Rakhi Sawant: ನಾನು ಫ್ರಿಡ್ಜ್​ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್​ಗೆ ಆಗಿದ್ದಾದ್ರೂ ಏನು?

ಮೈಸೂರು ಮೂಲದ ಆದಿಲ್​  ಖಾನ್​ನನ್ನು ಮದುವೆಯಾದಾಗಿನಿಂದಲೂ ಹೊಸ ಹೊಸ ವಿವಾದದೊಂದಿಗೆ ಗೋಳು ತೋಡಿಕೊಳ್ಳುತ್ತಿರುವ ನಟಿ ರಾಖಿ ಸಾವಂತ್​ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಏನದು?
 

Rakhi Sawant serious allegations against husband Adil Khan Durrani accuses girlfriend warns expose

ನಟಿ ರಾಖಿ ಸಾವಂತ್ (Rakhi Sawant) ಇತ್ತೀಚಿಗೆ ಭಾರಿ ಸುದ್ದಿಯಲ್ಲಿರುವ ನಟಿ.  ಮೈಸೂರು ಮೂಲದ ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾದಾಗಿನಿಂದಲೂ ಈ ದಂಪತಿಯ ನಡುವೆ ಅದೆಷ್ಟೋ ನಾಟಕೀಯ ಬೆಳವಣಿಗೆಗಳು ನಡೆದು ಹೋಗಿವೆ ಮೊದಲು ಈ ಮದುವೆ ಗುಟ್ಟಾಗಿ  ನಡೆದಿತ್ತು. ಕೊನೆಗೆ ರಾಖಿ ಅವರೇ ಇದನ್ನು ಬಹಿರಂಗಪಡಿಸಿದ್ದರು. ಆದರೆ ಮದುವೆಯನ್ನು ಆದಿಲ್​ ನಿರಾಕರಿಸಿ ಭಾರಿ ಹಂಗಾಮವೇ ಸೃಷ್ಟಿಯಾಗಿತ್ತು. ಏಳು ತಿಂಗಳ ಹಿಂದೆಯೇ ತಮ್ಮ ಮದುವೆಯಾಗಿದ್ದು, ಮೈಸೂರಿನಲ್ಲಿ ರಿಜಿಸ್ಟರ್​ ಮಾಡಿರುವುದಾಗಿ ರಾಖಿ ಹೇಳುತ್ತಿದ್ದರೆ, ನನಗೂ ರಾಖಿಗೂ ಸಂಬಂಧವೇ ಇಲ್ಲ ಎಂದಿದ್ದರು ಆದಿಲ್​. ಈ ಬಗ್ಗೆ ರಾಖಿ ಸಾವಂತ್​ ಎಲ್ಲರ ಎದುರು ಕಣ್ಣೀರಿಟ್ಟಿದ್ದರು. ತಮ್ಮ ಪತಿ ಆದಿಲ್  (Adil Khan Durrani) ತಮಗೆ ಭಾರಿ ಮೋಸ ಮಾಡಿರುವುದಾಗಿ ರಾಖಿ ಹೇಳಿಕೊಂಡಿದ್ದರು. ಮದುವೆಯ ಬಗ್ಗೆ ಬಾಯಿ ಬಿಡದಂತೆ ಆದಿಲ್​ ತಮ್ಮನ್ನು ಬೆದರಿಸಿದ್ದರು ಎಂದು ರಾಖಿ ಸಾವಂತ್​ (Rakhi Sawanth) ಹೇಳಿದ್ದರು. ಕೊನೆಗೆ ಆದಿಲ್​ನನ್ನು ಮದುವೆಯಾಗಿ ಮೋಸಹೋದೆ ಎಂದು ಪುನಃ ಕಣ್ಣೀರಿಟ್ಟಿದ್ದ ರಾಖಿ 'ಕಳೆದ ವರ್ಷ ಜುಲೈನಲ್ಲಿ ಮದುವೆಯಾದ್ವಿ (Marriage). ಆದರೆ ಮದ್ವೆ ಬಗ್ಗೆ ಹೇಳದಂತೆ ಪತಿ ಬೆದರಿಕೆ ಹಾಕಿದ್ದ' ಎಂದು ರಾಖಿ ಹೇಳಿದ್ದಾರೆ. 'ಮದುವೆ ಬಗ್ಗೆ ತಿಳಿದರೆ ಅವನ  ತಂಗಿಗೆ ಹುಡುಗ ಸಿಗುವುದಿಲ್ಲ ಎನ್ನುವ ಕಾರಣ ನೀಡಿ ವಿಷಯ ಬಹಿರಂಗಪಡಿಸಬೇಡಿ ಎಂದಿದ್ದ. ನನ್ನ ಹೆಸರು ಹೇಳುವುದು ಅವನಿಗೆ ನಾಚಿಕೆ ಅಂತೆ. ಅದಕ್ಕೇ ಹೇಳಬೇಡ' ಎಂದು ಹೇಳಿರುವುದಾಗಿ ಗೋಳೋ ಎಂದಿದ್ದರು. ಕೊನೆಗೂ ಆದಿಲ್​ ಖಾನ್​ ತಾನು ರಾಖಿಯನ್ನು ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಅಂತೂ ಈ ದಂಪತಿಯ ನಡುವಿನ ನಾಟಕ ಅಂತ್ಯವಾಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ಈಗ ಮತ್ತೊಂದು ನಾಟಕ ಶುರುವಾಗಿದೆ.

