ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್

ಸಿನಿಮಾ ಕ್ಷೇತ್ರದಲ್ಲಿ ಅತಿಹೆಚ್ಚು ಮದುವೆಯಾಗಿರುವ ಕೆಲವು ನಟ- ನಟಿಯರು ಯಾರು ಗೊತ್ತೆ? ಇವರ ಪೈಕಿ ನಟರು ಮೊದಲ ಪತ್ನಿಗೆ ಡಿವೋರ್ಸ್​ ಕೂಡ ನೀಡದೆ ಮದುವೆಯಾಗಿದ್ದಾರೆ. ಅಂಥವರ ಪಟ್ಟಿ ಇಲ್ಲಿದೆ. 
 

 These bollywood actress and actors get married many time even without giving divorce

ಭಾರತೀಯ ಸಂಸ್ಕೃತಿಯಲ್ಲಿ, ಮದುವೆಯನ್ನು ಏಳು ಜನುಮಗಳ ಬಂಧವೆಂದು ಪರಿಗಣಿಸಲಾಗುತ್ತದೆ. ಆದರೆ ಎಲ್ಲರ ಜೀವನದಲ್ಲಿಯೂ ಇದು ನಡೆಯಲೇಬೇಕೆಂದೇನೂ ಇಲ್ಲ. ಒಂದೇ ಜನ್ಮದಲ್ಲಿ ಒಂದು ಮದುವೆಯಾಗಿ ಕೆಲವು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವವರೂ ಇದ್ದಾರೆ, ಇಲ್ಲವೇ ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮದುವೆಯಾಗುವವರೂ ಇದ್ದಾರೆ. ಹಿಂದೂ ಕಾನೂನಿನ ಪ್ರಕಾರ ಹೋದರೆ ಪತಿ ಅಥವಾ ಪತ್ನಿ  ಮೃತಪಟ್ಟರೆ ಇಲ್ಲವೇ  ವಿಚ್ಛೇದನ ಪಡೆದರೆ ಮಾತ್ರ ಇನ್ನೊಂದು ಮದುವೆಯಾಗಬಹುದು. ಆದರೆ ಕಾನೂನು ಯಾರಿಗೆ ಬೇಕು ಎಂದು ಕೇಳುವ ಕೆಲವು 'ಗಣ್ಯ ವ್ಯಕ್ತಿಗಳು' ನಮ್ಮ ಕಣ್ಣ ಮುಂದೆಯೇ ಇದ್ದಾರೆ. ರಾಜಕೀಯದವರೇ ಆಗಿರಬಹುದು, ಸಿನಿಮಾ ಮಂದಿಯೇ ಆಗಿರಬಹುದು. ಕೆಲವರಿಗೆ ಮದುವೆ ಎನ್ನುವುದು ಮಕ್ಕಳ ಆಟದಂತೆ ಆಗಿದೆ.

ಇನ್ನು, ಚಿತ್ರರಂಗಕ್ಕೆ ಬಂದರೆ, ಸಿನಿಮಾ ಜಗತ್ತಿನಲ್ಲಿ  ಅಕ್ರಮ ಸಂಬಂಧಗಳ ಗಾಸಿಪ್​ಗಳಂತೂ ಮಾಮೂಲು. ಅವುಗಳನ್ನು ಪಕ್ಕದಲ್ಲಿ ಇಟ್ಟು ನೋಡುವುದಾದರೆ ಖುಲ್ಲಂಖುಲ್ಲಾ ಆಗಿ ಮದುವೆಯಾಗಿರುವ ಕೆಲವು ಸಿನಿಮಾ ಮಂದಿಯ  ಬಗ್ಗೆ ನಾವಿಲ್ಲಿ ಪರಿಚಯಿಸುತ್ತಿದ್ದೇವೆ.  ಕೆಲವೊಮ್ಮೆ ಈ ಎಣಿಕೆ ಮೂರು ಅಥವಾ ಅದಕ್ಕಿಂತಲೂ  ಹೆಚ್ಚಿಗೆ ಇದೆ. ಇದು ರೀಲ್​ ಅಲ್ಲ, ರಿಯಲ್​ ಜೀವನದಲ್ಲಿಯೂ ನಡೆದಿದೆ. ಇವರಲ್ಲಿ ಕೆಲವರು ಕಾನೂನು ಪ್ರಕಾರ ಡಿವೋರ್ಸ್​ ಪಡೆದುಕೊಂಡಿದ್ದರೆ, ಇನ್ನು ಕೆಲವರು ಯಾವುದೇ ನಿಬಂಧನೆಗೂ ಒಳಪಡದೇ ಮದುವೆಯಾದವರು ಇದ್ದಾರೆ. 

