ದೇಹ ತಪಾಸಣೆ ಹೆಸರಲ್ಲಿ ಬಟ್ಟೆ ಕಳಚಿಸಿದರು: ಕಣ್ಣೀರಿಟ್ಟ ಮಿಸ್ ಯೂನಿವರ್ಸ್ ಸ್ಪರ್ಧಿಗಳು!
ದೇಹ ತಪಾಸಣೆ ಹೆಸರಿನಲ್ಲಿ ಟಾಪ್‌ಲೆಸ್ ಮಾಡಿದರು ಹಾಗೂ ಒಳ ಉಡುಪುಗಳನ್ನು ತೆಗೆಯಲು ಹೇಳಿದರು ಎಂದು ಕಣ್ಣೀರಿಟ್ಟಿದ್ದಾರೆ ಮಿಸ್ ಯೂನಿವರ್ಸ್ ಆಕಾಂಕ್ಷಿಗಳಾದ ಇಂಡೋನೇಷಿಯಾದ ಸ್ಪರ್ಧಿಗಳು!
ಮಿಸ್ ಯೂನಿವರ್ಸ್ ಇಂಡೋನೇಷ್ಯಾ (Miss Universe Indonesia) ಸ್ಪರ್ಧೆಯ ಆರು ಸ್ಪರ್ಧಿಗಳು ತಮ್ಮನ್ನು ಟಾಪ್‌ಲೆಸ್ 'ದೇಹ ತಪಾಸಣೆ'ಗೆ ಒಳಪಡಿಸಲಾಗಿದೆ ಎಂದು ಆರೋಪಿಸಿ ಆಯೋಜಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಈ ಕುರಿತು ಆರು ಸ್ಪರ್ಧಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ದೇಹ ತಪಾಸಣೆಯ ಹೆಸರಿನಲ್ಲಿ ಟಾಪ್‌ಲೆಸ್ ಮಾಡಿಸಿ ಫೋಟೋ ತೆಗೆಸಲಾಗಿದೆ. ಇದರ ವಿರುದ್ಧ ಪೊಲೀಸರಿಗೆ ಸ್ಪರ್ಧಿಗಳು ದೂರು ನೀಡಿದ್ದಾರೆ ಎಂದು ಸಂತ್ರಸ್ತೆಯರ ಪರ ವಕೀಲರು ಮಾಹಿತಿ ನೀಡಿದ್ದಾರೆ. ಸ್ಪರ್ಧಿಗಳು ವರದಿ ಸಲ್ಲಿಸಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಜುಲೈ 29 ರಿಂದ ಆಗಸ್ಟ್ 3 ರವರೆಗೆ ರಾಜಧಾನಿ ಜಕಾರ್ತಾದಲ್ಲಿ ಮಿಸ್ ಇಂಡೋನೇಷ್ಯಾದ ಸೌಂದರ್ಯ ಸ್ಪರ್ಧೆ ಜರುಗಿತ್ತು. ಇದರಲ್ಲಿ ಇಂಡೋನೇಷ್ಯಾದ ವಿವಿಧ ಭಾಗಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರು ಸೇರಿದಂತೆ 20 ಕ್ಕೂ ಹೆಚ್ಚು ಜನರು ಒಂದೇ ಕೋಣೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ ದೈಹಿಕ ಪರೀಕ್ಷೆಗಾಗಿ ತಮ್ಮ ಒಳ ಉಡುಪುಗಳನ್ನು ತೆಗೆದುಹಾಕಲು ಸಂಘಟಕರು ಐವರನ್ನು ಕೇಳಿದರು ಎಂದು ಯುವತಿಯರು ಆರೋಪಿಸಿದ್ದಾರೆ. ನಂತರ ಐವರು ಸ್ಪರ್ಧಿಗಳನ್ನು ಟಾಪ್‌ಲೆಸ್ ಫೋಟೋ ತೆಗೆಸಲಾಯಿತು ಎಂದು ಅವರ ವಕೀಲರಾದ ಮೆಲ್ಲಿಸಾ ಆಂಗ್‌ರೇನಿ ಹೇಳಿದ್ದಾರೆ. ಅಂತಹ ತಪಾಸಣೆ ಏನೂ ಅಗತ್ಯವಿರಲಿಲ್ಲ. ವಿನಾ ಕಾರಣ ಲೈಂಗಿಕ ದೌರ್ಜನ್ಯ (Sexual Herrasement) ನಡೆಸಲಾಗಿದೆ ಎಂದು ಆರು ಸ್ಪರ್ಧಿಗಳು ದೂರು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಸಮ್ಮತಿ ಸೆಕ್ಸ್ ನಂತರ ಅತ್ಯಾಚಾರ ಆರೋಪ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ಹೇಳಿಕೆ
