Asianet Suvarna News Asianet Suvarna News

ವೀರಪ್ಪನ್​ ಕಾಡಿನ ಪ್ರೀತಿಯ ರಾಜಕಾರಣಿ: ರೋಚಕ ಅನುಭವ ಬಿಚ್ಚಿಟ್ಟ ನಿರ್ದೇಶಕ ಸೆಲ್ವಮಣಿ

ವೀರಪ್ಪನ್​ ಕಾಡಿನ ಪ್ರೀತಿಯ ರಾಜಕಾರಣಿ ಎನ್ನುವ ಮೂಲಕ ಕಾಡಿನ ರೋಚಕ ಅನುಭವ ಬಿಚ್ಚಿಟ್ಟಿದ್ದಾರೆ  ದಿ ಹಂಟ್​ ಫಾರ್​ ವೀರಪ್ಪನ್​ ನಿರ್ದೇಶಕ ಸೆಲ್ವಮಣಿ.
 

The Hunt for Veerappan  he was a politician who lived in the jungles says Selvamani suc
Author
First Published Aug 10, 2023, 11:56 AM IST | Last Updated Aug 10, 2023, 11:56 AM IST

ನರಹಂತಕ, ಕಾಡುಗಳ್ಳ, ದಂತಚೋರ... ಇತ್ಯಾದಿ ಬಿರುದುಗಳಿಂದ ಕುಖ್ಯಾತಿ ಗಳಿಸಿದ್ದ ವೀರಪ್ಪನ್  ಕುರಿತಾಗಿ 1991ರಲ್ಲಿಯೇ  ‘ವೀರಪ್ಪನ್’ ಎಂಬ ಸಿನೆಮಾ ಮಾಡಲಾಗಿತ್ತು. ಈ ಸಿನಿಮಾದಲ್ಲಿ  ವೀರಪ್ಪನ್ ಪಾತ್ರದಲ್ಲಿ ದೇವರಾಜ್ ಅಭಿನಯಿಸಿದ್ದರು. ಬಳಿಕ 2013ರಲ್ಲಿ ವೀರಪ್ಪನ್​ ಕುರಿತು, ಎಎಂಆರ್ ರಮೇಶ್ ನಿರ್ದೇಶನದಲ್ಲಿ ಕಿಶೋರ್ ಅಭಿನಯದ ‘ಅಟ್ಟಹಾಸ’ ಎಂಬ ಚಿತ್ರ ನಿರ್ಮಾಣವಾಗಿತ್ತು. ನಂತರ 2016ರಲ್ಲಿ  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ‘ಕಿಲ್ಲಿಂಗ್ ವೀರಪ್ಪನ್’ ಎಂಬ ಸಿನೆಮಾ ಮಾಡಿದ್ದರು. ಇದರಲ್ಲಿ  ಸಂದೀಪ್ ಭಾರದ್ವಾಜ್ ವೀರಪ್ಪನ್ (Veerappan) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ  ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿಬಂದ ‘ದಿ ಹಂಟ್ ಫಾರ್ ವೀರಪ್ಪನ್’ ಎಂಬ ಸಾಕ್ಷ್ಯಚಿತ್ರವು ಸಕತ್​ ಸುದ್ದಿ ಮಾಡುತ್ತಿದೆ. 1990 ರ ದಶಕದ ಮತ್ತು 2000ರ ದಶಕದ ಆರಂಭದ ಕುರಿತು ನಾಲ್ಕು ಸರಣಿಗಳಲ್ಲಿ ಈ ಚಿತ್ರ ಬರಲಿದೆ. 
 
