ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿಗೆ ವಾರ್ನಿಂಗ್ ಮಾಡಿದ್ದಾರೆ. ಸದ್ಯ RRR ಸಿನಿಮಾ ಮಾಡುತ್ತಿರುವ ನಿರ್ದೇಶಕ ಆದಿವಾಸಿಗಳ ಭಾವನೆಗಳನ್ನು ಸಿನಿಮಾ ಮೂಲಕ ನೋಯಿಸಿದಲ್ಲಿ ಕ್ರಮ ಕೈಗೊಳ್ಳೋದಾಗಿ ವಾರ್ನ್ ಮಾಡಿದ್ದಾರೆ.

ಆದಿವಾಸಿಗಳಿಗೆ ನೋವುಂಟು ಮಾಡುವ ಅಂಶಗಳಿದ್ದು ಸಿನಿಮಾ ರಿಲೀಸ್ ಮಾಡಿದರೆ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದ್ದಾರೆ. ಸಿದ್ದಿಪೇಟೆಯ ದೌಲತಾಬಾದ್‌ನಲ್ಲಿ ಸಂಜಯ್ ಮಾತನಾಡುವ ವೇಳೆ ಈ ರೀತಿ ವಾರ್ನಿಂಗ್ ಕೊಟ್ಟಿದ್ದಾರೆ.

ಕೊರೋನಾ ಮಧ್ಯೆ ರಾಜಮೌಳಿ RRR ಸಿನಿಮಾ ಶೂಟಿಂಗ್ ಶುರು

ಹೈದರಾಬಾದ್‌ನ ವಿಮೋಚನೆಗಾಗಿ ನಿಜಾಮರ ವಿರುದ್ಧ ಹೋರಾಡಿದ ಬುಡಕಟ್ಟು ಮುಖಂಡ ಕುಮ್ರಾಮ್ ಭೀಮ್‌ರ ಚಿತ್ರಣಕ್ಕೆ ಸಂಜಯ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಲೆ ಟೋಪಿ ಮತ್ತು ಕಣ್ಣುಗಳಿಗೆ ಸುರುಮಾ ಹಚ್ಚಿ ಮುಸ್ಲಿಂ ಆಗಿ ಹೋರಾಡಿದ್ದ ಕುಮ್ರಾಮ್ ಚಿತ್ರಣದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ನಿರ್ದೇಶಕನ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ, ಧೈರ್ಯವಿದ್ದರೆ ಮುಸ್ಲಿಂ ಮುಖಂಡ ಓವೈಸಿ ಜೊತೆ ಕಳೆ ಹೈದರಾಬಾದ್ ಸಿಟಿಯಲ್ಲಿ ಸಿನಿಮಾ ಮಾಡಿ, ಅಥವಾ ಯಾರಾದರೂ ನಿಝಾಮ್ ವಂಶದ ನವಾಬ್‌ಗೆ ಹಣೆಗೆ ತಿಲಕ ಇಟ್ಟು, ಕೇಸರಿ ಉಡುಪು ಉಡಿಸಿ ಸಿನಿಮಾ ಮಾಡಿಸಿ ಎಂದು ಸವಾಲೆಸೆದಿದ್ದಾರೆ.

ರಾಜಮೌಳಿ ಸೆಟ್ಟಿಗೆ ಆಲಿಯಾ ಭಟ್‌ ಬರೋದು ಖಾತ್ರಿ

ರಾಜಮೌಳಿ ಹಿಂದೂಗಳ ಭಾವನೆಗಳನ್ನು ನೋಯಿಸಿದರೆ ಬಿಜೆಪಿ ಕಾರ್ಯಕರ್ತರು ಮೌನವಾಗಿ ಕೂರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಸಿನಿಮಾ ಮಾಡಿದರೆ ಸಿನಿಮಾ ತೋರಿಸುವ ಚಿತ್ರಮಂದಿರಗಳನ್ನು ಸುಟ್ಟುಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