VIRUSHKA: ಮದ್ವೆಗೂ ಮುಂಚೆಯೇ ಬ್ರೇಕಪ್​! ಇವರದ್ದು ಕುತೂಹಲದ Love Story

ಇಂದು ನಟಿ ಅನುಷ್ಕಾ ಶರ್ಮಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ಕ್ರಿಕೆಟಿಗ ವಿರಾಟ್​ ಕೊಹ್ಲಿ ಪತ್ನಿಯಾಗಿರುವ ಇವರದ್ದು ಕುತೂಹಲದ ಲವ್​ ಸ್ಟೋರಿ.  ಏನದು? 
 

The love story of Anushka Sharma and Virat Kohli is very interesting both had a breakup before marriage

ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ ಪವರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೋಡಿ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಇವರಿಬ್ಬರ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಸದಾ ಕುತೂಹಲದಲ್ಲಿರುತ್ತಾರೆ. ಅಂದಹಾಗೆ ಇಂದು ಅಂದರೆ ಮೇ 1 ನಟಿ ಅನುಷ್ಕಾ ಅವರ   35ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.  ಕ್ರಿಕೆಟಿಗ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಪತ್ನಿಯಾಗಿ, 2021ರಲ್ಲಿ ವಾಮಿಕಾ ಎಂಬ ಪುಟಾಣಿಯ  ಅಮ್ಮನಾಗಿ ಸುಖ ಸಂಸಾರ ನಡೆಸ್ತಿರೋ ನಟಿಯ ಜೀವನ ಕಥೆ ತುಂಬಾ ಕುತೂಹಲವಾಗಿದೆ. ವಿರಾಟ್​ ಕೊಹ್ಲಿ ಅವರನ್ನು ಮದುವೆಯಾದ ಬಳಿಕ ಈ ಜೋಡಿ ವಿರುಷ್ಕಾ ಎಂದೇ ಖ್ಯಾತಿ ಪಡೆದಿದೆ. ಆದರೆ ಇವರ ಮದುವೆಗೂ ಮುನ್ನಾ ಸ್ಟೋರಿ ಸಿನಿಮೀಯ ರೀತಿಯಲ್ಲಿಯೇ  ಇದೆ.

ಹೌದು. ಅನುಷ್ಕಾ ಮತ್ತು ವಿರಾಟ್ ಲವ್ ಸ್ಟೋರಿ (Love Story) ತುಂಬಾ ಆಸಕ್ತಿದಾಯಕವಾಗಿದೆ. ಮೊದಲು ಸ್ನೇಹ, ನಂತರ ಪ್ರೀತಿ ಇಲ್ಲಿಯವರೆಗೆ ಮಾಮೂಲು ಪ್ರೇಮಿಗಳಂತೆ ಇತ್ತು. ಕೊನೆಗೆ ಇವರ  ಸಂಬಂಧ ಮುರಿದುಬಿತ್ತು. ನಂತರ ಜೋಡಿ ಒಂದಾದದ್ದು ಹೇಗೆ ಎನ್ನುವುದೇ ಕುತೂಹಲ. ಅಂದಹಾಗೆ, 2013 ರಲ್ಲಿ ಶಾಂಪೂ ಒಂದರ ಜಾಹೀರಾತಿನ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಭೇಟಿಯಾದರು. ಅನುಷ್ಕಾ ಅವರನ್ನು  ಮೊದಲ ಸಲ ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ ಎಂದು ವಿರಾಟ್ ಈಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.  ಈ ವೇಳೆ ವಿರಾಟ್ ನರ್ವಸ್ ಆಗಿರುವುದು ಅನುಷ್ಕಾಗೆ ಅರ್ಥವಾಗಿತ್ತು. ಹೀಗಿರುವಾಗ ಅಲ್ಲಿನ ವಾತಾವರಣ ತಿಳಿಗೊಳಿಸಲು ಅನುಷ್ಕಾ ಜೋಕ್ ಹೇಳಿದ್ದರು. ಅಲ್ಲಿಂದಲೇ ಲವ್​ ಶುರುವಾಗಿತ್ತು.

Birthday Special: ಅಯೋಧ್ಯೆಯ ರಾಮನಿಗೂ, ನಟಿ ಅನುಷ್ಕಾ ಶರ್ಮಾರಿಗೂ ಜನ್ಮ ಜನ್ಮದ ನಂಟು...
 
