ಸಲಿಂಗಕಾಮದ ಹಲ್ಚಲ್ ಸೃಷ್ಟಿಸಿದ್ದ ಸ್ಯಾಂಡಲ್ವುಡ್ ಬೆಡಗಿ ಓವಿಯಾ ವೇಶ್ಯಾವಾಟಿಕೆಯ ಓಪನ್ ಮಾತು
ಬಹುಭಾಷಾ ತಾರೆ ಓವಿಯಾ ಅವರು, ಸಲಿಂಗಕಾಮದ ಹಲ್ಚಲ್ ಸೃಷ್ಟಿಸಿದ್ದರು. ಇದೀಗ ಅವರು ವೇಶ್ಯಾವಾಟಿಕೆಯ ಕುರಿತು ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಮಲಯಾಳಂ ನಟಿ ಓವಿಯಾ, ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಸಲಿಂಗಕಾಮದ ವಿಷಯ ಮಾತನಾಡಿ ಹಲ್ಚಲ್ ಸೃಷ್ಟಿಸಿದ್ದರು. ನನಗೆ ಗಂಡನ ಅವಶ್ಯಕತೆಯಿಲ್ಲ. ನಾನು ಮದುವೆಯಾಗಲ್ಲ ಎಂದಿದ್ದ ಬೆಡಗಿ, ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ನೀವಂದುಕೊಂಡಂತೆ ಲೆಸ್ಬಿಯನ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮದುವೆಯೆಂದರೆ ಅಲರ್ಜಿ ಎನ್ನುತ್ತಿದ್ದ ನಟಿಗೆ ನೀವು ಸಲಿಂಗಕಾಮಿಯೇ ಎಂಬ ಪ್ರಶ್ನೆ ಎದುರಾಗಿತ್ತು. ಆಗ ಅವರು ಈ ಸ್ಪಷ್ಟನೆ ನೀಡಿದ್ದರು. "ನಾನು ಮದುವೆ ಆಗಿಲ್ಲ ಅನ್ನೋ ಕಾರಣಕ್ಕೆ ಹೀಗೆ ಕಾಮೆಂಟ್‌ಗಳು ಬರುವುದು ಸಹಜ. ಈ ರೀತಿಯ ಪ್ರಶ್ನೆಗಳು ನನಗೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಒಬ್ಬ ನಟಿಯಾಗಿ ಈ ರೀತಿಯ ಗಾಸಿಪ್‌ಗಳು, ಕೆಟ್ಟ ಮಾತುಗಳು ಬರುವುದು ಸರ್ವೇ ಸಾಮಾನ್ಯ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳಲ್ಲ. ಅವರು ಹಾಗೇ ಹೇಳಿದ ಮಾತ್ರಕ್ಕೆ ನಾನು ಸಲಿಂಗಕಾಮಿಯಲ್ಲ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಅಂದಹಾಗೆ ಓವಿಯಾ ಇದೀಗ ವೇಶ್ಯಾವಾಟಿಕೆಯ ಕಾನೂನುಬದ್ಧತೆ ಮತ್ತು ಲೈಂಗಿಕ ಶಿಕ್ಷಣದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕಿರಾತಕ ಚಿತ್ರದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಬೆಡಗಿ, ಈಗ ವೇಶ್ಯಾವಾಟಿಕೆಯ ಕುರಿತು ಓಪನ್ ಸ್ಟೇಟ್ಮೆಂಟ್ ನೀಡಿ ಸುದ್ದಿಯಾಗಿದ್ದಾರೆ. ಅತ್ಯಾಚಾರ ಕುರಿತಂತೆ ಮಾತನಾಡಿರುವ ಓವಿಯಾ, ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಲೈಂಗಿಕ ಶಿಕ್ಷಣದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದರ ಜೊತೆಗೆ ಸೆಕ್ಸ್ ಎಜುಕೇಷನ್ ಕುರಿತು ಹೇಳಿರುವ ನಟಿ, ಲೈಂಗಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನೇಕ ಆಸೆಗಳಿರುತ್ತವೆ. ಹಾಗೆಯೇ ಹಾರ್ಮೋನುಗಳು ಸಹ ಇವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ಅದು ಸತ್ಯವೂ ಹೌದು. ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು ಎಂದು ಓವಿಯಾ ಹೇಳಿದ್ದಾರೆ.
ಅಂದಹಾಗೆ ನಟಿ ಓವಿಯಾ ಮಲಯಾಳಂನಲ್ಲಿ ಅತಿಹೆಚ್ಚು ಚಿತ್ರ ಮಾಡಿದ್ದಾರೆ. 2010ರಲ್ಲಿ ಕಲಾವಾಣಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ನಂತರ ಮದಯನೈ ಕೂಟಂ, ಕಾಲಕಲಾಪು, ಮರೀನಾ, ಮುದರ್ ಕೂಡಂ, ಯಾಮಿರುಕಾ ಪಯಮೆಂ, 90 ಎಂಎಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಂದಹಾಗೆ ನಟಿ ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ತಮಿಳಿನ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜನಮನ್ನಣೆ ಗಳಿಸಿದವರು ಇವರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
ಮದುವೆ ಮುಂಚಿನ ಸೆಕ್ಸ್, ಕನ್ಯತ್ವ ಕಳೆದುಕೊಳ್ಳುವ ವಯಸ್ಸಿನ ಕುರಿತು ನಟಿ ಅತುಲ್ಯಾ ಬೋಲ್ಡ್ ಹೇಳಿಕೆ!