Trisha; ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ತ್ರಿಷಾ; 2 ದಶಕದ ಅನುಭವ ಬಿಚ್ಚಿಟ್ಟ ನಟಿ
ದಕ್ಷಿಣ ಭಾರತದ ಖ್ಯಾತ ನಟಿ, ತಮಿಳು ಸುಂದರಿ ತ್ರಿಷಾ ಕೃಷ್ಣನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳು ಪೂರೈಸಿದೆ. ಸಿನಿಮಾರಂಗದಲ್ಲಿ ಇಂದಿಗೂ ಅದೇ ಬೇಡಿಕೆ ಇಟ್ಟುಕೊಂಡಿರುವ ತ್ರಿಷಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ, ತಮಿಳು ಸುಂದರಿ ತ್ರಿಷಾ ಕೃಷ್ಣನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳು ಪೂರೈಸಿದೆ. ಸಿನಿಮಾರಂಗದಲ್ಲಿ ಇಂದಿಗೂ ಅದೇ ಬೇಡಿಕೆ ಇಟ್ಟುಕೊಂಡಿರುವ ತ್ರಿಷಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ನಟಿಯೊಬ್ಬಳು ಸಿನಿಮಾರಂಗದಲ್ಲಿ ಎರಡು ದಶಕಗಳನ್ನು ಪೂರೈಸಿ ಅಷ್ಟೇ ಬೇಡಿಕೆಯ ನಟಿಯಾಗಿ ಉಳಿದುಕೊಳ್ಳುವುದು ನಿಜಕ್ಕೂ ಗ್ರೇಟ್.
ಅನೇಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ ತ್ರಿಷಾ. ತಮಿಳು ಜೊತೆಗೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. 20 ವರ್ಷಗಳನ್ನು ಪೂರೈಸಿರುವ ದಕ್ಷಿಣ ಭಾರತ ಖ್ಯಾತ ನಟಿ ತ್ರಿಶಾ ಈ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತ್ರಿಶಾ ಇಷ್ಟು ವರ್ಷಗಳು ಸಿನಿಮಾರಂಗದಲ್ಲಿ ಇದ್ದೀನಾ ಎಂದು ಅಚ್ಚರಿ ವ್ಯಕ್ತ ಪಡಿಸಿದರು. ಇನ್ನೂ ತನಗಾಗಿ ಪಾತ್ರಗಳನ್ನು ರಚಿಸಿದ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು.
ನಟಿ ಇತ್ತೀಚಿಗಷ್ಟೆ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಮೂಲಕ ಕೊನೆಯದಾಗಿ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಮಾಯಿ ಮಾಡಿತ್ತು.
'ಇದು ಖಂಡಿತವಾಗಿಯೂ ಸುಲಭವಲ್ಲ. ನಾನು ನಿಜವಾಗಿಯೂ ಪುಣ್ಯವಂತೆ. ನಾನು ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಹೊಂದಿದ್ದಾರೆ. ಆದರೆ ನನ್ನನ್ನು ನಂಬಿದ ಪ್ರೇಕ್ಷಕರಿಗೆ ನಾನು ಧನ್ಯವಾದ ಹೇಳಬೇಕು' ಎಂದು ಹೇಳಿದರು.
ತನ್ನ ವೃತ್ತಿ ಜೀವನದಲ್ಲಿ ಜೊತೆಯಾದ, ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ' ಇದು ನಾನಷ್ಟೇ ಅಲ್ಲ. ನಾನು ಧನ್ಯವಾದ ಹೇಳಲು ಬಹಳಷ್ಟು ಜನರಿದ್ದಾರೆ. ನನ್ನ ಸ್ಟೈಲಿಸ್ಟ್, ಮೇಕಪ್ ಕಲಾವಿದರು, ನನ್ನ ಕೇಶ ವಿನ್ಯಾಸಕಿಯವರೆಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ, ಈಗಲೂ ನನಗಾಗಿ ಪಾತ್ರಗಳನ್ನು ಬರೆಯುವ ನಿರ್ದೇಶಕರಿಗೆ ನಾನು ಕೃತಜ್ಞನಾಗಿದ್ದೇನೆ. ಗೌತಮ್ (ವಾಸುದೇವ್ ಮೆನನ್) ಮತ್ತು ಮಣಿ ಸರ್ ಅವರಂತಹ ಯಾರಾದರೂ ತಮ್ಮ ಚಿತ್ರಗಳಲ್ಲಿನ ಪಾತ್ರಗಳಿಗಾಗಿ ನನ್ನನ್ನು ಇನ್ನೂ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ' ಎಂದು ತ್ರಿಷಾ ಹೇಳಿದರು.
ಅಂದಹಾಗೆ ನಟಿ ತ್ರಿಷಾ ಮುಂದಿನ ಸಿನಿಮಾ ದಳಪತಿ ವಿಜಯ್ ಜೊತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತ್ರಿಷಾ, ನಾನು ಈ ಸಿನಿಮಾ ಮಾಡುತ್ತೇನೆಯೂ ಇಲ್ಲವೋ ಎನ್ನುವ ಬಗ್ಗೆ ನಿರ್ಮಾಣ ಸಂಸ್ಥೆ ಕಡೆಯಿಂದ ಅಧಿಕೃತ ಮಾಹಿತಿ ಬಹಿರಂಗವಾಗಲಿದೆ. ಈ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡಲ್ಲ' ಎಂದು ಹೇಳಿದರು.
ಇನ್ನೂ ಅಜಿತ್ ಮತ್ತು ವಿಜಯ್ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ, ನಂಬರ್ ನಟ ಯಾರು ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆಯೂ ತ್ರಿಷಾ ಪ್ರತಿಕ್ರಿಯೆ ನೀಡಿದ್ದಾರೆ. 'ನನಗೆ ವೈಯಕ್ತಿಕವಾಗಿ ನಂಬರ್ ಗೇಮ್‌ಗಳಲ್ಲಿ ನಂಬಿಕೆ ಇಲ್ಲ. ಇದು ಕೊನೆಯ ಚಿತ್ರಕ್ಕೆ ಲಗತ್ತಿಸಿ ಟ್ಯಾಗ್ ಆಗಿರುತ್ತದೆ. ನಿಮ್ಮ ಕೊನೆಯ ಚಿತ್ರ ಚೆನ್ನಾಗಿದ್ದರೆ, ನಿಮ್ಮನ್ನು ನಂಬರ್ 1 ಎಂದು ಪರಿಗಣಿಸಲಾಗುತ್ತೆ. ನೀವು ಸ್ವಲ್ಪ ಸಮಯ ಗ್ಯಾಪ್ ಪಡೆದರೆ ಆ ಸ್ಥಾನದಲ್ಲಿ ಬೇರೊಬ್ಬರು ಇರುತ್ತಾರೆ. ನಾನು ಕೆಲಸ ಮಾಡಲು ಪ್ರಾರಂಭಿಸುವ ಮೊದಲೇ ಇಬ್ಬರೂ ದೊಡ್ಡ ಕಲಾವಿದರು. ಪ್ರೇಕ್ಷಕರನಾಗಿ ನಾವು ಅವರನ್ನು ನೋಡಿ ಬೆಳೆದವರು. ಇಬ್ಬರೂ ತುಂಬಾ ದೊಡ್ಡ ಸೂಪರ್‌ಸ್ಟಾರ್‌ಗಳು. ಯಾರು ನಂಬರ್ ಒನ್ ಎಂದು ನಾನು ಹೇಗೆ ಹೇಳಲಿ? ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.