MeToo Case: ಶ್ರುತಿ ಹರಿಹರನ್ ಪ್ರಕರಣಕ್ಕೆ ಟ್ವಿಸ್ಟ್, ಬಿ-ರಿಪೋರ್ಟ್ ಚಾಲೆಂಜ್ ಮಾಡಿದ್ದ ನಟಿಗೆ ಕೋರ್ಟ್ ನೋಟಿಸ್

ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪ ಇಡೀ ಸ್ಯಾಂಡಲ್‌ವುಡ್ ಅನ್ನು ಬೆಚ್ಚಿ ಬೀಳಿಸಿತ್ತು. 2018ರಲ್ಲಿ ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‌ಅನ್ನು ಚಾಲೇಂಜ್ ಮಾಡಿದ್ದ ಶೃತಿ ಹರಿಹರನ್ ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಾಕ್ಷ್ಯ ಒದಗಿಸುವಂತೆ ನಟಿ ಶ್ರುತಿ ಹರಿಹರನ್ ಅವರಿಗೆ ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. 

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಸಲ್ಲಿಸಿರುವ ಬಿ-ರಿಪೋರ್ಟ್ ಪ್ರಶ್ನಿಸಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರಿಗೆ ಸಾಕ್ಷ್ಯಗಳನ್ನು ಒದಗಿಸುವಂತೆ ಶ್ರುತಿಗೆ ನೋಟಿಸ್ ಜಾರಿ ಮಾಡಿದೆ.

#MeToo ಗೆ ಒಂದು ವರ್ಷ; 'ವೀ ದ ವುಮೆನ್' ಸೆಮಿನಾರ್‌ನಲ್ಲಿ ಶೃತಿ ಹರಿಹರನ್ ತಾಯಿ ಭಾವುಕ

ತನಿಖೆಯ ಬಳಿಕ ಪೊಲೀಸರು ಡಿಸೆಂಬರ್ 2021 ರಲ್ಲಿ ಬಿ ರಿಪೋರ್ಟ್ ಸಲ್ಲಿಸಿದರು. ಅರ್ಜುನ್ ಸರ್ಜಾ ಯಾವುದೇ ತಪ್ಪು ಮಾಡಿಲ್ಲ ಶ್ರುತಿ ಬಳಿ ಸಾಕ್ಷಿ ಇಲ್ಲ ಎಂಬು ಬಿ-ರಿಪೋರ್ಟ್‌ ಸಲ್ಲಿಸುವುದೆಂದರೆ ಆರೋಪಿ ಯಾವುದೇ ತಪ್ಪು ಮಾಡಿಲ್ಲ ಎಂದರ್ಥ. ಜನವರಿ 13, 2022 ರಂದು, ಬೆಂಗಳೂರು ನ್ಯಾಯಾಲಯವು ಪೊಲೀಸರು ಸಲ್ಲಿಸಿದ ಮುಕ್ತಾಯ ವರದಿಯನ್ನು ಅಂಗೀಕರಿಸಿತು. ಇದರಿಂದ ನೊಂದ ಶೃತಿ ಹರಿಹರನ್ ಬಿ ರಿಪೋರ್ಟ್ ಪ್ರಶ್ನಿಸಿ ನಗರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಾಲಯ ಈ ಪ್ರಕರಣದಲ್ಲಿ ಪೊಲೀಸರಿಗೆ ಸರಿಯಾದ ಸಾಕ್ಷ್ಯವನ್ನು ಒದಗಿಸುವಂತೆ ನಟಿಗೆ ಕೋರ್ಟ್ ಸೂಚಿಸಿದೆ.

ನಟಿ ಶ್ರುತಿ ಹರಿಹರನ್ ಪ್ರಕರಣ; ಪ್ರಶಾಂತ್ ಸಂಬರಗಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

ವಿಸ್ಮಯ ಸಿನಿಮಾದ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಹರಿಹರನ್ ಆರೋಪ ಮಾಡಿದ್ದರು. ವಿಸ್ಮಯ ಥ್ರಿಲಿಂಗ್ ಕ್ರೈಮ್ ಸಿನಿಮಾವಾಗಿದೆ. ಚಿತ್ರದ ರೊಮ್ಯಾನ್ ದೃಶ್ಯ ಚಿತ್ರೀಕರಣದಲ್ಲಿ ಅರ್ಜುನ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಶ್ರುತಿ ಆರೋಪ ಮಾಡಿದ್ದರು. ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಶ್ರುತಿ ಹರಿಹರನ್ ದೂರು ದಾಖಲಿಸಿ ವಿಚಾರಣೆಯಲ್ಲಿ ಭಾಗಿಯಾಗುವ ಮೂಲಕ ಮೀ ಟೂ ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಟ ಅಂಬರೀಶ್ ಮತ್ತು ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿಯು ಸಭೆ ನಡೆಸಿ ಸಮಸ್ಯೆಯನ್ನು ರಾಜಿ ಮೂಲಕ ಬಗೆಹರಿಸಲು ಯತ್ನಿಸಿದ್ದರು. ಆದರೆ ಯಾವುದಕ್ಕೂ ಮಣಿಯದ ಶ್ರುತಿ ಹರಿಹರನ್ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.