Asianet Suvarna News Asianet Suvarna News

ಕ್ಷಮೆಯಾಚಿಸುತ್ತೇನೆ, ಆದರೆ..; ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾವೆಂದ ಇಸ್ರೇಲಿ ನಿರ್ದೇಶಕ ನದಾವ್

ಕಾಶ್ಮೀರ್ ಫೈಲ್ಸ್ 'ಅಶ್ಲೀಲ' ಮತ್ತು 'ತಪ್ಪು ಪ್ರಚಾರದ ಉದ್ದೇಶ' ಹೊಂದಿದ ಸಿನಿಮಾ ಎಂದು ಹೇಳಿದ್ದ ಇಸ್ರೇಲಿ ಸಿನಿಮಾ ನಿರ್ಮಾಪಕ ನದಾವ್ ಲಾಪಿಡ್ ಕ್ಷಮೆಯಾಚಿಸಿದ್ದಾರೆ.

The Kashmir Files controversy: Nadav Lapid issues apology sgk
Author
First Published Dec 2, 2022, 4:15 PM IST

ಕಾಶ್ಮೀರ್ ಫೈಲ್ಸ್ 'ಅಶ್ಲೀಲ' ಮತ್ತು 'ತಪ್ಪು ಪ್ರಚಾರದ ಉದ್ದೇಶ' ಹೊಂದಿದ ಸಿನಿಮಾ ಎಂದು ಹೇಳಿದ್ದ ಇಸ್ರೇಲಿ ಸಿನಿಮಾ ನಿರ್ಮಾಪಕ ನದಾವ್ ಲಾಪಿಡ್ ಕ್ಷಮೆಯಾಚಿಸಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯ ಅಥವಾ ಸಂಕಷ್ಟಕ್ಕೆ ಒಳಗಾದವರನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ ಎಂದು ನದಾವ್ ಹೇಳಿದ್ದಾರೆ. ಇತ್ತೀಚಿಗಷ್ಟೆ  IFFI 2022 (International Film Festival of India)ನಲ್ಲಿ ಜ್ಯೂರಿ ಮುಖ್ಯಸ್ಥ, ಇಸ್ರೇಲ್ ನಿರ್ದೇಶಕ ನದಾವ್ ಲಾಪಿಡ್ ಹೇಳಿಕೆ ಭಾರಿ ವಿವಾದ ಹುಟ್ಟು ಹಾಕಿತ್ತು.  'ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ  ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು' ಎಂದು ಹೇಳಿದ್ದರು. ನದಾವ್ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು. ಅನೇಕರು ನದಾವ್‌ಗೆ ಬೆಂಬಲ ಸೂಚಿಸಿದ್ದರು. ಇನ್ನೂ ಅನೇಕರು ನದಾವ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. 

ಭಾರಿ ವಿರೋಧ ಬಳಿಕ ನದಾವ್ ಕ್ಷಮೆಯಾಚಿಸಿದ್ದಾರೆ. ವಿಡಿಯೋ ಮೂಲಕ ಕ್ಷಮೆ ಕೇಳಿರುವ ನದಾವ್, 'ನಾನು ಯಾರನ್ನೂ ಅವಮಾನಿಸಲು ಬಯಸಲಿಲ್ಲ. ನನ್ನ ಉದ್ದೇಶ ಜನರು ಅಥವಾ ಅವರ ಸಂಬಂಧಿಕರನ್ನು ಅವಮಾನಿಸುವುದಾಗಿರಲಿಲ್ಲ, ನನ್ನ ಹೇಳಿಕೆಯಿಂದ ನೋವಾಗಿದ್ದರೆ  ಕ್ಷಮೆಯಾಚಿಸುತ್ತೇನೆ' ಎಂದು ಹೇಳಿದರು. 

