Asianet Suvarna News Asianet Suvarna News

Nandamuri Taraka Ratna; ಕುಸಿದು ಬಿದ್ದ ನಟ ತಾರಕ ರತ್ನ ತೀವ್ರ ಅಸ್ವಸ್ಥ; ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

ಪಾದಯಾತ್ರೆ ವೇಳೆ ಕುಸಿದು ಬಿದ್ದು ಟಾಲಿವುಡ್ ಖ್ಯಾತ ನಟ ನಂದಮೂರಿ ತಾರಕ ರತ್ನ ತೀವ್ರ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Nandamuri Taraka Ratna faints during Nara Lokesh's padayatra and rushed to hospital sgk
Author
First Published Jan 27, 2023, 3:37 PM IST

ಪಾದಯಾತ್ರೆ ವೇಳೆ ಕುಸಿದು ಬಿದ್ದು ಟಾಲಿವುಡ್ ಖ್ಯಾತ ನಟ ನಂದಮೂರಿ ತಾರಕ ರತ್ನ ತೀವ್ರ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಪಾದಯಾತ್ರೆ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಕುಪ್ಪಂನ ಖಾಸಗಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. 

ಮಾಜಿ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಶುಕ್ರವಾರ ಕುಪ್ಪಂನಲ್ಲಿ ಪಾದಯಾತ್ರೆ ಆರಂಭಿಸಿದ್ದು, ಅವರ ಜೊತೆ ಹಲವು ರಾಜಕೀಯ ಮುಖಂಡರು ಭಾಗಿಯಾಗಿದ್ದರು. ನಟ ಕಮ್ ರಾಜಕಾರಣಿ ತಾರಕ ರತ್ನ ಕೂಡ ಪಾದಯಾತ್ರೆಯ ಭಾಗವಾಗಿದ್ದರು. ನಾರಾ ಲೋಕೇಶ್ ಪಾದಯಾತ್ರೆ ಆರಂಭಿಸುವ ಮುನ್ನ ಲಕ್ಷ್ಮೀಪುರಂ ಶ್ರೀ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸ್ವಲ್ಪ ದೂರ ನಡೆದ ನಂತರ ಲೋಕೇಶ್ ಅಲ್ಲಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದರು. ತಾರಕ ರತ್ನ ಕೂಡ ಲೋಕೇಶ್ ಜೊತೆಗೆ ಮಸೀದಿಯೊಳಗೆ ಹೋದರು. ಮಸೀದಿಯಿಂದ ಹೊರಬರುವಾಗ ಕಾರ್ಯಕರ್ತರು ಒಮ್ಮೆಗೆ ನುಗ್ಗಿದರು. ನೂಕುನುಗ್ಗಲಿನಲ್ಲಿ ನಟ ಮೂರ್ಛೆ ತಪ್ಪಿ ಕೆಳಗೆ ಬಿದ್ದರು. ತಕ್ಷಣ ವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದರು.

ತಾರಕ ರತ್ನ ಅವರ ಆರೋಗ್ಯ ವಿಚಾರಿಸಲು ಅವರ ಚಿಕ್ಕಪ್ಪ ಹಾಗೂ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಂತರ ಯುವ ನಟನನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎನ್ನುವ ಮಾಹಿತಿ ತಿಳಿದು ಬಂದಿದೆ.

ತಾರಕ ರತ್ನ ಅವರು ಟಿಡಿಪಿ ಸಂಸ್ಥಾಪಕ, ದಿಗ್ಗಜ ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಮೊಮ್ಮಗ.  ಜೂನಿಯರ್ ಎನ್ ಟಿ ಆರ್, ಕಲ್ಯಾಣ್ ರಾಮ್ ಮತ್ತು ಲೋಕೇಶ್ ಅವರ ಸೋದರಸಂಬಂಧಿ. 

 

Follow Us:
Download App:
  • android
  • ios