Asianet Suvarna News Asianet Suvarna News
breaking news image

ನನ್ನ ಗಂಡ ಸಲಿಂಗಕಾಮಿ, ನೀನೊಬ್ಬಳು ಸತ್ತ ಕಾಗೆ ಇದ್ದಂತೆ ಕೆಟ್ಟದಾಗಿ ಸಾಯುತ್ತೀಯಾ: ಗಾಯಕಿ ಸುಚಿತ್ರಾ

ಮತ್ತೆ ಶುರುವಾಯ್ತು ಸುಚಿತ್ರಾ- ಕಸ್ತೂರಿ ವಾರ್‌. ಆಕೆ ನನ್ನ ಗಂಡ ಸಲಿಂಗಕಾಮಿ ಅಂದ್ರೆ ಈಕೆ ಮಾನಸಿಕ ಅಸ್ವಸ್ಥತೆ ಅಂತಾಳೆ.......

Tamil singer Suchitra angry on actress Kasthuri for commenting on personal life vcs
Author
First Published Jul 1, 2024, 11:49 AM IST

ಹಲವು ವರ್ಷಗಳಿಂದ ತಮಿಳು ಗಾಯಕಿ ಸುಚಿತ್ರಾ ಒಂದಲ್ಲ ಒಂದು ವಿಚಾದದಿಂದ ಚರ್ಚೆಗೆ ಗುರಿಯಾಗುತ್ತಿದ್ದಾರೆ. ಯಾವಾಗ ಸುಚಿತ್ರಾ ಲೀಕ್ಸ್‌ ವಿವಾದ ದೊಡ್ಡದಾಯ್ತು ಅಲ್ಲಿಂದ ಸೈಲೆಂಟ್ ಆಗಿ ವಿದೇಶ ಸೇರಿದ ಗಾಯಕಿ ಗಂಡನನ್ನು ಬಿಟ್ಟಿದ್ದಾರಂತೆ. ಕೆಲವು ದಿನಗಳ ಹಿಂದೆ ನೀಡಿದ ಸಂದರ್ಶನದಲ್ಲಿ ತನ್ನ ಗಂಡ ಸಲಿಂಗಕಾಮಿ ಎಂದು ಹೇಳಿದ್ದಕ್ಕೆ ನಟಿ ಕಸ್ತೂರಿ ಟಾಂಗ್ ಕೊಟ್ಟಿದ್ದಾರೆ.

ಹೌದು! 2005ರಲ್ಲಿ ಕಾರ್ತಿಕ್ ಕುಮಾರ್ ಮತ್ತು ಗಾಯಕಿ ಸುಚಿತ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 12 ವರ್ಷಗಳ ಕಾಲ ಸಂಸಾರ ಮಾಡಿದ ಈ ಜೋಡಿ ಸುಚಿತ್ರಾ ಲೀಕ್‌ ವಿವಾದದಿಂದ ದೂರಾದರು. ಕಳೆದ ತಿಂಗಳು ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಸುಚಿತ್ರಾ ನೀಡಿರುವ ಹೇಳಿಕೆ ಏನೆಂದರೆ ನನ್ನ ಗಂಡ ಸಲಿಂಗಕಾಮಿ. ಆತ ಧನುಷ್‌ ಜೊತೆ ಮದ್ಯಪಾನ ಮಾಡಿ ಒಟ್ಟಿಗೆ ರೂಮಿನೊಳಗೆ ಹೋಗುತ್ತಿರುವುದನ್ನು ನಾನು ನೋಡಿದ್ದೀನಿ. ಮದುವೆ ಮಾಡಿಕೊಂಡ ಎರಡು ವರ್ಷಗಳ ನಂತರ ಆತ ಸಲಿಂಗಕಾಮಿ ಎಂದು ತಿಳಿಯಿತ್ತು ಎಂದು ಬಿಟ್ಟಿದ್ದಾರೆ. 

ಬದುಕಿರುವ ಏಡಿ ಜೊತೆ ಅವಳಿ ಮಕ್ಕಳ ಆಟ; ರೀಲ್ಸ್‌ ಮಾಡಿದ ಪೋಷಕರ ಮೇಲೆ ನೆಟ್ಟಿಗರು ಗರಂ

ಇದ್ದಕ್ಕೆ 'ಜಾಣ' ಚಿತ್ರದ ನಟಿ ಕಸ್ತೂರಿ 'ಗಾಯಕಿ ಸುಚಿತ್ರಾಗೆ ವೈದ್ಯಕೀಯ ನೆರವು ಬೇಕಿದೆ. ಮನೋವೈದ್ಯರು ಸಹಾಯ ಅಗತ್ಯವಿದೆ. ಅವರಿಗೆ ತಮ್ಮ ಕಷ್ಟಗಳನ್ನು ನೋವನ್ನು ಹಂಚಿಕೊಳ್ಳಲು ಯಾರೂ ಇಲ್ಲ ಸಂಗಾತಿನೂ ಇಲ್ಲ. ಹೀಗಾಗಿಯೇ ಮಾಧ್ಯಮಗಳಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಅಲ್ಲದೆ ಸುಚಿತ್ರಾ ತಂದೆ ತಾಯಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹೀಗಾಗಿ ಸುಚಿತ್ರಾ ಸಮಸ್ಯೆಯನ್ನು ಬಗೆಹರಿಸಿ ಮಾರ್ಗದರ್ಶನ ನೀಡಲು ಯಾರೂ ಇಲ್ಲ' ಎಂದಿದ್ದರು.

3 ವರ್ಷದ ರಾಯನ್ ಹಿಂದಿ-ಇಂಗ್ಲಿಷ್‌ ಮಾತಾಡೋಕೆ ಪ್ರಯತ್ನ ಮಾಡ್ತಾನೆ,ರಜನಿಕಾಂತ್ ಸಿನಿಮಾ ಹುಚ್ಚು : ಸುಂದರ್ ರಾಜ್

ಇದಕ್ಕೆ ಕೋಪಗೊಂಡ ಸುಚಿತ್ರಾ 'ಕಸ್ತೂರಿ ನೀನು ಕಾಗೆಗಿಂತ ಕಡೆ. ನೀನೊಬ್ಬಳು ಸತ್ತ ಕಾಗೆ ಇದ್ದಂತೆ. ಕೆಟ್ಟದಾಗಿ ಸಾಯುತ್ತೀಯಾ. ಅಷ್ಟೇ ಅಲ್ಲ ನನ್ನ ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವರು ಅಪಘಾತದಲ್ಲಿ ಅಗಲಿದರು. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡ' ಎಂದು ಕಿಡಿಕಾರಿದ್ದಾರೆ.

Latest Videos
Follow Us:
Download App:
  • android
  • ios