ಸದ್ಯಕ್ಕೆ ತಮಿಳುನಾಡಿನ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿ ಮುಮದಿನ ಸಿಎಂ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ ನಟ, ರಾಜಕಾರಣಿ ವಿಜಯ್. ಈ ಸಮಯದಲ್ಲಿ ತಮಿಳುನಾಡಿನ ಬೀದಿಬೀದಿಗಳಲ್ಲಿ ವಿಜಯ್ ನಟನೆಯ ಸಿನಿಮಾಗಳ ಪಂಚ್ ಸಂಭಾಷಣೆಗಳು ಮುಗಿಲುಮುಟ್ಟಿವೆ. ಮುಂದಿನ ಬೆಳವಣಿಗೆಗೆ ಕಾಯಲಾಗುತ್ತಿದೆ.

ದಳಪತಿ ವಿಜಯ್ ಪಂಚ್ ಡೈಲಾಗ್‌ಗಳ ಅಬ್ಬರ! 

ತಮಿಳು ಚಿತ್ರರಂಗದ ಮಾಸ್ ಮಹಾರಾಜ, 'ದಳಪತಿ' ವಿಜಯ್ (Thalapthy Vijay) ಎಂದರೆ ಅದು ಕೇವಲ ಒಂದು ಹೆಸರಲ್ಲ, ಅದೊಂದು ಜಾಗತಿಕ ಸಂಭ್ರಮ! ಕಳೆದ ಮೂರು ದಶಕಗಳಿಂದ ತಮ್ಮ ಅದ್ಭುತ ನಟನೆ, ಕಿಕ್ಕೇರಿಸುವ ಡ್ಯಾನ್ಸ್, ಎಮೋಷನಲ್ ಪರ್ಫಾರ್ಮೆನ್ಸ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬೆಂಕಿ ಹಚ್ಚುವಂತಹ 'ಪಂಚ್ ಡೈಲಾಗ್‌'ಗಳ ಮೂಲಕ ವಿಜಯ್ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ.

ವಿಜಯ್ ಅವರ ಪ್ರತಿಯೊಂದು ಸಿನಿಮಾ ಬಿಡುಗಡೆಯೂ ಹಬ್ಬದಂತೆಯೇ ಇರುತ್ತದೆ. ಅವರ ಸಿನಿಮಾದ ಸಂಭಾಷಣೆಗಳು ಕೇವಲ ಚಿತ್ರಮಂದಿರದ ನಾಲ್ಕು ಗೋಡೆಗಳ ನಡುವೆ ಉಳಿಯದೆ, ಜನರ ನಿತ್ಯಜೀವನದ ಸಂಭಾಷಣೆಯ ಭಾಗವಾಗಿಬಿಡುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ಅವರ ಹಳೆಯ ಸಂಭಾಷಣೆಗಳು ವೈರಲ್ ಆಗುತ್ತಲೇ ಇರುತ್ತವೆ. ಅವರ ಡೈಲಾಗ್‌ಗಳಲ್ಲಿರುವ ಸರಳತೆ, ಸ್ಟೈಲ್ ಮತ್ತು ಆತ್ಮವಿಶ್ವಾಸವೇ ಅಭಿಮಾನಿಗಳು ಅವರನ್ನು ಇಷ್ಟು ಹಚ್ಚಿಕೊಳ್ಳಲು ಪ್ರಮುಖ ಕಾರಣ.

ಚಿತ್ರಮಂದಿರದಲ್ಲಿ ಶಿಳ್ಳೆಗಳ ಸುರಿಮಳೆಗೈದ ಐಕಾನಿಕ್ ಲೈನ್‌ಗಳು:

ವಿಜಯ್ ಅವರ ವೃತ್ತಿಜೀವನದಲ್ಲಿ ಅದೆಷ್ಟೋ ಸ್ಮರಣೀಯ ಪಂಚ್ ಡೈಲಾಗ್‌ಗಳಿವೆ. ಉದಾಹರಣೆಗೆ, ಸೂಪರ್ ಹಿಟ್ 'ಪೋಕ್ಕಿರಿ' ಸಿನಿಮಾದಲ್ಲಿ ಬರುವ "ನೀನು ಓದಿದ ಸ್ಕೂಲ್‌ಗೆ ನಾನೇ ಹೆಡ್‌ಮಾಸ್ಟರ್ ಕಣೋ" (Nee padicha schoolla na headmaster da) ಎಂಬ ಸಂಭಾಷಣೆ ಅವರ ಮಾಸ್ ಇಮೇಜ್‌ಗೆ ಹೊಸ ಆಯಾಮ ನೀಡಿತ್ತು. ಅಷ್ಟೇ ಅಲ್ಲ, ಅದೇ ಸಿನಿಮಾದ ಮತ್ತೊಂದು ಎಪಿಕ್ ಡೈಲಾಗ್ "ಒಮ್ಮೆ ನಾನು ನಿರ್ಧಾರ ಮಾಡಿಬಿಟ್ಟರೆ, ನನ್ನ ಮಾತು ನಾನೇ ಕೇಳಲ್ಲ" (Oru vaati mudivu pannitena en pecha nanae kekamaten) ಎಂಬುದು ಇಂದಿಗೂ ಹದಿಹರೆಯದವರ ಫೇವರಿಟ್.