ನಿರ್ದೇಶಕ ಸೆಲ್ವಮಣಿ ಸೆಲ್ವರಾಜ್ (Selvamani Selvaraj) ಮತ್ತು ನಿರ್ಮಾಪಕರಾದ ಮೋನಿಶಾ ತ್ಯಾಗರಾಜನ್ ಮತ್ತು ಅಪೂರ್ವ ಬಕ್ಷಿ ಅವರು ವೀರಪ್ಪನ್‌ನ ಹೊಸ ಸಾಕ್ಷ್ಯಚಿತ್ರಗಳ ತಯಾರಿಕೆಯಲ್ಲಿ ಏನಾಯಿತು ಎಂಬ ಬಗ್ಗೆ ಚರ್ಚಿಸಿದ್ದಾರೆ.  ವಿಶೇಷ ಸಂದರ್ಶನವೊಂದರಲ್ಲಿ, ಇವರು  ವೀರಪ್ಪನ್‌ನ ಹಿಂದಿನ, ರಾಜಕೀಯ ಮತ್ತು ತತ್ತ್ವಚಿಂತನೆಗಳನ್ನು ತನಿಖೆ ಮಾಡುವ ತಮ್ಮ ಪ್ರಯತ್ನಗಳ ಕುರಿತು  ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಸೆಲ್ವಮಣಿಯವರು, ವೀರಪ್ಪನ್​ ಬಗ್ಗೆ ಅಲ್ಲಿ, ಇಲ್ಲಿ ಕೇಳಿ ತಿಳಿದಿದ್ದೆ. ಅವನು  ಒಂದು ಕಡೆ ಭಯಂಕರ ಅಪರಾಧಿಯಾಗಿದ್ದರೂ,  ಅವನನ್ನು ಪ್ರೀತಿಸುವ ಸಮಾಜದ ಒಂದು ವರ್ಗವಿರುವುದು ತಿಳಿದಿತ್ತು. ಇಷ್ಟು ಜನರನ್ನು ಕೊಂದು ಅದೆಷ್ಟು ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಿದ್ದಾನೆ ಎಂಬುದು ಗೊತ್ತಿದ್ದರೂ ಅವರಿಗೆ ಆತ ಹೀರೋ. ಅದರ ಬಗ್ಗೆ ನನಗೆ ತಿಳಿದುಕೊಳ್ಳುವ ಹಂಬಲವಾಯಿತು.  ವೀರಪ್ಪನ್‌ನ ಬಗ್ಗೆ ಸಂಪೂರ್ಣವಾಗಿ  ತಿಳಿದುಕೊಳ್ಳಲು, ನೀವು ಅವನ ಜೀವನದ ಎಲ್ಲ ಜನರನ್ನು ತಿಳಿದುಕೊಳ್ಳಬೇಕು. ಹಾಗಾಗಿ ಒಂದು ಸರಳ ಹುಡುಕಾಟವೇ ನಮ್ಮನ್ನು ಈ ಪಯಣಕ್ಕೆ ಕರೆದೊಯ್ಯಿತು ಎಂದಿದ್ದಾರೆ. 

ಅಪ್ಪ ಶಾರುಖ್​ ಜೊತೆ 120 ಕೋಟಿಯನ್ನೂ ರಿಜೆಕ್ಟ್​ ಮಾಡಿದ ಪುತ್ರ ಆರ್ಯನ್​ ಖಾನ್​?

 ವೀರಪ್ಪನ್​ ಕುರಿತು ಸಾಕಷ್ಟು ಹೇಳಲು ಸಾಧ್ಯವಿರುವುದು ಅವರ ಪತ್ನಿ  ಮುತ್ತುಲಕ್ಷ್ಮಿಗೆ ಮಾತ್ರ ಎನ್ನುವುದುತಿಳಿದು, ಅವರ ಬಳಿಯೇ ಹೆಚ್ಚು ಮಾತನಾಡಿದೆವು. ಆಕೆ ಕಾಡಿನಲ್ಲಿ ತುಂಬಾ ಸಮಯ ಕಳೆದಿದ್ದಾಳೆ. ಅವರ ಜೊತೆ ಮಾತನಾಡಿದಾಗ, ಆಕೆ, ತಮ್ಮ ಹೃದಯಕ್ಕೆ ಹತ್ತಿರವಾದದ್ದನ್ನು ಹಂಚಿಕೊಳ್ಳಲು  ಸರಿಯಾದ ಮಾಧ್ಯಮವನ್ನು (Media) ಹುಡುಕುತ್ತಿದ್ದರು ಎಂದು ಎನ್ನಿಸಿತು. ಆಕೆ ಸಾಕಷ್ಟು ಮಾಹಿತಿ ನೀಡಿದರು ಎಂದಿದ್ದಾರೆ. ವೀರಪ್ಪನ್​ ಕಥೆ ಮಾಡಲು ತಾವು ಪಟ್ಟ ಕಷ್ಟಗಳ ಕುರಿತು ಮಾತನಾಡಿದ ಸೆಲ್ವಮಣಿ ಅವರು, ಕಥೆ ಹೇಳಲು ಬದುಕಿದ್ದ ಬಹಳಷ್ಟು ಅರಣ್ಯ ಅಧಿಕಾರಿಗಳು ಮತ್ತು ವರದಿಗಾರರನ್ನು ಭೇಟಿಯಾಗಿರುವುದಾಗಿ ತಿಳಿದಿರು.  ವೀರಪ್ಪನ್​ ಹುಟ್ಟೂರಾದ ಗೋಪಿನಾಥನ್‌ನಿಂದ ತಮ್ಮ ಪಯಣ ಆರಂಭಿಸಿ, ಬಳಿಕ ವೀರಪ್ಪನ್​ ಜಾಡು ಹಿಡಿದು ಹೋಗಿರುವುದಾಗಿ ತಿಳಿಸಿದರು.  
  
