ಬಹುಭಾಷಾ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ವಡಿವೇಲು ಆನ್‌ ಸ್ಕ್ರೀನ್‌ನಲ್ಲಿ ಮಾತ್ರ ಸ್ಕೂಟರ್, ಮೋಟರ್ ಸೈಕಲ್ ಹಾಗೂ ಎತ್ತಿನ ಗಾಡಿ ಓಡಿಸಿರುವುದನ್ನು ನೀವು ನೋಡಿರುತ್ತೀರಿ. ಆದರೆ ಎಂದಾದರೂ ಹಾಸ್ಯ ನಟ ಇಷ್ಟೊಂದು ದುಬಾರಿ ಕಾರುಗಳನ್ನು ಹೊಂದಿರುತ್ತಾರೆ ಎಂಬ ಕಲ್ಪನೆ ನಿಮಗಿದ್ಯಾ? 

ನಟ ಹಾಗೂ ಗಾಯಕನಾಗಿ ಗುರುತಿಸಿಕೊಂಡಿರುವ ಕುಮಾರ ವಡಿವೇಲು ನಟರಾಜನ್‌ ಗ್ಯಾರೇಜ್‌ನಲ್ಲಿ ನೋಡಿದರೆ ಕಾಣುವುದು ಕೇವಲ ದುಬಾರಿ ಕಾರುಗಳು ಮಾತ್ರ. ಯಾವ ಕಾರ್ಯಕ್ರಮದಲ್ಲಿ ಭಾಗಿಯಾದರೂ ಸರಳವಾಗಿ ಕಾಣಿಸಿಕೊಳ್ಳುವ ವಡಿವೇಲು, ಇಷ್ಟೊಂದು ಪಾಶ್ ಕಾರಿನಲ್ಲಿ ಬರುತ್ತಾರೆ ಎಂದರೆ ಎಂಥವರಿಗಾದರೂ ಅಚ್ಚರಿ ಆಗೋದು ಗ್ಯಾರಂಟಿ....

ಶುರುವಾಯ್ತು ಹಾಸ್ಯ ನಟನ ಆರ್ಭಟ; 2021ಕ್ಕೆ ನಾನೇ ಸಿಎಂ ಎಂದ ವಡಿವೇಲು! 

- Audi Q7 ಕಾರು ಹೊಂದಿದ್ದಾರೆ. ಇದು 2010-15 ಮಾಡೆಲ್ ಅಗಿದ್ದು ಸುಮಾರು 85.15 ಲಕ್ಷ ರೂನಿಂದ 1.01 ಕೋಟಿ ರೂ. ಬೆಲೆ ಬಾಳುತ್ತದೆ.  
- BMW 7 ಸೀರಿಸ್‌ ಕಾರಿದೆ. ಇದನ್ನು ಸ್ಪೋರ್ಟ್ಸ್‌ ಕಾರು ಎಂದು ಪರಿಗಣಿಸಲಾಗುತ್ತದೆ. ಇರ ಬೆಲೆ ಸುಮಾರು 1.22 ಕೋಟಿಯಿಂದ 2.42 ಕೋಟಿ ಬೆಲೆ ಬಾಳುತ್ತದೆ.
- Jaguar Xj, ಮೂರು ಇಂಜಿನ್‌ಗಳನ್ನು ಹೊಂದಿರುವ ಈ ಕಾರು ಕೊಂಚ ಹಳೆಯದೇ ಆದರೂ ಇಂದಿಗೆ ಕಾರ್ ಮಾರ್ಕೆಟ್‌ನಲ್ಲಿ ಒಳ್ಳೆ ಹೆಸರು ಕಾಪಾಡಿಕೊಂಡಿದೆ. 1.35 ಕೋಟಿ ಬೆಲೆ ಬಾಳುತ್ತದೆ.
- Bentley Continental GT, ಇದು ಭಾರತದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಹೆಸರು ಮಾಡಿರುವ ಕಾರುಗಳು.  ಎರಡು ಇಂಜಿನ್‌ ಹೊಂದಿರುವ ಈ ಕಾರು ಸುಮಾರು 3.29 ಕೋಟಿಯಿಂದ 4.42 ಕೋಟಿ ಬೆಲೆ ಬಾಳುತ್ತದೆ.
- Rolls Royce Ghost,ಅನೇಕ ಕಾರ್ಯಕ್ರಮಗಳಿಗೆ ಆಗಮಿಸಲು ವಡಿವೇಲು ಈ ಕಾರು ಬಳಸಿರುವುದನ್ನು ನಾವು ಕಾಣಬಹುದು. ಈ ಕಾರು ಸುಮಾರು 6.21ಕೋಟಿಯಿಂದ 7 ಕೋಟಿ ಬೆಲೆ ಇದೆ.
-Porsche 911 coupe,ಇದು ಪಕ್ಕಾ ಸ್ಪೋರ್ಟ್ಸ್ ಕಾರು. ಭಾರತದಲ್ಲಿ ಸಿರಿವಂತರ ಮನೆಯಲ್ಲಿಇದ್ದೇ ಇರುತ್ತದೆ. ಸುಮಾರು 1.82 ಕೋಟಿಯಿಂದ 2 ಕೋಟಿ ಬೆಲೆ.
- Land Rover Ranger Rover Evoque, ವಡಿವೇಲು ಸಿನಿಮಾ ಶೂಟಿಂಗ್‌ಗೆ ಬಳಸುವ ಕಾರಿದು. ಸುಮಾರು 54.94ಲಕ್ಷದಿಂದ 59.85 ಲಕ್ಷ ಬೆಲೆ ಇದೆ.

* ಈ ಮೇಲಿರುವ ಎಲ್ಲಾ ಕಾರಿನ ಬೆಲೆ Ex-showroom ಬೆಲೆ ಆಗಿರುತ್ತದೆ.