ಖ್ಯಾತ ನಟ ಅಜಿತ್, ೫೩, ಸದ್ಯ ಕಾರ್ ರೇಸಿಂಗ್ ನಲ್ಲಿ ಸಕ್ರಿಯರಾಗಿದ್ದಾರೆ. ಕಾಲೇಜು ದಿನಗಳಿಂದಲೂ ರೇಸಿಂಗ್ ಪ್ರತಿಭೆ ಹೊಂದಿದ್ದ ಅವರು, ಸಿನಿಮಾ ನಟನೆಯ ನಡುವೆಯೂ ಈ ಹವ್ಯಾಸ ಮುಂದುವರೆಸಿದ್ದಾರೆ. ನಟಿ ಶಾಲಿನಿ ಜೊತೆ ಮದುವೆಯಾಗುವ ಮುನ್ನ, ನಟಿ ಹೀರಾ ಜೊತೆಗಿನ ಪ್ರೇಮ ವಿಫಲವಾಗಿತ್ತು. ಈಗ ಅಂತಾರಾಷ್ಟ್ರೀಯ ರೇಸ್ ಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸುತ್ತಿದ್ದಾರೆ.

ಸದ್ಯ ಬಿಗ್ ಕಾರು ರೇಸ್ ಪಟುವಾಗಿ ಜಗತ್ತಿನಾದ್ಯಂತ ಸೌಂಡ್ ಮಾಡುತ್ತಿದ್ದಾರೆ ನಟ ಅಜಿತ್. ತಮಿಳಿನಲ್ಲಿ ದೊಡ್ಡ ಸ್ಟಾರ್ ನಟರಾಗಿರುವ ಅಜಿತ್ ಕುಮಾರ್ (Ajith Kumar) ಅವರು ಇತ್ತೀಚೆಗೆ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಕಾರಣ, ಅವರಿಗೆ ಇರುವ ಕಾರಿನ ರೇಸ್ ಕ್ರೇಜ್. ಕ್ರೇಜ್ ಅಂದ್ರೆ ಬರೀ ಕ್ರೇಜ್ ಅಲ್ಲ, ಅವರಿಗೆ ಕಾರ್ ರೇಸ್‌ನಲ್ಲಿ ಹುಚ್ಚು ಮಾತ್ರವಲ್ಲ, ಅದರಲ್ಲಿ ಪ್ರತಿಭೆಯಿದೆ, ಟ್ರೇನಿಂಗ್ ಇದೆ. ಕಾಲೇಜು ದಿನಗಳಲ್ಲೇ ಅವರು ಅದರಲ್ಲಿ ತೊಡಗಿಸಿಕೊಂಡು ಬಹುಮಾನ ಗೆದ್ದಿರೋದೂ ಇದೆ. ಅಜಿತ್ ಅವರಿಗೆ ಬೈಕ್ ರೇಸ್ (Bike Race) ಕ್ರೇಜ್ ಕೂಡ ತುಂಬಾ ಇದೆ.

ಆದರೆ, ಒಂದಾನೊಂದು ಕಾಲದಲ್ಲಿ ಸಿನಿಮಾ ನಟನೆಗೆ ಇಳಿದ ಅಜಿತ್ ಕುಮಾರ್ ಅವರು ತಮಿಳು ಸಿನಿಮಾರಂಗದಲ್ಲಿ ದೊಡ್ಡ ಸ್ಟಾರ್‌ ನಟರಾಗಿ ಬೆಳೆದರು. ಸಿನಿಮಾ ಒಂದಾದ ಮೇಲೆ ಮತ್ತೊಂದು ಎಂಬಂತೆ ಕೈ ಬೀಸಿ ಕರೆಯಿತು. ಹೀಗಾಗಿ ಸಹಜವಾಗಿಯೇ ಅವರು ನಟಿಸುತ್ತ ಸಾಗತೊಡಗಿದರು. ನಟಿ ಶಾಲಿನಿ (Shalini) ಅವರೊಂದಿಗೆ ಮದುವೆಯೂ ಆಗತೊಡಗಿತು. ಮತ್ತೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದರು. ಸಿನಿಮಾ ಸೂಪರ್ ಹಿಟ್ ಆಗಿದ್ದೇ ಹೆಚ್ಚು.

ರಮ್ಯಾ ಕೃಷ್ಣನ್ ಬಣ್ಣಬಣ್ಣದ ಫೋಟೋಗಳು ಏನೋ ಸೀಕ್ರೆಟ್ ಹೇಳ್ತಿವೆ, ನಿಮ್ಗೆ ಅರ್ಥವಾಯ್ತಾ ನೋಡಿ..!

