ತಾರಕ ರತ್ನ ಆರೋಗ್ಯದಲ್ಲಿ ಅಲ್ಪ ಚೇತರಿಕೆ: ಆಸ್ಪತ್ರೆಗೆ ಕುಟುಂಬ ಮತ್ತು ಗಣ್ಯರ ದಂಡು
ಆಂಧ್ರದ ದೊಡ್ಮನೆಯ NT ರಾಮ್ ರಾವ್ ಕುಟುಂಬದ ಕಿರಿಯ ಕುಡಿ ನಟ ರಾಜಕಾರಣಿ ತಾರಕ್ ರತ್ನ ತೀವ್ರ ಹೃದಯಾಘಾತದಿಂದ ಅಸ್ವಸ್ಥರಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದು, ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡು ಬಂದಿದೆ.
ವರದಿ: ಟಿ. ಮಂಜುನಾಥ, ಹೆಬ್ಬಗೋಡಿ, ಆನೇಕಲ್
ಆನೇಕಲ್ (ಜ.29): ಆಂಧ್ರದ ದೊಡ್ಮನೆಯ NT ರಾಮ್ ರಾವ್ ಕುಟುಂಬದ ಕಿರಿಯ ಕುಡಿ ನಟ ರಾಜಕಾರಣಿ ತಾರಕ್ ರತ್ನ ತೀವ್ರ ಹೃದಯಾಘಾತದಿಂದ ಅಸ್ವಸ್ಥರಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದು, ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡು ಬಂದಿದೆ. ತಾರಕ್ ಆರೋಗ್ಯ ವಿಚಾರಿಸಲು ಸಹೋದರರಾದ ಜೂನಿಯರ್ ಎನ್ಟಿಆರ್, ಕಲ್ಯಾಣ್ ರಾಮ್ ಆಗಮಿಸಿದ್ದಾರೆ. ಜೊತೆಗೆ ನಟ ಶಿವರಾಜ್ ಕುಮಾರ್ ಮತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸಹ ಭೇಟಿ ನೀಡಿ ತಾರಕ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಚಿಕಿತ್ಸೆಗೆ ಸ್ಪಂದನೆ ಇದ್ದರು ಸಾವು ಬದುಕಿನ ನಡುವೆ ಹೋರಾಟ: ತೆಲುಗಿನ ಖ್ಯಾತ ನಟ ನಂದಮೂರಿ ತಾರಕ ರಾಮರಾವ್ ವಂಶದ ಕುಡಿ ತಾರಕ ರತ್ನ ತೀವ್ರ ಹೃದಯಾಘಾತದಿಂದ ಅಸ್ವಸ್ಥರಾಗಿ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ನಾರಾಯಣ ಹೃದಯಾಲಯದಲ್ಲಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿರವಾಗಿದ್ದು, ಅಲ್ಪ ಚೇತರಿಕೆ ಕಂಡು ಬಂದಿದ್ದು, ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಸಹೋದರ ತಾರಕ ರತ್ನನ ಆರೋಗ್ಯ ವಿಚಾರಿಸಲು ಜೂನಿಯರ್ ಎನ್ಟಿಆರ್, ಕಲ್ಯಾಣ್ ರಾಮ್ ಜೊತೆಗೆ ನಟ ಶಿವರಾಜ್ ಕುಮಾರ್ ಮತ್ತು ಸಚಿವ ಸುಧಾಕರ್ ಆಸ್ಪತ್ರೆಗೆ ಭೇಟಿ ನೀಡಿದ್ದು, ವೈದ್ಯರ ಬಳಿ ತಾರಕ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ನಟ ತಾರಕ್ ರತ್ನ ಆರೋಗ್ಯ ಸ್ಥಿತಿ ಗಂಭೀರ- ಸ್ಟಂಟ್ ಅಳವಡಿಸಿದರೂ ನಿಲ್ಲದ ರಕ್ತಸ್ರಾವ
