ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ನಟಿ ಸಾರಾ ಅಲಿ ಖಾನ್ ಜೊತೆಯಾಗಿ ಬ್ಯಾಂಕಾಕ್ ಹೊಟೇಲ್‌ನಲ್ಲಿ 3 ದಿನ ಉಳಿದುಕೊಂಡಿದ್ದರು ಎಂಬ ವಿಚಾರ ತಿಳಿದು ಬಂದಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ಪ್ರತಿ ದಿನ ಹೊಸ ವಿಚಾರಗಳು ಹೊರ ಬರುತ್ತಿವೆ. 6 ಜನ ಸ್ನೇಹಿತರ ಜೊತೆ ಸುಶಾಂತ್ ಬ್ಯಾಂಕಾಕ್ ಟ್ರಿಪ್ ಹೋಗಿದ್ದರು. ಕುಶಾಲ್ ಝವೇರಿ, ಸಿದ್ಧಾರ್ಥ್‌ ಗುಪ್ತಾ, ಅಬ್ಬಾಸ್, ಮುಶ್ತಖ್, ಸಬೀರ್ ಅಹ್ಮದ್ ಜೊತೆ ಸುಶಾಂತ್ ಟ್ರಿಪ್ ಹೋಗಿದ್ದರು ಎಂದು ನಟಿ ರಿಯಾ ಚಕ್ರವರ್ತಿ ತಿಳಿಸಿದ್ದಾರೆ. ಟ್ರಿಪ್ ಬಗ್ಗೆ ಸಬೀರ್ ಅಹ್ಮದ್ ಮಾತನಾಡಿದ್ದು, ಸಾರಾ ಅಲಿ ಖಾನ್ ಕೂಡಾ ಟ್ರಿಪ್‌ಗೆ ಬಂದಿದ್ದರು ಎಂದಿದ್ದಾರೆ.

ಮಗನ ಕೊಂದ ಕೊಲೆಗಾತಿ: ರಿಯಾ ವಿರುದ್ಧ ಸುಶಾಂತ್ ತಂದೆ ಆಕ್ರೋಶ

ಸುಶಾಂತ್ ಸಿಂಗ್‌ನ ಅಸಿಸ್ಟೆಂಟ್ ಆಗಿದ್ದ ಸಬೀರ್ ಈ ಬಗ್ಗೆ ಮಾತನಾಡಿ, ನಟನ ಪಿಆರ್‌ಒ ತಂಡಕ್ಕಾಗಿ ಟ್ರಿಪ್ ಆಯೋಜಿಸಲಾಗಿತ್ತು. ಕೇದಾರ್‌ನಾಥ್ ಸಿನಿಮಾದಲ್ಲಿ ಸುಶಾಂತ್ ಜೊತೆ ಅಭಿನಯಿಸಿದ ಸಾರಾ ಅಲಿಖಾನ್‌ ಕೂಡಾ ಟ್ರಿಪ್‌ನಲ್ಲಿ ಹೋಗಿದ್ದರು.

ನಾವು 7 ಜನರಿದ್ದೆವು. ಸಾರಾ, ಸಿದ್ಧಾರ್ಥ್, ಕುಶಾಲ್ ಝವೇರಿ ಅಬ್ಬಾಸ್, ಸುಶಾಂತ್‌ನ ಬಾಡಿಗಾರ್ಡ್ ಮುಷ್ತಖ್ ಮತ್ತು ನಾನು ಎಂದಿದ್ದಾರೆ. 2018ರಲ್ಲಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದ್ದೆವು.

ಟ್ರಿಪ್ ಸಂದರ್ಭ ಸಾರಾ ಮತ್ತು ಸುಶಾಂತ್ ಇಬ್ಬರೂ ಅವರ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಮೊದಲ ದಿನ ನಾವೆಲ್ಲರೂ ಬೀಚ್‌ಗೆ ಹೋಗಿದ್ದೆವು. ಆಮೇಲೆ ಉಳಿದ ಎಲ್ಲ ದಿನ ಸಾರಾ ಮತ್ತು ಸುಶಾಂತ್ ಬ್ಯಾಂಕಾಕ್‌ನ ಐಲೆಂಡ್ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದರು ಎಂದಿದ್ದಾರೆ.

ಡ್ರಗ್ಸ್ ಡೀಲಿಂಗ್: ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ವಿರುದ್ಧ ಕೇಸ್

ಸುನಾಮಿ ಕುರಿತು ಹವಾಮಾನ ಎಚ್ಚರಿಕೆ ಇದ್ದುದರಿಂದ ಟ್ರಿಪ್ ಕಡಿಮೆ ಅವಧಿಗೆ ಮೊಟಕುಗೊಳಿಸಲಾಯಿತು. ಅಲ್ಲಿ ಕಡಿಮೆ ಟಿಕೆಟ್ ಇದ್ದ ಕಾರಣ ನಾನು ಹಾಗೂ ಮುಶ್ತಖ್ ಉಳಿದುಕೊಂಡಿದ್ದೆವು. ನಂತರ ನಮ್ಮ ಅಗತ್ಯಗಳಿಗಾಗಿ ಸಾಮುವೆಲ್ ಹಾಕಿಪ್ ಹಣ ಕಳುಹಿಸಿಕೊಟ್ಟರು.