The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ

ಒಂದು ವರ್ಗಕ್ಕೆ ಭಾರಿ ನಡುಕ ಹುಟ್ಟಿಸಿರುವ ದಿ ಕೇರಳ ಸ್ಟೋರಿ ಚಿತ್ರದ ಕುರಿತು ಮುಖ್ಯಪಾತ್ರಧಾರಿ ಅದಾ ಶರ್ಮಾ ಹೇಳಿದ್ದೇನು? 
 

Adah Sharma exclusive on the Kerala story directed by Sudipto Sen produced by Vipul Amrutlal Shah

ಕೇರಳದಲ್ಲಿ ಸುಮಾರು 32 ಸಾವಿರ ಹುಡುಗಿಯರು  ನಾಪತ್ತೆಯಾಗಿರುವ ವಿಷಯವನ್ನು ಆಧರಿಸಿದ ದಿ ಕೇರಳ ಸ್ಟೋರಿ ಕಥೆ (The Kerala Story) ಹೆಣೆಯಲಾಗಿದೆ. ಇದರ ಟ್ರೇಲರ್​ ಬಿಡುಗಡೆಯಾಗಿದ್ದು, ಅದು ಬೆಚ್ಚಿಬೀಳಿಸುವಂತಿದೆ.  ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ (Vipul Amruthlal Shah) ಅವರ ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಇದರಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ (ISIS) ಉಗ್ರಗಾಮಿಗಳಾಗಿಸುವ ಕಥೆ ಇದೆ.  ಈ ಚಿತ್ರವು ನೈಜ ಕಥೆಯನ್ನು ಆಧರಿಸಿದೆ ಎಂದು ಚಿತ್ರ ನಿರ್ಮಾಪಕರು ಹೇಳಿಕೊಂಡಿದ್ದಾರೆ. ಆದರೆ ಈ ಚಿತ್ರಕ್ಕೆ ಕಾಂಗ್ರೆಸ್ಸಿಗರು ಸೇರಿದಂತೆ ಒಂದು ವರ್ಗದಿಂದ ಬಹಳ ವಿರೋಧ ವ್ಯಕ್ತವಾಗುತ್ತಿದೆ. ಖುದ್ದು ಕೇರಳ ಸರ್ಕಾರವೇ ಈ ಚಿತ್ರದ ವಿರುದ್ಧ ದನಿ ಎತ್ತಿದೆ. ಚಿತ್ರದ ಸ್ಕ್ರೀನಿಂಗ್ (Screening)​ ಮಾಡಲು ಬಿಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.

ಇದರ ನಡುವೆಯೇ ಚಿತ್ರದ ಕುರಿತು ಬಾಲಿವುಡ್ (Bollywood)​ ನಟಿ ಅದಾ ಶರ್ಮಾ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಇವರು ಶಾಲಿನಿ ಉನ್ನಿಕೃಷ್ಣನ್ (ಹಿಂದೂ ಮಲಯಾಳಿ ನರ್ಸ್) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಫಾತಿಮಾ ಬಾ ಪಾತ್ರ ಮಾಡುತ್ತಿದ್ದಾರೆ.  ಕಾಣೆಯಾದ 32 ಸಾವಿರ ಕೇರಳ ಮಹಿಳೆಯರಲ್ಲಿ ಈಕೆ ಕೂಡ ಒಬ್ಬರು ಎನ್ನುವುದು ಚಿತ್ರದ ಹೂರಣ.  ನಂತರ ಭಯೋತ್ಪಾದಕ ಸಂಘಟನೆ ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ - ISI)  ಮಾರಾಟವಾಗಿ ಅನುಭವಿಸುವ ಕಷ್ಟಗಳ ಕುರಿತು ಈ ಚಿತ್ರದಲ್ಲಿ ತೋರಿಸಲಾಗಿದೆ. ಮತಾಂತರದ ವಿರುದ್ಧ ಇರುವ ಕರಾಳ ಸತ್ಯ ಘಟನೆಗಳನ್ನು  ಸಮಾಜದ ಮುಂದೆ ಇಡುವ ಈ ಸಂದರ್ಭದಲ್ಲಿ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿರುವ ನಟಿ (Ada Sharma) ಸಂದರ್ಶನವೊಂದರಲ್ಲಿ ಹೇಳಿರುವ ವಿವರಣೆ ಇಲ್ಲಿದೆ:   

The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್​!

