- Home
- Entertainment
- ಅಮ್ಮನ ಸೀರೆಯಲ್ಲಿ ಮಿಂಚಿದ ತ್ರಿಷಾ.. ‘ಇದು ತುಂಬಾ ಸ್ಪೆಷಲ್’ ಎಂದ ಬ್ಯೂಟಿ ಕ್ವೀನ್: ಫೋಟೋಸ್ ವೈರಲ್
ಅಮ್ಮನ ಸೀರೆಯಲ್ಲಿ ಮಿಂಚಿದ ತ್ರಿಷಾ.. ‘ಇದು ತುಂಬಾ ಸ್ಪೆಷಲ್’ ಎಂದ ಬ್ಯೂಟಿ ಕ್ವೀನ್: ಫೋಟೋಸ್ ವೈರಲ್
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೀರೆ ತಮ್ಮ ತಾಯಿಯದ್ದು ಎಂದು ತ್ರಿಷಾ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿಯ ಸೀರೆಯಲ್ಲೇ ವಿಶೇಷ ಫೋಟೋಶೂಟ್..

ಭಾರೀ ವೈರಲ್
ಸೌತ್ ಸಿನಿರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಸದಾ ತಮ್ಮ ಸ್ಟೈಲ್ ಹಾಗೂ ಸಿಂಪ್ಲಿಸಿಟಿಯಿಂದ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇದೀಗ ತಮಿಳುನಾಡಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿಷಾ ಕಾಣಿಸಿಕೊಂಡಿರುವ ವಿಶೇಷ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಅವರು ಧರಿಸಿದ್ದ ಸೀರೆ!
ವಿಶೇಷ ಆಕರ್ಷಣೆ
ತಮಿಳುನಾಡು ಸರ್ಕಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿಷಾ ವಿಶೇಷ ಆಕರ್ಷಣೆಯಾಗಿದ್ದರು. ಮುಖ್ಯಮಂತ್ರಿ ವಿಜಯ್ ಭಾಗವಹಿಸಿದ್ದ ಮೊದಲ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವಾಗಿದ್ದರಿಂದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಮಹತ್ವವಿತ್ತು. ವಿಜಯ್ ಅವರ ಕುಟುಂಬದ ಸದಸ್ಯರ ಜೊತೆಗೆ ತ್ರಿಷಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗೋಲ್ಡ್ ಕಲರ್ ಸೀರೆಯಲ್ಲಿ ಮಿಂಚಿದ ತ್ರಿಷಾ!
ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತ್ರಿಷಾಗೆ ಮಿನಿಸ್ಟರ್ಸ್ ಗ್ಯಾಲರಿಯಲ್ಲಿ ವಿಶೇಷ ವಿಐಪಿ ಸೀಟ್ ನೀಡಲಾಗಿತ್ತು. ಗೋಲ್ಡ್ ಕಲರ್ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡ ತ್ರಿಷಾ, ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಮಾತನಾಡಿಸುತ್ತಾ ಗಮನ ಸೆಳೆದರು. ತ್ರಿಷಾ ಅವರ ಈ ಲುಕ್‌ಗೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಈ ಸೀರೆಯ ಹಿಂದೆ ಒಂದು ವಿಶೇಷವಾದ ಭಾವನಾತ್ಮಕ ಕಥೆ ಇದೆ ಎಂಬುದು ಇದೀಗ ಬಹಿರಂಗವಾಗಿದೆ.
‘ಇದು ನನ್ನ ಅಮ್ಮನ ಸೀರೆ’ ಎಂದ ತ್ರಿಷಾ!
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೀರೆ ತಮ್ಮ ತಾಯಿಯದ್ದು ಎಂದು ತ್ರಿಷಾ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿಯ ಸೀರೆಯಲ್ಲೇ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿರುವ ತ್ರಿಷಾ, ಇದು ತಮಗೆ ತುಂಬಾ ವಿಶೇಷವಾದ ಸೀರೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಗೋಲ್ಡ್ ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕ ಹಾಗೂ ಎಲಿಗಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ತ್ರಿಷಾ ಅವರ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ನೆಟ್ಟಿಗರು ಕೂಡ ಅವರ ಸೌಂದರ್ಯವನ್ನು ಮೆಚ್ಚಿ ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.
ಸಿನಿಮಾಗಳಲ್ಲೂ ಸಖತ್ ಬ್ಯುಸಿ
ಸಿನಿಮಾ ವಿಚಾರಕ್ಕೆ ಬಂದರೆ, ತ್ರಿಷಾ ಸದ್ಯ ಹಲವು ಬಹುನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂರ್ಯ ಅಭಿನಯದ ‘ಕರುಪ್ಪು’ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಆರ್‌ಜೆ ಬಾಲಾಜಿ ನಿರ್ದೇಶನದ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ತ್ರಿಷಾ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ವಿಶ್ವಂಭರ’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ವಶಿಷ್ಠ ನಿರ್ದೇಶನದ ಈ ಸೋಶಿಯೋ-ಫ್ಯಾಂಟಸಿ ಎಂಟರ್‌ಟೈನರ್ ಮೇಲೆ ಭಾರೀ ನಿರೀಕ್ಷೆ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು
ಇದರ ಜೊತೆಗೆ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ‘ರಾಮ್’ ಸಿನಿಮಾದಲ್ಲೂ ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದೃಶ್ಯಂ’ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಸಂಯುಕ್ತಾ ಹಾಗೂ ಇಂದ್ರಜಿತ್ ಸುಕುಮಾರನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ, ಅಮ್ಮನ ಸೀರೆಯಲ್ಲಿ ತ್ರಿಷಾ ಕಾಣಿಸಿಕೊಂಡಿರುವ ಈ ಸಿಂಪಲ್ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳಿಗೆ ಮಾತ್ರ ಈ ಸೀರೆ ಹಿಂದಿನ ಭಾವನಾತ್ಮಕ ಕಥೆ ಮತ್ತಷ್ಟು ವಿಶೇಷವಾಗಿ ಇಷ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