ವೀರಪ್ಪನ್​ ಬಗ್ಗೆ ಮಾತನಾಡಲು  ಜನರು ಯಾವುದೇ ಹಿಂಜರಿಕೆ ಪಟ್ಟಿಲ್ಲ ಎಂದ ಸೆಲ್ವಮಣಿ ಅವರು, ನಮ್ಮದು ಕೇವಲ ಪ್ರಾಮಾಣಿಕತೆಯ ಸಂದರ್ಶನವಾಗಿತ್ತು.  ನಮಗೆ ಇಲ್ಲಿ ಯಾವುದೇ ಅಜೆಂಡಾ ಇಲ್ಲ. ನಾವು ನಿಮ್ಮ ಕಥೆಯನ್ನು ಹೇಳಲು ಬಯಸುತ್ತೇವೆ. ನೀವು ಅದಕ್ಕೆ ಸಾಕ್ಷಿಯಾಗಿದ್ದೀರಿ, ನಿಮಗೆ ಏನನಿಸುತ್ತದೆ? ಅದು ನಮಗೆ ಬೇಕು ಎಂದು ಅರಿತುಕೊಳ್ಳಬೇಕಿದೆ ಎಂದು ಪ್ರಶ್ನೆಯನ್ನು ಜನರ ಮುಂದಿಟ್ಟಾಗ ಅವರು ಎಲ್ಲಾ  ವಿಷಯ ಬಹಿರಂಗಪಡಿಸಿದರು ಎಂದು ಸೆಲ್ವಮಣಿಹೇಳಿದರು. 

  ವೀರಪ್ಪನ್ ತನ್ನ ಯುದ್ಧ ನೀತಿಯ ಮೂಲಕ ಕರ್ನಾಟಕದ ವಿರುದ್ಧ ತಮಿಳುನಾಡನ್ನು ಬಹುತೇಕ ಎತ್ತಿಕಟ್ಟುವ ಮೂಲಕ ಭೂರಾಜಕಾರಣದ ಲಾಭವನ್ನು ಪಡೆದಿದ್ದ ಎಂಬ ಮಾತಿಗೆ ಉತ್ತರಿಸಿದ ಸೆಲ್ವಮಣಿಯವರು,  ಇವೆಲ್ಲವೂ  ರಾಜಕೀಯ. ರಾಜಕೀಯದ ಬಗ್ಗೆ ಅರಿವು ಬರಬೇಕಾದರೆ ಅದನ್ನು ಓದಿ ಕಲಿಯಬೇಕಾಗಿಲ್ಲ, ಕೆಲವೊಮ್ಮೆ ಜೀವನವು ನಿಮಗೆ ರಾಜಕೀಯವನ್ನು (Politician) ಕಲಿಸುತ್ತದೆ. ಇದನ್ನೇ ಮುತ್ತುಲಕ್ಷ್ಮಿ ಅವರು ಕೂಡ ಹೇಳಿದರು.  ಒಟ್ಟಿನಲ್ಲಿ ಈ ಪಯಣ ಅದ್ಭುತವಾಗಿತ್ತು. ವೀರಪ್ಪನ್​ ಕಾಡುಗಳ್ಳನ ಹೊರತಾಗಿಯೂ ಆತನನ್ನು ಇಂದಿಗೂ ಜನರು ಹೇಗೆ ಪ್ರೀತಿಸುತ್ತಿದ್ದಾರೆ ಎನ್ನುವ ಇನ್ನೊಂದು ಮುಖದ ಅನಾವರಣವೂ ಆಯಿತು ಎಂದಿದ್ದಾರೆ ಸೆಲ್ವಮಣಿ. ಒಟ್ಟಿನಲ್ಲಿ ಆತ ಕಾಡಿನಲ್ಲಿ ವಾಸಿಸುತ್ತಿದ್ದ ರಾಜಕಾರಣಿಯಾಗಿದ್ದ. ಆದರೆ ಹೆಚ್ಚಿನವರು ಆತನನ್ನು ಪ್ರೀತಿಸುತ್ತಿದ್ದರು ಎಂದಿದ್ದಾರೆ. 

ದೇಹ ತಪಾಸಣೆ ಹೆಸರಲ್ಲಿ ಬಟ್ಟೆ ಕಳಚಿಸಿದರು: ಕಣ್ಣೀರಿಟ್ಟ ಮಿಸ್ ಯೂನಿವರ್ಸ್ ಸ್ಪರ್ಧಿಗಳು!

Latest Videos
Follow Us:
Download App:
  • android
  • ios