ಇನ್ನು 'ತುಪ್ಪಾಕಿ' ಸಿನಿಮಾದಲ್ಲಿ ವಿಜಯ್ ಅತ್ಯಂತ ಸ್ಟೈಲಿಶ್ ಆಗಿ ಹೇಳುವ "I am waiting" ಎಂಬ ಲೈನ್ ಕಾಲಿವುಡ್ ಇತಿಹಾಸದಲ್ಲಿ ಒಂದು ಟ್ರೆಂಡ್ ಸೆಟ್ ಮಾಡಿತು. ಜೊತೆಗೆ "ಆ ಭಯ ಇರಬೇಕು" (Antha bayam irukanum da) ಎನ್ನುವ ಅವರ ಗಂಭೀರ ಧ್ವನಿಯ ಸಂಭಾಷಣೆ ಶತ್ರುಗಳ ಎದೆ ನಡುಗಿಸುವಂತಿತ್ತು.

ಯುವಜನತೆಗೆ ಸ್ಫೂರ್ತಿ ತುಂಬುವ ಜೀವನದ ಪಾಠಗಳು:

ವಿಜಯ್ ಸಂಭಾಷಣೆಗಳು ಬರಿ ಕಿರುಚಾಟಕ್ಕೆ ಸೀಮಿತವಲ್ಲ, ಅವುಗಳಲ್ಲಿ ಜೀವನಕ್ಕೆ ಬೇಕಾದ ಸ್ಫೂರ್ತಿಯೂ ಇರುತ್ತದೆ. 'ಗಿಲ್ಲಿ' ಸಿನಿಮಾದಲ್ಲಿ "ಒಂದು ಪುಟ್ಟ ಬ್ಲೇಡ್ ಮೇಲೆ ಇಡುವ ನಂಬಿಕೆಯನ್ನು ನಿನ್ನ ಮೇಲೆ ಇಡು, ನೀನೇ ಗೆಲ್ಲುತ್ತೀಯಾ" ಎಂಬ ಮಾತು ಕಷ್ಟದಲ್ಲಿದ್ದ ಅದೆಷ್ಟೋ ಯುವಕರಿಗೆ ಆತ್ಮವಿಶ್ವಾಸ ತುಂಬಿದೆ. ಅದೇ ರೀತಿ 'ತಿರುಮಲೈ' ಸಿನಿಮಾದ "ಜೀವನ ಅನ್ನೋದು ಒಂದು ಚಕ್ರ... ಇಲ್ಲಿ ಸೋತವನು ಗೆಲ್ಲುತ್ತಾನೆ, ಗೆದ್ದವನು ಸೋಲುತ್ತಾನೆ" ಎಂಬ ಫಿಲಾಸಫಿ ಇಂದಿಗೂ ಮೋಟಿವೇಷನಲ್ ವಿಡಿಯೋಗಳಲ್ಲಿ ರಾರಾಜಿಸುತ್ತಿರುತ್ತದೆ.

'ಜನನಾಯಕನ್' ಮೇಲೆ ಬೆಟ್ಟದಷ್ಟು ನಿರೀಕ್ಷೆ:

ಸದ್ಯ ಹೆಚ್‌. ವಿನೋತ್ ನಿರ್ದೇಶನದ ವಿಜಯ್ ಅವರ ಮುಂದಿನ ಚಿತ್ರ 'ಜನನಾಯಕನ್' (Jana Nayagan) ಬಗ್ಗೆ ಕಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಸಿನಿಮಾ ಲೀಕ್ ವದಂತಿಗಳು ಅಥವಾ ಚಿತ್ರದ ವಿಳಂಬ ಏನೇ ಆದರೂ, ದಳಪತಿ ಅಭಿಮಾನಿಗಳ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ವಿಜಯ್ ಅವರ ಪ್ರತಿ ಮಾತಿಗಾಗಿ, ಪ್ರತಿ ನಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ, ದಳಪತಿ ವಿಜಯ್ ಕೇವಲ ಒಬ್ಬ ನಟನಾಗಿ ಉಳಿದಿಲ್ಲ, ತಮ್ಮ ಪವರ್‌ಫುಲ್ ಸಂಭಾಷಣೆಗಳ ಮೂಲಕ ಒಂದು ಸಂಸ್ಕೃತಿಯಾಗಿ ಬೆಳೆದು ನಿಂತಿದ್ದಾರೆ. ಅವರ ಸ್ಟೈಲ್, ಅವರ ಖದರ್ ಮತ್ತು ಆ 'ಪಂಚ್' ಸದಾ ಅಜರಾಮರ! ಸದ್ಯಕ್ಕೆ ತಮಿಳುನಾಡಿನ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿ ಮುಮದಿನ ಸಿಎಂ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ ನಟ, ರಾಜಕಾರಣಿ ವಿಜಯ್. ಈ ಸಮಯದಲ್ಲಿ ತಮಿಳುನಾಡಿನ ಬೀದಿಬೀದಿಗಳಲ್ಲಿ ವಿಜಯ್ ನಟನೆಯ ಸಿನಿಮಾಗಳ ಪಂಚ್ ಸಂಭಾಷಣೆಗಳು ಮುಗಿಲುಮುಟ್ಟಿವೆ.