ನಟ ವಿಜಯ್ ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ 'ಜನ ನಾಯಗನ್' ರಿಲೀಸ್ ಆಗುತ್ತಿದೆ. ಇದು ಬಾಲಯ್ಯ ಅವರ ತೆಲುಗಿನ 'ಭಗವಂತ ಕೇಸರಿ' ಚಿತ್ರದ ರಿಮೇಕ್. ಇದರಲ್ಲಿ ರಾಜಕೀಯ ವಿಷಯ ಕೂಡ ಇದೆ. ವಿಜಯ್ ಕೂಡ ರಾಜಕೀಯಕ್ಕೆ ಬರುತ್ತಿರುವುದರಿಂದ ರಾಜಕೀಯ ಶಕ್ತಿಗಳು ಸಿನಿಮಾ ರಿಲೀಸ್ ಆಗದಂತೆ ತಡೆಯುತ್ತಿವೆಯೇ?
ಜನನಾಯಗನ್ ರಿಲೀಸ್ ಯಾವಾಗ?
ತಮಿಳುನಾಡಿನ ದಳಪತಿ ಖ್ಯಾತಿಯ ನಟ ವಿಜಯ್ (Thalapathy Vijay) ಅಭಿನಯದ 'ಜನ ನಾಯಗನ್' ಚಿತ್ರಕ್ಕೆ (Jana Nayagan) ಕೋರ್ಟಿನಲ್ಲಿ ಬಹಳಷ್ಟು ಹಿನ್ನಡೆ ಆಗುತ್ತಲೇ ಇದೆ. ಜನವರಿ 9ರಂದೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ವಿಷಯದಲ್ಲಿ ಆದ ತೊಂದರೆಯಿಂದಾಗಿ ಸಿನಿಮಾ ಬಿಡುಗಡೆಎಗೆ ವಿಳಂಬ ಆಗುತ್ತಿದೆ. ಈ ಸಿನಿಮಾದ ಕಾನೂನು ಹೋರಾಟ ಇನ್ನೂನಡೆಯುತ್ತಲೇ ಇದೆ.
ಇದೀಗ ಈ 'ಜನ ನಾಯಗನ್' ಚಿತ್ರದ ವಿಳಂಬದ ಕಾರಣಕ್ಕೆ, ಹೊಸದೊಂದು ಚರ್ಚೆ ಶುರುವಾಗಿದೆ. ಈ ಚಿತ್ರದ ವಿಳಂಬವು ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) 'ಟಾಕ್ಸಿಕ್' ಹಾಗೂ 'ಕೆಡಿ' ಸಿನಿಮಾ ಪ್ರಚಾರದ ಮೇಲೆ ನೇರ ಪರಿಣಾಮ ಬೀರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಜೊತೆಗೆ, ಧ್ರುವ ಸರ್ಜಾ (Dhruva Sarja) ನಟನೆಯ 'ಕೆಡಿ' ರಿಲೀಸ್‌ಗೂ ತೊಂದರೆ ತಂದೊಡ್ಡಬಹುದು ಎಂಬ ಆತಂಕ ಮೂಡಿದೆ.
ರಾಜಕೀಯ ವಿಷಯ ಕೂಡ ಇದೆ
ನಟ ವಿಜಯ್ ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ 'ಜನ ನಾಯಗನ್' ರಿಲೀಸ್ ಆಗುತ್ತಿದೆ. ಇದು ಬಾಲಯ್ಯ ಅವರ ತೆಲುಗಿನ 'ಭಗವಂತ ಕೇಸರಿ' ಚಿತ್ರದ ರಿಮೇಕ್. ಇದರಲ್ಲಿ ರಾಜಕೀಯ ವಿಷಯ ಕೂಡ ಇದೆ. ವಿಜಯ್ ಕೂಡ ರಾಜಕೀಯಕ್ಕೆ ಬರುತ್ತಿರುವುದರಿಂದ ರಾಜಕೀಯ ಶಕ್ತಿಗಳು ಸಿನಿಮಾ ರಿಲೀಸ್ ಆಗದಂತೆ ತಡೆಯುತ್ತಿವೆಯೇ ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ಯಶ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಚಿತ್ರಕ್ಕೂ ಜನ ನಾಯಗನ್ ಚಿತ್ರದ ಬಿಡುಗಡೆ ಮುಮದಕ್ಕೆ ಹೋಗಿ ತೊಂದರೆ ಎದುರಾಗುವ ಅಪಾಯ ಎದುರಾಗಿದೆ.
