Asianet Suvarna News Asianet Suvarna News

ಆಫ್ಘನ್ ಪ್ರಜೆ ಅಮಿತಾಭ್​ ಪುರುಷತ್ವದ ಸಂಕೇತ, ವಿರಾಟ್​ ಕೊಹ್ಲಿ ಸಲಿಂಗಕಾಮಿ ಎಂದ ತಾಲಿಬಾನ್​!

ನಟ ಅಮಿತಾಭ್​ ಬಚ್ಚನ್​ ಅವರನ್ನು ಹಾಡಿ ಹೊಗಳಿರುವ ತಾಲಿಬಾನಿಗಳು ಅವರು ಪುರುಷತ್ವದ ವ್ಯಕ್ತಿ ಎಂದಿದ್ದು, ವಿರಾಟ್​ ಕೊಹ್ಲಿ ಸಲಿಂಗಕಾಮಿ ಎಂದಿದ್ದಾರೆ. 
 

Talibanies says Amitabh Bachchan is masculine individual who is well liked in Afghanistan suc
Author
First Published Oct 7, 2023, 4:26 PM IST

ಬಿಗ್​ ಬಿ ಎಂದೇ ಖ್ಯಾತಿ ಪಡೆದಿರುವ ಅಮಿತಾಭ್​ ಬಚ್ಚನ್​ ಅವರನ್ನು ಇಷ್ಟಪಡದವರೇ ಇಲ್ಲವೆನ್ನಬಹುದೇನೋ. ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಇವರು ಹೆಸರು ಮಾಡಿದ್ದಾರೆ. ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ ಎನ್ನುವ ಗಾದೆ ಮಾತನ್ನು ಇದಾಗಲೇ ಹಲವಾರು ಮಂದಿ ಸಾಬೀತು ಮಾಡಿದ್ದಾರೆ. ಇನ್ನು ನಟನೆಯ ವಿಷಯಕ್ಕೆ ಬಂದರೆ ಕೆಲವು ಹಿರಿಯ ನಟರಿಗೆ ಸರಿಸಾಟಿ ಯುವಕರೂ ಇಲ್ಲವೇನೋ ಎನ್ನಿಸುತ್ತದೆ. ಅಂಥವರಲ್ಲಿ ಒಬ್ಬರು ನಟ ಅಮಿತಾಭ್ ಬಚ್ಚನ್ (Amitabh Bachchan). ಅಮಿತಾಭ್​ ಅವರಿಗೆ ಈಗ 80 ವರ್ಷ. ಈ ವಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ, ಹಲವು ಅನಾರೋಗ್ಯ ಸಮಸ್ಯೆಗಳಿದ್ದರೂ ಅದನ್ನು ಮೆಟ್ಟಿ ನಿಂತಿದ್ದಾರೆ. ಕೆಲವು ಕಡೆಗಳಲ್ಲಿ ಹಿನ್ನೆಗೆ ದನಿಯನ್ನೂ ನೀಡುತ್ತಾರೆ. ಈ ವಯಸ್ಸಿನಲ್ಲಿಯೂ ಬಿಡುವಿಲ್ಲದೇ ಅವಿರತವಾಗಿ ದುಡಿಯುತ್ತಿದ್ದಾರೆ ಅಮಿತಾಭ್​. ಈಗ ಅವರ ಜನಪ್ರಿಯ ಕಾರ್ಯಕ್ರಮ  ‘ಕೌನ್ ಬನೇಗಾ ಕರೋಡ್​ಪತಿ’ (Kaun Banega Crorepati) ಮತ್ತೊಮ್ಮೆ ತೆರೆ ಮೇಲೆ ಬಂದಿದೆ.  ಕಳೆದ ಒಂದೂವರೆ ದಶಕಗಳಿಂದ ಈ ಷೋ ನಡೆಸಿಕೊಡುತ್ತಿದ್ದಾರೆ ಅಮಿತಾಭ್​.

ಇದೀಗ ತಾಲಿಬಾನಿಗಳೂ ಅಮಿತಾಭ್​ ಬಚ್ಚನ್​ ಅವರನ್ನು ಪ್ರಶಂಸಿಸಿದೆ. ಈ ಕುರಿತು ತಾಲಿಬಾನ್​ ಪಬ್ಲಿಕ್​ ರಿಲೇಷನ್ಸ್​ ಡಿಪಾರ್ಟ್​ಮೆಂಟ್​ (Taliban Public Relations Department) ಮಾಡಿರುವ ಟ್ವೀಟ್​ ಒಂದು ಸಕತ್​ ಸದ್ದು ಮಾಡುತ್ತಿದೆ.  ಅಮಿತಾಭ್ ಬಚ್ಚನ್ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ  ಅಮಿತಾಭ್ ಬಗ್ಗೆ ಬರೆಯಲಾಗಿದೆ. ಅಮಿತಾಭ್ ಬಚ್ಚನ್ ಒಬ್ಬ ಭಾರತೀಯ ನಟ ಮತ್ತು ಅಫ್ಘಾನಿಸ್ತಾನದಲ್ಲಿ ಚೆನ್ನಾಗಿ ಇಷ್ಟಪಟ್ಟಿರುವ ವ್ಯಕ್ತಿ, ಇವರು ಪುರುಷತ್ವದ ಸಂಕೇತ. ಕೆಲವರಿಗೆ ಮಾತ್ರ ತಿಳಿದಿದೆ. ಇವರು  ಆಫ್ಘನ್ ಗೌರವಾನ್ವಿತ ಪ್ರಜೆ ಎಂದು.  1980 ರ ದಶಕದಲ್ಲಿ ನಮ್ಮ ಭವ್ಯವಾದ ರಾಷ್ಟ್ರಕ್ಕೆ ಅವರು ಭೇಟಿ ನೀಡಿದಾಗ, ಅಂದಿನ ಅಧ್ಯಕ್ಷ ನಜೀಬುಲ್ಲಾ ಅವರಿಗೆ ಈ ಗೌರವಾನ್ವಿತ ಗೌರವವನ್ನು ನೀಡಿದರು ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ. 