'ಕೇರಳ ಸರ್ಕಾರ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುವುದು ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ. ಒಂದು ಬಾರಿಯೂ ನಾವು ಕೇರಳವನ್ನು ಕೆಟ್ಟದಾಗಿ ತೋರಿಸಿಲ್ಲ, 'ಕೇರಳದ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಲಿಲ್ಲ.   ಪ್ರೀತಿಯ  ಬಲೆಗೆ ಬೀಳಿಸಿ ಹೇಗೆ ಮೋಸ ಮಾಡಲಾಗುತ್ತಿದೆ, ಹಣವನ್ನು ಪಡೆದು ಹೆಣ್ಣುಮಕ್ಕಳನ್ನು ಹೇಗೆ  ಮತಾಂತರಗೊಳಿಸಿ ನರಕಕ್ಕೆ ತಳ್ಳಲಾಗುತ್ತಿದೆ ಎನ್ನುವ ನೈಜ ಘಟನೆ ಇದಾಗಿದೆ. ಆದರೆ ಕೇರಳದಲ್ಲಿ (Kerala) ನಡೆಯುತ್ತಿರುವುದನ್ನು ಚಿತ್ರದಲ್ಲಿ ತೋರಿಸಲಾಗಿದೆಯೇ ವಿನಾ ಕೇರಳ ರಾಜ್ಯದ ಕುರಿತು ಕೆಟ್ಟದ್ದಾಗಿ ತೋರಿಸಿಲ್ಲ ಎಂದಿದ್ದಾರೆ ಅದಾ ಶರ್ಮಾ.
 
'ದಿ ಕೇರಳ ಸ್ಟೋರಿ' ಚುನಾವಣೆ, ರಾಜಕೀಯ ಅಥವಾ ಧರ್ಮದ ವಿರುದ್ಧ ಕಥೆಯಲ್ಲ, ಇದು  ಭಯೋತ್ಪಾದನೆ ವಿರುದ್ಧ ತೋರಿಸಿರುವ ನೈಜ ಘಟನೆ. ಇದು  ಯಾವುದೇ ಧರ್ಮದ ವಿರೋಧಿಯಲ್ಲ. ಆದರೆ ಇದು ಖಂಡಿತವಾಗಿಯೂ ಭಯೋತ್ಪಾದನಾ ವಿರೋಧಿ ಸಂಘಟನೆಯ ಕುರಿತ ವಿವರಣೆ ಅಗಿದೆ. ದಿ ಕೇರಳ ಸ್ಟೋರಿ  ಚಲನಚಿತ್ರವು ಹುಡುಗಿಯರನ್ನು ಮಾದಕ ದ್ರವ್ಯಗಳಿಗೆ (Drugs) ಹೇಗೆ ಒಳಪಡಿಸಲಾಗುತ್ತಿದೆ, ಅವರ ಬ್ರೈನ್ ವಾಷ್​ (Brainwash )ಮಾಡಿಮತಾಂತರ ಗೊಳಿಸಲಾಗುತ್ತಿದೆ, ಅತ್ಯಾಚಾರ, ಮಾನವ ಕಳ್ಳಸಾಗಣೆ (Trafficking) ಮೂಲಕ ಅವರನ್ನು ಹೇಗೆ ಕೂಪಕ್ಕೆ ತಳ್ಳಲಾಗುತ್ತಿದೆ ಎನ್ನುವ ಸತ್ಯಾಂಶವನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಅಷ್ಟೇ. ಭಯೋತ್ಪಾದನೆ ವಿರುದ್ಧದ ಈ ಸಮರದಲ್ಲಿ ಒಂದು ವರ್ಗ ಏಕೆ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿದೆ ಎನ್ನುವುದೇ ನಂಬಲು ಅಸಾಧ್ಯವಾಗಿದೆ ಎಂದು ನಟಿ ಹೇಳಿದ್ದಾರೆ.

