Asianet Suvarna News Asianet Suvarna News

ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದರೇ ನಟಿ ಹೇಮಾ? ವಿಡಿಯೋ ಕೊಟ್ಟಿದೆ ದೊಡ್ಡ ಸುಳಿವು!

ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಕೂಡ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇತ್ತ ನಟಿ ಹೇಮಾ ನಾನು ಹೈದರಾಬಾದ್‌ನಲ್ಲಿದ್ದೇನೆ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

Actress Hema kolla video reactions is true or fake about Bengaluru rave party sat
Author
First Published May 20, 2024, 3:45 PM IST

ಬೆಂಗಳೂರು (ಮೇ 20): ರಾಜ್ಯ ರಾಜಧಾನಿ ಬೆಂಗಳೂರಿನ ಹೊರ ವಲಯದ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ಸನ್ ಸೆಟ್ ಟು ಸನ್ ರೈಸ್ ಥೀಮ್ ಅಡಿಯಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆಯುತ್ತಿದ್ದ ಬೃಹತ್ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ತೆಲಗು ನಟಿ ಹೇಮಾ ಕೂಡ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ನಟಿ ಹೇಮಾ ಅವರು ತಾನು ಹೈದರಾಬಾದಿನಲ್ಲಿದ್ದೇನೆಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. 

ಹೌದು, ಎಲೆಕ್ಟ್ರಾನಿಕ್ ಸಿಟಿ ಸಿಂಗೇನಾ ಅಗ್ರಹಾರದ ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಸಿಸಿಬಿ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್, ಮಾದಕ ವಸ್ತುಗಳ ಪತ್ತೆಯಾಗಿವೆ. ಬರ್ತಡೇ ಹೆಸರಲ್ಲಿ ತಡರಾತ್ರಿವರೆಗೆ ನಡೆದ ಪಾರ್ಟಿಯಲ್ಲಿ ಮಾದಕ ವಸ್ತುಗಳ ಜೊತೆಗೆ ತೆಲುಗು ಸಿನಿಮಾ ಕ್ಷೇತ್ರದ ನಟ, ನಟಿಯರು, ಮಾಡೆಲ್‌ಗಳು, ಟೆಕ್ಕಿಗಳು ಪತ್ತೆಯಾಗಿದ್ದಾರೆ. ಬರೋಬ್ಬರಿ 101 ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಕೂಡಿ ಹಾಕಿದ್ದಾರೆ. ಅದರಲ್ಲಿ ತೆಲುಗು ಸಿನಿಮಾದ ಪೋಷಕ ನಟಿ ಹಾಗೂ ಹಾಸ್ಯನಟಿ ಹೇಮಾ ಕೂಡ ಸಿಕ್ಕಿಬಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ರೇವ್‌ ಪಾರ್ಟಿಯಲ್ಲಿ ತೆಲುಗು ನಟಿಯರು, ಸಿಸಿಬಿ ಭರ್ಜರಿ ಕಾರ್ಯಾಚರಣೆ, ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ!

ಹೈದರಾಬಾದ್‌ನಲ್ಲಿರುವುದಾಗಿ ವಿಡಿಯೋ ಮಾಡಿದ ಹೇಮಾ:
ನಟಿ ಹೇಮಾ ಅವರು ಬೆಂಗಳೂರು ರೇವ್ ಪಾರ್ಟಿಯಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಮಾಧ್ಯಮಗಳಲ್ಲಿ ವರದಿ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಅವರಿಗೆ ಕೆಲವು ಆಪ್ತರು ಕರೆ ಮಾಡಿ ಕೇಳಿದಾಗ ತಾನು ಹೈದರಾಬಾದ್‌ನಲ್ಲಿ ಇರುವುದಾಗಿ ಹೇಳಿದ್ದಾರೆ. ಜೊತೆಗೆ, ವಿಡಿಯೋ ಮೂಲಕ ಸ್ಪಷ್ಟೀಕರಣ ಕೊಟ್ಟಿರುವ ನಟಿ ಹೇಮಾ ನಾನು ಯಾವುದೇ ಪಾರ್ಟಿಯನ್ನು ಅಟೆಂಡ್ ಮಾಡಿಲ್ಲ. ನಾನು ಹೈದರಾಬಾದ್‌ ಫಾರ್ಮ್‌ಹೌಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದೇನೆ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅಲ್ಲಿ ಯಾರಿದ್ದಾರೋ ಏನೋ ನನಗೆ ಗೊತ್ತಿಲ್ಲ. ಸುಳ್ಳು ಸುದ್ದಿಯನ್ನು ನೀವು ಕೂಡ ನಂಬಬೇಡಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ, ಇನ್ನು ಕೆಲವು ನೆಟ್ಟಿಗರು ನೀವು ಸಿಸಿಬಿ ಪೊಲೀಸರ ವಶದಲ್ಲಿದ್ದುಕೊಂಡೇ ವಿಡಿಯೋ ಮಾಡಿದ್ದೀರಿ. ಪೊಲೀಸರು ಕೊಟ್ಟ ಫೋಟೋ ಹಾಗೂ ನೀವು ಮಾಡಿದ ವಿಡಿಯೋದಲ್ಲಿ ಡ್ರೆಸ್ ಒಂದೇ ಆಗಿದೆ. ವಿಡಿಯೋದಲ್ಲಿ ಸುಳಿವು ಸಿಕ್ಕಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