Rakhi Sawant: ನಾನು ಫ್ರಿಡ್ಜ್​ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್​ಗೆ ಆಗಿದ್ದಾದ್ರೂ ಏನು?

ಸುನಿಧಿ ಚೌಹಾಣ್ (Sunidhi Chouhan)
ಗಾಯಕಿ ಸುನಿಧಿ ಚೌಹಾಣ್ ಎರಡು ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆಕೆ ತನ್ನ 18ನೇ ವಯಸ್ಸಿನಲ್ಲಿ ತನ್ನ ಕುಟುಂಬದ ಸದಸ್ಯರಿಗೆ ಸಡ್ಡು ಹೊಡೆದು, ನೃತ್ಯ ನಿರ್ದೇಶಕ ಬಾಬಿ ಖಾನ್‌ನನ್ನು ಮದುವೆಯಾದರು. ಆದಾಗ್ಯೂ, ಅವರ ಮೊದಲ ಮದುವೆ ಯಶಸ್ವಿಯಾಗಲಿಲ್ಲ. ಸುನಿಧಿ ಸಂಗೀತ ಸಂಯೋಜಕ ಹಿತೇಶ್ ಸೋನಿಕ್ ಅವರನ್ನು 2012 ರಲ್ಲಿ ವಿವಾಹವಾದರು.

ಜೆಬಾ ಭಕ್ತಿಯಾರ್ (Jeba Bhakthiyar)
ಬಾಲಿವುಡ್​ನ ಖ್ಯಾತ ನಟಿ ಝೀಬಾ ಬಖ್ತಿಯಾರ್ ಮೂಲತಃ ಪಾಕಿಸ್ತಾನದವರು. ಆದರೆ, ‘ಹಿನಾ’ ಚಿತ್ರದಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇವರು  ನಾಲ್ಕು ಮದುವೆಯಾಗಿದ್ದಾರೆ.  ಅಲ್ಲದೆ, ಜೆಬಾ ಭಕ್ತಿಯಾರ್ ಅವರನ್ನು ಬಾಲಿವುಡ್‌ನ ಅತ್ಯಂತ ವಿವಾಹಿತ ನಟಿ ಎಂದು ಪರಿಗಣಿಸಲಾಗಿದೆ.

ನೀಲಿಮಾ ಅಜೀಂ (Nileema Ajim)
ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ತಾಯಿ ನೀಲಿಮಾ ಅಜೀಮ್ ಕೂಡ ಮೂರು ಮದುವೆಗಳನ್ನು ಮಾಡಿಕೊಂಡಿದ್ದಾರೆ. ಆಕೆಯ ಮೊದಲ ಮದುವೆಯು ನಟ ಪಂಕಜ್ ಕಪೂರ್ ಅವರೊಂದಿಗೆ. ಈ ದಂಪತಿಯ ಮಗ ಶಾಹಿದ್ ಕಪೂರ್. ನಂತರ ಅವರು ನಟ ರಾಜೇಶ್ ಖಟ್ಟರ್ ಅವರನ್ನು ವಿವಾಹವಾದರು ಮತ್ತು 2001 ರಲ್ಲಿ ವಿಚ್ಛೇದನ ಪಡೆದರು. ಅಂತಿಮವಾಗಿ, ನಟಿ 2004 ರಲ್ಲಿ ಉಸ್ತಾದ್ ರಾಜಾ ಅಲಿ ಖಾನ್ ಅವರನ್ನು ವಿವಾಹವಾದರು.

Sunil Shetty ದಂಪತಿಯ ಅಂತರ್​ಧರ್ಮೀಯ ರೋಚಕ ಪ್ರೇಮ್​ ಕಹಾನಿ!

