ರೇವ್ ಪಾರ್ಟಿಗೆ ರಾಜರಂತೆ ಬಂದು, ಡಸ್ಟ್‌ಬಿನ್ ಕವರ್‌ನಲ್ಲಿ ಮುಖ ಮುಚ್ಚಿಕೊಂಡು ಹೋದ ಸೆಲೆಬ್ರಿಟಿಗಳು!
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ನಡೆದ ರೇವ್ ಪಾರ್ಟಿಗೆ ಫ್ಲೈಟ್, ಆಡಿ, ಬೆಂಜ್ ಕಾರುಗಳು ಸೇರಿದಂತೆ ರಾಜರಂತೆ ಆಗಮಿಸಿದ ಸಸೆಲೆಬ್ರಿಟಿಗಳು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಡಸ್ಟ್‌ಬಿನ್ ಕವರ್‌ಗಳಿಂದ ಮುಖಮುಚ್ಚಿಕೊಂಡು ಹೊರಗೆ ಹೋಗಿದ್ದಾರೆ.
ಬೆಂಗಳೂರು (ಮೇ 20): ಬೆಂಗಳೂರಿನ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಿನ್ನೆ ರಾತ್ರಿ ನಡೆದ ರೇವ್ ಪಾರ್ಟಿಗೆ ರಾಜರಂತೆ ದೊಡ್ಡ ಕಾರುಗಳಲ್ಲಿ ಆಗಮಿಸಿದ ಪಾರ್ಟಿಪ್ರಿಯ ಸೆಲೆಬ್ರಿಟಿಗಳು, ಇಂದು ಸಿಸಿಬಿ ಪೊಲೀಸರಿಗೆ ತಪ್ಪೊಪ್ಪಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಡಸ್ಟ್‌ಬಿನ್ ಕವರ್‌ಗಳಿಂದ ಮುಖ ಮುಚ್ಚಿಕೊಂಡು ಹೊರಗೆ ಹೋಗಿದ್ದಾರೆ.
ಹೌದು, ಕಾನೂನು ಬಾಹಿರ ಕೆಲಸಗಳನ್ನು ಯಾರೇ ಮಾಡದರೂ ಅವರಿಗೆ ಶಿಕ್ಷೆ ಒಂದಲ್ಲಾ ಒಂದು ಬಾರಿ ಕಟ್ಟಿಟ್ಟ ಬುತ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕಾನೂನು ಬಾಹಿರವಾಗಿ ಬೆಂಗಳೂರಿನ ಫಾರ್ಮ್‌ಹೌಸ್‌ನಲ್ಲಿ ಆಯೋಜನೆ ಮಾಡಲಾಗಿದ್ದ ರೇವ್‌ಪಾರ್ಟಿಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿ ವಿವಿಧೆಡೆಯಿಂದ ಸೆಲೆಬ್ರಿಟಿಗಳು, ಶ್ರೀಮಂತರು, ರಾಜಕೀಯ ನಾಯಕರ ಮಕ್ಕಳು, ಟೆಕ್ಕಿಗಳು ಸೇರಿದಂತೆ ಎಲ್ಲರೂ ರಾಜಮರ್ಯಾದೆ ಮೂಲಕ ಆಗಮಿಸಿದ್ದರು. ಆದರೆ, ಕಾನೂನು ಬಾಹಿರ ಪಾರ್ಟಿಯಲ್ಲಿ ಪಾಲ್ಗೊಂಡು ಈಗ ಮುಖ ಮುಚ್ಚಿಕೊಂಡು ಹೊರಗೆ ಹೋಗಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರು ಕೂಡಿ ಹಾಕಿದ್ದ 101 ಜನರನ್ನು ಸಂಜೆ ವೇಳೆಗೆ ರಿಲೀಸ್ ಮಾಡಿ ಕಳುಹಿಸಿದ್ದಾರೆ. ಹೋಗುವಾಗ ಕೆಲವರು ಮಾಧ್ಯಮಗಳಿಗೆ ಮುಖ ತೋರಿಸಲಾಗಿದೇ ಡಸ್ಟ್‌ಬಿನ್ ಕವರ್‌ಗಳಿಂದ ಮುಖ ಮುಚ್ಚಿಕೊಂಡು ಹೊರಗೆ ಹೋಗಿದ್ದಾರೆ.
ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದರೇ ನಟಿ ಹೇಮಾ? ವಿಡಿಯೋ ಕೊಟ್ಟಿದೆ ದೊಡ್ಡ ಸುಳಿವು!
ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಸಿಂಗಸಂದ್ರದ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ಆಯೋಜನೆ ಮಾಡಿದ್ದ ಬರ್ತಡೇ ಪಾರ್ಟಿಗೆ 'ಸನ್ ಸೆಟ್ ಟು ಸನ್ ರೈಸ್' (sun set to sun rise party) ಥೀಮ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಡರಾತ್ರಿಯಾದರೂ ಸುಮಾರು 100ಕ್ಕೂ ಅಧಿಕ ಜನರು ಜೋರಾಗಿ ಡಿಜೆ ಹಾಕಿಕೊಂಡು ಫಾರ್ಮ್‌ಹೌಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿಸಿದ ಸಿಸಿಬಿ ಪೊಲೀಸರು ರಾತ್ರೋ ರಾತ್ರಿ ಫಾರ್ಮ್‌ಹೌಸ್ ಮೇಲೆ ದಾಳಿ ಮಾಡಿದ್ದಾರೆ.
ಸಿಸಿಬಿ ಪೊಲೀಸರು ದಾಳಿ ಮಾಡಿದ ವೇಳೆ ಪಾರ್ಟಿಯಲ್ಲಿ ಆಂಧ್ರಪ್ರದೇಶ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಅದರಲ್ಲೂ 25ಕ್ಕೂ ಹೆಚ್ಚು ಯುವತಿಯರು ಸೇರಿದ್ದರು. ಬರ್ತಡೇ ಹೆಸರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಗಾಂಜಾ ಪಾರ್ಟಿ ಇದಾಗಿದೆ ಎಂದು ತಿಳಿದುಬಂದಿದೆ. ಆಗ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳನ್ನು ಕರೆಸಿ ಮತ್ತಷ್ಟು ದಾಳಿ ಮಾಡಿದಾದ ಮಾದಕ ವಸ್ತುಗಳಾದ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿವೆ. ಆದರೆ, ಇವುಗಳನ್ನು ಎಲ್ಲಿಂದ ಸರಬರಾಜು ಮಾಡಲಾಗಿತ್ತು ಎಂಬುದರ ಹಿಂದೆ ಪೊಲೀಸರು ಬಿದ್ದಿದ್ದಾರೆ.
ಬೆಂಗಳೂರು ರೇವ್ ಪಾರ್ಟಿಯಲ್ಲಿ ತೆಲುಗು ನಟಿಯರು, ಸಿಸಿಬಿ ಭರ್ಜರಿ ಕಾರ್ಯಾಚರಣೆ, ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ!
ರಕ್ತದ ಮಾದರಿ ಪರೀಕ್ಷೆ: ಮುಖ್ಯವಾಗಿ ಬೆಂಗಳೂರಿನಲ್ಲಿ ತಡರಾತ್ರಿವರೆಗೆ ರೇವ್ ಪಾರ್ಟಿ ಆಯೋಜನೆ ಮಾಡಿದ್ದಕ್ಕೆ ಫಾರ್ಮ್‌ಹೌಸ್ ಮಾಲೀಕರ ಮೇಲೆ ಪ್ರಕರಣ ದಾಖಲಾಗುತ್ತದೆ. ಆದರೆ, ಅಲ್ಲಿ ಮಾದಕ ವಸ್ತುಗಳು, ಡ್ರಗ್ಸ್, ಗಾಂಜಾ, ಕೊಕೇನ್‌ಗಳು ಪತ್ತೆಯಾಗಿರುವುದನ್ನು ಆಯೋಜಕರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಆದರೆ, ಮಾದಕ ವಸ್ತುಗಳನ್ನು ಸೇವನೆ ಮಾಡಿದವರ ಮೇಲೆಯೂ ಕೇಸ್ ದಾಖಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 101 ಜನರನ್ನು ಕೂಡ ಕೂಡಿಹಾಕಿ ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಫಾರ್ಮ್‌ಹೌದ್ ಒಳಗೆ ತೆರಳಿ ರಕ್ತದ ಮಾದರಿ ಸಂಗ್ರಹ ಮಾಡುತ್ತಿದ್ದಾರೆ.