Birthday Special: ಅಯೋಧ್ಯೆಯ ರಾಮನಿಗೂ, ನಟಿ ಅನುಷ್ಕಾ ಶರ್ಮಾರಿಗೂ ಜನ್ಮ ಜನ್ಮದ ನಂಟು...

ಇಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ನಟಿ ಅನುಷ್ಕಾ ಶರ್ಮಾ ಅವರಿಗೂ ಅಯೋಧ್ಯೆಯ ರಾಮನಿಗೂ ಇದೆ ಜನ್ಮ ಜನ್ಮದ ಅನುಬಂಧ. ಏನದು?
 

Bollywood Actress Anushka Sharma birthday special connection with Ayodhya birth place

ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ (Anushka Sharma) ಅವರ ಪರಿಚಯ ಇಂದು ಅಗತ್ಯವಿಲ್ಲ.  ಇಂದು 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ನಟಿಗೆ ಇದಾಗಲೇ ಲಕ್ಷಾಂತರ ಫ್ಯಾನ್ಸ್​ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಕ್ರಿಕೆಟಿಗ ಭಾರತ ತಂಡದ ಮಾಜಿ ನಾಯಕ, ಪತಿ ವಿರಾಟ್ ಕೊಹ್ಲಿ (Virat Kohli)  ಸೇರಿದಂತೆ ಹಲವು ಗಣ್ಯರ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.  1 ಮೇ 1988 ರಂದು ಜನಿಸಿರುವ ಅನುಷ್ಕಾ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.  ವಿರಾಟ್​ ಕೊಹ್ಲಿ ಅವರ ಜೊತೆಗೂಡಿ ವಿರುಷ್ಕಾ ಆಗಿದ್ದಾರೆ. ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ  ಈ ಜೋಡಿ  ಅವರ ಅಪರೂಪದ ಜೋಡಿ  2017 ರ ಡಿಸೆಂಬರ್​ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.  ಅನುಷ್ಕಾ ಶರ್ಮಾ 2008 ರಲ್ಲಿ ಹಿಂದಿ ಚಲನಚಿತ್ರ ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಆರಂಭದಲ್ಲಿಯೇ  ಶಾರುಖ್ ಖಾನ್​ ಜೊತೆ ನಟಿಸುವ ಅವಕಾಶ ಅನುಷ್ಕಾ ಪಾಲಾಗಿತ್ತು. ಈ ಚಿತ್ರ ಬ್ಲಾಕ್​ ಬಸ್ಟರ್​ ಆಯಿತು. ಮೊದಲ ಚಿತ್ರದಿಂದಲೇ ಇವರ ಡಿಮಾಂಡ್​ ಕೂಡ ಹೆಚ್ಚಾಯಿತು. ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ವಿರಾಟ್​ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್​ ಜೋಡಿಗೆ  2021ರಲ್ಲಿ ವಾಮಿಕಾ ಎಂಬ ಮಗಳು ಜನಿಸಿದಳು.

ಈಗ ಪತ್ನಿಯಾಗಿ, ಮಗಳ ಅಮ್ಮನಾಗಿ ಸುಖ ಸಂಸಾರ ನಡೆಸ್ತಿರೋ ಈ ನಟಿಯ ನಂಟು ಅಯೋಧ್ಯೆಯ ರಾಮನ ಜೊತೆ ಇದೆ ಎನ್ನುವ ಕುತೂಹಲದ ವಿಷಯ ಬೆಳಕಿಗೆ ಬಂದಿದೆ. ವಾಸ್ತವವಾಗಿ, ಅನುಷ್ಕಾ ಶರ್ಮಾ ಧಾರ್ಮಿಕ ನಗರವಾದ ಅಯೋಧ್ಯೆಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ. ಅನುಷ್ಕಾ ಹುಟ್ಟಿದ್ದು ಧರ್ಮನಗರಿ ಅಯೋಧ್ಯೆಯಲ್ಲಿ (Ayodhya). ಇವರು ಮುಂಬೈನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರೂ, ಈಕೆ ಹುಟ್ಟಿದ್ದು  1 ಮೇ 1988 ರಂದು ಅಯೋಧ್ಯೆಯಲ್ಲಿ. ಇದಕ್ಕಾಗಿಯೇ ಅಯೋಧ್ಯೆಗೂ ಅನುಷ್ಕಾರಿಗೂ ಜನ್ಮ ಜನ್ಮದ ಅನುಬಂಧವಿದೆ. 

Happy Birthday Anushka Sharma; ಅಪರೂಪದ ಫೋಟೋ ಮೂಲಕ ಪತ್ನಿಗೆ ವಿರಾಟ್ ಕೊಹ್ಲಿ ಪ್ರೀತಿಯ ವಿಶ್

