Asianet Suvarna News Asianet Suvarna News

ಗೆಳತಿಯ ಗಂಡನನ್ನೇ ಪಟಾಯಿಸಿ ಮದುವೆಯಾಗುತ್ತಿರುವ ಹನ್ಸಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್

ನಟಿ ಹನ್ಸಿಕಾ ತನ್ನ ಗೆಳತಯ ಗಂಡನನ್ನೇ ಪಟಾಯಿಸಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. 

Hansika motwani getting trolled for marrying Her Friend's Husband sgk
Author
First Published Nov 23, 2022, 11:36 AM IST

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮದಲ್ಲಿದ್ದಾರೆ.  ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಟಿ ಹನ್ಸಿಕಾ ಬಾವಿ ಪತಿಯನ್ನು ಪರಿಚಯಿಸಿದ್ದರು. ವಿಡಿಯೋ ಶೇರ್ ಮಾಡುವ ಮೂಲಕ ಮದುವೆ ವಿಚಾರವನ್ನು ಅಧಿಕೃತ ಗೊಳಿಸಿದ್ದರು. ಅಂದಹಾಗೆ ಕಾಲಿವುಡ್ ಸುಂದರಿ ಹನ್ಸಿಕಾ ಉದ್ಯಮಿ ಸೊಹೇಲ್ ಕಥರಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಬ್ಬರ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಹನ್ಸಿಕಾ ಭಾವಿ ಪತಿಯ ಫೋಟೋ ರಿವೀಲ್ ಮಾಡುತ್ತಿದ್ದೆ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.  ಸೊಹೇಲ್ ಕಥರಿಯಾ ಅವರಿಗೆ ಈಗಾಗಲೇ ಮದುವೆಯಾಗಿದೆ. ಹನ್ಸಿಕಾ ಜೊತೆ ಎರಡನೇ ಮದುವೆ ಆಗುತ್ತಿದ್ದಾರೆ. ಇಷ್ಟೆ ಆಗಿದ್ದರೆ ಏನು ಆಗುತ್ತಿರಲಿಲ್ಲ ಆದರೆ ಸೊಹೇಲ್ ಕಥರಿಯಾ ಹನ್ಸಿಕಾ ಗೆಳತಿ ರಿಂಕಿ ಅವರ ಪತಿ. 

ರಿಂಕಿ ಮತ್ತು ಸೊಹೇಲ್ 2016ರಲ್ಲಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ನಟಿ ಹನ್ಸಿಕಾ ಕೂಡ ಎಂಟ್ರಿ ಕೊಟ್ಟಿದ್ದರು. ಗೆಳತಿಯ ಮದುವೆ ಸಂಭ್ರಮದಲ್ಲಿ ಹನ್ಸಿಕಾ ಮಿಂಚಿದ್ದರು. 6 ವರ್ಷಗಳ ಹಿಂದೆ ಎಂಟ್ರಿ ಕೊಟ್ಟಿದ್ದ ಮದುವೆಯ ಹುಡುಗನ ಜೊತೆ ಹನ್ಸಿಕಾ ಮದುವೆ ಆಗುತ್ತಿರುವುದು ನೆಟ್ಟಿಗರು ಕಂಡುಹಿಡಿದು ಟ್ರೋಲ್ ಮಾಡುತ್ತಿದ್ದಾರೆ. ಅಂದಹಾಗೆ ಸೊಹೇಲ್  ಮತ್ತು ರಿಂಕಿ ಮದುವೆಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಇದೆ. ಹಾಗಾಗಿ ನೆಟ್ಟಿಗರು ಸುಲಭವಾಗಿ ಕಂಡುಹಿಡಿದು ಟ್ರೋಲ್ ಮಾಡುತ್ತಿದ್ದಾರೆ.

ನಯನತಾರಾ ಬಳಿಕ ಮದುವೆ ವಿಡಿಯೋ ಮಾರಿಕೊಂಡ ನಟಿ ಹನ್ಸಿಕಾ ಮೋಟ್ವಾನಿ

ಸೊಹೇಲ್ ಮತ್ತು ಹನ್ಸಿಕಾ ಇಬ್ಬರೂ 8 ವರ್ಷಗಳಿಂದ ಸ್ನೇಹಿತರು. ಅಲ್ಲದೇ ಇಬ್ಬರೂ ಬ್ಯುಸಿನೆಸ್ ಪಾರ್ಟರ್ ಕೂಡ ಆಗಿದ್ದಾರೆ. 2019ರಿಂದ ಇಬ್ಬರೂ ಒಟ್ಟಿಗೆ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಇದೀಗ ವಿಷಯ ಗೊತ್ತಾಗುತ್ತಿದ್ದಂತೆ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಹನ್ಸಿಕಾ ಸದ್ಯ ಮದುವೆ ತಯಾರಿಯಲ್ಲಿದ್ದಾರೆ. ಈಗೀಗಲೇ ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಜೈಪುರದ ಅರಮನೆಯಲ್ಲಿ ಇಬ್ಬರ ಮದುವೆ ನಡೆಯುತ್ತಿದ್ದು ಕುಟುಂಬದವರು ಜೈಪುರಗೆ ತೆರಳುತ್ತಿದ್ದಾರೆ.

ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿ ಬಾವಿ ಪತಿ ಪರಿಚಯಿಸಿದ ನಟಿ ಹನ್ಸಿಕಾ; ಮದುವೆ ಯಾವಾಗ?

ಜೈಪುರದ 450 ವರ್ಷಗಳ ಹಿಂದಿನ ಮಂಟೋಡ ಕೋಟೆಯಲ್ಲಿ ಹನ್ಸಿಕಾ ಮತ್ತು ಸೋಹೇಲ್ ಮದುವೆ ನೆರವೇರಲಿದೆ. ಹನ್ಸಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ತೀರ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 2 ರಾತ್ರಿಯಿಂದನೇ ಮದುವೆ ಸಮಾರಂಭ ಪ್ರಾರಂಭವಾಗಲಿದೆ. ಡಿಸೆಂಬರ್ 3ರಿಂದ ಮೆಹಂದಿ ಮತ್ತು ಅರಿಶಿಣ ಶಾಸ್ತ್ರದ ಸಂಭ್ರಮ ನಡೆಯುತ್ತಿದೆ. ಡಿಸೆಂಬರ್ 4ರಂದು ಹನ್ಸಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಾಗಿದ್ದಾರೆ ಸೊಹೇಲ್. 

Follow Us:
Download App:
  • android
  • ios