ರಾತ್ರೋರಾತ್ರಿ ದಳಪತಿ ವಿಜಯ್​ ರಹಸ್ಯ ಮೀಟಿಂಗ್​: ರಾಜಕೀಯ ಎಂಟ್ರಿ ಫಿಕ್ಸ್? ನಟನೆಗೆ ಬ್ರೇಕ್​​?

ಕಾಲಿವುಡ್​ ನಟ ದಳಪತಿ ವಿಜಯ್​ ರಾಜಕೀಯ ಎಂಟ್ರಿ ಬಹುತೇಕ ಫಿಕ್ಸ್​ ಆಗಿದ್ದು, ಈ ಕುರಿತು ರಹಸ್ಯ ಸಭೆ ನಡೆದಿದೆ ಎನ್ನಲಾಗಿದೆ. ಏನಿದು ವಿಷಯ?
 

Thalapathy Vijay discusses political entry with Vijay Makkal Iyakkam members suc

2024ರ ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳೂ ಭರದ ಸಿದ್ಧತೆ ನಡೆಸುತ್ತಿವೆ. ಅದರಲ್ಲಿಯೂ ತಮಿಳುನಾಡಿನ (Tamil Nadu) ರಾಜಕಾರಣ ಸದ್ಯ ಹಾಟ್​ ವಿಷಯವಾಗಿದೆ. ತಮಿಳುನಾಡಿನ ರಾಮನಾಥಪುರಂನಿಂದ ಪ್ರಧಾನಿ ನರೇಂದ್ರ ಮೋದಿಯವರು ಸ್ಪರ್ಧಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೂ ಹರಿದಾಡುತ್ತಿದೆ.  ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇದೀಗ ದಳಪತಿ ವಿಜಯ್​ ಅವರ ಸರದಿ! ಹೌದು! ಕಾಲಿವುಡ್​  ನಟ ದಳಪತಿ ವಿಜಯ್ (Talpati Vijay) ಕೂಡ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಕೆಲ ತಿಂಗಳಿನಿಂದ ಹರಿದಾಡುತ್ತಿರುವ ಸುದ್ದಿ ಬಹುತೇಕ ಖಾತ್ರಿಯಾಗಿದೆ. ಮುಂಬರುವ ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ದಳಪತಿ ವಿಜಯ್​ ಅವರು ತಮ್ಮ ಅಭಿಮಾನಿಗಳೊಟ್ಟಿಗೆ ಚರ್ಚೆ ಮಾಡಿರುವುದಾಗಿ ತಿಳಿದುಬಂದಿದೆ. ರಾಜಕೀಯ ಪ್ರವೇಶದ ವದಂತಿಯ ನಡುವೆಯೇ ಅಭಿಮಾನಿಗಳ ಸಂಘದ ಮುಂಚೂಣಿ ಸದಸ್ಯರ ಜತೆ ತಮ್ಮ ನಿವಾಸದಲ್ಲಿ ವಿಜಯ್​ ರಹಸ್ಯವಾಗಿ ಸಭೆ ನಡೆಸಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಮೂಲಕ ಇಷ್ಟು ದಿನ ಕೇವಲ ಗಾಳಿಸುದ್ದಿಯಾಗಿದ್ದ ವಿಜಯ್​ ಅವರ ರಾಜಕೀಯ ಎಂಟ್ರಿಗೆ ಇದೀಗ ಸ್ಪಷ್ಟರೂಪವೊಂದು ದೊರೆತಿದೆ. 

 ವಿಜಯ್​ ಅಭಿಮಾನಿ ಸಂಘ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಂನಿಂದ ಕಳೆದ ಬಾರಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ಯಾವುದೇ ಪ್ರಚಾರವಿಲ್ಲದೆ, 115 ಸ್ಥಾನಗಳನ್ನು ಗೆದ್ದಿತು. ಇದೇ ಹುಮ್ಮಸ್ಸಿನಲ್ಲಿರುವ ವಿಜಯ್​, ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ವಿಜಯ್, ತಮ್ಮ ಅಭಿಮಾನಿ ಬಳಗವಾದ ವಿಜಯ್ ಮಕ್ಕಳ್ ಇಯಕ್ಕಂ (Vijay Makkal iyakkam) ಸದಸ್ಯರೊಟ್ಟಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಖುದ್ದು  ಸಭೆಯಲ್ಲಿ ಪಾಲ್ಗೊಂಡಿದ್ದ  ವಿಜಯ್​ ಅವರ ಫ್ಯಾನ್ಸ್​  ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಸಭೆಯಲ್ಲಿ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳ ಪ್ರಮುಖ ವಿಜಯ್ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ  ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಭೆಯಲ್ಲಿ ವಿಜಯ್ ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಸದಸ್ಯರೊಟ್ಟಿಗೆ ಮಾತನಾಡಿ, ಕಾರ್ಯಸೂಚಿಯನ್ನು ತಿಳಿಸಿದ್ದಾರೆ ಎನ್ನಲಾಗಿದೆ. ರಾಜಕೀಯ ಪ್ರವೇಶದ ಬಗ್ಗೆ ವಿಜಯ್ ಅವರು ರಜನೀಕಾಂತ್​ ಜೊತೆಗೂ ಚರ್ಚೆ ನಡೆಸಿದ್ದು ರಜನೀಕಾಂತ್, ಅಜಿತ್ ಹಾಗೂ ಇನ್ನಿತರೆ ಕೆಲವು ನಾಯಕ ನಟರು ವಿಜಯ್​ರ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವುದಾಗಿ ತಿಳಿದುಬಂದಿದೆ.

