ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಅವರ "ದಿ ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್" ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭವನ್ನು ಕಂಡಿದೆ. ವರದಿಗಳ ಪ್ರಕಾರ ಚಿತ್ರವು ಆರಂಭಿಕ ದಿನ ಗಣನೀಯ ಗಳಿಕೆ ಮಾಡಬಹುದು. ‘ಹನುಮಾನ್ ಅಂಶ್’ ಬಳಿಕ ಬಂದ ಮತ್ತೊಂದು ಡಿವೈನ್ ಸಿನಿಮಾ ಹೇಗಿದೆ? ನೋಡಿ.
"ದಿ ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್"
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ತಮನ್ನಾ ಭಾಟಿಯಾ ಅವರ "ದಿ ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್" ಚಿತ್ರ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಜಾನಪದ ಮತ್ತು ಫ್ಯಾಂಟಸಿ ಥ್ರಿಲ್ಲರ್ ಬಿಡುಗಡೆಗೆ ಮೊದಲೇ ಸಕಾರಾತ್ಮಕ ಸಂಚಲನ ಮೂಡಿಸಿದೆ. ಚಿತ್ರದ ಪ್ರಿ ಬುಕಿಂಗ್‌ಗಳು ಸ್ಟ್ರಾಂಗ್ ಆಗಿದೆ ಮತ್ತು ಸ್ಪಾಟ್ ಬುಕಿಂಗ್‌ಗಳು ಸಹ ನಿರೀಕ್ಷೆಗಳನ್ನು ಹೆಚ್ಚಿಸಿವೆ.
ಜನರಿಂದ ಸಿಕ್ಕಿದೆ ಪಾಸಿಟಿವ್ ರಿವ್ಯೂ
ದೀಪಕ್ ಕುಮಾರ್ ಮಿಶ್ರಾ ಮತ್ತು ಅರುಣಾಭ್ ಕುಮಾರ್ ನಿರ್ದೇಶನದ ಈ ಚಿತ್ರವು ಸಿದ್ಧಾರ್ಥ್ ಮಲ್ಹೋತ್ರಾ ವೃತ್ತಿ ಜೀವನದ ವಿಶೇಷ ಸಿನಿಮಾ ಆಗಿದೆ. ಇದು ದೈವೀಕ ಎನರ್ಜಿಗೆ ಸಂಬಂಧಿಸಿದ ಸಿನಿಮಾ ಆಗಿದ್ದು, ರಿಲೀಸ್ ಆಗಿ ಮೊದಲ ದಿನವೇ ಪಾಸಿಟಿವ್ ರಿವ್ಯೂ ಬರುತ್ತಿದೆ. ಇದು ವನದೇವಿಗೆ ಸಂಬಂಧಿಸಿದ ಸಿನಿಮಾ ಆಗಿದ್ದು, ‘ಹನುಮಾನ್ ಅಂಶ್’ ಬಳಿಕ ಮತ್ತೊಮ್ಮೆ ಬಾಲಿವುಡ್ ನಿಂದ ಡಿವೈನ್ ಸಿನಿಮಾ ಬಂದಿದೆ. ಅದು ಕೂಡ ಭರವಸೆ ಹುಟ್ಟಿಸಿದಂತಿದೆ.
ದಿ ಒನ್ ತನ್ನ ಮೊದಲ ದಿನ ಎಷ್ಟು ಗಳಿಸುತ್ತದೆ?
