ನಗರದ ಎಲೆಕ್ಟ್ರಾನಿಕ್ ಸಿಟಿ ಸಿಂಗೇನಾ ಅಗ್ರಹಾರದ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಸಿಸಿಬಿ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್, ಮಾದಕ ವಸ್ತುಗಳ ಪತ್ತೆಯಾಗಿವೆ. ಪಾರ್ಟಿಯಲ್ಲಿ ತೆಲುಗು ನಟನಟಿಯರು, ಯುವತಿಯರು ಪತ್ತೆಯಾಗಿದ್ದಾರೆ.
ಬೆಂಗಳೂರು (ಮೇ.20): ನಗರದ ಎಲೆಕ್ಟ್ರಾನಿಕ್ ಸಿಟಿ ಸಿಂಗೇನಾ ಅಗ್ರಹಾರದ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಸಿಸಿಬಿ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್, ಮಾದಕ ವಸ್ತುಗಳ ಪತ್ತೆಯಾಗಿವೆ. ಬರ್ತಡೇ ಹೆಸರಲ್ಲಿ ತಡರಾತ್ರಿವರೆಗೆ ನಡೆದ ಪಾರ್ಟಿಯಲ್ಲಿ ಮಾದಕ ವಸ್ತುಗಳ ಜೊತೆಗೆ ತೆಲುಗಿನ ಮಾದಕ ನಟ ನಟಿಯರು, ಮಾಡೆಲ್, ಟೆಕ್ಕಿಗಳು ಪತ್ತೆಯಾಗಿರುವುದು ತಿಳಿದುಬಂದಿದೆ.
ಪಾರ್ಟಿಯಲ್ಲಿ ಆಂಧ್ರಪ್ರದೇಶ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಅದರಲ್ಲೂ 25ಕ್ಕೂ ಹೆಚ್ಚು ಯುವತಿಯರು ಸೇರಿದ್ದರು. ಬರ್ತಡೇ ಹೆಸರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಗಾಂಜಾ ಪಾರ್ಟಿ. ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳ ದಾಳಿ ವೇಳೆ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿದೆ.
ಬೆಂಗಳೂರು: ದುಬಾರಿ ಬಡ್ಡಿಗೆ ಸಾಲ ನೀಡುತ್ತಿದ್ದ ತಂದೆ-ಮಕ್ಕಳು, ಸಿಸಿಬಿ ದಾಳಿ
ಪಾರ್ಟಿಗಾಗಿ ಆಂಧ್ರದಿಂದ ಫ್ಲೈಟ್
ಇದು ಅಂತಿಂಥ ಪಾರ್ಟಿ ಅಲ್ಲ, ದೊಡ್ಡ ದೊಡ್ಡ ಶ್ರೀಮಂತ ಕುಳಗಳೇ ಭಾಗಿಯಾಗಿದ್ದ ಪಾರ್ಟಿ ಇದು. ಕಾನ್‌ಕಾರ್ಡ್ ಮಾಲೀಕರಾಗಿರುವ ಗೋಪಾಲರೆಡ್ಡಿ ಎಂಬುವವರ ಮಾಲೀಕತ್ವದ ಫಾರ್ಮ್‌ಹೌಸ್ ನಲ್ಲಿ 'ಸನ್ ಸೆಟ್ ಟು ಸನ್ ರೈಸ್' ಪಾರ್ಟಿ ಎಂದು ಆಯೋಜನೆ ಮಾಡಲಾಗಿತು. ಭಾನುವಾರ ಸಂಜೆ ಐದು ಘಂಟೆಯಿಂದ ಬೆಳಗ್ಗೆ ಆರು ಘಂಟೆ ತನಕ ನಡೆಯುತ್ತಿದ್ದ ಪಾರ್ಟಿ ಹೈದ್ರಾಬಾದ್ ಮೂಲದ ವಾಸು ಎಂಬಾತ ಫಾರ್ಮ್ ಹೌಸ್‌ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ. ಅದಕ್ಕೆಂದೇ ಆಂಧ್ರದಿಂದ ಫ್ಲೈಟ್ ತರಿಸಿಕೊಂಡಿದ್ದ. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದವರು ಯಾರು? ಅಷ್ಟೊಂದು ಯುವತಿಯರು ಎಲ್ಲಿಂದ ಕರೆತರಲಾಗಿತ್ತು? ಸಿಸಿಬಿ ಪೊಲೀಸ್ ದಾಳಿ ವೇಳೆ ಮರ್ಸಿಡಿಸ್ ಬೆಂಜ್ , ಜಾಗ್ವಾರ್. ಔಡಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಅದರಲ್ಲಿ ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್‌ಎ ಗೋವರ್ಧನ ರೆಡ್ಡಿ ಪಾಸ್ ಪತ್ತೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು
