ಹೊಂದಾಣಿಕೆ ಬಗ್ಗೆ ಮಾತನಾಡಿದ ನಟಿ ಬಾಲಾಂಬಿಕಾ. ಆ ಟೈಮ್ ಅಂತ ಹೇಳಿದಕ್ಕೆ ಶುರುವಾಯ್ತು ಮತ್ತೊಂದು ಮೀಟು ಕೇಸ್....

ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿಗೆ ಮೀ ಟೂ ಪ್ರಕರಣಗಳು ಹೆಚ್ಚಾಗುತ್ತಿದೆ. ಸ್ಟಾರ್ ನಟರು, ನಿರ್ದೇಶಕರ ಅಸಲಿ ಮುಖವನ್ನು ಕೆಲವು ನಟಿಯರು ಧೈರ್ಯವಾಗಿ ಬಿಚ್ಚಿಡುತ್ತಿದ್ದಾರೆ ಆದರೆ ಅದೆಷ್ಟೋ ಮಂದಿ ಮೌನವಾಗಿ ಬಣ್ಣದ ಪ್ರಪಂಚದಿಂದ ದೂರ ಉಳಿದು ಬಿಡುತ್ತಾರೆ. ಆದರೆ ಈಗ ತಮಿಳು ನಟಿ ಬಾಲಾಂಬಿಕಾ ಅಜೆಸ್ಟ್‌ಮೆಂಟ್‌ ಬಗ್ಗೆ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಯಾರು ಹೇಳಿರುವುದು ಯಾವಾಗ ಹೇಳಿರುವುದು ಆಮೇಲೆ ಏನಾಯ್ತು ಅನ್ನೋದೇ ಪ್ರಶ್ನೆಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಸಹೋದರಿಯರ ಪಾತ್ರಗಳಲ್ಲಿ ನಟಿಸುತ್ತಿದ್ದವರು ಬಾಲಾಂಬಿಕಾ. ಖ್ಯಾತ ಸಿನಿಮಾ ನಿರ್ದೇಶಕರಾದ ಕೆಎಸ್‌ ಗೋಪಾಲ ಕೃಷ್ಣ ಅವರ ಅಸಿಸ್ಟೆಂಟ್ ಆಗಿದ್ದ ರಾಮಾಸ್ವಾಮಿ ಅವರ ಏಕೈಕಾ ಪುತ್ರಿ ಬಾಲಾಂಬಿಕಾ. ಬಾಲಂ ಸಿನಿಮಾದಲ್ಲಿ ನಟ ಮುರುಳಿ ಅವರ ಕಿರಿಯ ಸಹೋದರಿಯಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಖುಷ್ಬೂ ತಂಗಿಯಾಗಿ, ವಿಜಯಕಾಂತ್ ಸಹೋದರಿಯಾಗಿ, ಸತ್ಯರಾಜ್ ಸಹೋದರಿಯಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಒಟ್ಟಾರೆ ಸಹೋದರಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು. 

MeToo Case: ಶ್ರುತಿ ಹರಿಹರನ್ ಪ್ರಕರಣಕ್ಕೆ ಟ್ವಿಸ್ಟ್, ಬಿ-ರಿಪೋರ್ಟ್ ಚಾಲೆಂಜ್ ಮಾಡಿದ್ದ ನಟಿಗೆ ಕೋರ್ಟ್ ನೋಟಿಸ್

ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ ಸಹೋದರಿ ಪಾತ್ರ ಮಾಡಿ ಹೆಸರು ಮತ್ತು ಹಣ ಸಂಪಾದನೆ ಮಾಡಿದ್ದರೂ ನಾಯಕಿ ಆಗುವ ಅವಕಾಶ ಸಿಗಲಿಲ್ಲ. ಒಂದು ಸಮಯದಲ್ಲಿ ವಿಜಯ್ ದಳಪತಿ, ತಲಾ ಅಜಿತ್, ಕಮಲ್ ಹಾಸನ್ ಮತ್ತು ಪ್ರಶಾಂತ್‌ ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಬಂದಿತ್ತಂತೆ ಆದರೆ ಆ ಟೈಪ್ ಆಫರ್‌ ಬಂದಿದಕ್ಕೆ ಹಿಂದೆ ಸೆರೆದಿದ್ದಾರೆ. ಈ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಬೇಕು ಅಂದ್ರೆ ನಾನು ಆ ಟೈಪ್ ಅಜೆಸ್ಟ್‌ಮೆಂಟ್‌ಗಳನ್ನು ಒಪ್ಪಿಕೊಳ್ಳಬೇಕಿತ್ತು ಅದಕ್ಕೆ ಒಪ್ಪದ ಕಾರಣ ಅವಕಾಶಗಳು ದೂರಾದವು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವಕಾಶ ಕಡಿಮೆ ಆಗುತ್ತಿದ್ದಂತೆ ಕಿರುತೆರೆ ಕಡೆ ಮುಖ ಮಾಡಿದರು. 

