ಕರೀನಾಗೆ ಕಿತ್ತಾಡಿದ್ದ ಫರ್ದೀನ್ ಖಾನ್, ಶಾಹಿದ್ ಕಪೂರ್: 20 ವರ್ಷವಾದ್ರೂ ಕರಗದ ಸಿಟ್ಟು!
ಕರೀನಾ ಕಪೂರ್ ಸಲುವಾಗಿ ಶಾಹಿದ್ ಕಪೂರ್ ಮತ್ತು ಫರ್ದಿನ್ ಖಾನ್ ಇಬ್ಬರೂ ಜಗಳವಾಡಿಕೊಂಡಿದ್ದು, ಇದುವರೆಗೂ ಇಬ್ಬರೂ ಮಾತನಾಡುತ್ತಿಲ್ಲ.
ನಟಿ ಕರೀನಾ ಕಪೂರ್, ನಟಿ ಸೈಫ್ ಅಲಿ ಖಾನ್ (Saif Ali Khan) ಅವರ ಎರಡನೆಯ ಪತ್ನಿಯಾಗಿ 11 ವರ್ಷಗಳಾಗಿವೆ. ಈಗ ಇಬ್ಬರು ಮಕ್ಕಳನ್ನು ಹೊಂದಿರುವ ನಟಿ ಕರೀನಾ ಸೈಫ್ ಹಾಗೂ ಮಕ್ಕಾಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಜೊತೆ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಅದೇ ಇನ್ನೊಂದೆಡೆ, ನಟ ಶಾಹಿದ್ ಕಪೂರ್, 2015ರಲ್ಲಿ ಮೀರಾ ರಜಪೂತ್ ಅವರನ್ನು ಮದುವೆಯಾಗಿ, ಮಿಶಾ ಕಪೂರ್ ಮತ್ತು ಜೈನ್ ಕಪೂರ್ ಅವರೊಂದಿಗೆ ಸುಖವಾಗಿದ್ದಾರೆ. ಆದರೂ ಮೊದಲ ಪ್ರೇಮವನ್ನು ಅಷ್ಟು ಸುಲಭದಲ್ಲಿ ಮರೆಯಲಾಗದು ಎನ್ನುವ ಮಾತಿನಂತೆ ಆಗಿದೆ ಶಾಹಿದ್ ಕಪೂರ್ ಜೀವನ. ಶಾಹಿದ್ ಮತ್ತು ಕರೀನಾ ಅವರ ಪ್ರೇಮಕಥೆ ಬಿ-ಟೌನ್ನಲ್ಲಿ ಒಂದು ಕಾಲದಲ್ಲಿ ಬಹಳ ಸದ್ದು ಮಾಡಿತ್ತು. ಈ ಲವ್ ಬರ್ಡ್ಸ್ ಗುಟ್ಟುಗುಟ್ಟಾಗಿ ನಡೆಸುತ್ತಿದ್ದ ಕಾರ್ಯಗಳು ಓಪನ್ ಸೀಕ್ರೆಟ್ ಆಗಿದ್ವು. ಸಿನಿಮಾ ಸೆಟ್ನಲ್ಲಿ ಕಿಸ್ ಕೊಟ್ಟು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದದ್ದೂ ಇದೆ.
ಇದೀಗ ಕರೀನಾ ಮತ್ತು ಶಾಹಿದ್ ಕಪೂರ್ (Shahid Kapoor) ಇಬ್ಬರೂ ಬೇರೆ ಬೇರೆಯವರಿಗೆ ಮದುವೆಯಾಗಿ ಸುಖವಾಗಿದ್ದರೂ, ತಮ್ಮ ಮೊದಲ ಪ್ರೀತಿ ಕರೀನಾ ಕಪೂರ್ ಅವರ ಮೇಲೆ ಶಾಹಿದ್ಗೆ ಇನ್ನೂ ಒಲವು ಇರುವಂತೆ ಕಾಣುತ್ತಿದೆ. ಇದಕ್ಕೆ ಕಾರಣ, 20 ವರ್ಷಗಳ ಹಿಂದೆ ನಡೆದಿರುವ ಘಟನೆ ಹಾಗೂ 20 ವರ್ಷ ಆದ ಮೇಲೂ ಅದನ್ನು ಶಾಹಿದ್ ಅವರು ಇನ್ನೂ ಮುಂದುವರೆಸಿಕೊಂಡು ಬಂದಿರುವುದು! ಹೌದು. ಇದು 2004 ರ ಕಥೆ. ಫಿದಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ಶಾಹಿದ್ ಕಪೂರ್ ಮತ್ತು ಫರ್ದೀನ್ ಖಾನ್ (Fardin Khan) ನಟಿಸಿದ್ದಾರೆ. ನಾಯಕಿಯಾಗಿದ್ದವರು ಕರೀನಾ ಕಪೂರ್. ಅದಾಗಲೇ ಶಾಹಿದ್ ಮತ್ತು ಕರೀನಾ ಡೇಟಿಂಗ್ ನಡೆಸಲು ಶುರು ಮಾಡಿದ್ದರು. ಇದು ಜಗಜ್ಜಾಹೀರ ಕೂಡ ಆಗಿತ್ತು.
