ಕಾಲಿವುಡ್ ಜನಪ್ರಿಯ ಹಾಸ್ಯನಟ ವಡಿವೇಲು ಇತ್ತೀಚಿಗೆ ತೂತ್ತುಕುಡಿ ಜಿಲ್ಲೆಯ ತಿರುಚೊಂದೂರು ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೀಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

'ಜಗತ್ತಿನ ಶಾಂತಿಗಾಗಿ ನಾನು ದೇವರ ದರ್ಶನಕ್ಕೆ ಬಂದಿರುವೆ' ಎಂದು ಹೇಳುತ್ತಾ ಮಾತನ್ನು ಶುರು ಮಾಡಿದ್ದಾರೆ. ಪತ್ರಕರ್ತರೊಬ್ಬರು ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ 'ರಜನಿಕಾಂತ್ ರಾಜಕೀಯಕ್ಕೆ ಯಾವಾಗ ಬರುತ್ತಾರೆ ಎಂದು ನನಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ ಅಷ್ಟೇ ಯಾಕೆ ಸ್ವತಃ ರಜಿನಿಕಾಂತ್‌ ಅವರಿಗೂ ಗೊತ್ತಿಲ್ಲ' ಎಂದು ಹಾಸ್ಯ ಮಾಡುತ್ತಾ ಹೇಳುತ್ತಾರೆ. 

ಮುಸ್ಲಿಮರಿಗೆ ತೊಂದರೆಯಾಗಲು ಬಿಡಲ್ಲ: ರಜನಿ ಭರವಸೆ

ರಜಿನಿಕಾಂತ್ ಸಿದ್ಧಾಂತ ಪಾಲಿಸುವ ವಡಿವೇಲು 2021ರ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿದ್ದಾರೆ. 'ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ನೀವು ನನಗೆ ಓಟ್‌ ಹಾಕುತ್ತೀರಾ?' ಎಂದು ಪ್ರತಕರ್ತರನ್ನು ಪ್ರಶ್ನಿದಾಗ ಅವರು ನಿಮಗೆ ಓಟ್‌ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ ಅದಕ್ಕೆ ವಡಿವೇಲು 'ಹಾಗಾದರೇ ಖಂಡಿತ 2021ರಲ್ಲಿ ತಮಿಳುನಾಡಿದ ಮುಖ್ಯಮಂತ್ರಿ  ನಾನೇ  ಆಗುತ್ತೇನೆ '  ಎಂದಿದ್ದಾರೆ.

ರಜನಿಕಾಂತ್‌ ಮನೆ ಬಾಗಿಲಿಗೆ ವಿತರಕರು; ಬಾಕ್ಸಾಫೀಸ್‌ನಲ್ಲಿ ಗಳಿಸಿದ ಹಣ ರಜನಿ ಸಂಭಾವನೆಗಿಂತಲೂ ಕಡಿಮೆ!