ನಗರದ ಒಳಭಾಗದಲ್ಲಿ ದಲಾಲಿಗಳು ನಿರಂತರ ಪಾರ್ಟಿ ನಡೆಯುತಿದ್ದ ಹಿನ್ನಲೆ ಹೊರ ವಲಯದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಒಂದು ದಿನದ ಪಾರ್ಟಿಗೆ 30 ರಿಂದ 50 ಲಕ್ಷ ಖರ್ಚು ಮಾಡಿ ರೇವ್ ಪಾರ್ಟಿ ಆಯೋಜಿಸಲಾಗುತ್ತಿತ್ತು. ನಿನ್ನೆ ನಡೆದ ಪಾರ್ಟಿಯಲ್ಲಿ ಡಿಜೆಗಳಾದ RABZ, KAYVEE ಮತ್ತು BLOODY MASCARA ಗಳು ಮಾಡೆಲ್‌ಗಳು, ಟೆಕ್ಕಿಗಳು ಪತ್ತೆಯಾಗಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾದವರ ಗುರುತು ಪತ್ತೆ ಹಚ್ಚುತ್ತಿರುವ ಪೊಲೀಸರು. ಸದ್ಯ ನಾರ್ಕೋಟಿಕ್ಸ್ ಸ್ನಿಫರ್ ಡಾಗ್‌ಗಳಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಹದಿನೇಳು ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರ್ಟಿಯಲ್ಲಿ ತೆಲುಗು ನಟಿಯರು!
ಸಿಸಿಬಿ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ನಡೆದಿರುವ ದಾಳಿ. ಸುಮಾರು ಆರು ಗಂಟೆಗಳಿಂದ ಪರಿಶೀಲನೆ ನಡೆಸುತ್ತಿರುವ ತಂಡ, ಪಾರ್ಟಿಯಲ್ಲಿ ತೆಲುಗು ನಟಿಯವರು ಮಾಡೆಲ್ ಗಳು ಹಾಗೂ 25ಕ್ಕೂ ಹೆಚ್ಚು ಯುವತಿಯರು ಭಾಗಿಯಾಗಿದ್ದು, ಎಲ್ಲ ಯುವತಿಯರು ಯಾವ ಯಾವ ರಾಜ್ಯದವರು, ಕೊಕೇನ್, ಎಂಡಿಎಂಎ ತಂದಿದ್ದು ಎಲ್ಲಿಂದ? ಯಾರಾರು ಸೇವಿಸಿದ್ದಾರೆ? ಹಿಂದೆ ಬೆಂಗಳೂರಿನ ಇತರೆಡೆ ಆರ್ಗನೈಸ್ ಮಾಡಿದ್ರಾ? ಎಲ್ಲೆಲ್ಲಿ ಮಾಡಿದ್ರು. ಈ ರೀತಿ ಎಲ್ಲ ಮಾಹಿತಿಗಳನ್ನ ಕೆದಕುತ್ತಿರುವ ಸಿಸಿಬಿ ಪೊಲೀಸರು.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಡೂರ್ ಲಾಕ್:
ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ರೇವ್ ಪಾರ್ಟಿ ಮೇಲೆ ದಾಳಿ ನಡೆಸುತ್ತಿದ್ದಂತೆ ಎಚ್ಚೆತ್ತ ಪಾರ್ಟಿ ಪ್ರಿಯರು ಡೂರ್ ಲಾಕ್ ಮಾಡಿದ್ದಾರೆ. ಆದರೆ ಪೊಲೀಸರು ಬಲವಂತವಾಗಿ ಡೂರ್ ಲಾಕ್ ತೆಗೆಸಿ ಒಳಹೋಗಿದ್ದಾರೆ. ಪೊಲೀಸರು ಡೂರ್ ತೆಗೆದು ಒಳನುಗ್ಗುತ್ತಿದ್ದಂತೆ ತಮ್ಮಲ್ಲಿದ್ದ ಎಂಡಿಎಂಎ, ಕೊಕೇನ್ ಇನ್ನಿತರ ಮಾದಕ ವಸ್ತುಗಳ ಎಸೆಯಲು ಯತ್ನಿಸಿದ್ದಾರೆ. ಅಷ್ಟೆ ಅಲ್ಲದೇ ತಮ್ಮಲ್ಲಿದ್ದ ಟ್ಯಾಬ್ಲೆಟ್‌ಗಳನ್ನ ಬಾತ್ ರೂಂ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ. ಸದ್ಯ ಫಾರ್ಮ್‌ಹೌಸ್‌ನ ಇಂಚಿಂಚು ಜಾಲಾಡುತ್ತಿರುವ ಸಿಸಿಬಿ ಪೊಲೀಸರು.