ಸುಳ್ಳು ಎಂದು ಸಾಬೀತಾದ್ರೆ ಸಿನಿಮಾ ಮಾಡೋದನ್ನೇ ಬಿಡ್ತೀನಿ; 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಸವಾಲ್

ಆದರೆ ನದಾಲ್ ತನ್ನ ಹೇಳಿಕೆಯನ್ನು ಮಾತ್ರ ವಾಪಾಸ್ ಪಡೆದಿಲ್ಲ. 'ಆ ಸಮಯದಲ್ಲಿ ನಾನು ಏನು ಹೇಳಿಬೇಕಿತ್ತು ಅದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮತ್ತು ನನ್ನ ಸಹ ಜ್ಯೂರಿ ಸದಸ್ಯರಿಗೆ ಇದು ಅಸಭ್ಯ ಪ್ರಚಾರದ ಚಲನಚಿತ್ರವಾಗಿದ್ದು, ಇಂತಹ ಪ್ರತಿಷ್ಠಿತ ಸ್ಪರ್ಧಾತ್ಮಕ ವಿಭಾಗಕ್ಕೆ ಸ್ಥಾನವಲ್ಲ ಮತ್ತು ಸೂಕ್ತವಲ್ಲ. ಅದನ್ನು ಮತ್ತೆ ಮತ್ತೆ ಹೇಳುತ್ತೇನೆ' ಎಂದು ಅವರು ಹೇಳಿದರು. ಅದೇ ಸಮಯಕ್ಕೆ 'ದುರಂತ, ಬಲಿಪಶುಗಳು, ಬದುಕುಳಿದವರು ಮತ್ತು ಅಲ್ಲಿ ಬಳಲುತ್ತಿರುವವರ ಬಗ್ಗೆ ನನಗೆ ಅಪಾರ ಗೌರವವಿದೆ' ಎಂದು ಹೇಳಿದರು. 

ನದವ್ ಲಾಪಿಡ್ ಹೇಳಿಕೆ

ಸೋಮವಾರ (ನವೆಂಬರ್ 28) ರಾತ್ರಿ ಗೋವಾದಲ್ಲಿ ನಡೆದ 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಈ ವರ್ಷದ ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನದಾವ್ ಲಾಪಿಡ್,  'ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ' ಎಂದು ಅಸಮಾಧಾನ ಹೊರಹಾಕಿದರು. 'ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ  ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು' ಎಂದು ಹೇಳಿದರು. 'ಈ ವೇದಿಕೆಯಲ್ಲಿ ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಕ್ಕೆ ನಾನು ಆರಾಮಾಗಿ ಇದ್ದೀನಿ. ಈ ಉತ್ಸಾಹದಲ್ಲಿ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಖಂಡಿತವಾಗಿ ಸ್ವೀಕರಿಸಬಹುದು' ಎಂದು ಹೇಳಿದರು. ಜ್ಯೂರಿ ನದಾಲ್ ಹೇಳಿಕೆ ಈಗ ವಿವಾಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.

'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ IFFI ಜ್ಯೂರಿ ಮುಖ್ಯಸ್ಥ ನದಾವ್; ತಿರುಗೇಟು ನೀಡಿದ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ  ತಿರುಗೇಟು

 'ಇದಲ್ಲ ನನಗೆ ಹೊಸದೇನಲ್ಲ. ಏಕೆಂದರೆ ಇಂತಹ ವಿಷಯಗಳನ್ನು ಭಯೋತ್ಪಾದಕ ಸಂಘಟನೆಗಳು, ಅರ್ಬನ್ ನಕ್ಸಲರು ಮತ್ತು ದೇಶವನ್ನು ವಿಭಜಿಸಲು ಬಯಸುವವರು ಇದನ್ನೆಲ್ಲಾ ಹೆಚ್ಚಾಗಿ ಹೇಳುತ್ತಾರೆ. ಕಾಶ್ಮೀರ ಫೈಲ್ಸ್‌ನ ಒಂದೇ ಒಂದು ಶಾಟ್, ಸಂಭಾಷಣೆ, ಘಟನೆಯನ್ನು ಸುಳ್ಳು ಎಂದು ಸಾಬೀತುಪಡಿಸಿದರೆ, ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ' ಎಂದು ವಿವೇಕ್ ಅಗ್ನಿಹೋತ್ರಿ ಸವಾಲ್ ಹಾಕಿದರು. 

 
 

Follow Us:
Download App:
  • android
  • ios