'ಕೆಲವು ವ್ಯಕ್ತಿಗಳು ನನಗೆ ಆ ಟೈಪ್ ಅಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಕ್ಕೆ ಹೇಳಿದರು ಆಗ ಮಾತ್ರ ವಿಜಯ್‌ಗೆ ಜೋಡಿಯಾಗಿ ನಟಿಸಬಹುದು. ಈ ವಿಚಾರದಲ್ಲಿ ಯಾವ ಅಗ್ರೀಮೆಂಟ್ ಕೂಡ ಇಲ್ಲ. ಈ ಮಾತುಗಳು ನನ್ನ ತಂದೆ ಕಿವಿಗೆ ಬೀಳುತ್ತಿದ್ದಂತೆ ನನ್ನನ್ನು ಸಿನಿಮಾದಿಂದ ದೂರ ಇಟ್ಟರು. ಈ ರೀತಿ ದಾರಿ ಹುಡುಕಿಕೊಂಡು ನಾವು ಸಿನಿಮಾ ಮಾಡುವ ಅಗತ್ಯವಿಲ್ಲ ಎಂದರು. ವಿಜಯ್ ಜೊತೆ ಸಿನಿಮಾದಲ್ಲಿ ನಟಿಸಿದರೆ ನನ್ನ ಜೀವನವೇ ಬದಲಾಗುತ್ತಿತ್ತು' ಎಂದು ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ಬಾಲಾಂಬಿಕಾ ಹೇಳಿದ್ದಾರೆ. 

ಒಂಟಿಯಾಗಿ ಬನ್ನಿ ಅಂತಾರೆ, ತಾಯಿ ಜೊತೆ ಬಂದ್ರೆ ಅವಕಾಶ ಇಲ್ಲ; ಚಿತ್ರರಂಗದ ಕಹಿ ಘಟನೆ ಬಿಚ್ಚಿಟ್ಟ ಖ್ಯಾತ ನಟಿ

'ನನ್ನ ಜೀವನ ಅಷ್ಟಾಗಿ ಚೆನ್ನಾಗಿರಲಿಲ್ಲ ನನ್ನ ತಂದೆ ಆರೋಗ್ಯವೂ ಚೆನ್ನಾಗಿಲ್ಲ. ಹೀಗಾಗಿ ನಾನು ಬೇಗ ಮದುವೆ ಮಾಡಿಕೊಂಡೆ. ಆನಂತರ ಅನೇಕ ದೇಶಗಳನ್ನು ಸುತ್ತಿದೆ. ಸಂಪಾದನೆ ಮಾಡುವ ಸಮಯದಲ್ಲಿ ದಾರಿ ತಪ್ಪಿ ಮಾಡಿದ ಸಂಪಾದನೆಯನ್ನು ಕಳೆದುಕೊಂಡೆ. ಕೊರೋನಾ ಸಮಯದಲ್ಲಿ ತುಂಬಾ ಕಷ್ಟಗಳನ್ನು ಎದುರಿಸಿದೆ ಆಗ ಸತ್ಯರಾಜು ಅವರನ್ನು ಸಂಪರ್ಕ ಮಾಡಿಕ್ಕೆ 20 ಸಾವಿರ ಕೊಟ್ಟು ನನಗೆ ಸಹಾಯ ಮಾಡಿದರು. ಆದರೆ ವಿಜಯಕಾಂತ್ ಅವರ ಜೊತೆ ಸಂಪರ್ಕದಲ್ಲಿ ಇಲ್ಲ' ಎಂದು ಬಾಲಾಂಬಿಕಾ ಹೇಳಿದ್ದಾರೆ.