ಇನ್ನು ಬಾಲಿವುಡ್​ನ ಪುರುಷರ ಬಗ್ಗೆ ಹೇಳುವುದಾದರೆ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಮತ್ತೊಂದು ಮದುವೆಯಾದವರು ಇವರು: 
ಧರ್ಮೇಂದ್ರ, ಸಂಜಯ್ ಖಾನ್ (Dharmendra, Sanjay Khan):
ಧರ್ಮೇಂದ್ರ ಅವರು 1954 ರಲ್ಲಿ ಪ್ರಕಾಶ್ ಕೌರ್ ಅವರನ್ನು ಮೊದಲು ವಿವಾಹವಾದರು. ಅವರಿಗೆ ಅಜಯ್ ಸಿಂಗ್ (ಸನ್ನಿ) ಡಿಯೋಲ್, ವಿಜಯ್ ಸಿಂಗ್ (ಬಾಬಿ) ಡಿಯೋಲ್, ಅಜೆತಾ ಮತ್ತು ವಿಜೇತಾ ಎಂಬ ನಾಲ್ಕು ಮಕ್ಕಳಿದ್ದರು. ನಂತರ ಅವರು 1980 ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿಚ್ಛೇದನ ಮಾಡದೆ ಹೇಮಾ ಮಾಲಿನಿಯನ್ನು ವಿವಾಹವಾದರು, ಅವರಿಗೆ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಟ ಸಂಜಯ್ ಖಾನ್ 1978 ರಲ್ಲಿ ನಟಿ ಜೀನತ್ ಅಮಾನ್ ಅವರನ್ನು ವಿವಾಹವಾದರು. ವಿಶೇಷವೆಂದರೆ ಆ ಸಮಯದಲ್ಲಿ ಅವರು ಈಗಾಗಲೇ ಮದುವೆಯಾಗಿದ್ದರು. ಅವರು ಮೊದಲು 1966 ರಲ್ಲಿ ಜರೀನ್ ಕಾಟ್ರಕ್ ಅವರನ್ನು ವಿವಾಹವಾದರು, ಅವರಿಗೆ ಜಾಯೆದ್ ಖಾನ್, ಸುಸ್ಸಾನೆ ಖಾನ್, ಫರಾಹ್ ಖಾನ್ ಅಲಿ ಮತ್ತು ಸಿಮೋನ್ ಖಾನ್ ಅರೋರಾ ಎಂಬ ನಾಲ್ಕು ಮಕ್ಕಳಿದ್ದರು. ಜೀನತ್​ರನ್ನು ಮದುವೆಯಾಗಲು ಸಂಜಯ್ ಜರೀನ್ ಅವರಿಗೆ ವಿಚ್ಛೇದನ ನೀಡಲಿಲ್ಲ. ಬದಲಿಗೆ, ಮದುವೆಯಾದ ಒಂದು ವರ್ಷದ ನಂತರ, ಅವರು ಜೀನತ್‌ಗೆ ವಿಚ್ಛೇದನ ನೀಡಿದರು.

ರಾಜ್ ಬಬ್ಬರ್, ದಿಲೀಪ್ ಕುಮಾರ್ (Raj Babbar, Deleep Kumar):
ರಾಜ್ ಬಬ್ಬರ್ ಎರಡು ಮದುವೆಯಾಗಿದ್ದಾರೆ.  ಅವರು ಮೊದಲು 1975 ರಲ್ಲಿ ನಾದಿರಾ ಜಹೀರ್ ಅವರನ್ನು ವಿವಾಹವಾದರು, ಅವರಿಗೆ ಜೂಹಿ ಬಬ್ಬರ್ ಮತ್ತು ಆರ್ಯ ಬಬ್ಬರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರು ನಾದಿರಾದಿಂದ ಬೇರ್ಪಟ್ಟರು, ಆದರೆ ವಿಚ್ಛೇದನವನ್ನು ಪಡೆಯಲಿಲ್ಲ. ವಿವಾಹವಾಗಿದ್ದರೂ, ಅವರು ನಟಿ ಸ್ಮಿತಾ ಪಾಟೀಲ್ ಅವರನ್ನು ವಿವಾಹವಾದರು, ಅವರಿಗೆ ಪ್ರತೀಕ್ ಬಬ್ಬರ್ ಎಂಬ ಮಗನಿದ್ದಾನೆ. 1986ರಲ್ಲಿ ಸ್ಮಿತಾ ಪಾಟೀಲ್ ನಿಧನರಾದರು. ಇನ್ನು, ದಿವಂಗತ ದುರಂತ ಕಿಂಗ್ ದಿಲೀಪ್ ಕುಮಾರ್ ಅವರ ಮೊದಲ ಮದುವೆ 1966 ರಲ್ಲಿ ನಟಿ ಸಾಯಿರಾ ಬಾನು ಅವರನ್ನು ಆಗಿತ್ತು. ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಅವರೊಂದಿಗೆ ಇದ್ದರು. 1981 ರಲ್ಲಿ, ದಿಲೀಪ್ ಕುಮಾರ್ ಸಾಯಿರಾಗೆ ವಿಚ್ಛೇದನ ನೀಡದೆ ಹೈದರಾಬಾದ್ ಮೂಲದ ಸಮಾಜವಾದಿ ಅಸ್ಮಾ ಸಾಹಿಬಾ ಅವರನ್ನು ವಿವಾಹವಾದರು, ಅದು 1983 ರಲ್ಲಿ ಅವರ ವಿಚ್ಛೇದನದಲ್ಲಿ ಕೊನೆಗೊಂಡಿತು.

