ಮಗಳ ಆ್ಯಪ್ ಲಾಂಚ್ ಮೂಲಕ ಪುನೀತ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದ ತಲೈವಾ. ಈಗಲೂ ಲಾಭ ನೋಡಬೇಡಿ ಎಂದು ನೆಟ್ಟಿಗರು....
ತಮಿಳು ಚಿತ್ರರಂಗದ (Kollywood)ಸೂಪರ್ ಸ್ಟಾರ್, ಭಾರತೀಯ ಸಿನಿ ರಸಿಕರ ತಲೈವಾ ರಜನಿಕಾಂತ್ (Rajinikanth) ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಆಗಿರುತ್ತಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಜನಿ ತಮ್ಮ ಜೀವನದ ಸಣ್ಣ ಪುಟ್ಟ ವಿಚಾರಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡು, ಅಪ್ಡೇಟ್ ಮಾಡುತ್ತಿರುತ್ತಾರೆ. ಆದರೆ ಕಳೆದ ಎರಡು-ಮೂರು ತಿಂಗಳಿನಿಂದ ರಜನಿಕಾಂತ್ ಆರೋಗ್ಯದಲ್ಲಿ ಏರು ಪೇರು ಕಂಡಿದೆ. ಹೀಗಾಗಿ ಆಸ್ಪತ್ರೆಗೆ (Hospital) ದಾಖಲಾಗಿ, ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು, ಚೇತರಿಸಿಕೊಂಡು ಮನೆಗೆ ಮರುಳಿದ್ದಾರೆ.
ಕನ್ನಡ ಚಿತ್ರರಂಗದ (Sandalwood) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಕ್ಟೋಬರ್ 29ರಂದು ಹೃದಯಾಘಾತದಿಂದ (Heart attack) ಕೊನೆ ಉಸಿರೆಳೆದರು. ಅಪ್ಪು ಅಗಲಿಕೆಯ ಎರಡು ದಿನಗಳ ಮುನ್ನವೇ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. ಅಪ್ಪು ವಿಚಾರದಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಕುಟುಂಬಸ್ಥರು ಈ ವಿಷಯವನ್ನು ಅವರಿಗೆ ತಿಳಿಸಿರಲಿಲ್ಲ. ಹೀಗಾಗಿ ನಿನ್ನೆ ಅಂದ್ರೆ ನವೆಂಬರ್ 10ರಂದು ಪುನೀತ್ ಕುಟುಂಬಸ್ಥರಿಗೆ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ರಜನಿಕಾಂತ್ ಟ್ಟೀಟ್ ಈಗ ತಪ್ಪು ರೀತಿಯಲ್ಲಿ ಪ್ರಚಾರವಾಗುತ್ತಿದೆ.
ಟ್ಟಿಟರ್‌ನಲ್ಲಿ (Twitter) ರಜನಿಕಾಂತ್ 'ಪುನೀತ್ ಆತ್ಮಕ್ಕೆ ಶಾಂತಿ (RIP) ಸಿಗಲಿ, ಎಂದು ಹೇಳಬೇಕು ಅಂತ ಮನಸ್ಸು ಒಪ್ಪುತ್ತಿಲ್ಲ,' ಎಂದಿದ್ದಾರೆ. ಇದೇ ಟ್ಟೀಟ್ ಜೊತೆಗೆ ತಮ್ಮ ಪುತ್ರಿ ಇತ್ತೀಚೆಗೆ ಲಾಂಚ್ ಮಾಡಿರುವ ಆ್ಯಪ್ ಲಿಂಕ್ ಕೂಡ ಹಂಚಿಕೊಂಡಿದ್ದಾರೆ. ಹೀಗಾಗಿ ನೆಟ್ಟಿಗರು ಈ ಸಂತಾಪವನ್ನು ತಪ್ಪಾಗಿ ಸ್ವೀಕರಿಸಿದ್ದಾರೆ. ಒಂದು ವೇಳೆ ಪುನೀತ್‌ಗೆ ಸಂತಾಪ ಹೇಳಿ, ಆನಂತರ ಲಿಂಕ್ ಶೇರ್ ಮಾಡಿಕೊಂಡಿದ್ದರೆ ತಲೈವಾ ವಿರುದ್ಧ ನೆಟ್ಟಿಗರು ಗರಂ ಆಗುತ್ತಿರಲಿಲ್ಲ ಎಂದೆನಿಸುತ್ತದೆ.
