ಅವಹೇಳನಕಾರಿ ಕಾಮೆಂಟ್ಗೆ ಕ್ಷಮೆಯಾಚಿಸಿದ ಸಿದ್ಧಾರ್ಥ್: 'God Bless Him' ಎಂದ ಸೈನಾ ನೆಹ್ವಾಲ್!
*ಸೈನಾ ನೆಹ್ವಾಲ್ ವಿರುದ್ದ ಅವಹೇಳನಾಕರಿ ಟ್ವೀಟ್
*ಪತ್ರದ ಮೂಲಕ ಕ್ಷಮೆಯಾಚಿಸಿದ ಸಿದ್ಧಾರ್ಥ್
*ನಟನಿಗೆ ಬುದ್ಧಿವಾದ ಹೇಳಿದ ಟೆನ್ನಿಸ್ ತಾರೆ
ನವದೆಹಲಿ (ಜ. 12): ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal) ವಿರುದ್ಧ ಲೈಂಗಿಕ ಟೀಕೆ ಮಾಡಿದ ಆರೋಪದ ನಂತರ, ನಟ ಸಿದ್ಧಾರ್ಥ್ (Actor Siddharth) ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಟ್ವೀಟರ್‌ನಲ್ಲಿ (Twitter) ಪೋಸ್ಟ್ ಮಾಡಿರುವ ಪತ್ರದಲ್ಲಿ ಸೈನಾ ಅವರನ್ನು ಉದ್ದೇಶಿಸಿ "You will be always My Champion" ಎಂದು ಬರೆದಿದ್ದಾರೆ. ಅಲ್ಲದೇ ತಾವು ಮಾಡಿದ್ದ ಕಾಮೆಂಟ್‌ನೊಂದಿಗೆ ತಮಾಷೆ ಮಾಡಲು ಪ್ರಯತ್ನಿಸುತ್ತಿದ್ದೆ ಆದರೆ ಅದು ವರ್ಕೌಟ್ ಆಗಲಿಲ್ಲ ಎಂದು ಹೇಳಿದ್ದಾರೆ. ಸಿದ್ಧಾರ್ಥ್ ಅವರ ಕ್ಷಮೆಯಾಚನೆಗೆ ಪ್ರತಿಕ್ರಿಯಿಸಿದ ಸೈನಾ ಈ ವಿಷಯವು ಮಹಿಳೆಯರಿಗೆ ಸಂಬಂಧಪಟ್ಟಿದ್ದು ಎಂದು ಹೇಳಿದ್ದು ಕಾಮೆಂಟ್ ಮಾಡಿದ ನಂತರ ನಟ ತನ್ನ ನಿಲುವನ್ನು ಏಕೆ ಬದಲಾಯಿಸಿದರು ಎಂದು ತಮಗೆ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.
"ಅವರೇ ಇದನ್ನು ಹೇಳಿ ಈಗ ಕ್ಷಮೆಯಾಚಿಸುತ್ತಿದ್ದಾರೆ. ಆ ದಿನ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಅವರೊಂದಿಗೆ ಮಾತನಾಡಿಲ್ಲ ಆದರೆ ಅವರು ಕ್ಷಮೆ ಯಾಚಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ, ” ಎಂದು ಸೈನಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. "ನೋಡಿ, ಇದು ಮಹಿಳೆಯರ ವಿಷಯ, ಸಿದ್ದಾರ್ಥ ಮಹಿಳೆಯನ್ನು ಗುರಿಯಾಗಿಸಬಾರದು ಆದರೆ ಪರವಾಗಿಲ್ಲ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಜಾಗದಲ್ಲಿ ನಾನು ಸಂತೋಷವಾಗಿದ್ದೇನೆ ಮತ್ತು ದೇವರು ಅವರನ್ನು ಆಶೀರ್ವದಿಸಲಿ (God Bless Him)" ಎಂದು ಸೈನಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Saina Nehwal Tweetಗೆ ನಟ ಸಿದ್ಧಾರ್ಥ್ ಅವಹೇಳನಕಾರಿ ಕಾಮೆಂಟ್: ಟೆನ್ನಿಸ್ ತಾರೆ ಬೆಂಬಲಕ್ಕೆ ನಿಂತ ರೈನಾ, ಸದ್ಗುರು!
ತಮ್ಮನ್ನು ಸ್ತ್ರೀವಾದಿ (Feminist) ಸಮರ್ಥಕ ಎಂದು ಹೇಳಿಕೊಂಡಿರುವ ಸಿದ್ಧಾರ್ಥ್ ಬಹಿರಂಗ ಪತ್ರದಲ್ಲಿ ತಮ್ಮ ಕಾಮೆಂಟ್ ಬಗ್ಗೆ ಮಾತನಾಡಿದ್ದಾರೆ “ಪ್ರಿಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ನನ್ನ ರ‍್ಯೂಡ್ ಜೋಕ್ ಗಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ." ಎಂದು ಹೇಳಿದ್ದಾರೆ. ಜೋಕ್ ವಿಷಯವಾಗಿ ಮಾತನಾಡಿದ ಸಿದ್ಧಾರ್ಥ್ "ಒಂದು ಜೋಕನ್ನು ವಿವರಿಸಿ ಹೇಳಬೇಕಾದರೆ ಅದು ಉತ್ತಮ ಜೋಕ್ ಅನ್ನಿಸಿಕೊಳ್ಳುವುದಿಲ್ಲ. ಆದಾಗ್ಯೂ ಅನೇಕರು ಭಾವಿಸಿದಂತೆ ನನ್ನ ಮಾತು ಮತ್ತು ಹಾಸ್ಯವು ಯಾವುದೇ ದುರುದ್ದೇಶ ಹೊಂದಿಲ್ಲ" ಎಂದು ಹೇಳಿದ್ದಾರೆ.
ಪ್ರಧಾನಿ ಭದ್ರತಾ ಲೋಪದ ಕುರಿತು ಟ್ವೀಟ್ ಮಾಡಿದ್ದ ಸೈನಾ
ದೇಶದಲ್ಲಿ ಭಾರಿ ಸದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ(PM Modi Security lapse) ಪ್ರಕರಣದ ಕುರಿತು ಭಾರತದ ತಾರಾ ಟೆನಿಸ್ ಆಟಗಾರ್ತಿ ಸೈನಾ ನೆಹ್ವಾಲ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಪ್ರಧಾನಿ ಭದ್ರತೆಯಲ್ಲಾದ ಲೋಪದ ಬಗ್ಗೆ ಖಂಡಿಸಿದ್ದರು. ಆದರೆ ಸೈನಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ನಟ ಸಿದ್ಧಾರ್ಥ್ ಆಕೆಯ ವಿರುದ್ಧ ಅಸಹ್ಯಕರ ಪದವನ್ನು ಬಳಸಿದ್ದರು ಎಂದು ಆರೋಪಿಸಲಾಗಿತ್ತು. ಹೀಗಾಗಿ ನೆಟ್ಟಿಗರು ನಟ ಸಿದ್ಧಾರ್ಥ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ಕ್ರಿಕೆಟಿಗ ಸುರೇಶ್ ರೈನಾ ಸೈನಾ, ಸದ್ಗುರು ಸೇರಿದಂತೆ ಹಲರು ನೆಹ್ವಾಲ್‌ಗೆ ತಮ್ಮ ಬೆಂಬಲ ಸೂಚಿಸಿದ್ದರು.
"Subtle cock (ಲೈಂಗಿಕವಾಗಿ ಅಸಹ್ಯಕರ ಪದ) champion of the world... Thank God we have protectors of India. Shame on you #Rihanna," ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದರು ಆದರೆ ನೆಟ್ಟಿಗರು ಅವರನ್ನು ತರಾಟೆಗೆ ತೆಗುದುಕೊಳ್ಳತ್ತಿದ್ದಂತೆಯೇ ಹೊಸ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿ ಅವರ ಟ್ವೀಟ್ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದರು. " COCK & BULL" (ನಾಣ್ಣುಡಿ) That's the reference. Reading otherwise is unfair and leading! Nothing disrespectful was intended, said or insinuated. Period.," ಎಂದು ಅವರು ತಿಳಿಸಿದ್ದರು.
ಪುರುಷನ ಮರ್ಮಾಂಗವನ್ನು ಗ್ರಾಮ್ಯವಾಗಿ ‘ಕಾಕ್ (Cock)’ ಎಂದು ಕರೆಯಲಾಗುತ್ತದೆ. ಆದರೆ COCK & BULL ಎಂಬುದು ಆಂಗ್ಲ ನಾಣ್ಣುಡಿಯಾಗಿದ್ದು COCK & BULL ಎಂದರೆ ನಂಬಲರ್ಹವಲ್ಲದ ಕಥೆ ಅಥವಾ ಕಟ್ಟು ಕಥೆ ಎಂದರ್ಥ. ಹೀಗಾಗಿ ನಟ್ ಸಿದ್ಧಾರ್ಥ್ ಎರಡನೇ ಟ್ವೀಟ್ COCK & BULL ಗೆ ಸಂಬಂಧಿಸಿ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದರು. "ಸೈನ್ ನೆಹ್ವಾಲ್‌ರನ್ನು ಅವಮಾನ ಮಾಡುವ ಉದ್ದೇಶ ನನ್ನದಾಗಿರಲಿಲ್ಲ" ಎಂದು ಸಿದ್ಧಾರ್ಥ ಹೇಳಿದ್ದರು. ಈಗ ಮತ್ತೊಂದು ಟ್ವೀಟ್ ಮೂಲಕ ಸಿದ್ಧಾರ್ಥ್ ಸೈನಾ ನೆಹ್ವಾಲ್ ಕ್ಷಮೆಯಾಚಿಸಿದ್ದಾರೆ.