Asianet Suvarna News Asianet Suvarna News

ಕಿಸ್ಸಿಂಗ್ ದೃಶ್ಯದ ನಂತರ ಕ್ಯಾರವಾನ್‌ಗೆ ಹೋಗಿ ಜೋರಾಗಿ ಅಳುತ್ತಿದ್ದೆ; 'ರಣ ವಿಕ್ರಮ' ನಟಿ ಅಂಜಲಿ

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಇಂಟಿಮೇಟ್ ದೃಶ್ಯ ಮಾಡುವುದು ಎಷ್ಟು ಕಷ್ಟವಾಗುತ್ತಿತ್ತು ಎಂದು ವಿವರಿಸಿದ್ದಾರೆ. 

Telugu Actress Anjali says she used to rush to caravan and  cry after doing kissing scenes sgk
Author
First Published Dec 31, 2022, 10:58 AM IST

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿಯಲ್ಲಿ ಒಂಜಲಿ ಕೂಡ ಒಬ್ಬರು. ಆಂಧ್ರ ಪ್ರದೇಶ ಮೂಲದ ನಟಿ ಅಂಜಲಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಂದು ಕಾಲದ ಬ್ಯುಸಿಯಸ್ಟ್ ನಟಿ ಅಂಜಲಿ ಇದೀಗ ಅಪರೂಪಕ್ಕೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗೆ ಅಂಜಲಿ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಂತ ಬಣ್ಣದ ಲೋಕದಿಂದ ದೂರ ಸರಿದಿದ್ದಾರಾ ಅಂತ ಅಂದುಕೊಳ್ಳಬೇಡಿ. ಅವರು ಸಿನಿಮಾಗಿಂತ ಹೆಚ್ಚಾಗಿ ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ. ಅನೇಕ ಸಿನಿಮಾಗಳನ್ನು ಮಾಡಿರುವ ನಟಿ ಅಂಜಲಿ ಕಿಸ್ಸಿಂಗ್ ದೃಶ್ಯಗಳಲ್ಲೂ ನಟಿಸಿದ್ದಾರೆ. ಚುಂಬನದ ದೃಶ್ಯಗಳನ್ನು ಮಾಡುವಾಗ ಎಷ್ಟು ಕಷ್ಟವಾಗುತ್ತಿತ್ತು ಎಂದು ನಟಿ ಅಂಜಲಿ ಬಹಿರಂಗ ಪಡಿಸಿದ್ದಾರೆ. 

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಅಂಜಲಿ ಚುಂಬನ ದೃಶ್ಯದಿಂದ ಎಷ್ಟು ನೋವು ಅನುಭವಿಸಬೇಕಿತ್ತು ಎಂದು ವಿವರಿಸಿದ್ದಾರೆ. 'ತಮ್ಮ ಎದುರು ನಟಿಸುತ್ತಿರುವ ನಟರು ಇಷ್ಟವಾಗದಿದ್ದರೂ ಅವರ ಜೊತೆ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲೇ ಬೇಕಿತ್ತು, ಅದು ತುಂಬಾ ಕಷ್ಟವಾಗುತ್ತಿತ್ತು' ಎಂದು ಹೇಳಿದ್ದಾರೆ. 'ಕಿಸ್ಸಿಂಗ್ ಅಥವಾ ತುಂಬಾ ಇಂಟಿಮೇಟ್ ದೃಶ್ಯಗಳನ್ನು ಮುಗಿಸಿದ ನಂತರ ಕ್ಯಾರವಾನ್‌ಗೆ ಓಡುತ್ತಿದ್ದೆ. ಅಲ್ಲಿ ಕುಳಿತು ಜೋರಾಗಿ ಅಳುತ್ತಿದ್ದೆ' ಎಂದು ಅಳಲು ತೋಡಿಕೊಂಡಿದ್ದಾರೆ. 'ಆದರೆ ದೃಶ್ಯ ಚೆನ್ನಾಗಿ ಬರಬೇಕೆಂದರೆ ಕಲಾವಿದರು ದಿ ಬೆಸ್ಟ್ ಕೊಡಲೇ ಬೇಕು' ಎಂದು ನಟಿ ಅಂಜಲಿ ಹೇಳಿದ್ದಾರೆ. 

ನಟಿ ಅಂಜಲಿ ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸಿನಿಮಾ ದೊಡ್ಡ ಖ್ಯಾತಿ ತಂದುಕೊಟ್ಟಿತ್ತು. ಈ ಸಿನಿಮಾ ಬಳಿಕ ನಟಿ ಅಂಜಲಿ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಅಂಜಲಿ ಅನೇಕ ಸಿನಿಮಾಗಳಲ್ಲಿ ಹಾಟ್ ಮತ್ತು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಯಾರ ಬಗ್ಗೆ ಹೇಳುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಸತಿ ಲೀಲಾವತಿ, ಪಾವ ಕದೈಗಳ್ ಸಿನಿಮಾಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಪಾವ ಕದೈಗಳ್ ಸಿನಿಮಾದಲ್ಲಿ ನಟಿ ಅಂಜಲಿ ಬಾಲಿವುಡ್ ನಟಿ ಕಲ್ಕಿ ಕೊಚ್ಚಿನ್ ಜೊತೆ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದರು. ಇನ್ನು ತಮಿಳು ನಟ ಆರ್ಯ ಜೊತೆಯೂ ನಟಿ ಅಂಜಲಿ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. 

Trisha; ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ತ್ರಿಷಾ; 2 ದಶಕದ ಅನುಭವ ಬಿಚ್ಚಿಟ್ಟ ನಟಿ

ಅಂದಹಾಗೆ ಅಂಜಲಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ರಣ ವಿಕ್ರಮ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೂ ಮೊದಲು ಹೊಂಗನಸು ಸಿನಿಮಾದಲ್ಲಿ ನಟಿಸಿದ್ದರು. ಹೊಂಗನಸು ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದ ನಟಿ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಅಂಜಲಿ ಕನ್ನಡದಲ್ಲಿ ಭೈರಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭೈರಾಗಿಯಲ್ಲಿ ಅಂಜಲಿ ಮಿಂಚಿದ್ದರು.   

ಗೆಳತಿಯ ಗಂಡನನ್ನೇ ಪಟಾಯಿಸಿ ಮದುವೆಯಾಗುತ್ತಿರುವ ಹನ್ಸಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್

ಸಿನಿಮಾ ಜೊತೆಗೆ ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ನವರಸ, ಝಾನ್ಸಿ ಸೀರಿಸ್ ನಲ್ಲಿ ಮಿಂಚಿದ್ದಾರೆ. ಸದ್ಯ ಭಹಿಷ್ಕರಣ ಮತ್ತು ಫಾಲ್ ಸೀರಿನ್ ನಲ್ಲಿ ನಟಿಸುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದರು. ಸದ್ಯ ರಾಮ್ ಚರಣ್ ತೇಜ ನಟನೆಯ ಬಹುನಿರೀಕ್ಷೆಯ RC15 (ತಾತ್ಕಾಲಿಕ ಹೆಸರು)  ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಂಜಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರ ಅಡ್ವಾನಿ ಬಣ್ಣ ಹಚ್ಚಿದ್ದಾರೆ. ಶಂಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. 
 

Follow Us:
Download App:
  • android
  • ios