ಪ್ಯಾನ್ ಇಂಡಿಯಾ ಪದದ ಬಗ್ಗೆ ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ಭಾರತದಲ್ಲಿ ತಯಾರಾಗುವ ಯಾವುದೇ ಭಾಷೆಯ ಸಿನಿಮಾಗಲಾಗಿರಲಿ ಅವು ಭಾರತದ ಸಿನಿಮಾಗಳು. ಪ್ಯಾನ್ ಇಂಡಿಯಾ ಎಂದು ಕರೆಯ ಬೇಡಿ ಎನ್ನುತ್ತಿದ್ದಾರೆ. ಈ ಬಗ್ಗೆ ತಮಿಳು ನಟ ಸಿದ್ಧಾರ್ಥ್(Siddharth) ಪ್ರತಿಕ್ರಿಯೆ ನೀಡಿ ಇದು ನಾನ್‌ಸೆನ್ಸ್, ಅಗೌರವದ ಪದವಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಒಂದು ಕಾಲದಲ್ಲಿ ಕೇವಲ ಬಾಲಿವುಡ್(Bollywood) ಸಿನಿಮಾಗಳು ಮಾತ್ರ ಹೆಚ್ಚು ಸದ್ದು ಮಾಡುತ್ತಿದ್ದವು. ಭಾರತ ಅಂದರೆ ಕೇವಲ ಬಾಲಿವುಡ್ ಸಿನಿಮಾಗಳು ಮಾತ್ರ ಎನ್ನುವಷ್ಟು ಮಟ್ಟಕ್ಕೆ ಹಿಂದಿ ಸಿನಿಮಾಗಳು ಪ್ರಭಾವ ಬೀರಿದ್ದವು. ಆದರೆ ಈಗ ಕಾಲ ಬದಲಾಗಿದೆ. ಭಾರತದ ಬೇರೆ ಬೇರೆ ಭಾಷೆಯ ಸಿನಿಮಾಗಳ ಪ್ರಮುಖ್ಯತೆ ಹೆಚ್ಚಾಗುತ್ತಿದೆ. ಅದರಲ್ಲೂ ಸೌತ್ ಸಿನಿಮಾಗಳು ಕೇವಲ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಸೌತ್ ಸಿನಿಮಾಗಳ ಸಕ್ಸಸ್ ಕಂಡು ಬಾಲಿವುಡ್ ಮಂದಿಯೇ ಮಂಕಾಗಿದ್ದಾರೆ. ಅಷ್ಟರ ಮಟ್ಟಕ್ಕೆ ಸೌತ್ ಸಿನಿಮಾಗಳು ಸದ್ದು ಮಾಡುತ್ತಿವೆ.

ಪ್ಯಾನ್ ಇಂಡಿಯಾ(Pan India) ಹೆಸರಿನಲ್ಲಿ ದಕ್ಷಿಣದ ಸಿನಿಮಾಗಳು ದೇಶವ್ಯಾಪಿ ಸದ್ದು ಮಾಡುತ್ತಿವೆ. ಪ್ಯಾನ್ ಇಂಡಿಯಾ ಪದದ ಬಗ್ಗೆ ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ಭಾರತದಲ್ಲಿ ತಯಾರಾಗುವ ಯಾವುದೇ ಭಾಷೆಯ ಸಿನಿಮಾಗಳಾಗಿರಲಿ ಅವು ಭಾರತದ ಸಿನಿಮಾಗಳು. ಪ್ಯಾನ್ ಇಂಡಿಯಾ ಎಂದು ಕರೆಯ ಬೇಡಿ ಎನ್ನುತ್ತಿದ್ದಾರೆ. ಈ ಬಗ್ಗೆ ತಮಿಳು ನಟ ಸಿದ್ಧಾರ್ಥ್(Siddharth) ಪ್ರತಿಕ್ರಿಯೆ ನೀಡಿದ್ದಾರೆ. ಪ್ಯಾನ್ ಇಂಡಿಯಾ ಬಗ್ಗೆ ಮಾತನಾಡಿದ ಸಿದ್ಧಾರ್ಥ್ ಇದು ನಾನ್‌ಸೆನ್ಸ್, ಅಗೌರವದ ಪದವಾಗಿದೆ ಎಂದು ಹೇಳಿದ್ದಾರೆ.

ಸಂದರ್ಶವೊಂದರಲ್ಲಿ ಮಾತನಾಡಿರುವ ಸಿದ್ಧಾರ್ಥ್, '15-16 ವರ್ಷಗಳ ಹಿಂದೆ ನಾನು ನೀಡಿದ್ದ ಸಂದರ್ಶನದಲ್ಲಿ ಆ ದಿನಗಳಲ್ಲಿ ಹಾಟ್ ಟಾಪಿಕ್ ಅಂದರೆ ಟ್ರಾಸ್ ಓವರ್ ಸಿನಿಮಾ. ನಾವು ಯಾವಾಗ ಹಾಲಿವುಡ್‌ಗೆ ಹೋಗುವುದು ಎನ್ನುವುದಾಗಿತ್ತು' ಎಂದಿದ್ದಾರೆ.

ಅವಹೇಳನಕಾರಿ ಕಾಮೆಂಟ್‌ಗೆ ಕ್ಷಮೆಯಾಚಿಸಿದ ಸಿದ್ಧಾರ್ಥ್: ‌'God Bless Him' ಎಂದ ಸೈನಾ ನೆಹ್ವಾಲ್‌!

