ಬ್ಯಾಕ್ ಟು ಬ್ಯಾಕ್ 7 ಬ್ಲಾಕ್‌ಬಸ್ಟರ್ ಸಿನ್ಮಾ ಮಾಡಿ ಬರೋಬ್ಬರಿ 2100 ಕೋಟಿ ಗಳಿಸಿದ ನಟ!
ಶಾರೂಕ್ ಖಾನ್, ಸಲ್ಮಾನ್ ಖಾನ್‌ನಿಂದ, ಅಮೀರ್ ಖಾನ್ ಮೊದಲಾದ ಸೂಪರ್‌ಸ್ಟಾರ್‌ಗಳನ್ನು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಹೀರೋಸ್ ಎಂದು ಕರೆಯುತ್ತಾರೆ. ಆದರೆ ಸೌತ್‌ನ ಈ ಸ್ಟಾರ್ ಬ್ಯಾಕ್ ಟು ಬ್ಯಾಕ್ ಏಳು ಹಿಟ್ ಸಿನಿಮಾಗಳನ್ನು ನೀಡಿ, ಬರೋಬ್ಬರಿ 2100 ಕೋಟಿ ಗಳಿಸಿದ್ದಾರೆ ಅನ್ನೋದು ನಿಮ್ಗೊತ್ತಾ?
ಶಾರೂಕ್ ಖಾನ್, ಸಲ್ಮಾನ್ ಖಾನ್‌ನಿಂದ, ಅಮೀರ್ ಖಾನ್ ಮೊದಲಾದ ಸೂಪರ್‌ಸ್ಟಾರ್‌ಗಳನ್ನು ಬಾಕ್ಸ್ ಆಫೀಸ್ ಹೀರೋಸ್ ಎಂದು ಕರೆಯುತ್ತಾರೆ. ಈ ನಟರು ಅಭಿನಯಿಸುವ ಹೆಚ್ಚಿನ ಸಿನಿಮಾಗಳು 400-500 ಕೋಟಿ ರೂ. ಗಳಿಸುತ್ತವೆ. ಈ ವರ್ಷ ಬಿಡುಗಡೆಯಾದ ಶಾರೂಕ್ ಖಾನ್ ಅವರ ಎರಡು ಚಿತ್ರಗಳು 'ಪಠಾನ್' ಮತ್ತು 'ಜವಾನ್', ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಮೊತ್ತವನ್ನು ಗಳಿಸಿತು. ಈಗ 'ಡುಂಕಿ' ಕೂಡಾ 2023ರ ಮೂರನೇ ಸೂಪರ್‌ಹಿಟ್ ಸಿನಿಮಾ ಆಗುವ ಹಾದಿಯಲ್ಲಿದೆ. ಆದರೆ, ಸಲ್ಮಾನ್ ಖಾನ್ ಅವರ ಕಳೆದ ಕೆಲವು ಚಿತ್ರಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಆಕರ್ಷಿಸುವಲ್ಲಿ ವಿಫಲವಾಗಿದೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಅಥವಾ 'ಟೈಗರ್ 3' ಮೊದಲಾದ ಸಿನಿಮಾಗಳು ತೋಪೆದ್ದು ಹೋಗಿವೆ. ಪ್ರತಿ ಚಿತ್ರದ ಪ್ರದರ್ಶನವು ನಿರೀಕ್ಷೆಗಿಂತ ಕಡಿಮೆಯಾಗಿದೆ.
ಒಂದೆಡೆ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಥಿಯೇಟರ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದ್ದರೆ, ಇನ್ನೊಂದೆಡೆ ಸೌತ್ ಚಿತ್ರರಂಗದ ನಟರ ಫೇಮಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವು ನಟರ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗುತ್ತಿವೆ. ಅಂಥಾ ನಟರಲ್ಲಿ ಒಬ್ಬರು ಸೌತ್‌ನ ಈ ಸೂಪರ್‌ಸ್ಟಾರ್.
ಪ್ರತಿ ಸಿನಿಮಾಗೆ 200 ಕೋಟಿ ರೂ. ಪಡೆಯೋ ಈ ಸೂಪರ್‌ಸ್ಟಾರ್‌ಗೆ ಸೆಟ್‌ನಲ್ಲಿ ಕಪಾಳ ಮೋಕ್ಷ ಮಾಡಿದ್ರು ಡೈರೆಕ್ಟರ್!
