ಸಿನಿಮಾ ಪೈರಸಿ ತಡೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಸಿನಿಮಾಗಳ ಪೈರಸಿ ತಡೆಗಟ್ಟಲು ಸಹಾಯಕವಾಗುವ ಸಿನಿಮಾಟೋಗ್ರಾಫ್‌ (ತಿದ್ದುಪಡಿ) ಮಸೂದೆ 2023ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದು ಇಂಟರ್ನೆಟ್‌ನಲ್ಲಿ ಸಿನಿಮಾದ ಪೈರಸಿ ಹರಡುವುದನ್ನು ತಡೆಗಟ್ಟಲು ಸಹಾಯಕವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

The Union Cabinet approves the bill to prevent movie piracy akb

ನವದೆಹಲಿ: ಸಿನಿಮಾಗಳ ಪೈರಸಿ ತಡೆಗಟ್ಟಲು ಸಹಾಯಕವಾಗುವ ಸಿನಿಮಾಟೋಗ್ರಾಫ್‌ (ತಿದ್ದುಪಡಿ) ಮಸೂದೆ 2023ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದು ಇಂಟರ್ನೆಟ್‌ನಲ್ಲಿ ಸಿನಿಮಾದ ಪೈರಸಿ ಹರಡುವುದನ್ನು ತಡೆಗಟ್ಟಲು ಸಹಾಯಕವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಈ ಮಸೂದೆಯಿಂದಾಗಿ ಪ್ರಸ್ತುತ ಇರುವ 'ಯು', 'ಎ', 'ಯುಎ' ಬದಲಿಗೆ ಇನ್ನು ಮುಂದೆ ಸಿನಿಮಾಗಳನ್ನು ವಯಸ್ಸಿನ ಆಧಾರದಲ್ಲಿ ವಿಂಗಡಿಸಲು ಸಹಾಯಕವಾಗಲಿದೆ. ಇನ್ನು ಮುಂದೆ ಯುಎ ಪ್ರಮಾಣ ಪತ್ರವನ್ನು ಕೇವಲ 12 ವರ್ಷಕ್ಕೆ ನಿಗದಿಪಡಿಸುವ ಬದಲು ಯುಎ-7+, ಯುಎ-13+ ಮತ್ತು ಯುಎ-16+ ಎಂದು ವಿಂಗಡಿಸಲಾಗುತ್ತದೆ. ಈ ಮಸೂದೆಯನ್ನು ಮುಂದಿನ ಸಂಸತ್‌ ಕಲಾಪದ ವೇಳೆ ಮಂಡಿಸಲಾಗುವುದು. ಈ ಮಸೂದೆ ಸಿನಿಮಾ ಉದ್ಯಮದಲ್ಲಿರುವ ಎಲ್ಲರಿಗೂ ಯಾವುದೇ ವಿವಾದಗಳಿಲ್ಲದೇ ಒಪ್ಪಿಗೆಯಾಗಲಿದೆ ಎಂದು ಅವರು ಹೇಳಿದರು. ಸಿನಿಮಾಗಳ ಪೈರಸಿಯನ್ನು ತಡೆಗಟ್ಟಲು ಮತ್ತು ವಯಸ್ಸಿನ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಣೆ ಮಾಡಲು ಕಾನೂನು ಜಾರಿ ಮಾಡಬೇಕು ಎಂಬ ಹಲವು ಬೇಡಿಕೆಗಳು ನಮ್ಮ ಮುಂದಿದ್ದವು. ಈಗಾಗಲೇ ಪೈರಸಿ ತಡೆಯುವ ಮಸೂದೆಯೊಂದನ್ನು ರಾಜ್ಯಸಭೆಯಲ್ಲಿ 2019ರಲ್ಲೇ ಮಂಡಿಸಲಾಗಿತ್ತು. ಇದೀಗ ವಿಷಯ ತಜ್ಞರ ಜೊತೆ ಚರ್ಚಿಸಿ ಹೊಸ ಕರಡನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಕಳ್ಳರು ನಮಗಿಂತ 10 ಹೆಜ್ಜೆ ಮುಂದಿರುತ್ತಾರೆ; ಪೈರಸಿ ಬಗ್ಗೆ ಕಿಚ್ಚನ ಮಾತು

ಮೊಬೈಲಲ್ಲಿ ಸಿನಿಮಾ ನೋಡ್ಬೇಡಿ,ನನಗೆ ಪೈರಸಿ ಅಂದ್ರೆನೇ ಗೊತ್ತಿಲ್ಲ: ಶಾರ್ವರಿ

Latest Videos
Follow Us:
Download App:
  • android
  • ios