ಹಲವರ ನಿದ್ದೆಗೆಡಿಸಿರೋ ದಿ ಕೇರಳ ಸ್ಟೋರಿ ಎರಡು ದಿನಗಳಲ್ಲಿ ಗಳಿಸಿದ್ದೆಷ್ಟು?

ಬಹು ವಿವಾದ ಸೃಷ್ಟಿಸಿರುವ ದಿ ಕೇರಳ ಸ್ಟೋರಿ ಮೊದಲ ಎರಡು ದಿನ ಗಳಿಸಿದ ಆದಾಯವೆಷ್ಟು? ಇಲ್ಲಿದೆ ಡಿಟೇಲ್ಸ್​
 

The Kerala Story box office collection how much in two days

ಸುಮಾರು 32 ಸಾವಿರ ಹುಡುಗಿಯರ ನಾಪತ್ತೆ ಪ್ರಕರಣದ ಭಯಾನಕ ಕಥಾಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಕೆಲವರಲ್ಲಿ ಉರಿ ಹೊತ್ತಿಸಿದೆ.  'ದಿ ಕೇರಳ ಸ್ಟೋರಿ ಕಥೆ'ಯ (The Kerala Story) ವಿರುದ್ಧ ಕೇರಳದ ಸಿಪಿಐ(ಎಂ), ಕಾಂಗ್ರೆಸ್ಸಿಗರು ಸೇರಿದಂತೆ ಒಂದಷ್ಟು ವರ್ಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.  ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ (ISIS) ಉಗ್ರಗಾಮಿಗಳಾಗಿಸುವ ಕಥೆ ಇದೆ.  32 ಸಾವಿರಕ್ಕೂ ಅಧಿಕ ಹುಡುಗಿಯರು ಯಾವ ರೀತಿ ನರಕ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎನ್ನುವ ನೈಜ ಘಟನೆಯನ್ನು ಇದು ಒಳಗೊಂಡಿರುವುದಾಗಿ  ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ (Vipul Amruthlal Shah) ಹೇಳಿದ್ದಾರೆ.  ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಇದರಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  

ಇದೇ 5ರಂದು ಬಿಡುಗಡೆಯಾಗಿರುವ ಈ ಚಿತ್ರ ಜನರಿಂದ ಮತ್ತು ವಿಮರ್ಶಕರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡು ಎಲ್ಲರ ಮನದಲ್ಲಿ ಜಾಗೃತಿ ಮೂಡಿಸಿದೆ. 40 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಇಲ್ಲಿಯವರೆಗೆ ಅಂದರೆ ಕಳೆದ ಎರಡು ದಿನಗಳಲ್ಲಿ ಗಳಿಸಿದ್ದೆಷ್ಟು ಗೊತ್ತಾ? ಮೊದಲ ದಿನ ಹಾಗೂ ಎರಡನೆಯ ದಿನ ಚಿತ್ರ ಗಳಿಸಿದ್ದೆಷ್ಟು? ಇದಕ್ಕೆ ಸಿಕ್ಕ ರೆಸ್ಪಾನ್ಸ್​ ಹೇಗಿದೆ? ರೇಟಿಂಗ್​ ಎಷ್ಟು ಎನ್ನುವುದನ್ನು ನೋಡೋಣ.

The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ

  ಕೇರಳದ ಹಲವಾರು  ಥಿಯೇಟರ್​ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡಿಲ್ಲ. ಇದರ ಹೊರತಾಗಿಯೂ ಚಿತ್ರ ಬಿಡುಗಡೆಯಾದ ಮೊದಲ ದಿನ ಅಂದರೆ ಮೇ 5ರಂದು ಚಿತ್ರ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ ಅಂದರೆ ಮೇ 6ರಂದು 11.22 ಕೋಟಿ ರೂಪಾಯಿ ಗಳಿಸಿದೆ.   ಸೆಲ್ಫಿ, ಶೆಹಜಾದಾ, ಕಾಶ್ಮೀರಿ ಫೈಲ್ಸ್​ಗಳಿಗಿಂತಲೂ ಹೆಚ್ಚಿನ ಆದಾಯ ತಂದುಕೊಟ್ಟಿದೆ. ಐಎಂಡಿಬಿಯಲ್ಲಿ ಸಿನಿಮಾ 10ಕ್ಕೆ 8.3ರಷ್ಟು ರೇಟಿಂಗ್​ ಪಡೆದುಕೊಂಡಿದೆ.  ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್​ನಲ್ಲಿ ಎರಡನೇ ದಿನಕ್ಕೆ ಶೇ.40ರಷ್ಟು ಏರಿಕೆ ಇದೆ ಎನ್ನಲಾಗಿದೆ. ಸಿನಿಮಾದ ಒಟ್ಟು ಕಲೆಕ್ಷನ್ 19.25 ಕೋಟಿ ರೂಪಾಯಿ ಆಗಿದೆ. ಹಿಂದಿ ಬೆಲ್ಟ್​ನಲ್ಲಿ ಶೇ.36.13ರಷ್ಟು ಪ್ರೇಕ್ಷಕರನ್ನು ಪಡೆದಿದೆ ಎಂದು ವರದಿಯಾಗಿದೆ.

