ಮನಸ್ಸು ಮಾಡಿದ್ದರೆ ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದಾಗಿದ್ದ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ನ ಸಾವು ಎಲ್ಲರ ಮನಸ್ಸನ್ನು ಕೊರೆಯುತ್ತಿದೆ. ಬಾಲಿವುಡ್‌ನ ಬೇರೆ ಯಾವ ಸೆಲೆಬ್ರಿಟಿಗಳಿಗೂ ಇಲ್ಲದ ಅನೇಕ ಹುಚ್ಚುಗಳು ಹವ್ಯಾಸಗಳು ಈತನಿಗೆ ಇದ್ದವು. ಉದಾಹರಣೆಗೆ ಸ್ಟಾರ್‌ ಗೇಜಿಂಗ್‌ ಅಥವಾ ಬಾಹ್ಯಾಕಾಶದಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸುವುದು. ಈತ ಚಂದ್ರನ ಮೇಲೆ ಒಂದು ತುಣುಕು ಜಾಗವನ್ನೂ ಖರೀದಿಸಿದ್ದ ಎಂಬುದು ನಿಮಗೆ ಗೊತ್ತಾ?


ಹೌದು. ಚಂದ್ರನ ಮೇಲಿನ ಮಾರೆ ಮುಸ್ಕೋವೀನ್ಸ್ ಎಂಬ ಪ್ರದೇಶದಲ್ಲಿ ಒಂದಿಷ್ಟು ಜಾಗವನ್ನು ಈತ ಖರೀದಿಸಿದ್ದ. ಅದರ ಅರ್ಥ ಮುಸ್ಕೋವಿಯ ಸಮುದ್ರ ಎಂದು. ಭಾರತದಲ್ಲಿ ಬೇರ್ಯಾರಿಗೂ ಇಂಥದೊಂದು ಪ್ರಾಪರ್ಟಿಯಾಗಲೀ, ಅಲ್ಲಿ ಜಾಗ ಖರೀದಿಸುವಂಥ ಖಯಾಲಿಯಾಗಲೀ ಇರಲಿಲ್ಲ. ಇಂಟರ್‌ನ್ಯಾಶನಲ್‌ ಲ್ಯೂನಾರ್‌ ಲ್ಯಾಂಡ್ಸ್‌ ರಿಜಿಸ್ಟ್ರಿ ಎಂಬ ಸಂಸ್ಥೆಯಿಂದ ಈ ಜಾಗವನ್ನು ತಾನು ಖರೀದಿಸಿದ್ದೇನೆಂದು ಆತ ಹೇಳಿಕೊಂಡಿದ್ದ. ಆದರೆ ಇತ್ತೀಚೆಗೆ ಹಾಗೆಲ್ಲಾ ಚಂದ್ರನ ಮೇಲಾಗಲೀ, ಇತರ ಯಾವುದೇ ಬಾಹ್ಯಾಕಾಶ ಕಾಯಗಳ ಮೇಲಾಗಲೀ ಜಾಗ ಖರೀದಿಸುವ ಅಥವಾ ಅಲ್ಲಿ ನೆಲೆ ನಿಲ್ಲುವ ಕಾನೂನಾತ್ಮಕ ಸಾಧ್ಯತೆಗಳೇ ಇಲ್ಲ ಎಂದು ನಾಸಾ ಹೇಳಿತ್ತು. ಹಾಗಾದರೆ ಸುಶಾಂತ್‌ ಅಲ್ಲಿ ಜಾಗ ಖರೀದಿಸಿದ್ದು ಹೇಗೆ? ಯಾರಾದರೂ ಆತನನ್ನು ಮೋಸ ಮಾಡಿದರೇ? ಅಥವಾ ಇಂಟರ್‌ನೆಟ್‌ನಲ್ಲಿ ಬಿಟ್‌ಕಾಯಿನ್‌ ಇದ್ದಂತೆ, ರಹಸ್ಯವಾಗಿ ಇಂಥ ವ್ಯವಹಾರ ನಡೆಸುವ ನಿಗೂಢ ಮಾರುಕಟ್ಟೆಗಳು ಇವೆಯೇ? ಇದ್ಯಾವುದೂ ಬಗೆಹರಿಯದ ಪ್ರಶ್ನೆಗಳಾಗಿ ಉಳಿದಿವೆ.

ಚಂದ್ರನಲ್ಲಿ ಭೂಮಿ ಖರೀದಿಸುವುದು ಅಂದರೇನು?