ದಕ್ಷಿಣ ಚಿತ್ರರಂಗದ ಬಾಕ್ಸ್ ಆಫೀಸ್ ಕಿಂಗ್, ವಿಜಯ್
ದಕ್ಷಿಣಭಾರತ ಚಿತ್ರರಂಗದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರೋ ಈ ನಟ, ಬ್ಯಾಕ್ ಟು ಬ್ಯಾಕ್ ಏಳು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆ ನಟ ಮತ್ಯಾರೂ ಅಲ್ಲ, ದಳಪತಿ ವಿಜಯ್. ದಕ್ಷಿಣ ಚಿತ್ರರಂಗದ ಬಾಕ್ಸ್ ಆಫೀಸ್ ಕಿಂಗ್ ಎಂದೇ ಕರೆಯಲ್ಪಡುವ ನಟ. ಈ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ದಳಪತಿ ವಿಜಯ್ ಅವರ 'ಲಿಯೋ' ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಯಿತು. 64 ಕೋಟಿ ರೂ.ಗಳ ಫಸ್ಟ್ ಡೇ ಕಲೆಕ್ಷನ್‌ನ ನಂತರ, ಚಿತ್ರವು ವಿಶ್ವಾದ್ಯಂತ ರೂ.604 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
'ಲಿಯೋ' ದಕ್ಷಿಣ ಚಿತ್ರರಂಗದ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದು ಗುರುತಿಸಿಕೊಂಡಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ರಜನಿಕಾಂತ್ ಅವರ 'ಜೈಲರ್', ಕಮಲ್ ಹಾಸನ್ ಅವರ 'ವಿಕ್ರಮ್' ಮತ್ತು ಐಶ್ವರ್ಯಾ ರೈ ಬಚ್ಚನ್ ಅಭಿನಯದ 'ಪೊನ್ನಿಯನ್ ಸೆಲ್ವನ್'ನ್ನು ಮೀರಿಸಿದೆ. 'ಲಿಯೋ' ಚಿತ್ರದಲ್ಲಿ ದಳಪತಿ ವಿಜಯ್ ಜೊತೆಗೆ ಸಂಜಯ್ ದತ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ತ್ರಿಶಾ ದಳಪತಿ ವಿಜಯ್ ಪತ್ನಿ ಪಾತ್ರದಲ್ಲಿ ನಟಿಸಿದ್ದರೆ, ಸಂಜಯ್ ದತ್ ಖಳನಾಯಕನಾಗಿ ನಟಿಸಿದ್ದಾರೆ. 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ದಳಪತಿ ವಿಜಯ್ ಅವರ 7ನೇ ಚಿತ್ರ 'ಲಿಯೋ'. ಅವರ ಸತತ 7 ಚಿತ್ರಗಳು ಬ್ಲಾಕ್ ಬಸ್ಟರ್ ಆಗಿವೆ. ಇಂದಿನ ದಿನಗಳಲ್ಲಿ ವಿಜಯ್ ಚಿತ್ರ ನಿರ್ಮಾಪಕರ ಮೊದಲ ಆಯ್ಕೆಯಾಗಿ ಉಳಿಯಲು ಇದೇ ಕಾರಣ.
ಸಂಭಾವನೆಯಲ್ಲಿ ವಿಜಯ್-ರಜನಿಕಾಂತ್ ಮಧ್ಯೆ ಬಿಗ್ ಫೈಟ್! ದಳಪತಿ ಮೊದಲ ಸಿನಿಮಾ ಸಂಭಾವನೆ ಎಷ್ಟು ?
ಬ್ಯಾಕ್ ಟು ಬ್ಯಾಕ್ ಏಳು ಸೂಪರ್‌ಹಿಟ್ ಸಿನಿಮಾ ನೀಡಿರುವ ವಿಜಯ್
ದಳಪತಿ ವಿಜಯ್ ಅವರ ಯಶಸ್ವಿ ವೃತ್ತಿಜೀವನದ ಕುರಿತು ಮಾತನಾಡುವುದಾದರೆ, ಇದು 2017ರಲ್ಲಿ ಬಿಡುಗಡೆಯಾದ 'ಮೆರ್ಸಲ್' ನೊಂದಿಗೆ ಪ್ರಾರಂಭವಾಯಿತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 220 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ನಂತರ 2018 ರಲ್ಲಿ ಬಂದ 'ಸರ್ಕಾರ್' ಕೂಡ ಬ್ಲಾಕ್ ಬಸ್ಟರ್ ಆಗಿದ್ದು 252 ಕೋಟಿ ಕಲೆಕ್ಷನ್ ಮಾಡಿತ್ತು.
'ಬಿಗಿಲ್' 2019 ರಲ್ಲಿ ಬಿಡುಗಡೆಯಾಯಿತು ಮತ್ತು ಬಾಕ್ಸ್ ಆಫೀಸ್‌ನಲ್ಲಿ 295 ಕೋಟಿ ಗಳಿಸಿ ಸೂಪರ್‌ಹಿಟ್ ಆಗಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕದ ನಡುವೆ ಬಿಡುಗಡೆಯಾದ 'ಮಾಸ್ಟರ್' ಸುಮಾರು 223 ಕೋಟಿ ರೂ. ಗಳಿಕೆಯಷ್ಟೇ ಮಾಡಿತು. 2022ರಲ್ಲಿ ಬಿಡುಗಡೆಯಾದ ವಿಜಯ್ ಅಭಿನಯದ 'ಮೃಗ' ಚಿತ್ರ ಕೂಡಾ 200 ಕೋಟಿ ಗಡಿ ದಾಟಿದೆ. ಆದರೆ 2023 ರಲ್ಲಿ ಬಿಡುಗಡೆಯಾದ 'ವಾರಿಸು' 297 ಕೋಟಿ ಕಲೆಕ್ಷನ್ ಮಾಡಿದೆ. ಎಲ್ಲಾ ಚಿತ್ರಗಳ ಕಲೆಕ್ಷನ್ ಒಂದನ್ನು ಸೇರಿಸಿದರೆ, ಸೌತ್ ಸೂಪರ್ ಸ್ಟಾರ್ ವಿಜಯ್ ಅವರ 7 ಚಿತ್ರಗಳು ಇಲ್ಲಿಯವರೆಗೆ 2107 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.