ಅನುಷ್ಕಾ ಅವರ  ತಂದೆ ಸೈನ್ಯದಲ್ಲಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. ಅನುಷ್ಕಾ ಹುಟ್ಟುವ ಸಮಯದಲದಲ್ಲಿ ಅವರ ತಂದೆ ಅಜಯ್ ಕುಮಾರ್ ಶರ್ಮಾ ಅಯೋಧ್ಯೆಯ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಜನಿಸಿದ್ದು ಈ ಪುಟ್ಟ ಬಾಲೆ. ಇವರು ಹುಟ್ಟಿದ ಕೂಡಲೇ ಅಯೋಧ್ಯೆಯ   ರಾಮ್​ಲಲ್ಲಾ ಅವರಿಂದ ಆಶೀರ್ವಾದ ಪಡೆದಿರುವುದಾಗಿ ಅವರ ಪಾಲಕರು ಹೇಳುತ್ತಾರೆ.  ರಾಮ್​ಲಲ್ಲಾನ ಆಶೀರ್ವಾದದಿಂದಲೇ ತಮ್ಮ ಪುತ್ರಿ ಇಂದು ಈ ಮಟ್ಟದ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಎಲ್ಲವೂ ಆತನ  ಆಶೀರ್ವಾದ ಎನ್ನುತ್ತಾರೆ ಪಾಲಕರು. ಇದಕ್ಕಾಗಿಯೇ ಅಯೋಧ್ಯೆಯ ರಾಮನಿಗೂ, ಅನುಷ್ಕಾ ಅವರಿಗೆ ಬಹಳ ನಂಟಿದೆ. 

ಅನುಷ್ಕಾ ಅವರ ಅಣ್ಣ  ಚಲನಚಿತ್ರ ನಿರ್ಮಾಪಕ ಕರ್ಣೇಶ್ ಶರ್ಮಾ, ಅವರು ಮೊದಲು ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದರು. ನೌಕಾಪಡೆಗೆ ಸೇರುವ ಮೊದಲು ಕರ್ಣೇಶ್ 19 ವರ್ಷದೊಳಗಿನ ಬೆಂಗಳೂರು ರಣಜಿ ಕ್ರಿಕೆಟ್ ತಂಡದಲ್ಲಿ ಆಡಿದ್ದರು. ಸೈನ್ಯದ ಕುಟುಂಬ ಇರುವುದರಿಂದಲೇ ತಾವು ಶಿಸ್ತಿನ ವ್ಯಕ್ತಿಯಾಗಿ ಹೊರಹೊಮ್ಮಿದುದಾಗಿ ಅನುಷ್ಕಾ ಹೇಳುತ್ತಾರೆ.  

ಚಪ್ಪಲಿಯಿಂದ ಶುರುವಾಯ್ತು ವಿರುಷ್ಕಾ ದಂಪತಿ ಪ್ರೇಮ ಕಥೆ!

ಇತ್ತೀಚೆಗೆ ನಿರ್ಮಾಪಕ ಕರಣ್​ ಜೋಹರ್​ ಅವರು ಅನುಷ್ಕಾ ಅವರ ಕರೀಯರ್ ಹಾಳು ಮಾಡಲು ಹೊರಟಿದ್ದ ಸುದ್ದಿ ಭಾರಿ ವೈರಲ್​ ಆಗಿತ್ತು. 2008ರಲ್ಲಿ ಯಶ್ ಚೋಪ್ರಾ ನಿರ್ಮಾಣ ಮಾಡಿದ್ದ ‘ರಬ್ ನೇ ಬನಾದಿ ಜೋಡಿ’ (Rab Ne Bana Di Jodi) ಚಿತ್ರದಲ್ಲಿ ಶಾರುಖ್ ಖಾನ್ ಜೊತೆ  ಅನುಷ್ಕಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ನಿರ್ದೇಶಕ ಆದಿತ್ಯ ಚೋಪ್ರಾ ಸಿನಿಮಾ ಶುರುವಾಗುವುದಕ್ಕೂ ಮುನ್ನ ಅನುಷ್ಕಾ ಅವರ ಫೋಟೋಗಳನ್ನು ಕರಣ್​ಗೆ ತೋರಿಸಿದ್ದರಂತೆ, ಆದರೆ ಕರಣ್ ಅವರಿಗೆ  ಅನುಷ್ಕಾ ಇಷ್ಟವಾಗಿರಲಿಲ್ಲ. ಈ ಮಾತನ್ನು ಖುದ್ದು  ಕರಣ್ ಜೋಹರ್​ ಹೇಳಿದ್ದಾರೆ. ಅದೂ ಅವರು ಹೇಳಿದ್ದು ಈಗಲ್ಲ, ಬದಲಿಗೆ  2016ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ. ಕರಣ್​ ಮತ್ತು ಅನುಷ್ಕಾ  ಒಂದೇ ವೇದಿಕೆಯಲ್ಲಿದ್ದು, ಆ ಸಮಯದಲ್ಲಿ ಆದಿತ್ಯ ಚೋಪ್ರಾ (Aditya Chopra) ಅವರು ಮೊದಲ ಬಾರಿಗೆ ಫೋಟೋ ತೋರಿಸಿದಾಗ ನಾನು ಅನುಷ್ಕಾ ಅವರ ಸಿನಿ ಕೆರಿಯರ್ ನಾಶಮಾಡಬೇಕು ಎಂದುಕೊಂಡಿದ್ದೆ .ನನ್ನ ತಲೆಯಲ್ಲಿ ಬೇರೆ ಹೀರೋಯಿನ್ ಹೆಸರು ಇತ್ತು ಎಂದು ಕರಣ್ ಜೋಹರ್ ಖುದ್ದು ಹೇಳಿದ್ದರು. ಆದರೆ ರಾಮನ ಕೃಪೆಯಿಂದ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios