ಮದುವೆಗೆ ಸಜ್ಜಾದ 'ಬಿಂದಾಸ್' ನಟಿ ಹನ್ಸಿಕಾ; ಹುಡುಗ ಯಾರು, ಯಾವಾಗ ವಿವಾಹ? ಇಲ್ಲಿದೆ ಸಂಪೂರ್ಣ ಮಾಹಿತಿ

ತಮಿಳು ಮತ್ತು ತೆಲುಗು ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಉತ್ತರ ಭಾರತ ಮೂಲದ ದಕ್ಷಿಣದ ಖ್ಯಾತ ನಟಿ ಹನ್ಸಿಕಾ ಸೈಲೆಂಟ್ ಆಗಿ ಮದುವೆಗೆ ಸಜ್ಜಾಗುತ್ತಿದ್ದಾರೆ.

Bindas Fame Actress Hansika Motwani to get married in december sgk

ತಮಿಳು ಮತ್ತು ತೆಲುಗು ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಉತ್ತರ ಭಾರತ ಮೂಲದ ದಕ್ಷಿಣದ ಖ್ಯಾತ ನಟಿ ಹನ್ಸಿಕಾ ಸೈಲೆಂಟ್ ಆಗಿ ಮದುವೆಗೆ ಸಜ್ಜಾಗುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಅಂದಹಾಗೆ ಹನ್ಸಿಕಾ ಇದೇ ವರ್ಷ ಡಿಸೆಂಬರ್‌ನಲ್ಲಿ ಹಸೆಮಣೆ ಏರುತ್ತಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಹನ್ಸಿಕಾ ಕೊನೆಗೂ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಅಂದಹಾಗೆ ಹನ್ಸಿಕಾ ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ವರದಿಗಳ ಪ್ರಕಾರ ಹನ್ಸಿಕಾ ಮುಂಬೈ ಮೂಲದ ಖ್ಯಾತ ಉದ್ಯಮಿ ಜೊತೆ ಡೇಟಿಂಗ್‌ನಲ್ಲಿ ಇದ್ದರು ಎನ್ನಲಾಗಿತ್ತು. ತಮ್ಮ ಸಂಬಂಧವನ್ನು ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಕಾಪಾಡಿಕೊಂಡಿದ್ದರು. ಇದೀಗ ಅವರ ಜೊತೆಯೇ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈಗಾಗಲೇ ಮದುವೆ ತಯಾರಿ ನಡೆಯುತ್ತಿದ್ದು ಅದ್ದೂರಿಯಾಗಿ ಹಸೆಮಣೆ ಏರುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. 

ಈಗಾಗಲೇ ಮದುವೆಗೆ ಹನ್ಸಿಕಾ ಮತ್ತು ಹುಡುಗನ ಕಡೆಯವರು ಜಾಗವನ್ನು ಫಿಕ್ಸ್ ಮಾಡಿದ್ದಾರೆ. ಹನ್ಸಿಕಾ ಜೈಪುರ್‌ನಲ್ಲಿ ಮದುವೆಯಾಗುತ್ತಿದ್ದಾರೆ. ಜೈಪುರದ ಮಂಡೋಟ ಕೋಟೆ ಈಗಾಗಲೇ ಬುಕ್ ಆಗಿದ್ದು ಸುಮಾರು 10 ದಿನಗಳ ಕಾಲ ಮದುವೆ ನಡೆಯಲಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಮದುವೆ ನಡೆಯುವ ದಿನಾಂಕ ಮತ್ತು ಹುಡುನ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

ಅಂದಹಾಗೆ ಮಂಡೋಟ ಅರಮನೆ ಈಗ ಹೋಟೆಲ್ ಆಗಿ ಬದಲಾಗಿದೆ. ಇದು ಸುಮಾರು 450 ವರ್ಷಗಳ ಹಿಂದಿನ ಅರಮನೆ ಆಗಿದೆ. ತುಂಬಾ ಹಳೆಯ ಅರಮನೆಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ತನ್ನ ಮದುವೆ ಸುದ್ದಿ ಬಗ್ಗೆ ಹನ್ಸಿಕಾ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. 

ತೆಳ್ಳಗಾಗಿರುವ 'ಬಿಂದಾಸ್' ಬೆಡಗಿಯ ಬಿಕಿನಿ ಪೋಸ್; ಹನ್ಸಿಕಾ ಹಾಟ್ ಫೋಟೋ ವೈರಲ್

ಹನ್ಸಿಕಾ ಮೋಟ್ವನಿ ಬಗ್ಗೆ 

ಬಾಲನಟಿಯಾಗಿ ಹಿಂದಿ ಸಿನಿಮಾರಂಗ ಪ್ರವೇಶ ಮಾಡಿದ ನಟಿ ಹನ್ಸಿಕಾ ಬಳಿಕ ನಾಯಕನಾಗಿ ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ಮಿಂಚಿದರು. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಹನ್ಸಿಕಾ ನಟಿಸಿದ್ದಾರೆ. ಕನ್ನಡದಲ್ಲಿಯೂ ಹನ್ಸಿಕಾ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಿಂದಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಮತ್ತೆ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ನಟಿಸಿರುವ ಬಹುಭಾಷ ನಟಿ ಹನ್ಸಿಕಾ ಕೊನೆಯದಾಗಿ ಮಹಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಂದಹಾಗೆ ಮಹಾ ಹನ್ಸಿಕಾ ನಟನೆಯ 50ನೇ ಸಿನಿಮಾವಾಗಿದೆ. ಸದ್ಯ ಅನೇಕ ಸಿನಿಮಾಗಳು ಹನ್ಸಿಕಾ ಕೈಯಲ್ಲಿವೆ.

ಮತ್ಸ್ಯಕನ್ಯೆಯರಿರೋದು ನಿಜ ಎಂದು ಕಣ್ಣು ಮಿಟುಕಿಸಿದ ಹನ್ಸಿಕಾ

ಡೇಟಿಂಗ್ ವಂದತಿ 

ನಟಿ ಹನ್ಸಿಕಾ ತಮಿಳಿನ ಖ್ಯಾತ ನಟ ಸಿಂಬು ಜೊತೆ ಡೇಟಿಂಗ್‌ನಲ್ಲಿದ್ದರು ಎನ್ನಲಾಗಿತ್ತು. ಸಿಂಬು ಮತ್ತು ಹನ್ಸಿಕಾ ತೀರ ಆಪ್ತರಾಗಿರುವ ಅನೇಕ ಫೋಟೋಗಳು ವೈರಲ್ ಆಗಿತ್ತು. ಇಬ್ಬರೂ ಮದುವೆ ಆಗ್ತಾರೆ ಅಂತನೆ ಎಲ್ಲರೂ ಅಂದುಕೊಂಡಿದ್ದರು. ಆದರೆ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡು ದೂರ ದೂರ ಆದರು. ಬಳಿಕ ಮುಂಬೈ ಮೂಲದ ಉದ್ಯಮಿ ಒಬ್ಬರನ್ನು ಪ್ರೀತಿಸುತ್ತಿದ್ದರು. ಇದೀಗ ಅವರ ಜೊತೆ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸದ್ಯದಲ್ಲೇ  ಅಧಿಕೃತ ಮಾಹಿತಿ ಬಹಿರಂಗ ವಾಗುವ ಸಾಧ್ಯತೆ ಇದೆ.

Latest Videos
Follow Us:
Download App:
  • android
  • ios