ನೈಟ್ ಕ್ಲಬ್ನಲ್ಲಿ ಶಾಹಿದ್ ಕಪೂರ್- ಕರೀನಾ : ಎಂಎಂಎಸ್ ಲೀಕ್ ಆಗಿದ್ದಕ್ಕೆ ನಟ ಹೇಳಿದ್ದಿಷ್ಟು!
ಇದರ ಹೊರತಾಗಿಯೂ ರಿಯಲ್ ಲೈಫೇ ಬೇರೆ, ರೀಲ್ ಲೈಫೇ ಬೇರೆ. ಸಿನಿಮಾದ ದೃಶ್ಯಕ್ಕೆ ಬರುವಾಗ ಅಲ್ಲಿ ಯಾರು ಯಾರ ಜೊತೆಗೆ ಬೇಕಾದರೂ ರೊಮ್ಯಾನ್ಸ್ (Romance) ಮಾಡಬೇಕು, ಹಸಿಬಿಸಿ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳಬೇಕಲ್ಲ? ಅದೇ ರೀತಿ ಕರೀನಾ ಕಪೂರ್ ಫರ್ದೀನ್ ಖಾನ್ ಜೊತೆಗೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ತಾನು ಪ್ರೀತಿಸುತ್ತಿದ್ದ ಹುಡುಗಿ ಕರೀನಾ ಬೇರೊಬ್ಬನ ಜೊತೆ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದನ್ನು ಶಾಹಿದ್ ಕಪೂರ್ ಸಹಿಸಲಿಲ್ಲ. ಆದರೆ ಅವರಿಗೆ ಕೋಪ ಬಂದದ್ದು ಕರೀನಾ ಮೇಲಲ್ಲ. ಬದಲಿಗೆ ಫರ್ದೀನ್ ಖಾನ್ ಮೇಲೆ. ತನ್ನ ಹುಡುಗಿಯಿಂದ ಫರ್ದಿನ್ ಅವರು ಚುಂಬಿಸುತ್ತಿರುವುದನ್ನು ಶಾಹಿದ್ ಸಹಿಸಲಿಲ್ಲ.
ಇದು ಸೆಟ್‌ಗಳಲ್ಲಿ ಕಪೂರ್ ಮತ್ತು ಖಾನ್ ನಡುವಿನ ಭಾರೀ ಜಗಳಕ್ಕೆ ಕಾರಣವಾಗಿತ್ತು. ಅಲ್ಲಿದ್ದವರೆಲ್ಲಾ ಸಾಕಷ್ಟು ಮನವೊಲಿಕೆ ಮಾಡಿದ ನಂತರವೇ ಇಬ್ಬರ ಜಗಳ ಸಹಜ ಸ್ಥಿತಿಗೆ ಬಂದಿದ್ದಂತೆ. ಆಗ ಸ್ಥಿತಿ ಸಹಜವಾಗಿರಬಹುದು. ಆದರೆ ಘಟನೆ ನಡೆದು 20 ವರ್ಷಗಳಾದರೂ ಶಾಹಿದ್ ಕಪೂರ್ ಇದುವರೆಗೆ ಫರ್ದಿನ್ ಖಾನ್ ಅವರ ಜೊತೆ ಮಾತನಾಡುತ್ತಿಲ್ಲ. ಇದಕ್ಕೂ ಮುನ್ನ ಕರೀನಾ ಮತ್ತು ಶಾಹಿದ್ ಅವರು ಮುಂಬೈನ ನೈಟ್‌ಕ್ಲಬ್‌ನಲ್ಲಿ ಸುದೀರ್ಘ ಕಿಸ್ಸಿಂಗ್ನಲ್ಲಿ ತೊಡಗಿದ್ದ ಫೋಟೋ ಒಂದನ್ನು ಯಾರೋ ಕ್ಲಿಕ್ (click) ಮಾಡಿ ಮರುದಿನ ಪತ್ರಿಕೆಗೆ ಕೊಟ್ಟುಬಿಟ್ಟಿದ್ದರು. ಇದರಿಂದ ಇವರಿಬ್ಬರ ಪ್ರೇಮ್ ಕಹಾನಿ ಜಗಜ್ಜಾಹೀರವಾಗಿತ್ತು. ಇದಾದ ಬಳಿಕ, ಫರ್ದಿನ್ ಖಾನ್ ಅವರ ಘಟನೆ ನಡೆದು, ತಮ್ಮ ಪ್ರೀತಿಯ ಕುರಿತು ಇನ್ನಷ್ಟು ಸಾಬೀತು ಮಾಡಿದ್ದರು ಶಾಹಿದ್.
ತಲೆ ಮೇಲೆ ಐದು ಮೊಟ್ಟೆ ಒಡ್ಕೊಂಡ ರಾಖಿ ಸಾವಂತ್: ಅಷ್ಟಕ್ಕೂ ಫಕ್ಕಡ್ ಬಾಬಾ ಹೇಳಿದ ಗುಟ್ಟೇನು?