ರಕ್ತದ ಮಾದರಿ ಪರೀಕ್ಷೆ: ಮುಖ್ಯವಾಗಿ ಬೆಂಗಳೂರಿನಲ್ಲಿ ತಡರಾತ್ರಿವರೆಗೆ ರೇವ್ ಪಾರ್ಟಿ ಆಯೋಜನೆ ಮಾಡಿದ್ದಕ್ಕೆ ಫಾರ್ಮ್‌ಹೌಸ್ ಮಾಲೀಕರ ಮೇಲೆ ಪ್ರಕರಣ ದಾಖಲಾಗುತ್ತದೆ. ಆದರೆ, ಅಲ್ಲಿ ಮಾದಕ ವಸ್ತುಗಳು, ಡ್ರಗ್ಸ್, ಗಾಂಜಾ, ಕೊಕೇನ್‌ಗಳು ಪತ್ತೆಯಾಗಿರುವುದನ್ನು ಆಯೋಜಕರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಆದರೆ, ಮಾದಕ ವಸ್ತುಗಳನ್ನು ಸೇವನೆ ಮಾಡಿದವರ ಮೇಲೆಯೂ ಕೇಸ್ ದಾಖಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 101 ಜನರನ್ನು ಕೂಡ ಕೂಡಿಹಾಕಿ ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಫಾರ್ಮ್‌ಹೌಸ್ ಒಳಗೆ ತೆರಳಿ ರಕ್ತದ ಮಾದರಿ ಸಂಗ್ರಹ ಮಾಡುತ್ತಿದ್ದಾರೆ.

'ಸಿಎಂ ಸೋಮಾರಿ ಸಿದ್ದು' ಎಂದು ಹೀಗಳೆದ ನಟ ಅಹಿಂಸಾ ಚೇತನ್

ಕರ್ನಾಟಕ ವಿಧಾನ ಪರಿಷತ್ ಸದಸ್ಯರ ಪಾಸ್ ಪತ್ತೆ: ಬೆಂಗಳೂರಿನ ರೇವ್ ಪಾರ್ಟಿ ಸ್ಥಳದಲ್ಲಿ ಪತ್ತೆಯಾದ ಕಾರುಗಳಲ್ಲಿ ಆಂಧ್ರಪ್ರದೇಶ ರಾಜ್ಯದ ರಿಜಿಸ್ಟೇಷನ್ ನ ವೈಟ್ ಫಾರ್ಚೂನರ್ ಕಾರಿನಲ್ಲಿ ಕರ್ನಾಟಕ ವಿಧಾನ ಪರಿಷತ್ತು ಸದಸ್ಯರ ಪಾಸ್ ಪತ್ತೆಯಾಗಿದೆ. ಆದರೆ, ಈ ಪಾಸ್‌ನಲ್ಲಿ ಯಾವುದೇ ಹೆಸರು ಅಥವಾ ಕಾರಿನ ಸಂಖ್ಯೆ ನಮೂದು ಮಾಡಿರಲಿಲ್ಲ. ಇನ್ನು ನಿನ್ನೆ ತಡರಾತ್ರಿಯಿಂದ ಸಿಸಿಬಿ ಪೊಲೀಸರ ವಶದಲ್ಲಿ ಸಿಕ್ಕಿಬಿದ್ದಿರುವ 101 ಜನರಿಗೆ ಬೆಳಗ್ಗೆ ಪೊಲೀಸರಿಂದಲೇ ಊಟದ ವ್ಯವಸ್ಥೆ ಮಾಡಲಾಗಿದೆ. ಫಾರ್ಮ್‌ಹೌಸ್‌ನ ಹಿಂಬದಿ ಗೇಟ್ ಮೂಲಕ ಪೊಲೀಸರು ಊಟ ತರಿಸಿಕೊಂಡು ಸರಬರಾಜು ಮಾಡಿದ್ದಾರೆ.

Latest Videos
Follow Us:
Download App:
  • android
  • ios