'ಆ ಸಮಯದಲ್ಲಿ ನಾನು ಹಿಂದಿ ಸಂದರ್ಶನವೊಂದರಲ್ಲಿ ನಾವು ಯಾಕೆ ಕ್ರಾಸ್ ಓವರ್ ಸಿನಿಮಾಗಳ ಬಗ್ಗೆ ಮಾತನಾಡುತ್ತೇವೆ. ನಾವೇಕೆ ಭಾರತದ ಒಳಗೆ ಕ್ರಾಸ್ ಓವರ್ ಬಗ್ಗೆ ಮಾತಾನಾಡಬಾರದು?. ನಾವ್ಯಾಕೆ ಮೊದಲು ಬೇರೆ ಭಾಷೆಯ ಸಿನಿಮಾಗಳನ್ನು ನೋಡಲು ಪ್ರಾರಂಭಿಸಬಾರದು?, ನಾವ್ಯಾಕೆ ಇಂಡಿಯನ್ ಸಿನಿಮಾ ಎಂದು ಕರೆಯಬಾರದು?, ಇಲ್ಲಿ ಯಾವುದೇ ರೀಜನಲ್ ಇಲ್ಲ. ಅಂದು ಹೇಳಿದ್ದರ ಪರಿಣಾಮ ಇಂದು ಕಾಮಿಡಿ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಕರೆಯುತ್ತಿದ್ದಾರೆ' ಎಂದು ಸಿದ್ಧಾರ್ಥ್ ಹೇಳಿದ್ದಾರೆ.

'ಪ್ಯಾನ್ ಇಂಡಿಯಾ ಪದ ತುಂಬಾ ಅಗೌರವದ ಪದವಾಗಿದೆ. ಏಕೆಂದರೆ ಪ್ರಾದೇಶಿಕ ಸಿನಿಮಾಗಳು ಎಂದು ಬಾಲಿವುಡ್ ನಿಂದ ಬಂದಿದ್ದು. ಪ್ಯಾನ್ ಇಂಡಿಯಾ ಎನ್ನುವುದು ನಾನ್‌ಸೆನ್ಸ್. ಎಲ್ಲಾ ಸಿನಿಮಾಗಳು ಭಾರತೀಯ ಸಿನಿಮಾಗಳು ಎಂದು ಹೇಳಿದ್ದಾರೆ. 15 ವರ್ಷಗಳ ಹಿಂದೆ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾಗಳು ಇರಲಿಲ್ಲ. ಭಾರತೀಯ ಸಿನಿಮಾ ಅಷ್ಟೆ. ನನ್ನ ಬಾಸ್ ಮಣಿರತ್ನಂ ರೋಜ ಎನ್ನುವ ಸಿನಿಮಾ ಮಾಡಿದರು ಅದನ್ನು ಎಲ್ಲರೂ ನೋಡಿದರು. ಯಾರು ಪ್ಯಾನ್ ಇಂಡಿಯಾ ಎಂದು ಹೇಳಿಲ್ಲ' ಎಂದಿದ್ದಾರೆ.

'ಇಂದು ನನ್ನ ಬೆಂಗಳೂರು ಸ್ನೇಹಿತರು ಕೆಜಿಎಫ್ ಸಿನಿಮಾ ಮಾಡಿದ್ದಾರೆ. ಅವರ ಬಗ್ಗೆ ತುಂಬಾ ಹೆಮ್ಮೆ ಇದೆ. ಕೆಜಿಎಫ್ ಕನ್ನಡ ಸಿನಿಮಾರಂಗ ಮಾಡಿದ ಇಂಡಿಯಾದ ಸಿನಿಮಾ. ನನ್ನನ್ನು ಕೇಳುವುದಾದರೇ ಪ್ಯಾನ್ ಇಂಡಿಯಾ ಎನ್ನುವುದನ್ನು ತೆಗೆದುಹಾಕಬೇಕು. ಇಂಡಿಯನ್ ಸಿನಿಮಾ ಎಂದು ಕರೆಯಬೇಕು. ಕಂಟೆಂಟ್ ಉತ್ತಮವಾಗಿದ್ದರೆ ಎಲ್ಲ ಕಡೆ ಹೋಗುತ್ತದೆ' ಎಂದು ಹೇಳಿದ್ದಾರೆ.

ಪುನೀತ್ ರೀತಿ ಇನ್ನೊಬ್ಬ ವ್ಯಕ್ತಿ​ ಇರಲು ಸಾಧ್ಯವಿಲ್ಲ: ನಟ ಸಿದ್ದಾರ್ಥ್

ನಟ ಸಿದ್ಧಾರ್ಥ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾ ವಿಚಾರಕ್ಕಿಂತ ಬೇರೆ ಬೇರೆ ವಿಚಾರಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಸಿನಿಮಾ ಬಗ್ಗೆ ಹೇಳುವುದಾದರೇ ಸಿದ್ದಾರ್ಥ್ ಕೊನೆಯದಾಗಿ ತೆಲುಗಿನ ಮಹಾ ಸಮುದ್ರಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇನ್ನು ಬಿಡುಗಡೆಯಾಗಬೇಕಿದೆ.