'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಕಾಂಗ್ರೆಸ್ ವಿರೋಧ; ಇದನ್ನ ನಾನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸಾ

ಸುದೀಪ್ತೋ ಸೇನ್ (Sudipto Sen) ನಿರ್ದೇಶನದ ಈ ಚಿತ್ರವು ಕೇರಳದ ನೂರಾರು ಮಹಿಳೆಯರನ್ನು ಇಸ್ಲಾಂಗೆ ಪರಿವರ್ತಿಸಲಾಗುತ್ತಿದೆ ಮತ್ತು ಐಸಿಸ್‌ಗೆ ಸೇರ್ಪಡೆಗೊಳಿಸಲಾಗುತ್ತಿದೆ  ಎಂಬುದನ್ನು ತೋರಿಸಿದೆ. ಕೇರಳದ ವಿಶಿಷ್ಟ ಕಾಲೇಜು ವಿದ್ಯಾರ್ಥಿಗಳು, ಭಯೋತ್ಪಾದಕ ಸಂಘಟನೆಗಳ ಸದಸ್ಯರಾಗಿ ಹೋದ ಸತ್ಯ ಘಟನೆಯನ್ನು ಆಧರಿಸಿದೆ. 32 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳ ಬದುಕು ನರಕಸದೃಶವಾಗಿದ್ದು, ಈ ಪೈಕಿ ನಾಲ್ವರು ಮಹಿಳೆಯರ ಭಯಾನಕ ಪ್ರಯಾಣವನ್ನು ಈ ಚಿತ್ರ ವಿವರಿಸುತ್ತದೆ ಎಂದಿದ್ದಾರೆ ನಟಿ. ಹೆಣ್ಣುಮಕ್ಕಳನ್ನು ಹೆರುವ ಯಂತ್ರಗಳನ್ನಾಗಿ ಮಾಡಿ, ಹುಟ್ಟುವ ಮಗುವನ್ನು ಅವರಿಂದ ಬೇರ್ಪಡಿಸಲಾಗುತ್ತದೆ, ನಂತರ ಮಕ್ಕಳನ್ನು ಕರೆದುಕೊಂಡು ಹೋಗಿ ಆತ್ಮಹತ್ಯಾ ಬಾಂಬರ್​ಗಳನ್ನಾಗಿ ತಯಾರು ಮಾಡುವ ಭಯಾನಕ ಸತ್ಯ ಚಿತ್ರಣವನ್ನು ಈ ಚಿತ್ರದಲ್ಲಿ ಬಿಚ್ಚಿಡಲಾಗಿದೆ ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ.

ನಮ್ಮ ಚಲನಚಿತ್ರವು ಜೀವನ ಮತ್ತು ಸಾವಿನ ಬಗ್ಗೆ ಇದೆ. ಆದ್ದರಿಂದ ನಾವು ಎಲ್ಲಾ ಧರ್ಮ, ಪಂಗಡಗಳ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸಬೇಕಾಗಿದೆ. ಇದು ಯಾವುದೇ ರಾಜಕೀಯ ಅಜೆಂಡಾ ಅಥವಾ ಪ್ರಚಾರ ಎಂದು ಆರೋಪಿಸುವುದು ತಪ್ಪು. ಸಮಾಜದಲ್ಲಿ ಅದರಲ್ಲಿಯೂ ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ (Ladies) ಜಾಗೃತಿ ಮೂಡಿಸುವುದೇ ಈ ಚಿತ್ರದ ಉದ್ದೇಶ  ಎಂದಿದ್ದಾರೆ. ಓರ್ವ ಹುಡುಗಿಯಾಗಿ ಇತರ ಹುಡುಗಿಯರ ನೋವಿನ ಅರ್ಥ ನನಗಾಗಿದೆ. ಈ ಪಾತ್ರವನ್ನು ಮಾಡುವ ಮುನ್ನ ಮತಾಂತರಗೊಂಡು ನೋವು ಅನುಭವಿಸುತ್ತಿರುವ ಹಲವು ಹುಡುಗಿಯರ ಬಗ್ಗೆ ಅಧ್ಯಯನ ಮಾಡಿದ್ದೇನೆ.  ಸಂತ್ರಸ್ತರನ್ನು ಭೇಟಿಯಾಗಿದ್ದೇನೆ ಎಂದಿದ್ದಾರೆ. 

Latest Videos
Follow Us:
Download App:
  • android
  • ios