ಅದೇನೆಂದರೆ, ರಾಖಿ ಸಾವಂತ್​ ಅವರು ತಾಯಿ ಈಚೆಗೆ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಅದರ ಬಳಿಕ ರಾಖಿ ಪುನಃ ಪತಿ ವಿರುದ್ಧ ಗಂಭೀರ ಆರೋಪ ಶುರು ಹಚ್ಚಿಕೊಂಡಿದ್ದಾರೆ. ಕೇಸರಿ ಬಣ್ಣದ ಬುರ್ಖಾ (Saffron Hijab) ಧರಿಸಿ ವಿಡಿಯೋ ಮಾಡಿದ್ದ ರಾಖಿ  ತಮ್ಮ ವಿಡಿಯೋದಲ್ಲಿ  ಅಲ್ಲಾನನ್ನು (Allah) ಹಾಡಿ ಹೊಗಳಿದ್ದರು. ಅಲ್ಲಾ ನಿಮ್ಮ ಕಷ್ಟಗಳನ್ನು ನಿವಾರಿಸಲಿ ಎಂದು ಅವರು ಹೇಳಿದ್ದರು. ಇವರ ಮದುವೆ  ದಾಖಲೆಗಳನ್ನು ನೋಡಿದಾಗ ರಾಖಿ ಫಾತಿಮಾ (Fatima) ಆಗಿ ಬದಲಾಗಿರುವುದೂ ಕಂಡುಬಂದಿತ್ತು.  ಆದ್ದರಿಂದ ರಾಖಿ ಧರ್ಮ ಬದಲಿಸಿದ್ದಾರೆ ಎಂದು ಸುದ್ದಿಯಾಗಿತ್ತು.  ಈ ಚರ್ಚೆ ಶುರುವಾದ ಬೆನ್ನಲ್ಲೇ  ರಾಖಿ  ಹಿಜಾಬ್​ (Hijab) ಧರಿಸಿ ಅಲ್ಲಾನನ್ನು ಹೊಗಳಿದ್ದರು. ಹಣೆಯ ಮೇಲೆ  ಕುಂಕುಮ ಇಡದೇ ಕೇಸರಿ ಬಣ್ಣದ ಹಿಜಾಬ್​ನಲ್ಲಿ ರಾಖಿ ಕಾಣಿಸಿಕೊಂಡಿದ್ದರು. ಆದರೆ ಈಗ ಇದು ತಮಗೆ ಮುಳುವಾಗಿದೆ ಎನ್ನುವ ಅರ್ಥದಲ್ಲಿ ರಾಖಿ ಮಾತನಾಡಿದ್ದಾರೆ. 

ಕೇಸರಿ ಬುರ್ಖಾ ಧರಿಸಿ ಬಂದ ರಾಖಿ ಸಾವಂತ್​ ಹೇಳಿದ್ದೇನು?

ತಾನು ಆದಿಲ್​ನನ್ನು ಮದುವೆಯಾಗಿ ತಪ್ಪು ಮಾಡಿಬಿಟ್ಟೆ ಎಂದು ಮತ್ತೊಮ್ಮೆ ಗೋಳೋ ಎನ್ನುತ್ತಿದ್ದಾರೆ ರಾಖಿ. ಈಗ ರಾಖಿ ಹೇಳುತ್ತಿರುವುದು ಆದಿಲ್‌ನ ಗೆಳತಿ (Friend) ತಮ್ಮ ವೈವಾಹಿಕ ಜೀವನ ಹಾಳು ಮಾಡುತ್ತಿದ್ದಾಳೆ ಎನ್ನುವುದು. 'ನಾನು ಬಿಗ್ ಬಾಸ್ ಮರಾಠಿಯ ಸೀಸನ್​ 4ನಲ್ಲಿದ್ದಾಗ ಅವರ ಜೀವನದಲ್ಲಿ ಬೇರೆ ಯುವತಿ ಬಂದಿದ್ದಾಳೆ. ಅವಳು ಯಾರು ಎನ್ನುವುದು ನನಗೆ ಚೆನ್ನಾಗಿ ಗೊತ್ತು.  ಆದರೆ ಈಗಲೇ  ನಾನು ಅದನ್ನು ಬಹಿರಂಗಪಡಿಸುವುದಿಲ್ಲ.  ಆದರೆ ಸಮಯ ಬಂದಾಗ, ನಾನು ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸುತ್ತೇನೆ' ಎಂದಿದ್ದಾರೆ. ಹಿಂದೊಮ್ಮೆ ಪತಿ ಆದಿಲ್​ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದ ರಾಖಿ, ಈಗ 'ಆತ ನನ್ನನ್ನು  ಕೇವಲ ಖ್ಯಾತಿಗಾಗಿ ಮೆಟ್ಟಿಲಿನಂತೆ ಬಳಸಿಕೊಳ್ಳುತ್ತಿದ್ದಾನೆ. ನನ್ನನ್ನು ಮದುವೆಯಾದ ಮಾತ್ರಕ್ಕೆ ಆತನನ್ನು ನೀವೇಲ್ಲ ಫೇಮಸ್ ಮಾಡಬೇಡಿ. ನಾನು ಅವನನ್ನು ಫೇಮಸ್ (Famous) ಮಾಡಿದ್ದೇನೆ. ಎಲ್ಲಾ ಸೆಲೆಬ್ರಿಟಿಗಳನ್ನು ಭೇಟಿಯಾಗುವಂತೆ ಮಾಡಿದ್ದೇನೆ. ಈಗ ಇದು ಜಾಸ್ತಿಯಾಯ್ತು ಎನ್ನಿಸುತ್ತಿದೆ' ಎಂದು ರಾಖಿ  ಹೇಳಿದ್ದಾರೆ. 
 
