Asianet Suvarna News Asianet Suvarna News

ಫಲಿಸಲಿಲ್ಲ ಪ್ರಾರ್ಥನೆ, 39ರ ಹರೆಯದ ತೆಲಗು ನಟ ತಾರಕರತ್ನ ಬೆಂಗಳೂರಲ್ಲಿ ನಿಧನ!

 ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತೆಲುಗು ಚಿತ್ರ ನಟ ತಾರಕರತ್ನ ಬೆಂಗಳೂರಿನ ನಾರಾಯಣ ಹೃದಯಾಲದಯಲ್ಲಿ ನಿಧನ

Telugu actor taraka ratna dies at 39 in narayana hrudayalaya hospital bangaluru after 23 days treatment ckm
Author
First Published Feb 18, 2023, 10:00 PM IST

ಬೆಂಗಳೂರು(ಫೆ.18): ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತೆಲುಗು ಚಿತ್ರ ನಟ ತಾರಕರತ್ನ ಬೆಂಗಳೂರಿನ ನಾರಾಯಣ ಹೃದಯಾಲದಯಲ್ಲಿ ನಿಧನರಾಗಿದ್ದಾರೆ. 39ರ ಹರೆಯದ ತಾರಕತ್ನ ಜನವರಿ 27ರಂದು ಆಸ್ಪತ್ರೆ ದಾಖಲಾಗಿದ್ದರು. ಸತತ ಚಿಕಿತ್ಸೆ ಬಳಿಕವೂ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೃದಯ ಸ್ತಂಭನದಿಂದ ನಗರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು(ಫೆ.18) ರಾತ್ರಿ ತಾರಕರತ್ನ ನಿಧರಾಗಿದ್ದಾರೆ.

ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಆಂಜಿಯೋಗ್ರಾಮ್  ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. ಆದರೆ ತಾರಕ ರತ್ನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸಿತ್ತು. ಕಳೆದ 23 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಜೊತೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಇಂದು ಚಿಕಿತ್ಸೆ ಫಲಕಾರಿಯಾದೇ ನಿಧನರಾಗಿದ್ದಾರೆ. ತಾರಕರತ್ನ ನಿಧನದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಭಾರಿ ಪೊಲೀಸ್ ಭದ್ರತೆಯೊಂದಿಗೆ ತಾರಕ ರತ್ನ ಮೃತದೇಹ ಹೈದರಾಬಾದ್‌ಗೆ ಸ್ಥಳಾಂತರಿಸಲಾಗುತ್ತಿದೆ.

ಗಾಯಕಿ ವಾಣಿ ಜಯರಾಂ ನಿಧನಕ್ಕೆ ಆಘಾತ, ಸಿಎಂ ಬೊಮ್ಮಾಯಿ, ಜಗನ್ ಸೇರಿ ಗಣ್ಯರ ಸಂತಾಪ!

ಆಂಧ್ರಪ್ರದೇಶದ ಕುಪ್ಪಂನಲ್ಲಿ ಟಿಡಿಪಿ ಪಕ್ಷದ ನಾಯಕ ನಾರಾ ಲೋಕೇಶ್‌ ಅವರ ಮೊದಲ ದಿನದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾಗ ಕುಸಿದು ಬಿದ್ದಿದ್ದ ತಾರಕತ್ನ ಅವರನ್ನು ಹೆಚ್ಚಿನ ಚಿಕಿತ್ಸೆಗೆ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಹೃದಯ ಸ್ತಂಭನದಿಂದ ಹೃದಯ ಬಡಿತ ನಿಂತು ಹೋಗಿತ್ತು. ಇತ್ತ ರಕ್ತಸ್ರಾವ ನಿಲ್ಲುತ್ತಿರಲಿಲ್ಲ. ಹೀಗಾಗಿ ಎಕ್ಮೋ ಚಿಕಿತ್ಸೆ ಮೂಲಕ ಕೃತಕ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. 

ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಎನ್‌ಟಿಆರ್‌ ಪುತ್ರ ಹಾಗೂ ತಾರಕರತ್ನ ಅವರ ತಂದೆಯಾದ ನಂದಮೂರು ಮೋಹನ್‌ಕೃಷ್ಣ, ಅವರ ಸಹೋದರರಾದ ಬಾಲಕೃಷ್ಣ, ರಾಮಕೃಷ್ಣ, ಜ್ಯೂನಿಯರ್‌ ಎನ್‌ಟಿಆರ್‌ ಹಲವು ಪ್ರಮುಖರು ಬೆಂಗಳೂರಲ್ಲೇ ಉಳಿದಿಕೊಂಡಿದ್ದರು. 

ಜೀವನ ಜ್ಯೋತಿ, ಶಂಕರಾಭರಣಂ ಖ್ಯಾತಿಯ ನಿರ್ದೇಶಕ ಕೆ ವಿಶ್ವನಾಥ್‌ ನಿಧನ

ತೀವ್ರ ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ತಾರಕರತ್ನ ಅವರಿಗೆ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಗ್ರೀನ್‌ ಕಾರಿಡಾರ್‌ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನಾರಾಯಣ ಹೃದಯಾಲಯದಲ್ಲಿ ನ್ಯೂರಾಲಜಿ, ಕಾರ್ಡಿಯಾಲಜಿ ಸೇರಿದಂತೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ನಿಮ್ಹಾನ್ಸ್‌ ಆಸ್ಪತ್ರೆಯ ಮೆದುಳಿನ ತಜ್ಞ ವೈದ್ಯರ ತಂಡದಿಂದಲೂ ಸಹ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಪಡೆಯಲಾಗಿತ್ತು. 

Follow Us:
Download App:
  • android
  • ios