗಿ ಸುಳ್ಳು ಸುದ್ದಿಗಳು ಬರೆಯಲು ಪ್ರಯತ್ನಿಸಿದವು ಎಂದು ಇತ್ತೀಚೆಗೆ ನಟಿ ಹೇಳಿದ್ದಾರೆ.

ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ, ರವೀನಾ ಟಂಡನ್, ನಾನು ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ನೆನಪಿಸಿಕೊಳ್ಳುತ್ತೇನೆ. ನಾನು ಪ್ರತಿ ತಿಂಗಳು ಭಯಪಡುತ್ತಿದ್ದೆ, ಇನ್ನೊಂದು ಹಳದಿ, ಗಾಸಿಪಿ ಟ್ಯಾಬ್ಲಾಯ್ಡ್ ನನ್ನನ್ನು ಸಂಪೂರ್ಣವಾಗಿ ಕಿತ್ತುಹಾಕುತ್ತದೆ, ನನ್ನ ವಿಶ್ವಾಸ, ನನ್ನ ಖ್ಯಾತಿ, ನನ್ನ ಪೋಷಕರು ಎಲ್ಲವೂ ಚೂರುಗಳಾಗಿ ಹೋಗುತ್ತವೆ. ಅದರ ಬಗ್ಗೆ ನಾನು ಆಶ್ಚರ್ಯಪಡುತ್ತಿದ್ದೆ ಎಂದಿದ್ದಾರೆ ನಟಿ.

ರಾಕಿ ಭಾಯ್‌ನನ್ನು ಹೊಗಳಿದ ಬಾಲಿವುಡ್ ನಟಿ ರವೀನಾ..! ಯಶ್ ಬಗ್ಗೆ ಹೇಳಿದ್ದಿಷ್ಟು

ಅವರು ನನ್ನನ್ನು ನನ್ನ ಸ್ವಂತ ಸಹೋದರನೊಂದಿಗೆ ಲಿಂಕ್ ಮಾಡಿದ್ದಾರೆ. ಸ್ಟಾರ್ಡಸ್ಟ್ ಅದರ ಬಗ್ಗೆಯೂ ಬರೆದಿದ್ದಾರೆ. ‘ರವೀನಾ ಟಂಡನ್‌ನನ್ನು ಡ್ರಾಪ್ ಮಾಡಲು ಒಬ್ಬ ಸುಂದರ, ಸುಂದರ ಹುಡುಗ ಬಂದಿದ್ದಾನೆ, ನಾವು ರವೀನಾ ಟಂಡನ್ ಅವರ ಗೆಳೆಯನನ್ನು ಪತ್ತೆ ಮಾಡಿದ್ದೇವೆ’. ನಾವು ಇದನ್ನೆಲ್ಲ ಕೇಳಿ ಬದುಕಿದ್ದೇವೆ. ಯಾರು ಸ್ಪಷ್ಟಪಡಿಸುತ್ತಾರೆ ಇದನ್ನು ಎಂದಿದ್ದಾರೆ ನಟಿ. ಪತ್ರಕರ್ತರು ಮತ್ತು ಸಂಪಾದಕರ ಕರುಣೆಗೆ ಪಾತ್ರರಾಗಿದ್ದಿರಿ. ನೀವು ‘ಹಲೋ?’ ಎಂದು ಹೇಳಿದರೂ, ಅವರು, ‘ಹೌದು, ಸರಿ, ಸ್ವಲ್ಪ ಮಸಾಲೆ ಸೇರಿಸಿ ಹಾಕಿ ಎಂದು ಹೇಳುತ್ತಿದ್ದರು ಎಂದು ಅವರು ಹೇಳಿದ್ದಾರೆ.