ಬಳಿಕ ಮಾಧ್ಯಮಗಳ ಜೊತೆ ನಟ ಬಾಲಕೃಷ್ಣ ಮಾತನಾಡಿ ತಾರಕ ರತ್ನ ಜೀವನದಲ್ಲಿ ಅಚ್ಚರಿ ನಡೆದಿದ್ದು, ಹೃದಯಾಘಾತದ ಬಳಿಕ ಹೃದಯ ಸ್ಥಂಭನವಾಗಿತ್ತು.ವೈದ್ಯರ ಪರಿಶೀಲನೆ ವೇಳೆ ಹೃದಯ ಬಡಿತ ಸ್ಥಬ್ದವಾಗಿತ್ತು. ಆದ್ರೆ 45 ನಿಮಿಷಗಳ ಬಳಿಕ ಅಚ್ಚರಿಯೆಂಬಂತೆ ಹೃದಯ ಬಡಿತ ಮರಳಿತ್ತು. ವೈದ್ಯರ ಶಿಪಾರಸ್ಸಿನಂತೆ ನಾರಾಯಣ ಹೃದಯಾಲಯಕ್ಕೆ ಶಿಪ್ಟ್ ಮಾಡಲಾಗಿದ್ದು, ವೈದ್ಯರು ಬಹಳ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ತಾರಕ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕೆಲವೊಮ್ಮೆ ಕಣ್ಣು ಮಿಟಕಿಸುವುದು, ದೇಹ ಅಲುಗಾಡಿಸುವುದು ಕಂಡು ಬರುತ್ತಿದೆ.
ಚಿಕಿತ್ಸೆಗೆ ಸ್ಪಂಧಿಸುತ್ತಿದ್ದು, ಔಷಧ ಉಪಚಾರ ಪರಿಣಾಮ ಬೀರಲು ಸಮಯ ತೆಗೆದುಕೊಳ್ಳುತ್ತದೆ. ತಾರಕ್ ಶೀಘ್ರ ಗುಣಮುಖರಾಗಲು ಎನ್ಟಿಆರ್ ಮತ್ತು ರಾಜ್ ಕುಮಾರ್ ಅಭಿಮಾನಿಗಳು ಹಾರೈಕೆ ಸದಾ ಇರುತ್ತದ್ದೆ. ಅಭಿಮಾನಿಗಳ ಶುಭ ಹಾರೈಕೆಗೆ ಚಿರ ಋಣಿಯಾಗಿದ್ದೆನೆ. ತಾರಕ್ ಆರೋಗ್ಯ ವಿಚಾರಿಸಲು ಶಿವರಾಜ್ ಕುಮಾರ್ ಆಗಮಿಸಿದ್ದಾರೆ. ರಾಜ್ ಕುಮಾರ್ ಮತ್ತು ನಮ್ಮ ಕುಟುಂಬದ ನಡುವೆ ಉತ್ತಮ ಬಾಂಧವ್ಯ ಇದೆ. ಸಹೋದರ ಪುನೀತ್ ಅಗಲಿಕೆ ಬಗ್ಗೆ ಬೇಸರ ಇದೆ ಎಂದು ಬಾಲಕೃಷ್ಣ ಬಾವುಕರಾದರು
ನಂದಮೂರಿ ಕುಟುಂಬದ ಕುಡಿ ಆರೋಗ್ಯ ವಿಚಾರಿಸಲು ಆಗಮಿಸಿದ್ದ ನಟ ಶಿವರಾಜ್ ಕುಮಾರ್ ಮಾತನಾಡಿ ವೈದ್ಯರು ಮತ್ತು ಕುಟುಂಬದವರ ಜೊತೆ ಮಾತನಾಡಿದ್ದು, ತಾರಕ ರತ್ನ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು, ಕಣ್ಣುಗಳ ಚಲನೆ ಕಂಡು ಬರುತ್ತಿದೆ. ಆದರೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವೈದ್ಯರು ಪ್ರಯತ್ನ ಮುಂದುವರಿಸಿದ್ದಾರೆ, ಚಿಕಿತ್ಸೆಗೆ ತಾರಕ್ ಸ್ಪಂದಿಸುತ್ತಿದ್ದಾರೆ, ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಭರವಸೆ ಇದೆ. ಒಂದು ಕುಟುಂಬವಾಗಿ ನಾನು ಇಲ್ಲಿಗೆ ಬಂದಿದ್ದೆನೆ ಎಂದು ನಟ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ.