ಇರಲಿ, ಬಾಹ್ಯಾಕಾಶಗಳ ಬಗ್ಗೆ ಸುಶಾಂತ್‌ಗೆ ಹೇಳತೀರದ ಕುತೂಹಲಗಳು ಇದ್ದದ್ದು ನಿಜ. ಆಗಾಗ ತನ್ನ ಇನ್‌ಸ್ಟಗ್ರಾಮ್‌ ಖಾತೆಯಲ್ಲಿ ಬಾಹ್ಯಾಕಾಶದ ಹಲವು ಕಾಯಗಳ ಫೋಟೊಗಳನ್ನು ಆತ ಹಾಕುತ್ತಿದ್ದ. ಚಂದ್ರನ ಮೇಲಿರುವ ತನ್ನ ಜಾಗದ ಸ್ಯಾಟ್‌ಲೈಟ್‌ ಇಮೇಜನ್ನೂ ಆತ ಹಂಚಿಕೊಂಡಿದ್ದ. ಬಾಲಿವುಡ್‌ನ ಬೇರ್ಯಾವ ನಟರಿಗೂ ಇಲ್ಲದ ಇಂಥ ಅಭಿರುಚಿಗಳು ಸುಶಾಂತ್‌ಗೆ ಇದ್ದವು. ಈತ ಬಾಹ್ಯಾಕಾಶದ ಬಗ್ಗೆ ತುಂಬಾ ಓದುತ್ತಿದ್ದ. ಒಂದು ಬೃಹತ್‌ ಟೆಲಿಸ್ಕೋಪ್‌ ಕೂಡ ಈತನ ಬಳಿ ಇತ್ತು. ಮೀಡೆ ಕಂಪನಿಯ ಎಲ್‌ ಬೈ ಸಿಕ್ಸ್‌ ಹಂಡ್ರಡ್‌ ಹದಿನಾಲ್ಕಿಂಚಿನ ಈ ಟೆಲಿಸ್ಕೋಪ್‌, ತುಂಬಾ ಪವರ್‌ಫುಲ್‌ ಆಗಿತ್ತು. ಅದರಿಂದ ಆತ ಯಾವಾಗಲೂ ಶನಿ ಗ್ರಹದ ಉಂಗುರಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದ.

'ನನ್ನ ಹೊಟ್ಟೆಯಲ್ಲಿ  ಸುಶಾಂತ್ ಹುಟ್ಟಿ ಬರ್ತಾನೆ' 

ದೂರದ ನಕ್ಷತ್ರಗಳನ್ನು ನೋಡುತ್ತಾ ಅಲ್ಲಿಗೆ ತೆರಳುವ ಕನಸುಗಳನ್ನು ಕಟ್ಟುತ್ತಿದ್ದ. ಚಂದ್ರಗ್ರಹಣ, ಸೂರ್ಯಗ್ರಹಣ ಮುಂತಾದವು ನಡೆದಾಗ ಅದರ ಬಗ್ಎಗ ತನ್ನ ಅಭಿಮಾನಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದ. ಟೆಲಿಸ್ಕೋಪ್‌ ತರಿಸಿಕೊಂಡಾಗ ಆ ಬಗ್ಗೆ ಉದ್ವೇಗದಿಂದ ಇನ್‌ಸ್ಟಗ್ರಾಮ್ನಲ್ಲಿ ಖುಷಿಯಿಂಧ ಅದರ ಫೋಟೋ ಹಂಚಿಕೊಂಡಿದ್ದ. ಇದರಿಂಧ ಶನಿಯ ಉಂಗುರಗಳನ್ನೂ ನಾನು ನೋಡಬಲ್ಲೆ ಎಂದು ಹೇಳಿಕೊಂಡಿದ್ದ. ಬಾಹ್ಯಾಕಾಶದ ಬಗ್ಗೆ ಹಲವು ವಿಜ್ಞಾನಿಗಳು ಬರೆದ ಪುಸ್ತಕಗಳು ಅವನ ಬಳಿ ಇದ್ದವು. ಅದನ್ನೆಲ್ಲ ಓದಿದ್ದ. 

ಹಳೆಯ ಪೋಟೋ ತೆರೆದಿಟ್ಟ ನೆನಪುಗಳು, ಧೋನಿ ಮಗಳ ಅಪ್ಪಿ ಮುದ್ದಾಡಿದ್ದ ಸುಶಾಂತ್

ಇನ್ನೊಂದು ಆತನ ಹವ್ಯಾಸ ಎಂದರೆ ಕನಸುಗಳನ್ನು ಲಿಸ್ಟ್‌ ಮಾಡುವುದು. ತಾನು ಜೀವನದಲ್ಲಿ ಮಾಡಬೇಕು ಎಂದುಕೊಂಡಿದ್ದ ಹಲವು ಕನಸುಗಳನ್ನು ಅದರಲ್ಲಿ ಪಟ್ಟಿ ಮಾಡಿದ್ದ. ಆ ಕನಸುಗಳಲ್ಲಿ, ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವುದು ಒಂದು ಆಗಿತ್ತು. ಭೂಮಿಯಲ್ಲಿ ಇನ್ನೂ ಮನುಷ್ಯರು ಹುಟ್ಟುವ ಮೊದಲೇ, ಕೆಲವು ಆಕಾಶಕಾಯಗಳು ಭೂಮಿಗೆ ಅಪ್ಪಳಿಸಿ, ಅಲ್ಲಿ ಈಗ ತಿಳಿನೀರಿನ ಕೊಳಗಳು ಉಂಟಾಗಿವೆ. ಅಂಥ ಜಾಗಗಳಿಗೆ ಭೇಟಿ ಕೊಟ್ಟು ಅಲ್ಲಿನ ನೀರಿನಲ್ಲಿ ಸ್ವಿಮ್‌ ಮಾಡಬೇಕೆಂಬುದು ಆತನ ಇನ್ನೂ ಹಲವು ಕನಸುಗಳಲ್ಲಿ ಒಂದಾಗಿತ್ತು. 

ಸುಶಾಂತ್‌ಗೆ ಆತ್ಮಹತ್ಯೆ: ಕ್ರಿಕೆಟ್ ತರಬೇತಿ ನೀಡಿದ ಕಿರಣ್ ಮೋರೆಗೆ ಆಘಾತ!