ಸ್ಮಾರ್ಟ್​ಫೋನ್​ ಕುರಿತು ಸುಳ್ಳು ಹೇಳಿ ಪೇಚಿಗೆ ಸಿಲುಕಿದ ನಟ ಅಮಿತಾಭ್: 10 ಲಕ್ಷ ದಂಡಕ್ಕೆ ಆಗ್ರಹ

ಎಲ್ಲರಿಗೂ ತಿಳಿದಿರುವಂತೆ ಸದ್ಯ ಅಪ್ಘಾನಿಸ್ತಾನ ತಾಲಿಬಾನಿಗಳ ಕೈಯಲ್ಲಿದೆ. ಅಲ್ಲಿಗೆ ಹೋಗಲು ಬೇರೆ ದೇಶದವರು ಹೆದರುವ ಕಾಲವಿದೆ. ಕೈಯಲ್ಲಿ ಸದಾ ಬಂದೂಕು ಹಿಡಿದುಕೊಂಡು ಅವರು ಮಾಡಿದ್ದೇ ಕಾನೂನು. ಯಾರನ್ನು ಯಾವಾಗ ಬೇಕಾದರೂ ಉಡೀಸ್​ ಮಾಡಬಲ್ಲರು. ಯಾರೂ ಯಾರನ್ನೂ ಕೇಳುವಂತಿಲ್ಲ. ಇನ್ನು ಹೆಂಗಸರು, ಹುಡುಗಿಯರ ಪಾಡಂತೂ ಕೇಳುವುದೇ ಬೇಡ. ನಾಲ್ಕು ಗೋಡೆ ಬಿಟ್ಟು ಹೊರಗಡೆ ಬರುವ ಸ್ವಾತಂತ್ರ್ಯ ಎಂದೋ ಅವರಿಗೆ ಹೋಗಿಬಿಟ್ಟಿದೆ. ಇಂಥ ತಾಲಿಬಾನಿಗಳು ಇದೀಗ ಅಮಿತಾಭ್​ ಬಚ್ಚನ್​ ಅವರನ್ನು ಈ ಪರಿ ಹೊಗಳಿರುವುದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಅಮಿತಾಭ್​ ಬಚ್ಚನ್​ ಅವರು ಅಪ್ಘಾನ್​ಗೆ ಭೇಟಿ ನೀಡಿದ್ದು,  ‘ಖುದಾ ಗವಾ’ ಚಿತ್ರದ ಶೂಟಿಂಗ್​ಗಾಗಿ. ಈ ಸಿನಿಮಾ 1992 ರಿಲೀಸ್ ಆಗಿದೆ. ‘ಕಾಬುಲ್ ಎಕ್ಸ್​ಪ್ರೆಸ್’ ಸೇರಿ ಬಾಲಿವುಡ್​ನ ಹಲವು ಚಿತ್ರಗಳು ಇಲ್ಲಿ ಶೂಟ್ ಆಗಿವೆ.

ಇದೇ ಟ್ವೀಟ್​ನಲ್ಲಿ ತಾಲಿಬಾನ್​ ಪಬ್ಲಿಕ್​ ರಿಲೇಷನ್ಸ್​ ಡಿಪಾರ್ಟ್​ಮೆಂಟ್​ ವಿರಾಟ್​ ಕೊಹ್ಲಿಯವರನ್ನು ಸಲಿಂಗಕಾಮಿ ಎಂದೂ ಹೇಳಿದೆ. ಅದಕ್ಕೆ ಕಾರಣವೇಂದರೆ, ಅಮಿತಾಭ್​ ಬಚ್ಚನ್​ ಅವರ ಟ್ವೀಟ್​ಗೆ ಒಬ್ಬ ವ್ಯಕ್ತಿ ವಿರಾಟ್​ ಅವರ ಫೋಟೋ ಶೇರ್​ ಮಾಡಿಕೊಂಡು  ‘ನಮ್ಮ ಭಾಯಿಜಾನ್ ತಾಲಿಬಾನ್ ಸೇರಬಹುದೇ’ ಎಂದು ಕೇಳಿದ್ದಾರೆ.  ಇದಕ್ಕೆ ಉತ್ತರಿಸಿರೋ ಪಿಆರ್ ತಂಡ, ‘ಇಲ್ಲ ಇಲ್ಲ. ಅವರು ಸಲಿಂಗಕಾಮಿ. ಅವರ ಬಾಡಿ ಲಾಂಗ್ವೇಜ್ ನೋಡಿ’ ಎಂದು ಪ್ರತಿಕ್ರಿಯೆ ನೀಡಿದ್ದು, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. 

ಐಶ್ವರ್ಯ ಕಂಡ್ರೆ ಅಮಿತಾಭ್​ ಪುತ್ರಿ ಶ್ವೇತಾಗೆ ಹೊಟ್ಟೆ ಉರಿ: ಮೊಮ್ಮಗಳು ನವ್ಯಾ ನವೇಲಿನೂ ಇದೇ ಹಾದಿ ಹಿಡಿದ್ರಾ?
 

Follow Us:
Download App:
  • android
  • ios