ಬಾಲಿವುಡ್‌ ಚಿತ್ರರಂಗದ ಹಿರಿಯ ನಿರ್ದೇಶಕ ಮತ್ತು ನಟ ಮಹೇಶ್‌ ಮಂಜ್ರೇಕರ್‌ಗೆ ಬರೋಬ್ಬರಿ 35 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕಾಕ್ ಹೊಟೇಲ್‌ನಲ್ಲಿ 3 ದಿನ ಉಳ್ಕೊಂಡಿದ್ರು ಸುಶಾಂತ್-ಸಾರಾ..!

ಒಂದೇ ಸಮನೆ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ದಾದರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಮಹೇಶ್‌, ಆತನಿಗೆ ಭೂಗತ ಲೋಕದ ಸಂಪರ್ಕವಿದೆ ಎಂದು ತಿಳಿಸಿದ್ದರು. ಆದರೆ ಪೊಲೀಸ್‌ ವ್ಯಕ್ತಿಯನ್ನು ಸೆರೆ ಹಿಡಿದ ನಂತರ ವಿಚಾರಣೆಗೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ.  

ನಿರ್ದೇಶಕನಿಗೆ ಕರೆ ಮಾಡಿದ ವ್ಯಕ್ತಿ ತಾನು ಭೂಗತ ಲೋಕದವನು, ಅಬು ಸಲೀಂ ಗ್ಯಾಂಗ್‌ ಕಡೆಯಿಂದ ವಸೂಲಿ ಮಾಡಲು ಹೇಳಿದ್ದಾರೆ, ಎಂದು ಹಣ ಕೊಡುವಂತೆ ನಾಲ್ಕರಿಂದ ಐದು ಬಾರಿ ಕರೆ ಮಾಡಿ, ಬೆದರಿಕೆ ಹಾಕಿದ್ದಾನೆ.

ಟೀ ಅಂಗಡಿ ವ್ಯಾಪಾರಿ:
ದೂರು ದಾಖಲಿಸಿಕೊಂಡ ಪೊಲೀಸರು AEC ಅವರಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದರು. ಕರೆ ಮಾಡುತ್ತಿದ್ದ ನಂಬರ್‌ ಟ್ಯಾಪ್‌ ಮಾಡುವ ಮೂಲಕ ಕ್ರೈಂ ಬ್ರಾಂಚ್‌ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.

ಮೊದಲ ಸಿನಿಮಾದಿಂದ ಕೈಬಿಟ್ಟದ್ದಕ್ಕೆ 4 ದಿನ ಅತ್ತಿದ್ದರಂತೆ ಅಣ್ಣಯ್ಯ ನಟಿ

ಹೌದು! ಮಹೇಶ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಟೀ ಅಂಗಡಿ ವ್ಯಾಪಾರಿ ಅಂತೆ. 34 ವರ್ಷದ ಮಿಲಿಂದ್ ತುಸಾಂಕರ್‌ ಎಂದು ತಿಳಿದು ಬಂದಿದೆ. ಮುಂಬೈನ 90 ಫೀಟ್‌ ರಸ್ತೆಯಲ್ಲಿ ಟೀ ಅಂಗಡಿಯೊಂದನ್ನು ಇಟ್ಟು ಕೊಂಡಿದ್ದಾನೆ.  'ಕೊರೋನಾ ಲಾಕ್‌ಡೌನ್‌ನಿಂದ ಮಿಲಿಂದ್‌ ಕುಟುಂಬ ಸಂಕಷ್ಟದಲ್ಲಿದ ಕಾರಣ ಹಣ ಸಂಪಾದಿಸಲು ಹೀಗೆ ಮಾಡಿದ್ದಂತೆ. ಗೂಗಲ್‌ ಹಾಗೂ ಯುಟ್ಯೂಬ್‌ನಲ್ಲಿ ವೀಡಿಯೋ ನೋಡಿ ಇಂಥ ಕೆಲಸಕ್ಕೆ ಕೈ ಹಾಕಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.