ಕನ್ನಡದ ಕೆವಿಎನ್ ಸಂಸ್ಥೆ
'ಜನ ನಾಯಗನ್' ಸಿನಿಮಾ ನಿರ್ಮಾಣ ಮಾಡಿದ್ದು ಕನ್ನಡದ ಕೆವಿಎನ್ ಸಂಸ್ಥೆ. ಯಶ್ ನಟನೆಯ 'ಟಾಕ್ಸಿಕ್' ಹಾಗೂ ಧ್ರುವ ಸರ್ಜಾ ವರ 'ಕೆಡಿ' ಚಿತ್ರವನ್ನು ಕೂಡ ಇದೇ ಸಂಸ್ಥೆ ನಿರ್ಮಾಣ ಮಾಡಿದೆ. ಜನವರಿ 9ಕ್ಕೆ 'ಜನ ನಾಯಗನ್', 'ಮಾರ್ಚ್ 19'ಕ್ಕೆ 'ಟಾಕ್ಸಿಕ್' ಹಾಗೂ ಏಪ್ರಿಲ್ ಅಂತ್ಯಕ್ಕೆ 'ಕೆಡಿ' ರಿಲೀಸ್ ಮಾಡುವ ಪ್ಲಾನ್ ಸಂಸ್ಥೆಯದ್ದಾಗಿತ್ತು. ಆದರೆ, ಈಗ ಜನ ನಾಯಗನ್ ಸಿನಿಮಾ ಪ್ಲಾನ್ ಅಲ್ಲೋಲಕಲ್ಲೋಲ ಆಗುತ್ತಿದೆ.
ಜನ ನಾಯಗನ್ ಸಿನಿಮಾ ರಿಲೀಸ್ ಬಳಿಕ ಟಾಕ್ಸಿಕ್ ಹಾಗೂ ಕೆಡಿ ಚಿತ್ರಗಳ ಪ್ರಚಾರ ಕಾರ್ಯ ಆರಂಭಿಸುವ ಪ್ಲಾನ್ ಕೆವಿಎನ್ ಸಂಸ್ಥೆ ಮಾಡಿತ್ತು ಎನ್ನಲಾಗಿದೆ. ಆದರೆ, 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೆಮುಂದೆ ಹೋಗುತ್ತಿರುವ ಮೂಲಕ 'ಟಾಕ್ಸಿಕ್' ಚಿತ್ರದ ಪ್ರಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಗಬಹುದು. ಟಾಕ್ಸಿಕ್ ಬಳಿಕ 'ಕೆಡಿ' ಸಿನಿಮಾದ ಮೇಲೂ ಇದು ಪರಿಣಾಮ ಬೀರಲಿದೆ. 'ಜನ ನಾಯಗನ್' ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆ. ಅದರ ಆಧಾರದ ಮೇಲೆ ಮುಂದಿನ ಸಿನಿಮಾಗಳ ಬಿಡುಗಡೆಯ ಪ್ಲಾನ್‌ಗಳು ನಿರ್ಧಾರ ಆಗಲಿವೆ. ಒಟ್ಟಿನಲ್ಲಿ, ಜನ ನಾಯಗನ್ ಚಿತ್ರವು ಟಾಕ್ಸಿಕ್ ಹಾಗೂ ಕೆಡಿ ಚಿತ್ರಗಳ ಪ್ರಚಾರಕ್ಕೆ ಸಮಸ್ಯೆ ತಂದಿಡುವುದೇ?


