The Kerala story: ಹರಿಹರದಲ್ಲಿ ಉಚಿತ ಪ್ರದರ್ಶನ ಕಲ್ಪಿಸಿದ ಶಾಸಕ ಬಿ.ಪಿ. ಹರೀಶ್‌

ಚಲನಚಿತ್ರ ಒಂದು ಪ್ರಮುಖ ಕಲಾ ಪ್ರಕಾರವಾಗಿದೆ. ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಚಲನಚಿತ್ರಗಳ ಪಾತ್ರ ಮಹತ್ವದ್ದಾಗಿದೆ. ಭಯೋತ್ಪದನೆ, ಮತಾಂತರ, ಲವ್‌ ಜಿಹಾದ್‌ನಂತಹ ಸಾಮಾಜಿಕ ಕಂಟಕಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ದಿ ಕೇರಳ ಸ್ಟೋರಿ ಚಲನಚಿತ್ರ ಬೆಳಕು ಚೆಲ್ಲಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜೀತ್‌ ಸಾವಂತ್‌ ಹೇಳಿದರು.

The kerala story movie free screening by MLA BP Harishkumar in harihar at davanagere rav

ಹರಿಹರ (ಮೇ.31) : ಚಲನಚಿತ್ರ ಒಂದು ಪ್ರಮುಖ ಕಲಾ ಪ್ರಕಾರವಾಗಿದೆ. ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಚಲನಚಿತ್ರಗಳ ಪಾತ್ರ ಮಹತ್ವದ್ದಾಗಿದೆ. ಭಯೋತ್ಪದನೆ, ಮತಾಂತರ, ಲವ್‌ ಜಿಹಾದ್‌ನಂತಹ ಸಾಮಾಜಿಕ ಕಂಟಕಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ದಿ ಕೇರಳ ಸ್ಟೋರಿ ಚಲನಚಿತ್ರ ಬೆಳಕು ಚೆಲ್ಲಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜೀತ್‌ ಸಾವಂತ್‌ ಹೇಳಿದರು.

ನಗರದ ಶ್ರೀಕಾಂತ್‌ ಚಿತ್ರ ಮಂದಿರದಲ್ಲಿ ಸಾರ್ವಜನಿಕರಿಗೆ ‘ದಿ ಕೇರಳ ಸ್ಟೋರಿ’ (The kerala story)ಚಲನಚಿತ್ರದ ವೀಕ್ಷಣೆಗೆ ಉಚಿತ ಅವಕಾಶ ಕಲ್ಪಿಸಿದ ಶಾಸಕರಾದ ಬಿ.ಪಿ. ಹರೀಶ್‌(BP Harish MLA) ಅವರು ಭಾಗವಹಿಸಿ ಮಾತನಾಡಿದರು.

ಯುವ ಸಮೂಹಕ್ಕೆ ಅದರಲ್ಲೂ ಯುವತಿಯರಿಗೆ ದಿ ಕೇರಳ ಸ್ಟೋರಿ ಚಿತ್ರ ವೀಕ್ಷಣೆಯ ಅಗತ್ಯವಿದೆ. ಇಂತಹ ಚಿತ್ರಗಳ ವೀಕ್ಷಣೆಯಿಂದ ವಾಸ್ತವತೆಯ ಬಗ್ಗೆ ಅರಿವು ಮೂಡುತ್ತದೆ. ನಮ್ಮಿಂದ ತಪ್ಪುಗಳು ಆಗದಂತೆ ಜಾಗೃತ ವಹಿಸಲು ನೆರವಾಗಲಿದೆ ಎಂದು ಹೇಳಿದರು.

ತುಂಬಾ ಮೂರ್ಖರಿದ್ದಾರೆ: ಕೇರಳ ಸ್ಟೋರಿ ವಿರುದ್ಧ ಕಿಡಿ ಕಾರಿದ ಕಮಲ್‌ಗೆ ನಿರ್ದೇಶಕ ಸುದೀಪ್ತೋ ಸೇನ್ ತಿರುಗೇಟು