ನಟಿ ಆಲಿಯಾ ಭಟ್​ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್​

ಉದಿತ್ ನಾರಾಯಣ್, ಮಹೇಶ್​ ಭಟ್​ (Udith Narayan, Mahesh Bhatt):
ಜನಪ್ರಿಯ ಗಾಯಕ ಉದಿತ್ ನಾರಾಯಣ್ ಎರಡು ಮದುವೆಯಾಗಿದ್ದರು. ಅವರ ಮೊದಲ ಮದುವೆ 1984 ರಲ್ಲಿ ರಂಜನಾ ಅವರೊಂದಿಗೆ ನಡೆಯಿತು. 1985 ರಲ್ಲಿ, ಅವರು ದೀಪಾ ಅವರನ್ನು ಎರಡನೇ ಬಾರಿಗೆ ವಿವಾಹವಾದರು, ಅವರಿಗೆ ಆದಿತ್ಯ ನಾರಾಯಣ ಎಂಬ ಮಗನಿದ್ದಾನೆ. 2006 ರಲ್ಲಿ, ರಂಜನಾ ನಾರಾಯಣ್ ಝಾ ಮುಂದೆ ಬಂದರು ಮತ್ತು ಸ್ವತಃ ಉದಿತ್ ಅವರ ಮೊದಲ ಪತ್ನಿ ಎಂದು ವಿವರಿಸಿದರು. ಮೊದಮೊದಲು ಇದನ್ನು ನಿರಾಕರಿಸುತ್ತಲೇ ಬಂದ ಉದಿತ್ ನಂತರ ರಂಜನಾಳನ್ನು ಮದುವೆಯಾಗುವ ಸತ್ಯವನ್ನು ಒಪ್ಪಿಕೊಂಡಿದ್ದಲ್ಲದೆ, ಆಕೆಗೆ ಜೀವನಾಂಶ ಕೊಡಲು ಆರಂಭಿಸಿದರು. ಮಹೇಶ್ ಭಟ್ ಮೊದಲು ಮದುವೆಯಾಗಿದ್ದು ಲೋರೆನ್ ಬ್ರೈಟ್ ಅವರನ್ನು. ಇಬ್ಬರಿಗೂ ಪೂಜಾ ಭಟ್ ಮತ್ತು ರಾಹುಲ್ ಭಟ್ ಮಕ್ಕಳಿದ್ದಾರೆ. ನಂತರ ಅವರು 1986 ರಲ್ಲಿ ಸೋನಿ ರಜ್ದಾನ್ ಅವರನ್ನು ವಿವಾಹವಾದರು, ಅವರು ಲೋರೆನ್‌ಗೆ ವಿಚ್ಛೇದನ ನೀಡದೆಯೇ, ಅವರಿಗೆ ಆಲಿಯಾ ಭಟ್ ಮತ್ತು ಶಾಹೀನ್ ಭಟ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.

ಸಲೀಂ ಖಾನ್ (Saleem Khan):
ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಎರಡು ಮದುವೆಯಾಗಿದ್ದರು. ಅವರು ಮೊದಲು 1964 ರಲ್ಲಿ ಸುಶೀಲಾ ಚರಕ್ ಅವರನ್ನು ವಿವಾಹವಾದರು, ಅವರಿಗೆ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಅಲ್ವಿರಾ ಖಾನ್ ಎಂಬ ನಾಲ್ಕು ಮಕ್ಕಳಿದ್ದರು. ಎಲ್ಲಾ ನಾಲ್ಕು ಮಕ್ಕಳ ಜನನದ ನಂತರ, ಅವರು ಸುಶೀಲಾಗೆ ವಿಚ್ಛೇದನ ನೀಡದೆ 1981 ರಲ್ಲಿ ಹೆಲೆನ್ ಅವರನ್ನು ಮರುಮದುವೆಯಾದರು. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಸಲೀಂ ಖಾನ್ ಅವರು ಹೆಲೆನ್‌ಗೆ ಸಹಾಯ ಮಾಡಲು ಮದುವೆಯಾಗಿರುವುದಾಗಿ ಹೇಳಿದ್ದರು.
 

Latest Videos
Follow Us:
Download App:
  • android
  • ios