'ನಿಮ್ಮ ಆ್ಯಪ್‌ಗೂ ಪುನೀತ್ ಸಂತಾಪಕ್ಕೂ ಯಾವ ಸಂಬಂಧ ಇದೆ? ರಾಜ್ಯ ರಾಜ್ಯಗಳಿಂದ ಜನರು ಬಂದು ಪುನೀತ್ ಅಂತಿಮ ದರ್ಶನ ಪಡೆದರು. ನಿಮ್ಮ ಕುಟುಂಬದಿಂದ (Family) ಒಬ್ಬರು ಬರಲು ಆಗಿಲ್ವಾ?', 'ಸರ್ ನಿಮಗೂ ಆರೋಗ್ಯದ ಸಮಸ್ಯೆ ಇದೆ. ನೀವು ನೋವಿನಲ್ಲಿದ್ದೀರಿ, ಆದರೆ ಈ ಸಮಯದಲ್ಲೂ ನಿಮ್ಮ ಮಗಳ ಆ್ಯಪ್ ಲಾಂಚ್ ಹಾಗೂ ಅದರ ಲಿಂಕ್ ಶೇರ್ ಮಾಡುವ ಅಗತ್ಯವಿರಲಿಲ್ಲ. ತಿಳುವಳಿಕೆ ಇರುವ ವ್ಯಕ್ತಿಯಾಗಿ ನೀವು ಈ ರೀತಿ ಮಾಡುವುದಿಲ್ಲ. ಆದರೆ ಇದರ ಹಿಂದೆ ನಿಮ್ಮ ಮಕ್ಕಳು ಬೆಳೆಯಲಿ ಎನ್ನುವ ಉದ್ದೇಶ ಇರುವುದರ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ನಿಮ್ಮ ಅಭಿಮಾನಿಯಾಗಿ ಇದನ್ನು ನೋಡಿ ಮೌನಿಯಾಗಿರುವೆ,' ಎಂದು ಕಾಮೆಂಟ್ (Comment) ಹಾಗೂ ಟ್ರೋಲ್ (Troll) ಮಾಡುತ್ತಿದ್ದಾರೆ ಅಭಿಮಾನಿಗಳು.
ಅಶ್ವಿನಿ ಪುನೀತ್ ಅವರ ಬೆಲೆ ಕಟ್ಟಲಾಗದ ನಗು ನೋಡೋದ್ ಯಾವಾಗಪ್ಪ?: ಒಳ್ಳೆ ಹುಡುಗ ಪ್ರಥಮ್
![]()
ರಜನಿಕಾಂತ್ ಅವರು ಸಂತಾಪ ಹೇಳಿರುವುದು ತಡವಾಗಿರಬಹುದು. ಆದರೆ ಅವರ ಪತ್ನಿ ಮತ್ತು ಪುತ್ರಿ ಅವರು ಪುನೀತ್ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಜನಿ ಅಭಿಮಾನಿಗಳು ಅವರ ಪರ ಸೋಷಿಯಲ್ ಮೀಡಿಯಾದಲ್ಲಿ (Social media) ಬ್ಯಾಟಿಂಗ್ ಮಾಡಿದ್ದಾರೆ. ' ಶಿವರಾಜ್‌ಕುಮಾರ್ (Shivarajkumar) ಮತ್ತು ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ನೀವು ಸಾಂತ್ವನ ತಿಳಿಸಿ. ನೀವು ದೊಡ್ಡ ಮನೆಯವರು ಜೊತೆ ಹೊಂದಿರುವ ಬಾಂಧವ್ಯ ಗೌರವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆ್ಯಪ್ ಬಗ್ಗೆ ಮಾತನಾಡುವವರಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಇದನ್ನು ಪುನೀತ್ ಎಷ್ಟು ಪ್ರೋತ್ಸಾಹ ನೀಡಿದ್ದರು, ಎಂದು ಯಾರಿಗೂ ತಿಳಿದಿಲ್ಲ,' ಎಂದು ಕಾಮೆಂಟ್ ಮಾಡಿದ್ದಾರೆ.
ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಾಗಾರ ವೇದಿಕೆಗೆ ಪುನೀತ್ ಹೆಸರು : ನಿರಾಣಿ ತೀರ್ಮಾನ
ಒಟ್ಟಿನಲ್ಲಿ ಪುನೀತ್ ಅಗಲಿದ ಸಮಯದಲ್ಲಿ ಯಾರು ಬಂದರು, ಯಾರು ಬಂದಿಲ್ಲ ಎನ್ನುವ ಮಾತುಗಳು ದೊಡ್ಡ ವಿಚಾರವಾಗುತ್ತಿರುವುದನ್ನು ನೋಡುವುದಕ್ಕೆ ಬೇಸರವಾಗುತ್ತಿದೆ ಎನ್ನುತ್ತಾರೆ ಅಪ್ಪು ಅಭಿಮಾನಿಗಳು.
