Asianet Suvarna News Asianet Suvarna News

ಜೀವನ ಜ್ಯೋತಿ, ಶಂಕರಾಭರಣಂ ಖ್ಯಾತಿಯ ನಿರ್ದೇಶಕ ಕೆ ವಿಶ್ವನಾಥ್‌ ನಿಧನ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಕಮ್ ನಟ ವಿಶ್ವನಾಥ್‌ ಕೊನೆಯುಸಿರೆಳೆದಿದ್ದಾರೆ. 

Legendary Director Shankarabharanam fame K Vishwanath passes away vcs
Author
First Published Feb 3, 2023, 10:55 AM IST

ಜೀವನ ಜ್ಯೋತಿ, ಶಂಕತಾಭರಣ, ಸಾಗರ ಸಂಗಮಂ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಕೆ.ವಿಶ್ವನಾಥ್‌ ಕೆಲವು ದಿನಗಳಿಂದ ವಯೋಸಹಜ ಕಾಯಿಳೆಗಳಿಂದ ಬಳಲುತ್ತಿದ್ದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 92 ವರ್ಷದ ವಿಶ್ವನಾಥ್‌ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಬಾಲಿವುಡ್‌ ಚಿತ್ರರಂಗದಲ್ಲಿ ನಿರ್ದೇಶಕ ಮತ್ತು ನಟನಾಗಿ ಗುರುತಿಸಿಕೊಂಡಿದ್ದರು.  ಕೆ ವಿಶ್ವನಾಥ್ ಅವರ ಮೃತದೇಹವನ್ನು ಜ್ಯೂಬಿಲಿ ಹಿಲ್ಸ್‌ನಲ್ಲಿರುವ ನಿವಾಸಕ್ಕೆ ಶಿಫ್ಟ್‌ ಮಾಡಿ ಅಂತಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿರುವ ವಿಶ್ವನಾಥ್ ಮೂಲತಃ ಆಂಧ್ರ ಪ್ರದೇಶ ಗುಂಟೂರು ಜಿಲ್ಲೆಯವರು. ಬಿಎಸ್‌ಸಿಯಲ್ಲಿ ಡಿಗ್ರಿ ಪಡೆದಿರುವ ವಿಶ್ವನಾಥ್ ಮದ್ರಾಸ್‌ನಲ್ಲಿ ಸೌಂಡ್‌ ರೆಕಾರ್ಡಿಂಗ್‌ ಮಾಡುವ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. 1951ರಲ್ಲಿ ಪಾತಾಳ ಭೈರವಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ 1965ರಲ್ಲಿ ತೆಲುಗು ಭಾಷೆಯ ಆತ್ಮ ಗೌರವಂ ಚಿತ್ರದ ಮೂಲಕ ನಿರ್ದೇಶಕರ ಕ್ಯಾಪ್ ಧರಿಸಿದ್ದರು. 

ಮೊದಲ ಚಿತ್ರಕ್ಕೆ ಅತ್ಯುತ್ತಮ ನಂದಿ ಪ್ರಶಸ್ತಿ ಲಭಿಸಿದ ನಂತರ ಓ ಸೀತಾ ಕಥಾ, ಜೀವನ ಜ್ಯೋತಿ, ಶಂಕರಾಭರಣಂ, ಸಿರಿ ಸಿರಿ ಮುವ್ವ, ಸ್ವಾತಿ ಮುತ್ಯಂ, ಸಪ್ತಪದಿ, ಸ್ವರ್ಣ ಕಮಲಂ, ಸಾಗರ ಸಂಗಮಂ ಸೇರಿದಂತೆ ಅನೇಕ ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 80-90ರ ದಶಕದಲ್ಲಿ ಅನೇಕ ಮಹಿಳಾ ಪ್ರಧಾನ ಮತ್ತು ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತಾ ಕಥೆ ಮಾಡಿ ಬೆಳ್ಳಿ ತೆರೆ ಮೇಲೆ ತಂದಿರುವ ಹೆಗ್ಗಳಿಕೆ ಇವರದ್ದು. 

Legendary Director Shankarabharanam fame K Vishwanath passes away vcs

ಕಾಮ್‌ಚೋರ್, ಶುಭ್‌ ಕಾಮ್ನಾ, ಈಶ್ವರ್, ಸಂಗೀತ್ ಸೇರಿದಂತೆ ಹಲವು ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 50ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಕೆ ವಿಶ್ವನಾಥ್ ಶುಭ ಸಂಕಲ್ಪ, ವಜ್ರಂ, ನರಸಿಂಹ ನಾಯ್ಡು, ಟ್ಯಾಗೋರ್, ಸಿಂಗಂ 2, ಲಿಂಗಾ, ಉತ್ತಮ ಮಿಲನ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 

Mandeep Roy ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ

2017ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕೆ ವಿಶ್ವನಾಥ್ ಅವರಿಗೆ ಶಂಕರಾಭರಣಂ , ಸ್ವಾತಿಮುತ್ಯಂ ಸೇರಿದಂತೆ ಮೂರು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 5 ರಾಷ್ಟ್ರ ಪ್ರಶಸ್ತಿ, 7 ನಂದಿ ಪ್ರಶಸ್ತಿ ಮತ್ತು 10ಕ್ಕೂ ಹೆಚ್ಚು ಫಿಲ್ಮಂ ಫೇರ್‌ ಪಡೆದಿದ್ದಾರೆ. 

1980ರಲ್ಲಿ ಫೆಬ್ರವರಿ 2ರಂದು ಶಂಕರಾಭರಣಂ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ ರಿಲೀಸ್ ಆಗಿ 43 ವರ್ಷ ಪೂರೈಸಿದ ದಿನವೇ ವಿಶ್ವನಾಥ್ ಅಗಲಿದ್ದಾರೆ. 

ಮೋದಿ ಸಂತಾಪ:

ಶ್ರೀ ಕೆ.ವಿಶ್ವನಾಥ್ ಗಾರು ಅವರ ನಿಧನದಿಂದ ದುಃಖವಾಗಿದೆ. ಕ್ರಿಯೇಟಿವ್ ಮತ್ತು ಮಲ್ಟಿ ಟ್ಯಾಲೆಂಡೆಟ್‌ ನಿರ್ದೇಶಕರಾಗಿ ವಿಶ್ವನಾಥ್ ಗುರುತಿಸಿಕೊಂಡಿದ್ದರು. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ದಶಕಗಳ ಕಾಲ ವೀಕ್ಷಕರನ್ನು ಮನೋರಂಜಿಸಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು.

Follow Us:
Download App:
  • android
  • ios