ಮಿಸ್ ಯೂನಿವರ್ಸ್ ಆರ್ಗನೈಸೇಷನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರೋಪಗಳ ಬಗ್ಗೆ ಸಂತ್ರಸ್ತೆಯರಿಂದ ಮಾಹಿತಿ ಪಡೆದುಕೊಂಡಿದ್ದದೇವೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ. ಈ ರೀತಿಯ ಲೈಂಗಿಕ ದೌರ್ಜನ್ಯ ಮತ್ತು ಅನುಚಿತತೆಯ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಮಹಿಳೆಯರಿಗೆ ಸುರಕ್ಷಿತ ಸ್ಥಳವನ್ನು ಒದಗಿಸುವುದು ವಿಶ್ವ ಸುಂದರಿ ಸಂಸ್ಥೆಯ ಅತ್ಯಂತ ಆದ್ಯತೆಯಾಗಿದೆ ಮಿಸ್ ಯೂನಿವರ್ಸ್ ಆರ್ಗನೈಸೇಷನ್ ಹೇಳಿದೆ. ಇದೇ ಸ್ಪರ್ಧೆಗೆ ಸಂಬಂಧಿಸಿದಂತೆ ಸ್ಪರ್ಧಿಯಲ್ಲಿ ಒಬ್ಬ ಯುವತಿ, ಸ್ಪರ್ಧೆಯ (Competition) ಹೆಸರಿನಲ್ಲಿ ಅನುಚಿತವಾಗಿ ಪೋಸ್ ನೀಡುವಂತೆ ಕೇಳಲಾಯಿತು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ರಾಯಿಟರ್ಸ್ ಮೀಡಿಯಾ ಸಂಸ್ಥೆ ವರದಿ ಮಾಡಿದೆ. ಮಿಸ್ ಯೂನಿವರ್ಸ್ ಇಂಡೋನೇಷ್ಯಾ ಸ್ಪರ್ಧೆಯನ್ನು ನಡೆಸುತ್ತಿರುವ ಕಂಪನಿ ಪಿಟಿ ಕ್ಯಾಪೆಲ್ಲಾ ಸ್ವಸ್ತಿಕಾ ಕಾರ್ಯಾ ಮತ್ತು ಕಂಪನಿಯ ಸಂಸ್ಥಾಪಕ ಪಾಪಿ ಕ್ಯಾಪೆಲ್ಲಾ ಅವರನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂಪರ್ಕಿಸಲು ರಾಯಿಟರ್ಸ್ ಸಂಸ್ಥೆ ಪ್ರಯತ್ನಿಸಿದೆ ಆದರೆ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಹೇಳಲಾಗಿದೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ರಾಷ್ಟ್ರವಾದ (Muslim country) ಇಂಡೋನೇಷ್ಯಾದಲ್ಲಿನ ಧಾರ್ಮಿಕ ಗುಂಪುಗಳು ಈ ಹಿಂದೆ ಸೌಂದರ್ಯ ಸ್ಪರ್ಧೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಥಾಯ್ ಸೆಲೆಬ್ರಿಟಿ ಮೀಡಿಯಾ ಟೈಕೂನ್ ಮತ್ತು ಟ್ರಾನ್ಸ್ಜೆಂಡರ್ ಹಕ್ಕುಗಳ ವಕೀಲ ಜಕಪಾಂಗ್ ಆನ್ನೆ ಜಕ್ರಜುಟಾಟಿಪ್ ಕಳೆದ ವರ್ಷ 20 ಮಿಲಿಯನ್ ಡಾಲರ್ಗೆ ಮಿಸ್ ಯೂನಿವರ್ಸ್ ಆರ್ಗನೈಸೇಷನ್ ಅನ್ನು ಖರೀದಿಸಿದ್ದರು. ಈ ವರ್ಷದ ಕೊನೆಯಲ್ಲಿ ಎಲ್ ಸಾಲ್ವಡಾರ್‌ನಲ್ಲಿ ನಡೆಯಲಿರುವ ವಾರ್ಷಿಕ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಇಂಡೋನೇಷ್ಯಾದ ಸ್ಪರ್ಧಿಯನ್ನು ಆಯ್ಕೆ ಮಾಡಲು ಜಕಾರ್ತದಲ್ಲಿ ಸ್ಪರ್ಧೆಯನ್ನು ನಡೆಸಲಾಗಿತ್ತು. 1996 ಮತ್ತು 2002 ರ ನಡುವೆ ಡೊನಾಲ್ಡ್ ಟ್ರಂಪ್ ಸಹ-ಮಾಲೀಕತ್ವದ ಮಿಸ್ ಯೂನಿವರ್ಸ್ ಆರ್ಗನೈಸೇಷನ್ ನಡೆಸುತ್ತಿರುವ ಸ್ಪರ್ಧೆಯು 1952 ರಿಂದ ಚಾಲನೆಯಲ್ಲಿದೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