ಅಂದಹಾಗೆ, ಸಿನಿಮಾದಲ್ಲಿ  ಸಾವಿರಾರು ಹೆಣ್ಣುಮಕ್ಕಳ ನಾಶವಾದ ಜೀವನದ ಅನಾವರಣವನ್ನು ಮೂವರು ಹೆಣ್ಣುಮಕ್ಕಳ ಕಥೆಯ ಜೊತೆ  ಎಳೆಎಳೆಯಾಗಿ ಬಿಡಿಸಲಾಗಿದೆ.  ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್ ಎಂಬ ಮೂವರು ಹುಡುಗೀರು ನರ್ಸಿಂಗ್ ಕಲಿಯೋಕೆಂದು ಒಂದು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಳ್ತಾರೆ. ಈ ಮೂವರು ಹುಡುಗಿಯರ ರೂಮ್ ಮೇಟ್ ಆದ ಆಸೀಫಾ ಹೇಗೆ ಅವರ ಬ್ರೇನ್ ವಾಷ್ ಮಾಡ್ತಾಳೆ. ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು ಹೇಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡ್ತಾಳೆ ಅನ್ನೋದೇ ಈ ಸಿನಿಮಾದ ವನ್ ಲೈನ್ ಸ್ಟೋರಿ. ಕೇರಳದ ಒಂದು ಊರಲ್ಲಿ ಶುರುವಾಗುವ ಲವ್ ಸ್ಟೋರಿ ಸಿರಿಯಾದಲ್ಲೋ, ಆಫ್ಘಾನಿಸ್ತಾನಸದಲ್ಲೋ ಕೊನೆಯಾಗುತ್ತೆ ಅನ್ನೋದು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಅನ್ಯ ಧರ್ಮದ ಹೆಣ್ಣು ಮಕ್ಕಳನ್ನು ಉಗ್ರರ ಸೆಕ್ಸ್ ಸ್ಲೇವ್ (Sex Slave) ಅಥವಾ ಸೂಸೈಡ್ ಬಾಂಬರ್ಸ್ ಮಾಡೋ ಉದ್ದೇಶ ಇಟ್ಕೊಂಡು ಅವರನ್ನು ಮರುಳು ಮಾಡಿ, ಹಂತಹಂತವಾಗಿ ಅವರು ತಮ್ಮ ಧರ್ಮಕ್ಕೆ ವಾಲುವಂತೆ ಮಾಡಿ, ಅವರ ಬದುಕಿಗೇ ಕೊಳ್ಳಿ ಇಡುವುದನ್ನು ನೋಡಿದಾಗ ನಮ್ಮ ಹೊಟ್ಟೆಗೇ ಬೆಂಕಿ ಬಿದ್ದ ಹಾಗಾಗುತ್ತೆ. ಬಣ್ಣದ ಮಾತುಗಳಿಗೆ ಮರುಳಾಗಿ ತಮ್ಮ‌ ಜೀವನ ಶೈಲಿಯನ್ನೇ (Lifestyle) ಬದಲಾಯಿಸಿಕೊಂಡು, ಅನ್ಯ ಕೋಮಿನ ಯುವಕರ ತೋಳ್ತೆಕ್ಕೆಯಲ್ಲಿ ಕಳೆದ ಖುಷಿಯ ಕ್ಷಣಗಳನ್ನು ಹೇಗೆ ಹೆಣ್ಣುಮಕ್ಕಳ ಜೀವನವನ್ನು ಸರ್ವನಾಶ ಮಾಡಿ ಬಿಡುತ್ತೆ ಅನ್ನೋದು ನೋಡಿದಾಗ ರಕ್ತ ಕುದಿಯಿತ್ತೆ ಎನ್ನುತ್ತಾರೆ ವಿಮರ್ಶಕರು. 

The Kerala Story ಕುರಿತು ಬಳ್ಳಾರಿಯಲ್ಲಿ ಮಾತಾಡಿದ ಪ್ರಧಾನಿ ಮೋದಿ: ನಿರ್ಮಾಪಕ ಹೇಳಿದ್ದೇನು?

ಇದರ ನಡುವೆ ಮಧ್ಯ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇರಳ ಸ್ಟೋರಿ ಚಿತ್ರಕ್ಕೆ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದೆ. ಈ ಮೂಲಕ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮೊದಲ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ದೇಶದ ಹೆಣ್ಣುಮಕ್ಕಳನ್ನು ವ್ಯವಸ್ಥಿತವಾಗಿ ಷಡ್ಯಂತ್ರದಲ್ಲಿ ಸಿಲುಕಿಸಿ ಲವ್ ಜಿಹಾದ್ ಮೂಲಕ ಉಗ್ರರನ್ನಾಗಿ ಮಾಡುವ ಕೃತ್ಯ ನಡೆಯುತ್ತಿದೆ. ಭಾರತದೊಳಗೆ ನಡೆಯುತ್ತಿರು ವ್ಯವಸ್ಥಿತಿ ಭಯೋತ್ಪಾದಕತೆಯನ್ನು ಈ ಚಿತ್ರ ತೋರಿಸುತ್ತದೆ. ಹೀಗಾಗಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದೇವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿಕೆ ನೀಡಿದ್ದಾರೆ. ಎಲ್ಲಾ ರಾಜ್ಯ ಸರ್ಕಾರಗಳು ಇದೇ ರೀತಿ ತೆರಿಗೆ ವಿನಾಯಿತಿ ಘೋಷಿಸುವಂತೆ ಒತ್ತಾಯ ಕೇಳಬರತೊಡಗಿದೆ. 

Latest Videos
Follow Us:
Download App:
  • android
  • ios