ಸ್ಯಾಕ್‌ನಿಲ್ಕ್ ಪ್ರಕಾರ, ಸೆಪ್ಟೆಂಬರ್ 25, ಶುಕ್ರವಾರ ರಾತ್ರಿ 8 ಗಂಟೆಯ ಹೊತ್ತಿಗೆ, ದಿ ಒನ್ ಸುಮಾರು ₹7.47 ಕೋಟಿ ಗಳಿಸಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಈ ಚಿತ್ರವು ವಿಶೇಷವಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮುಂಬೈ ಕೂಡ ಚಿತ್ರದ ಗಳಿಕೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಚಿತ್ರದ ಛಥಿ ಮೈಯಾ ಹಾಡು ಕೂಡ ಪ್ರೇಕ್ಷಕರನ್ನು ಆಕರ್ಷಿಸಿದೆ. ಇದು ಛಥಿ ಮೈಯಾಗೆ ಮೀಸಲಾಗಿರುವ ಬಾಲಿವುಡ್‌ನ ಮೊದಲ ಹಾಡು. ರಾತ್ರಿ ಪ್ರದರ್ಶನಗಳೊಂದಿಗೆ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆರಂಭಿಕ ದಿನದ ಸಂಗ್ರಹವು ಸುಮಾರು ₹9.6 ಕೋಟಿ ಆಗಿದ್ದು, ಇದು ಸಿದ್ದಾರ್ಥ್ ನಟಿಸಿದ ಚಿತ್ರಗಳಲ್ಲಿ ಮೊದಲನೇ ದಿನ ಅತಿ ಹೆಚ್ಚು ಗಳಿಸಿದ ಚಿತ್ರವಾಗಿದೆ. ಜಾನ್ವಿ ಕಪೂರ್ ಜೊತೆ ನಟಿಸಿದ ಅವರ ಹಿಂದಿನ ಚಿತ್ರ "ಪರಮ್ ಸುಂದರಿ" ₹7.37 ಕೋಟಿ ಗಳಿಸಿದ್ದರೆ, "ಥ್ಯಾಂಕ್ ಗಾಡ್" ₹8.10 ಕೋಟಿ ಗಳಿಸಿತು. ಇದೀಗ ಹೊಸ ದಾಖಲೆ ಮಾಡಿದ್ದಾರೆ.
ಚಿತ್ರದ ಕಥೆ ಏನು?
'ದಿ ವಾನ್' ಚಿತ್ರವು ಸಿಟಿಯಲ್ಲಿ ಬೆಳೆದ ಯುವಕನೊಬ್ಬನ ಕಥೆಯನ್ನು ಹೇಳುತ್ತದೆ. ಸಿದ್ಧಾರ್ಥ್ ಮಲ್ಹೋತ್ರಾ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಅವನು ಬಿಹಾರದಲ್ಲಿರುವ ತನ್ನ ಕುಟುಂಬದ ಹಳ್ಳಿಗೆ ಪತ್ನಿಯೊಂದಿಗೆ ಹಿಂತಿರುಗುತ್ತಾನೆ. ಅಲ್ಲಿನ ಅರಣ್ಯವು ನಿಗೂಢ ಮತ್ತು ಅಪಾಯಕಾರಿಯಾಗಿದೆ ಎನ್ನುವ ನಂಬಿಕೆ ಆ ಊರಿನದ್ದು, ಹಾಗಾಗಿ, ಸೂರ್ಯಾಸ್ತದ ನಂತರ ಯಾರೂ ಕಾಡಿಗೆ ಪ್ರವೇಶಿಸಬಾರದು ಎಂಬ ಕಟ್ಟುನಿಟ್ಟಿನ ನಿಯಮ ಗ್ರಾಮದಲ್ಲಿರುತ್ತದೆ. ಆದರೆ, ಸಿದ್ಧಾರ್ಥ್ ಈ ಹಳೆಯ ನಂಬಿಕೆಗಳನ್ನು ನಂಬದೇ ಇರುವಂತಹ ಪಾತ್ರ. ಹಾಗಾಗಿ ಆತ ಜನರ ನಂಬಿಕೆಯನ್ನು ಮುರಿದು ರಾತ್ರಿಯಲ್ಲಿ ಕಾಡಿಗೆ ಹೋಗುತ್ತಾನೆ. ಅವನ ತಪ್ಪಿನಿಂದಾಗಿ ಕೋಪಗೊಂಡ ವನ ದೇವತೆ ಮತ್ತು ಭಯಾನಕ ರಾಕ್ಷಸ ಜಾಗೃತಗೊಳ್ಳುತ್ತಾರೆ. ಈಗ, ಗ್ರಾಮವನ್ನು ವಿನಾಶದಿಂದ ರಕ್ಷಿಸಲು, ಆತ ಯಾವ ರೀತಿಯಾಗಿ ಕೆಲಸ ಮಾಡುತ್ತಾನೆ ಎನ್ನುವುದು ಈ ಚಿತ್ರದ ಕಥೆ.