ಪ್ರಧಾನಿಯಾಗಲು ರಾಹುಲ್​ ಗಾಂಧಿ ಏನ್​ ಮಾಡ್ಬೇಕು? ರಾಖಿ ಸಾವಂತ್​ ಕೊಟ್ಟ ಟಿಪ್ಸ್ ಇದು 


 ಸದ್ಯ ವಿಜಯ್ ಪ್ರಸ್ತುತ ಲಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿವೆ. ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿ ಸಂಜಯ್ ದತ್ ಸಹ ನಟಿಸಿದ್ದಾರೆ. ಈ ಸಿನಿಮಾದ ಬಳಿಕ ಇನ್ನೊಂದು ಸಿನಿಮಾದಲ್ಲಿ ಮಾತ್ರವೇ ವಿಜಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದರ ಬಳಿಕ ವಿಜಯ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ. ವೆಂಕಟ್​ಪ್ರಭು (Venkat Prabhu) ನಿರ್ದೇಶನದ ಸಿನಿಮಾ ಬಳಿಕ ವಿಜಯ್​, ಬ್ರೇಕ್​ 3 ವರ್ಷಗಳ ಕಾಲ ಸಿನಿಮಾಗಳಿಂದ ಬ್ರೇಕ್​ ಪಡೆದುಕೊಳ್ಳಲಿದ್ದಾರೆ. ಮುಂದಿನ ವರ್ಷ ಅಂದರೆ, 2024ರ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡಲು ವೆಂಕಟ್​ ಪ್ರಭು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಆ ಬಳಿಕ ವಿಜಯ್​ ಅವರು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

 ವಿಜಯ್​ ರಾಜಕೀಯ ಪ್ರವೇಶ ಮಾಡಬೇಕು ಎಂದು ವಿಜಯ್​ರ ಅಭಿಮಾನಿಗಳು ಹಲವು ವರ್ಷಗಳಿಂದಲೂ ಕೇಳುತ್ತಲೇ ಇದ್ದರು ಆದರೆ ಈಗ ವಿಜಯ್ ಮನಸ್ಸು ಮಾಡಿದ್ದಾರೆ. ವಿಜಯ್​ರ ತಂದೆ ಈ ಹಿಂದೆ ವಿಜಯ್​ರ ಹೆಸರಿನಲ್ಲಿ ರಾಜಕೀಯ ಪಕ್ಷದ ನೊಂದಣಿ ಮಾಡಿಸಿದ್ದರು. ಆದರೆ ತಮಗೂ ಆ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲವೆಂದು ವಿಜಯ್ ಹೇಳಿದ್ದರು. ಈಗ ಹೊಸ ಪಕ್ಷದ ಮೂಲಕ ರಾಜಕೀಯ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ ವಿಜಯ್. ವಿಜಯ್​ ಅವರು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲಿದ್ದಾರೆ ಎಂಬ ವದಂತಿಯೂ ಇದೆ. ಆದರೆ  ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್​ ಅವರ ವಿಜಯ್ ಮಕ್ಕಳ್ ಇಯಕ್ಕಂ (Vijay Makkal iyakkam) ಸಂಘಟನೆಯಾಗಲಿ ಅಥವಾ ವಿಜಯ್​ ಆಗಲಿ ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ. ಒಂದು ವೇಳೆ ವಿಜಯ್​ ರಾಜಕೀಯ ಪ್ರವೇಶಿಸಿ, 2026ರ ವಿಧಾನಸಭಾ ಚುನಾವಣೆಯಲ್ಲಿ ಚರಿತ್ರೆ ಸೃಷ್ಟಿ ಮಾಡುತ್ತಾರಾ ಎಂಬ ಕುತೂಹಲ ಹಾಗೇ ಇದೆ. 

ಕರೀನಾಗೆ ಕಿತ್ತಾಡಿದ್ದ ಫರ್ದೀನ್​ ಖಾನ್​, ಶಾಹಿದ್​ ಕಪೂರ್​: 20 ವರ್ಷವಾದ್ರೂ ಕರಗದ ಸಿಟ್ಟು!

Latest Videos
Follow Us:
Download App:
  • android
  • ios