'ಆದಿಲ್​ಗೆ ಆಕೆಯೊಂದಿಗೆ  ಅನೈತಿಕ ಸಂಬಂಧವಿದೆ (Illegal relation). ಇದೇ ಕಾರಣಕ್ಕೆ 8 ತಿಂಗಳು  ನಮ್ಮ ಮದುವೆಯ ಬಗ್ಗೆ ಸುಮ್ಮನಿರಲು ಹೇಳಿದ್ದ. ಅವನು ಆಕೆಯ ಕಾರಣದಿಂದ ನಮ್ಮ ಮದುವೆಯನ್ನು ನಿರಾಕರಿಸಿದ್ದ. ನಂತರ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಹೆದರಿ ಆದಿಲ್ ನಮ್ಮ ಮದುವೆಯನ್ನು ಒಪ್ಪಿಕೊಂಡ. ನಾನು ಸುಮ್ಮನಿದ್ದು ಸಾಕಾಗಿದೆ. ಆದಿಲ್‌ನ ಸಂಬಂಧವು ನನ್ನ ವೈವಾಹಿಕ ಜೀವನ ಹಾಳು ಮಾಡಿದೆ ಎಂದಿರುವ ರಾಖಿ,  ನಾನು ಫ್ರಿಡ್ಜ್ ಒಳಗೆ ಹೋಗುವುದಿಲ್ಲ, ಫ್ರಿಡ್ಜ್​ (Fridge) ಒಳಗೆ ಹೋಗಲು ಇಷ್ಟಪಡುವುದಿಲ್ಲ ಎಂದು ಗೋಳೋ ಎಂದು ಅತ್ತಿದ್ದಾರೆ. ಇದೇ ವೇಳೆ ಆ ಯುವತಿಗೆ ಎಚ್ಚರಿಕೆ ಕೊಟ್ಟಿರುವ ರಾಖಿ, 'ನೀನು ಒಬ್ಬ ಹೆಣ್ಣಾಗಿ ಇನ್ನೊಂದು ಹೆಣ್ಣಿನ ಜೀವನ ಹಾಳು ಮಾಡುತ್ತಿದ್ದಿ. ಅವನು ನನಗೆ ಮೋಸ ಮಾಡಿದ್ದರೆ ನಿನಗೂ ಮೋಸ ಮಾಡುತ್ತಾನೆ ಎಂಬೋದನ್ನು ಮರೀಬೇಡ' ಎಂದಿದ್ದಾರೆ. 

ನಟಿ ಆಲಿಯಾ ಭಟ್​ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್​

ಆದಿಲ್ ಮರಳಿ ಬಂದರೆ ನಾನು ಕ್ಷಮಿಸಲು ಸಿದ್ಧ. ಆದರೆ ಫ್ರಿಡ್ಜ್​ ಒಳಗೆ ಹೋಗಲಾರೆ. ನನ್ನ ಸ್ವಾಭಿಮಾನಕ್ಕಾಗಿ ಹೇಗೆ ಹೋರಾಡಬೇಕೆಂದು  ನನಗೆ ತಿಳಿದಿದೆ. ನಾನು ಇತರ ಹುಡುಗಿಯರಂತೆ ಮೌನವಾಗಿರುತ್ತೇನೆ ಎಂದು ಭಾವಿಸಬೇಡಿ. ನೀವು ನನಗೆ ಬೆದರಿಕೆ ಹಾಕಿದರೆ ನಾನು ಅದನ್ನು ಸಹಿಸುವುದಿಲ್ಲ ಎಂದಿರೋ ರಾಖಿ, ಆದಿಲ್​ನ ಹುಡುಗಿ ತಮಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದಿದ್ದಾರೆ. ನನ್ನ ಕಣ್ಣೀರಿಗೆ ದೇವರು ಸೇಡು ತೀರಿಸಿಕೊಳ್ಳುತ್ತಾನೆ. ಹೆಂಡತಿಗೆ ನಿಷ್ಠನಾಗದವನು ಎಂದಿಗೂ ಇತರರಿಗೆ ನಿಷ್ಠನಾಗುವುದಿಲ್ಲ ಎಂದೂ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios