24 ವರ್ಷದ ಯುವತಿಯ ಪ್ರೀತಿಯಲ್ಲಿ ಬಿದ್ದ 57ರ ಹರೆಯದ ನಟ ಪೃಥ್ವಿರಾಜ್: ಫೋಟೋ ವೈರಲ್
ತಮಿಳು ನಟ ಬಬ್ಲೂ ಪೃಥ್ವಿರಾಜ್ ಲವ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತಮಗಿಂತ ವಯಸ್ಸಿನಲ್ಲಿ 33 ವರ್ಷ ಕಿರಿಯವಳ ಜತೆ ಅವರು ಸುತ್ತಾಟ ನಡೆಸುತ್ತಿದ್ದಾರೆ.
ಲವ್ ಈಸ್ ಬ್ಲೈಂಡ್ ಅಂತಾರೆ. ಯಾರ ವಿಚಾರದಲ್ಲಾದರೂ ಸರಿ. ಸಾಮಾನ್ಯರು, ಸೆಲೆಬ್ರಿಟಿಗಳು ಯಾರೆ ಆಗಿರಲಿ. ಇದೀಗ ತಮಿಳು ನಟ ಪೃಥ್ವಿರಾಜ್ ವಿಚಾರದಲ್ಲೂ ಹಾಗೆ. ತನಗಿಂತ 33 ವರ್ಷದ ಕಿರಿಯವಳ ಪ್ರೀತಿಯಲ್ಲಿ ಬಿದ್ದಿದ್ದಾರೆ ನಟ. ಹೌದು, ತಮಿಳು ನಟ ಬಬ್ಲೂ ಪೃಥ್ವಿರಾಜ್ ಲವ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತಮಗಿಂತ ವಯಸ್ಸಿನಲ್ಲಿ 32 ವರ್ಷ ಕಿರಿಯವಳ ಜತೆ ಅವರು ಸುತ್ತಾಟ ನಡೆಸುತ್ತಿದ್ದಾರೆ. ಡೇಟಿಂಗ್ ವಿಚಾರವನ್ನು ಖಚಿತಪಡಿಸಿ ಪೃಥ್ವಿರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ನಟ ಪೃಥ್ವಿ ತನ್ನ ಜಿಮ್ ಟ್ರೈನರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 24 ವರ್ಷದ ಜಿಮ್ ಟ್ರೈನರ್ ಶೀತಲ್ ಜೊತೆ ಪ್ರೀತಿಯಲ್ಲಿರುವ ವಿಚಾರವನ್ನು ಸ್ವತಃ ಪೃಥ್ವಿರಾಜ್ ಅವರೇ ಬಹಿರಂಗ ಪಡಿಸಿದ್ದಾರೆ. ಇಬ್ಬರು ಅನೇಕ ಸಮಯದಿಂದ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಜಿಮ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರು ಬಳಿಕ ಉತ್ತಮ ಸ್ನೇಹಿತರಾಗಿದ್ದರು. ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿದೆ. ಇದೀಗ ಇಬ್ಬರೂ ಮದುವೆ ಸಹ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಬೀನಾ ಅವರನ್ನು ಪೃಥ್ವಿರಾಜ್ 1994ರಲ್ಲಿ ಮದುವೆ ಆಗಿದ್ದರು. ಆರು ವರ್ಷಗಳ ಹಿಂದೆ ಇಬ್ಬರೂ ಬೇರೆ ಆಗಿದ್ದಾರೆ.
ಒಂಟಿಯಾಗಿ ಬದುಕುತ್ತಿದ್ದ ಪೃತ್ವಿರಾಜ್ ತನ್ನನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಾಗಿ ಕಾಯುತ್ತಿದ್ದರು ಜಿಮ್ ಟ್ರೈನರ್ ಶೀತಲ್ ಹತ್ತಿರವಾಗಿದ್ದಾರೆ. ಈ ಬಗ್ಗೆ ಪೃಥ್ವಿರಾಜ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಶೀತಲ್ ಕೂಡ ಪೃಥ್ವಿ ಪ್ರೀತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಎಂದಿರುವ ಶೀತಲ್ ಖುಷಿ ಖುಷಿಯಾಗಿ ಇರುವುದಾಗಿ ಹೇಳಿದ್ದಾರೆ.
ಮದುವೆಗೆ ಸಜ್ಜಾದ 'ಬಿಂದಾಸ್' ನಟಿ ಹನ್ಸಿಕಾ; ಹುಡುಗ ಯಾರು, ಯಾವಾಗ ವಿವಾಹ? ಇಲ್ಲಿದೆ ಸಂಪೂರ್ಣ ಮಾಹಿತಿ
ಅಂದಹಾಗೆ ನಟ ಪೃಥ್ವಿರಾಜ್ ಬಗ್ಗೆ ಹೇಳುವುದಾದರೆ ಬಾಲನಟನಾಗಿ ಗುರುತಿಸಿಕೊಂಡಿದ್ದರು. ನಂತರ ಅವರು ನಟನಾಗಿ ದೊಡ್ಡ ಪರದೆಮೇಲೆ ಮಿಂಚಿದರು. 80-90ರ ದಶಕದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಪೃಥ್ವಿರಾಜ್ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೆ, ಕನ್ನಡ ಹಾಗೂ ಮಲಯಾಳಂ ಚಿತ್ರಗಳಲ್ಲೂ ಪೃಥ್ವಿರಾಜ್ ಗುರುತಿಸಿಕೊಂಡಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಸೇರಿ ಕನ್ನಡದ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ನಟ ಪೃಥ್ವಿರಾಜ್ ಮತ್ತು ಶೀತಲ್ ಪ್ರೀತಿಯ ಹಾಗೆ ಅನೇಕರಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಪ್ರೀತಿಯ ವಿಚಾರ ಕೂಡ ಚರ್ಚೆಗೆ ಗುರಿಯಾಗಿತ್ತು. ಆದರೆ ಇಬ್ಬರೂ ಯಾವುದೇ ಟೀಕೆ ಟಿಪ್ಪಣಿಗೆ ತಲೆಕೆಡಿಸಿಕೊಳ್ಳದೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಅದೇ ಸಾಲಿನಲ್ಲಿದ್ದಾರೆ ತಮಿಳು ನಟ ಪೃಥ್ವಿ ಮತ್ತು ಶೀತಲ್.