ಬಿಜೆಪಿ ಗ್ರಾಮಾಂತರ ಘಟಕ ಅಧ್ಯಕ್ಷ ಎಂ.ಪಿ. ಲಿಂಗರಾಜ್‌ ಮಾತನಾಡಿ, ಭಾರತೀಯ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಅನಾದಿ ಕಾಲದಿಂದಲೂ ದಾಳಿ ನಡೆಯುತ್ತಲೇ ಬಂದಿದೆ. ಜಗತ್ತನ್ನು ಇಸ್ಲಾಂಮೀಕರಣಗೊಳಿಸುವ ನಿಟ್ಟಿನಲ್ಲಿ ಭಾರತೀಯ ಯುವತಿಯರನ್ನು ಪ್ರೀತಿ, ಪ್ರೇಮ, ಪ್ರಣಯ, ಹಣ, ಆಮೀಷದ ರೂಪದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಲೇ ಬರಲಾಗುತ್ತಿದೆ. ಇಂತಹ ವಿಷವರ್ತುಲಕ ಸಿಲುಕಿದಲ್ಲಿ ಪರಿಣಾಮ ಏನಾಗಲಿದೆ ಎಂಬುದನ್ನು ‘ದಿ ಕೇರಳ ಸ್ಟೋರಿ’ ಮನದಟ್ಟು ಮಾಡಿಸುತ್ತದೆ ಎಂದು ಹೇಳಿದರು.

ದೂಡ ಮಾಜಿ ಸದಸ್ಯ ರಾಜು ರೋಖಡೆ ಮಾತನಾಡಿ, ಚಲನಚಿತ್ರಗಳು ನಿರ್ದಿಷ್ಟಸಂಸ್ಕೃತಿಗಳಿಂದ ರಚಿಸಲ್ಪಟ್ಟಸಾಂಸ್ಕೃತಿಕ ಕಲಾಕೃತಿಗಳಾಗಿವೆ. ಇಂತಹ ಕಲಾಕೃತಿಗಳು ಮನೋರಂಜನೆಯೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಪ್ರತಿ ಬಿಂಬಿಸಬೇಕು. ಸಮುದಾಯದ ಮನಸ್ಸಿನ ಹಿತ ಕಾಪಾಡುವ ಶಕ್ತಿ ಚಲನಚಿತ್ರಕ್ಕಿದೆ. ಅದನ್ನು ಕಲ್ಮಶಗೊಳಿಸುವುದರಿಂದ ಸಮುದಾಯದ ಮಾನಸಿಕ ಆರೋಗ್ಯ ಕೆಡುತ್ತದೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮ ಪೋಷಕರ ಜೊತೆಗೂಡಿ ಬಂದು ಚಲನಚಿತ್ರ ವೀಕ್ಷಣೆ ಮಾಡಿದರು. ಪ್ರತಿದಿನ ಒಟ್ಟು ನಾಲ್ಕು ಪ್ರದರ್ಶನಗಳಲ್ಲಿ ಚಿತ್ರಮಂದಿರ ಭರ್ತಿಯಾಗುತ್ತಿದೆ. ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರ ವೀಕ್ಷಣೆ ಮಾಡಿದರು.

ಶೂಟಿಂಗ್ ಸ್ಪಾಟ್​​ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ಈ ಸಂದರ್ಭದಲ್ಲಿ ದೂಡಾ ಮಾಜಿ ಸದಸ್ಯ ಬಾತಿ ಚಂದ್ರಶೇಖರ್‌, ನಗರಸಭಾ ಸದಸ್ಯ ಎಬಿಎಂ ವಿಜಯಕುಮಾರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ಮಂಜನಾಯ್ಕ ಎಚ್‌., ಮುಖಂಡರಾದ ಚಂದ್ರಕಾಂತ್‌ ಗೌಡ, ಆನಂದ ಎಸಿ, ಅಪ್ಪು, ಸಿದ್ದೇಶ್‌ ಹನಗವಾಡಿ, ಕೃಷ್ಣ, ಸಂತೋಷ ಗುಡಿಮನಿ, ಶಿವು, ನಿಂಗರಾಜ್‌, ಗಣೇಶ್‌, ಕುರುವತ್ತಿ ಸಿದ್ದೇಶ್‌, ಅಜ್ಜಪ್ಪ ಶೇರಾಪುರ, ಅಂಬುಜಾಬಾಯಿ ರಾಜೋಳಿ, ಹಾಗೂ ಮತ್ತಿತರಿದ್ದರು.

Latest Videos
Follow Us:
Download App:
  • android
  • ios