ನಟ ಜೂನಿಯರ್ ಎನ್ಟಿಆರ್ ಮಾತನಾಡಿ ತಾರಕ ರತ್ನನಿಗೆ ನಾರಾಯಣ ಹೃದಯಾಲಯ ವೈದ್ಯರಿಂದ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಆದರೂ ತಾರಕ ವೈದ್ಯ ಬಲದ ಜೊತೆ ಆತ್ಮ ಬಲದೊಂದಿಗೆ ಹೋರಾಟ ನಡೆಸುತ್ತಿದ್ದಾನೆ. ತಾರಕನಿಗೆ ಅಸಂಖ್ಯಾತ ಅಭಿಮಾನಿಗಳ ಹಾರೈಕೆ ಇದ್ದು, ಅತಿ ಶೀಘ್ರದಲ್ಲಿ ವಿಷಮ ಸ್ಥಿತಿಯಿಂದ ಪಾರಾಗುವ ವಿಶ್ವಾಸವಿದೆ. ನಮ್ಮೆಲ್ಲರ ಜೊತೆ ಆನಂದದಿಂದ ಇನ್ನಷ್ಟು ದಿನ ಇರಲಿ ಎಂದು ಭಗವಂತನಲ್ಲಿ ಬೇಡಿವೆ ಎಂದು ತಿಳಿಸಿದ್ದಾರೆ. ಬಳಿಕ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾತನಾಡಿ ನಾರಾಯಣ ಹೃದಯಾಲದಲ್ಲಿ ನ್ಯೂರಾಲಜಿ, ಕಾರ್ಡಿಯಾಲಜಿ ಸೇರಿದಂತೆ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಕುಸಿದು ಬಿದ್ದ ನಟ ತಾರಕ ರತ್ನ ತೀವ್ರ ಅಸ್ವಸ್ಥ; ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ
ಅಲ್ಲದೆ ನಿಮಾನ್ಸ್ ಆಸ್ಪತ್ರೆ ಮೆದುಳಿನ ತಜ್ಞ ವೈದ್ಯರ ತಂಡದಿಂದಲು ಸಹ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಸದ್ಯ ತಾರಕ್ ಆರೋಗ್ಯದ ಸ್ಥಿತಿ ಸ್ಥಿರಿವಾಗಿದೆ, ಆದರೆ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ. ಆದರೂ ಚಿಕಿತ್ಸೆಗೆ ಸ್ಪಂದಿಸಿತ್ತಿದ್ದು, ನಮಗೆ ಪಾಸಿಟಿವ್ ಅಂಶವಾಗಿದೆ. ಹಾಗಾಗಿ ತಾರಕ್ ಆದಷ್ಟು ಬೇಗ ಗುಣರಾಗಲಿ ಎಂದು ಆಶಿಸೋಣ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ತಿಳಿಸಿದರು, ಒಟ್ಟಿನಲ್ಲಿ ಸಹೃದಯಿ ತಾರಕ್ ಹೃದಯ ಶೀಘ್ರ ಗುಣಮುಖವಾಗಲಿ ಎಂದು ನಂದಮೂರಿ ಕುಟುಂಬ ಮತ್ತವರ ಆಪ್ತ ಬಳಗ ಜೊತೆಗೆ ಅಭಿಮಾನಿ ದಂಡು ಬೇಡಿಕೊಳ್ಳುತ್ತಿದ್ದು, ವೈದ್ಯ ಬಲದ ಜೊತೆ ಆತ್ಮ ಬಲ ಮತ್ತು ದೈವ ಬಲ ತಾರಕ್ ಕೈ ಹಿಡಿಯಲಿ ಎಂದು ಶುಭ ಹಾರೈಸೋಣ.