ರವೀನಾ ಟಂಡನ್ ಕೊನೆಯ ಬಾರಿಗೆ ನೆಟ್‌ಫ್ಲಿಕ್ಸ್ ಸರಣಿಯ ಅರಣ್ಯಕ್‌ನಲ್ಲಿ ಕಾಣಿಸಿಕೊಂಡರು. ಪರಂಬ್ರತ ಚಟ್ಟೋಪಾಧ್ಯಾಯ, ಅಶುತೋಷ್ ರಾಣಾ, ಜಾಕಿರ್ ಹುಸೇನ್ ಮತ್ತು ಮೇಘನಾ ಮಲಿಕ್ ಸಹ-ನಟರಾಗಿದ್ದರು. ಅವರು ಮುಂದೆ ಕೆಜಿಎಫ್ ಚಾಪ್ಟರ್ 2 ನಲ್ಲಿ ಭಾರತದ ಪ್ರಧಾನ ಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಮಿಕಾ ಪಾತ್ರದಲ್ಲಿ ರವೀನಾ:

ನಟಿ ರವೀನಾ ಟಂಡನ್ ಹುಟ್ಟಿದ ಹಬ್ಬದ ದಿನ ಕೆಜಿಎಫ್‌ 2 ಸಿನಿಮಾದಲ್ಲಿ ತಮ್ಮ ಫಸ್ಟ್ ಲುಕ್ ರಿವೀಲ್ ಮಾಡಿ ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದ್ದಾರೆ. ಕೆಜಿಎಫ್‌2 ಮೂಲಕ ಬೆಳ್ಳಿ ತೆರೆಗೆ ಮರಳಲಿರುವ ನಟಿ ರವೀನಾ ರಮಿಕಾ ಸೆನ್ ಎನ್ನುವ ಪಾತ್ರದಲ್ಲಿ ಮಿಂಚಲಿದ್ದಾರೆ. ತಮ್ಮ ಲುಕ್ ಶೇರ್ ಮಾಡಿದ ನಟಿ, ಪ್ರಸೆಂಟಿಂಗ್ ರಮಿಕಾ ಸೆನ್ ಕೆಜಿಎಫ್ ಚಾಪ್ಟರ್ 2 ಎಂದು ಬರೆದಿದ್ದಾರೆ. ಈ ಗಿಫ್ಟ್‌ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಕೆಜಿಎಫ್ ಟೀಂ ಎಂದಿದ್ದಾರೆ ನಟಿ. ತುಂಬಿದ ಕಣ್ಣುಗಳು, ಮೆರೂನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ರವೀನಾ.

They linked me with my own brother I cried had sleepless nights reveals Raveena Tandon dpl

ನನ್ನ ಪಾತ್ರ ಕುತೂಹಲಕಾರಿ ಜೊತೆಗೆ ವಿಭಿನ್ನ. ರಮಿಕಾ ಸೇನ್‌ ಒಬ್ಬ ಶಕ್ತಿಯುತ ಮಹಿಳೆ, ನನ್ನ ಪಾತ್ರದ ಮುಂದಿನ ಹೆಜ್ಜೆಯನ್ನು ಯಾರೂ ಊಹೆ  ಮಾಡಲು ಸಾಧ್ಯವಿಲ್ಲ. ನನ್ನ ಫಸ್ಟ್ ಲುಕ್ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ರಮಿಕಾ ಪಾತ್ರವೇ ಒಂದು ತಿರುವು ತಂದುಕೊಡಲಿದೆ.  ನಾನು ಆಕ್ಷನ್ ಮಾಡಿದ್ದೀನಾ ಇಲ್ಲವಾ.. ಚಿತ್ರ ನೋಡಿ ಗೊತ್ತಾಗುತ್ತದೆ ವೇಟ್ ಆಂಡ್ ವಾಚ್! ಚಿತ್ರದ ಸ್ಟೋರಿ ಲೈನ್ ಕಾರಣಕ್ಕೆ ನಾನು  ಇಂಪ್ರೆಸ್ ಆದೆ.  ನನ್ನ ಪಾತ್ರ ಸಹ ಅಷ್ಟೆ ಇಂಟರೆಸ್ಟಿಂಗ್. ನಿರ್ದೇಶ ಪ್ರಶಾಂತ್‌ ನೀಲ್‌  ಡಿಫರೆಂಟ್.. ಅವರ ಮೂವ್ ಗಳನ್ನು ವಿಭಿನ್ನ ಆಲೋಚನೆಗಳನ್ನು ಗೆಸ್ ಮಾಡಲು ಅಸಾಧ್ಯ ಎಂದು ನಟಿ ತಮ್ಮ ಪಾತ್ರದ ಬಗ್ಗೆ ತಿಳಿಸಿದ್ದಾರೆ.

Follow Us:
Download App:
  • android
  • ios