Asianet Suvarna News Asianet Suvarna News

ನಟ ಶ್ರೀಕಾಂತ್ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ಸುದ್ದಿ ವೈರಲ್

ಕರ್ನಾಟಕ ಮೂಲದ ತೆಲುಗಿನ ಪ್ರತಿಭಾನ್ವಿತ ನಟ ಶ್ರೀಕಾಂತ್ ಮತ್ತು ಊಹಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಇಬ್ಬರೂ ಬೇರೆ ಬೇರೆ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

telugu Actor Srikanth Divorce rumours viral sgk
Author
First Published Nov 22, 2022, 11:08 AM IST

ಇತ್ತೀಚಿಗೆ ಸಿನಿ ಸೆಲೆಬ್ರಿಟಿಗಳ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೋರ್ವ ತೆಲುಗು ಸ್ಟಾರ್ ದಂಪತಿಯ ಡೈವೋರ್ಸ್ ಸುದ್ದಿ ವೈರಲ್ ಆಗಿದೆ. ನಾಗಚೈತನ್ಯ ಮತ್ತು ಸಮಂತಾ, ಮಂಚು ಮನೋಜ್ ಹೀಗೆ ಅನೇಕ ಸ್ಟಾರ್ಸ್ ವಿಚ್ಛೇದನ ಪಡೆದು ದೂರ ದೂರ ಆಗಿದ್ದಾರೆ. ಮದುವೆ ಆಗಿ ಕೆಲವೇ ವರ್ಷಕ್ಕೆ ದಾಂಪತ್ಯ ಜೀವನ ಕಡಿದುಕೊಂಡು ಬೇರೆ ಬೇರೆ ಆಗುತ್ತಿದ್ದಾರೆ. ಅಲ್ಪಾವಧಿ ಮಾತ್ರವಲ್ಲ ಮದುವೆಯಾಗಿ 25 ವರ್ಷಗಳಾದ ಮೇಲು ಜೊತೆಯಲ್ಲಿ ಬದುಕಲು ಒದ್ದಾಡುತ್ತಿದ್ದು ದೂರ ಆಗುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಸದ್ಯ ವಿಚ್ಛೇದನಕ್ಕೆ ಸಜ್ಜಾಗಿರುವುದು ಮತ್ಯಾರು ಅಲ್ಲ ಕರ್ನಾಟಕ ಮೂಲದ ತೆಲುಗಿನ ಖ್ಯಾತ ನಟ ಶ್ರೀಕಾಂತ್.  

ಪ್ರತಿಭಾನ್ವಿತ ನಟ ಶ್ರೀಕಾಂತ್ ಮತ್ತು ಊಹಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಇಬ್ಬರೂ ಬೇರೆ ಬೇರೆ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ಶ್ರೀಕಾಂತ್ ಪುತ್ರ ರೋಷನ್ ಹೀರೋ ಆಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈ ನಡುವೆ ಶ್ರೀಕಾಂತ್ ವಿಚ್ಛೇದನದ ಸುದ್ದಿ ಹರಿದಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಅಂದಹಾಗೆ ಶ್ರೀಕಾಂತ್ ಮತ್ತು ಊಹಾ ಮತ್ತು ಮದುವೆಯಾಗಿ  25 ವರ್ಷಗಳಾಗಿದೆ. 1997ರಲ್ಲಿ ಶೀಕಾಂತ್ ಮತ್ತು ಊಹಾ ಹಸೆಮಣೆ ಏರಿದರು. ಈ ಜೋಡಿಗೆ ಇಬ್ಬರೂ ಗಂಡು ಮಕ್ಕಳು ರೋಷನ್ ಮತ್ತು ರೋಹನ್ ಮಗಳು ಮೇದಾ. ಶ್ರೀಕಾಂತ್ ಪತ್ನಿ ಊಹಾ ಕೂಡ ನಟಿ. ಇಬ್ಬರೂ ಒಟ್ಟಿಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  

 ಕೊಪ್ಪಳದಲ್ಲಿ ನಟ ಶ್ರೀಕಾಂತ್; ನನಗೆ ಡಾ ರಾಜ್‌ಕುಮಾರ್ ಮತ್ತು ಶಿವಣ್ಣ ಸ್ಫೂರ್ತಿ

ಒಂದು ಕಾಲದಲ್ಲಿ ಸ್ಟಾರ್ ಆಗಿದ್ದ ಶ್ರೀಕಾಂತ್ ಇದೀಗ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 1991ರಲ್ಲಿ ಶ್ರೀಕಾಂತ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ತೆಲುಗು ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಶ್ರೀಕಾಂತ್ ಇತ್ತೀಚಿಗೆ ಆರ್ಥಿಕವಾಗಿ ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇಬ್ಬರ ವಿಚ್ಛೇದನಕ್ಕೆ ಆರ್ಥಿಕ ಸಂಕಷ್ಟವೇ ಕಾರಣ ಎನ್ನಲಾಗಿದೆ. ಆದರೆ ಈ ಬಗ್ಗೆ ದಂಪತಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

ನಾನು ಗಂಗಾವತಿ ಹುಡುಗ, ಡಾ.ರಾಜ್‌ಕುಮಾರ್ ಅವರ ಅಭಿಮಾನಿ ಅವರ ಕುಟುಂಬ ನನಗಿಷ್ಟ: ನಟ ಶ್ರೀಕಾಂತ್

ತೆಲುಗು ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ, ಶ್ರೀಕಾಂತ್ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದು ವಿಚ್ಛೇದನ ಸುದ್ದಿಯನ್ನು ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಸದ್ಯ ಈ ಶ್ರೀಕಾಂತ್ ಪತ್ನಿ ಜೊತೆ ತಮಿಳುನಾಡಿನಲ್ಲಿದ್ದಾರೆ. ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ವಾಪಾಸ್ ಆಗುತ್ತಿದ್ದಂತೆ ಶ್ರೀಕಾಂತ್ ಕೇರಳಗೆ ಶೂಟಿಂಗ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಇತ್ತೀಚಿಗಷ್ಟೆ ಖ್ಯಾತ ನಿರೂಪಕಿ ಸುಮಾ ಮತ್ತು ರಾಜೀವ್ ದಾಂಪತ್ಯದ ಬಗ್ಗೆಯೂ ವದಂತಿ ಹಬ್ಬಿತ್ತು. ಇಬ್ಬರೂ ದೂರ ದೂರ ಆಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಇಬ್ಬರೂ ಚೆನ್ನಾಗಿದ್ದಾರೆ. ಇದೀಗ ಶ್ರೀಕಾಂತ್ ವಿಚಾರದಲ್ಲೂ ಹಾಗೆ ಆಗಿದೆ. ಆದರೆ ಅಭಿಮಾನಿಗಳು ಈ ಸುದ್ದಿ ಸುಳ್ಳಾಗಲಿ ಇಬ್ಬರೂ ಚೆನ್ನಾಗಿ ಇರಲಿ ಎಂದು ಹಾರೈಸುತ್ತಿದ್ದಾರೆ.  

Follow Us:
Download App:
  • android
  • ios