ಆದರೂ ಕೂಡ ಎಲ್ಲೋ ಒಂದು ಕಡೆ ಅವರಿಗೆ ಕಾರ್ ರೇಸ್ (Car Race) ಕ್ರೇಜ್ ಕಡಿಮೆ ಆಗಿರಲೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ನಟ ಅಜಿತ್ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವುದನ್ನು ಕಡಿಮೆ ಮಾಡತೊಡಗಿದರು, ಅದಕ್ಕೆ ಕಾರಣ ಒನ್ಸ್ ಅಗೇನ್ ಕಾರ್ ರೇಸ್ ಕ್ರೇಜ್. ಒಮ್ಮೆ ಸ್ಟಾಪ್ ಮಾಡಿದ್ದ ಕಾರ್ ರೇಸ್ ಟ್ರೇನಿಂಗ್ ಪುನಃ ಶುರು ಮಾಡಿಕೊಂಡರು. ಇಂಟರ್‌ನ್ಯಾಷನಲ್‌ ರೇಸ್ ಕಾಂಪಿಟೇಶನ್‌ಗೆ ರೆಡಯಾದರು. ಇತ್ತೀಚೆಗೆ ರೇಸ್‌ನಲ್ಲಿ ಗೆದ್ದೂ ಆಯ್ತು. ಈಗ ನಟ ಅಜಿತ್ ಅವರಿಗೆ 53 ವರ್ಷ (1971)

ಇಂಥ ನಟ ಅಜಿತ್ ಅವರು ನಟಿ ಶಾಲಿನಿ ಅವರೊಂದಿಗೆ ಲವ್, ಡೇಟಿಂಗ್ ಹಾಗೂ ಮದುವೆಗೂ ಮೊದಲು ಇನ್ನೊಬ್ಬಳು ನಟಿಯೊಂದಿಗೆ ಲವ್ ಬ್ರೇಕಪ್ ಆಗಿತ್ತು. ಹೌದು, ಹೀರಾ ರಾಜಗೋಪಾಲ್ (Hira Rajagopal) ಹೆಸರಿನ ನಟಿಯನ್ನು ಪ್ರೀತಿಸುತ್ತಿದ್ದರು ನಟ ಅಜಿತ್. ಅವರೊಂದಿಗೆ ಸಿನಿಮಾದಲ್ಲಿ ನಟಿಸುವಾಗ ನಟ ಅಜಿತ್ ತಮ್ಮ ಪ್ರೇಮವನ್ನು ಪತ್ರದ ಮೂಲಕ ತಿಳಿಸಿದ್ದರು. ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಅವರಿಬ್ಬರ ಫ್ಯಾಮಿಲಿ ಅದಕ್ಕೆ ಸಮ್ಮತಿಸಲಿಲ್ಲ. 

ಮುತ್ತು ಕೊಟ್ಟಿದ್ರು ಪ್ರಧಾನಿ ಇಂದಿರಾ ಗಾಂಧಿ, 'ಮಿಸ್ ಲೀಲಾವತಿ'ಗೆ ಸ್ವಿಮ್ ಸ್ಯೂಟ್ ಧರಿಸಿದ್ದ ಜಯಂತಿ!

ನಟಿ ಹೀರಾ ರಾಜಗೋಪಾಲ್ ಎಂಬ ನಟಿಯ ವರ್ತನೆ ನಟ ಅಜಿತ್ ತಾಯಿಯವರಿಗೆ ಇಷ್ಟವಾಗಿರಲಿಲ್ಲ. ತಮ್ಮ ಮಗ ಅಜಿತ್ ಹೀರಾರನ್ನೆ ಮದುವೆ ಆಗುತ್ತೇನೆ ಎಂದಾಗ ಅಜಿತ್ ತಾಯಿ ಸುತಾರಾಂ ಒಪ್ಪಿಗೆ ಕೊಡಲಿಲ್ಲ. ಮೇಲಾಗಿ, 'ಅವರ ವರ್ತನೆ ಸರಿಯಲ್ಲ, ಸಂಸಾರ ಸರಿ ಹೋಗಲ್ಲ' ಎಂದು ತಮ್ಮ ಮಗನಿಗೆ ಬುದ್ಧಿ ಹೇಳೀದರು. ಅಮ್ಮನ ಮಾತಿಗೆ ಬೆಲೆ ಕೊಟ್ಟು ಅಜಿತ್ ಅವರು ಹೀರಾ ಅವರಿಗೆ ಕೈ ಕೊಟ್ರು!

ಹೀಗಾಗಿ ನಟ ಅಜಿತ್ ಹಾಗೂ ಹೀರಾ ಲವ್ ಬ್ರೇಕಪ್ ಆಯ್ತು. ಆ ಬಳಿಕ ನಟ ಅಜಿತ್ ಅವರು ನಟಿ ಶಾಲಿನಿಯನ್ನು (2000) ಮದುವೆಯಾದರು. ಈಗ ಸುಖದಿಂದ ಸಂಸಾರ ಮಾಡಿಕೊಂಡಿದ್ದಾರೆ. ಸದ್ಯ ಕಾರ್ ರೇಸ್‌ ಹುಚ್ಚಿಗೆ ಬಿದ್ದು ಆಕ್ಸಿಡೆಂಟ್ ಮಾಡಿಕೊಂಡು ಕೂಡ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ ಅಜಿತ್. ಸದ್ಯ ಸಿನಿಮಾರಂಗದಿಂದ ಕೊಂಚ ಅಂತರ ಕಾಪಾಡಿಕೊಂಡು ಕಾರ್ ರೇಸ್ ಕಾಂಪಿಟೇಶ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಧರ್ಮಪತ್ನಿ ಪಾರ್ವತಮ್ಮ ಬಗ್ಗೆ ಅಣ್ಣಾವ್ರು ಹೀಗೆ ಹೇಳಿದ್ದು, ತಮಾಷೆಗೋ or ತಮಾಷೆಯಾಗಿಯೋ...!