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2014 ರವರೆಗೆ ತಮ್ಮ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದರು. ಸಮಯ ಸಿಕ್ಕಾಗಲೆಲ್ಲ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು. ಅದೇ ವರ್ಷ ಹೈದರಾಬಾದ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಅರ್ಧಶತಕ ಸಿಡಿಸಿದ್ದರು. ಶತಕ ಬಾರಿಸಿದ ಬಳಿಕ ವಿರಾಟ್ ಬ್ಯಾಟ್ ನಿಂದಲೇ ಅನುಷ್ಕಾಗೆ ಫ್ಲೈಯಿಂಗ್ ಕಿಸ್ (Flying Kiss) ನೀಡಿದ್ದರು. ಆಗ ಇಬ್ಬರೂ ಪ್ರಚಾರದಲ್ಲಿದ್ದರು. ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಈ ವರ್ಷ ವಿರಾಟ್ ಅವರು 'ವೆಲ್ವೆಟ್' ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದ ಅನುಷ್ಕಾ ಅವರ ಹುಟ್ಟುಹಬ್ಬದಂದು ಅವರನ್ನು ಭೇಟಿ ಮಾಡಲು ಉದಯಪುರ ತಲುಪಿದರು.

2016 ವಿರಾಟ್ ಮತ್ತು ಅನುಷ್ಕಾಗೆ ಉತ್ತಮ ವರ್ಷವಲ್ಲ. ಈ ವರ್ಷ ಅವರ ಸಂಬಂಧಕ್ಕೆ ತುಂಬಾ ಕಷ್ಟಕರ ವರ್ಷವಾಗಿತ್ತು. ಅದೇ ವರ್ಷದಲ್ಲಿ, ಅವರ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಲಾಗಿದೆ. ವಿರಾಟ್ ಮತ್ತು ಅನುಷ್ಕಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪರಸ್ಪರ ಅನ್‌ಫಾಲೋ ಮಾಡಿದ್ದರು.  ಡಿಸೆಂಬರ್ 2016 ರಲ್ಲಿ ಅವರ ಬ್ರೇಕಪ್ ಸುದ್ದಿ ಮಧ್ಯೆಯೇ ಇಬ್ಬರೂ ಒಟ್ಟಿಗೆ ಯುವರಾಜ್ ಸಿಂಗ್ ಅವರ ಮದುವೆಗೆ ಆಗಮಿಸಿದ್ದರು. ಅಷ್ಟರಲ್ಲಿ ಮತ್ತೊಮ್ಮೆ ಗೆಳೆಯರಾಗಿ ಹಳೆಯದನ್ನೆಲ್ಲ ಮರೆತು ಮತ್ತೆ ಹತ್ತಿರವಾಗಿದೆ  ಈ ಜೋಡಿ. ಆದರೆ ಬ್ರೇಕಪ್​ ಆಗಿದ್ದು ಹೇಗೆ ಎಂಬ ಬಗ್ಗೆ ಮಾತ್ರ ಇಬ್ಬರೂ ತುಟಿಕ್​ ಪಿಟಿಕ್​ ಅನ್ನಲಿಲ್ಲ. 

ಅನುಷ್ಕಾ ಕರಿಯರ್​ ಹಾಳು ಮಾಡಲು ಹೊರಟಿದ್ದ ಕರಣ್​ ಜೋಹರ್! ಶಾಕಿಂಗ್​ ವಿಡಿಯೋ ವೈರಲ್​

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಮದುವೆ ಬಗ್ಗೆ ಹಲವು ಸುದ್ದಿಗಳು ಬರಲಾರಂಭಿಸಿದ್ದವು. ನಂತರ ಅವರು 11 ಡಿಸೆಂಬರ್ 2017 ರಂದು ವಿವಾಹವಾದರು. ಇಟಲಿಯ (Italy) ಲೇಕ್ ಕೊಮೊದಲ್ಲಿ ಇಬ್ಬರೂ ಮದುವೆಯಾಗಿದ್ದರು. ಈಗ ವಿರಾಟ್ ಮತ್ತು ಅನುಷ್ಕಾಗೆ ವಾಮಿಕಾ ಎಂಬ ಮುದ್ದು ಮಗಳಿದ್ದಾಳೆ.
 

Latest Videos
Follow Us:
Download App:
  • android
  • ios